Home Posts tagged #karkala (Page 2)

ಕಾರ್ಕಳ: ಬೈಕ್‍ಗೆ ಕಾರು ಢಿಕ್ಕಿ, ಬೈಕ್ ಸವಾರರಿಗೆ ಗಂಭೀರ ಗಾಯ

ಬೈಕ್‍ಗೆ ಕಾರು ಡಿಕ್ಕಿಯಾಗಿ ಬೈಕ್ ಸವಾರರು ಗಂಭೀರ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಮುಂಡ್ಕೂರು ಸಂಕಲ ಕರಿಯ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ ಟೈಲ್ಸ್ ಕೆಲಸ ಮಾಡುವ ಕಾರ್ಮಿಕರಾದ ತೌಶಿಪ್ ಮತ್ತು ತನ್ವೀರ್ ಗಂಭೀರ ಗಾಯಗೊಂಡಿದ್ದು, ಅವರನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಿನ್ನಿಗೋಳಿ ಕಡೆಯಿಂದ ಮುಂಡ್ಕೂರು ಕಡೆ

ಕಾರ್ಕಳ: ಹಣ್ಣು ಹಂಪಲಿನ ಅಂಗಡಿ ಬೆಂಕಿಗಾಹುತಿ: ಅಪಾರ ನಷ್ಟ

ಕಾರ್ಕಳದ ಪುಲ್ಕೇರಿ ಭವಾನಿ ವೃತ್ತದ ಬಳಿ ಇರುವ ಶಬ್ಬೀರ್ ಎಂಬವರ ಹಣ್ಣು ಹಂಪಲಿನ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದ ಅಂಗಡಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಅಪಾರ ಪ್ರಮಾಣದ ಹಣ್ಣು ಹಂಪಲು ಹಾಗೂ ಮಾಪನ ಉಪಕರಣ ಮತ್ತು ಸಂಪೂರ್ಣ ಅಂಗಡಿ ಬೆಂಕಿಗೆ ಆಹುತಿಯಾಗಿದೆ. ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಬೆಂಕಿಯನ್ನು ನಂದಿಸಿರುತ್ತಾರೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದ್ದು ತನಿಖೆ ಮಾಡುತ್ತಿದ್ದಾರೆ.

ಕಾರ್ಕಳ: ಪಡು ತಿರುಪತಿಯಲಿ ವಿಶ್ವರೂಪ ದರ್ಶನ

‘ಪಡು ತಿರುಪತಿ’ಎಂದೇ ಕೀರ್ತಿ ಪಡೆದ ಕಾರ್ಕಳದಲ್ಲಿ ಸೂರ್ಯೋದಯಕ್ಕೂ ಮೊದಲು ‘ವಿಶ್ವರೂಪ ದರ್ಶನ’ ನೆರವೇರಿದೆ. ಕಾರ್ಕಳದ ಭಕ್ತರು ಜಾತಿ, ಮತ, ಪಂಥಗಳ ಭೇದವಿಲ್ಲದೆ ಭಾಗವಹಿಸುವ ಉತ್ಸವ ಇದು. ಕಾರ್ತಿಕ ಮಾಸ ಬಂತೆಂದರೆ ಪಂಡರಾಪುರದ ವಿಠಲ ದೇವಸ್ಥಾನಕ್ಕೆ ಸಾವಿರಾರು ಭಜಕರು ಭಾರತದ ಮೂಲೆಮೂಲೆಗಳಿಂದ ಬಂದು ಸೇರಿ ಕುಣಿತ ಭಜನೆ ಮಾಡುವುದು, ವಿಠಲ ವಿಠಲ ಎಂದು ತಾಳ ಬಡಿಯುತ್ತಾ ಹಾಡುವುದು ತುಂಬಾ ಅದ್ಭುತ. ಆಷಾಢ, ಕಾರ್ತಿಕ ಮಾಸಗಳಲ್ಲಿ

ಬೈಲೂರು : ಸೈಬರ್ ಕ್ರೈಂ ಮಾಹಿತಿ ಶಿಬಿರ ಉದ್ಘಾಟನೆ

ರಾಜ್ಯದಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚುತಿದ್ದು ವಿದ್ಯಾವಂತ ನಿರುದ್ಯೋಗಿಗಳೆ ಇದರ ಟಾರ್ಗೆಟ್ ಆಗುತಿದ್ದಾರೆ ಎಂದು ಉಡುಪಿ ಜಿಲ್ಲಾ ಎ ಎಸ್ಪಿ ಸಿದ್ದಲಿಂಗಪ್ಪ ಹೇಳಿದರು. ಅವರು ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಕಾರ್ಕಳ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಇದರ ರಜತ ಮಹೋತ್ಸವ ಅಂಗವಾಗಿ ಲಯನ್ಸ್ ಕ್ಲಬ್ ನೀರೆ ಬೈಲೂರು ಮತ್ತು ಧ್ವನಿ ಬೆಳಕು ಸಂಯೋಜಕರ ಸಂಘಟನೆ ಕಾರ್ಕಳ ಇವರ ಸಹಯೋಗದೊಂದಿಗೆ ಬೈಲೂರು ಸರಕಾರಿ ಪದವಿ ಪೂರ್ವ ಕಾಲೇಜಿನ

ಕಾರ್ಕಳ: ನಾಪತ್ತೆಯಾಗಿದ್ದ ಹೆಡ್‌ ಕಾನ್ ಸ್ಟೇಬಲ್ ಶೃತಿನ್ ಶೆಟ್ಟಿ ಶವವಾಗಿ ಪತ್ತೆ || V4NEWS

ಕಾರ್ಕಳ ನಗರ ಪೊಲೀಸ್ ಠಾಣೆಯ ಹೆಡ್‌ ಕಾನ್‌ಸ್ಟೇಬಲ್ ಶೃತಿನ್ ಶೆಟ್ಟಿ ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದು ಇಂದು ಅವರ ಶವವು ಕಾರ್ಕಳದ ಪುರಿಯ ಸಾರ್ವಜನಿಕ ಬಾವಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶೃತಿನ್ ಶೆಟ್ಟಿ ಕಾಣೆಯಾಗಿರುವ ಕುರಿತು ಅವರ ಪತ್ನಿ ದೂರು ದಾಖಲಿಸಿದ್ದರು. ಕಾಪು ಜನಾರ್ದನ ದೇವಸ್ಥಾನ ಬಳಿಯಿರುವ ಅಂಗಡಿಮನೆ ನಿವಾಸಿಯಾಗಿರುವ ಶೃತಿನ್ ಶೆಟ್ಟಿ ಗುರುವಾರ ರಾತ್ರಿ 7.30ಕ್ಕೆ ಹೆಂಡತಿಗೆ ಫೋನ್

ಕಾರ್ಕಳ: ಉರುಳಿಗೆ ಬಿದ್ದ ಚಿರತೆ – ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆ

ಸಾಣೂರು ಗ್ರಾಮದ ಇಂದಿರಾನಗರ ಹಲ್ಲೆಕಿ ಪರಿಸರದಲ್ಲಿ ಚಿರತೆಯೊಂದು ಉರುಳಿಗೆ ಬಿದ್ದ ಘಟನೆ ನಡೆದಿದೆ. ರಾತ್ರಿ 9 ಗಂಟೆಗೆ ಬೈಕಿ ನಲ್ಲಿ ದಾರಿಯಲ್ಲಿ ಹೋಗುತಿದ್ದ ಮೆಸ್ಕಾಂ ಇಲಾಖೆಯ ದೇವಣ್ಣ ರಾವ್ ಮತ್ತು ಸಾಣೂರು ಪಂಚಾಯತ್ ಸದಸ್ಯ ಪ್ರಕಾಶ್ ರಾವ್ ಇಬ್ಬರು ಚಿರತೆ ಘರ್ಜಿಸುವ ಸದ್ದನು ಕೇಳಿ ವೀಕ್ಷಿಸಿದಾಗ ಚಿರತೆ ಉರುಳಿಗೆ ಬಿದ್ದಿರುವುದು ಕಂಡು ಬಂದಿದೆ. ತಕ್ಷಣ ಕಾರ್ಕಳ ನಗರದ ಸಾಮಾಜಿಕ ಕಾರ್ಯಕರ್ತ ಪುರಸಭೆಯ ಮಾಜಿ ಸದಸ್ಯರಾದ ಪ್ರಕಾಶ್ ರಾವ್ ಅವರಿಗೆ ವಿಷಯವನ್ನು

ಕಾರ್ಕಳ: ಕಾಂಗ್ರೆಸ್ ಪಕ್ಷದಿಂದ ಶಾಸಕ ಸುನೀಲ್ ಕುಮಾರ್ ವಿರುದ್ಧ ಪ್ರತಿಭಟನೆ

ಕಾರ್ಕಳ : ಪರಶುರಾಮ ನಕಲಿ ಮೂರ್ತಿ ಹಾಗೂ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಯನ್ನು ಗುಜುರಿಗೆ ಹಾಕಿ ಅವ್ಯವಹಾರ ವೆಸಗಿದ್ದಾರೆ. ಅದರ ಮೂಲಕ ಬಿಜೆಪಿ ಸರಕಾರದ ಕರ್ಮಕಾಂಡಗಳು ಹೊರಗೆ ಬರುತ್ತಿವೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು. ಅವರು ಕಾರ್ಕಳ ಬೈಲೂರಿನ ಪರಶುರಾಮ ಥೀಮ್ ಪಾರ್ಕ್ ಬಳಿಯ ಮೈದಾನದಲ್ಲಿ ಶಾಸಕ ಸುನೀಲ್ ಕುಮಾರ್ ವಿರುದ್ಧ ನಡೆದ ಕಾಂಗ್ರೆಸ್ ಪಕ್ಷದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಸಕ್ಕರೆ ಕಾರ್ಖಾನೆ ಹಗರಣ ದಲ್ಲಿ 15 ಕೋಟಿ, ನಕಲಿ

ಕಾರ್ಕಳ : ಥೀಂ ಪಾರ್ಕಿನಲ್ಲಿ ಪರಶುರಾಮನ ಕಂಚಿನ ಪ್ರತಿಮೆಯೇ ಇರಬೇಕು: ಮುನಿಯಾಲು ಉದಯ ಶೆಟ್ಟಿ

ಕಾರ್ಕಳ : ತಾಲ್ಲೂಕಿನ ಬೈಲೂರು ಉಮಿಕಲ್ ಬೆಟ್ಟದಲ್ಲಿ ಪುನರಪಿ ಪರಶುರಾಮನ ಕಂಚಿನ ಪ್ರತಿಮೆಯನ್ನೇ ಸ್ಥಾಪಿಸಬೇಕು ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಶೆಟ್ಟಿ ಆಗ್ರಹಿಸಿದ್ದಾರೆ. ತಾಲ್ಲೂಕಿನ ಬೈಲೂರು ಪರಶುರಾಮ ಥೀಮ್ ಪಾರ್ಕ್ ಪರಿಸರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಂಚಿನ ಮೂರ್ತಿಯನ್ನು ಮಾಡಲು ಕನಿಷ್ಠ 2ವರ್ಷವಾದರೂ ಅಗತ್ಯವಿದೆ. ಪ್ರವಾಸೋದ್ಯಮ ಇಲಾಖೆದವರು ನಿರ್ಮಿತಿ ಕೇಂದ್ರದವರಿಗೆ ನೀಡಿದ್ದು, ನಿರ್ಮಿತಿ ಕೇಂದ್ರದವರು ಅದನ್ನು ಮಾಡುವುದು

ಕಾರ್ಕಳ: ಭರದಿಂದ ಸಾಗುತ್ತಿರುವ ಪರಶುರಾಮನ ಮೂರ್ತಿಯ ಕೆಲಸ

ಕಾರ್ಕಳದ ಬೈಲೂರಿನ ಉಮಿಕಲ್ ಬೆಟ್ಟದ ಪರಶುರಾಮ ಥೀಂ ಪಾರ್ಕಿನಲ್ಲಿ ಪರಶುರಾಮನ ಅಸಲಿ ಮೂರ್ತಿಯ ಕೆಲಸ ಭರದಿಂದ ನಡೆಯುತ್ತಿದೆ. ಆದರೆ ಪ್ರತಿಮೆಯ ನಕಲಿತನ ಬಹಿರಂಗಪಡಿಸಿದ ನಂತರ ಇದೀಗ ಶಾಸಕರು ಅಸಲಿ ಮೂರ್ತಿಯ ಕೆಲಸ ಪ್ರಾರಂಭಿಸಿದ್ದಾರೆ. ಇದು ಶಾಸಕರಿಗೆ ಶೋಭೆ ತರುವಂತದ್ದಲ್ಲ ಎಂದು ಕಾಂಗ್ರೆಸ್ ವಕ್ತಾರ ಶುಭೋದ್ ರಾವ್ ಹೇಳಿದರು. ಅವರು ಕಾರ್ಕಳದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ಈಗಾಗಲೇ ನಕಲಿ ಪರಶುರಾಮ ಮೂರ್ತಿಗೆ ಟರ್ಪಾಲನ್ನು ಹೊದಿಸಿ, ಯಾರಿಗೂ ಕಾಣದಂತೆ

ಕಾರ್ಕಳ: ಗಾಂಧಿ ಸ್ಮೃತಿ ಮತ್ತು ನವ ಜೀವನ ಸಮಿತಿ ಸದಸ್ಯರ ಸಮಾವೇಶ

ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ಗಾಂಧಿ ಸ್ಮೃತಿ ಮತ್ತು ನವ ಜೀವನ ಸಮಿತಿ ಸದಸ್ಯರ ಸಮಾವೇಶವು ಕಾರ್ಕಳದ ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ಜರುಗಿತು. ಕಾರ್ಯಕ್ರಮವನ್ನು ಮಾಜಿ ಸಚಿವ ಅಭಯ ಚಂದ್ರ ಜೈನ್ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಇದೇ ವೇಳೆ ಮಾತನಾಡಿದ ಅಭಯಚಂದ್ರ ಜೈನ್ ಅವರು, ನಾವಿಂದು ಗಾಂಧಿ ಜಯಂತಿಯನ್ನು ಬಹು ವಿಜೃಂಭಣೆಯಿಂದ ಆಚರಿಸಿದ್ದೇವೆ. ಅದೇ ರೀತಿ ಮಹಾತ್ಮ ಗಾಂಧಿಯವರು ಭಾರತವನ್ನು