Home Posts tagged #mangalore (Page 223)

ಆಂಧ್ರಪ್ರದೇಶ : ಎಕ್ಸ್‌ ರೇ ಪೋಲಾರಿಮೀಟರ್ ಉಪಗ್ರಹ ಯಶಸ್ವಿ ಉಡಾವಣೆ

ಎಕ್ಸ್‌ ರೇ ಮೂಲಗಳ ನಿಗೂಢತೆ ಹಾಗೂ ಕಪ್ಪುರಂಧ್ರದ ನಿಗೂಢ ಜಗತ್ತಿನ ವಿಸ್ಮಯಗಳನ್ನು ತಿಳಿಯಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಿರ್ಮಿತ ಎಕ್ಸ್‌ ರೇ ಪೋಲಾರಿಮೀಟರ್ ಉಪಗ್ರಹವನ್ನು ಇಂದು ಯಶಸ್ವಿಯಾಗಿ ಉಡ್ಡಯನ ಮಾಡಲಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಇಂದು ಬೆಳಿಗ್ಗೆ 9.10ಕ್ಕೆ ‘ಎಕ್ಸ್‌ ಪೊಸ್ಯಾಟ್’

ನವದೆಹಲಿ : ಹೊಸ ವರುಷದ ಶುಭಾಶಯ ಕೋರಿದ ಪ್ರಧಾನಿ, ರಾಷ್ಟ್ರಪತಿ

ದೇಶದ ಜನರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ. ‘ಸಮೃದ್ಧ ರಾಷ್ಟ್ರ ನಿರ್ಮಾಣದ ಸಂಕಲ್ಪ ಕೈಗೊಳ್ಳಿ. ಹೊಸ ಗುರಿ ಮತ್ತು ಉದ್ದೇಶಗಳೊಂದಿಗೆ ಮುನ್ನಡೆಯಲು ಹೊಸವರ್ಷ ಬರುತ್ತಿದೆ’ ಎಂದು ದ್ರೌಪದಿ ಮುರ್ಮು ತಿಳಿಸಿದ್ದಾರೆ. ‘ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಈ ವರ್ಷ ಎಲ್ಲರಿಗೂ ಸಮೃದ್ಧಿ, ಶಾಂತಿ ಮತ್ತು ಉತ್ತಮ ಆರೋಗ್ಯ ದೊರೆಯಲಿ’ ಎಂದು ಪ್ರಧಾನಿ ನರೇಂದ್ರ ಮೋದಿ ‘ಎಕ್ಸ್’ನಲ್ಲಿ ಪೋಸ್ಟ್

ಮಂಗಳೂರು: ಬ್ರಹ್ಮಸಮಾಜ ಕಾಂಪ್ಲೆಕ್ಸ್‌ನಲ್ಲಿ ಹೈಯರ್ ಎಕ್ಸ್‌ಕ್ಲೂಸಿವ್ ಸ್ಟೋರ್ ಶುಭಾರಂಭ

ಮಂಗಳೂರಿನ ನವಭಾರತ್ ವೃತ್ತದಲ್ಲಿರುವ ಬ್ರಹ್ಮ ಸಮಾಜ ಕಾಂಪ್ಲೆಕ್ಸ್‌ನಲ್ಲಿ ಡಿಜಿಟಲ್ ಪ್ಲಾನೆಟ್‌ನವರ ಹೈಯರ್ ಎಕ್ಸ್ ಕ್ಲೂಸಿವ್ ಸ್ಟೋರ್‌ನ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ವಿಶ್ವದ ನಂಬರ್ ವನ್ ಹೋಮ್ ಅಪ್ಲೈಯನ್ಸಸ್ ಹಾಗೂ ಭಾರತದ ಮೂರನೇ ಅತೀ ದೊಡ್ಡ ಬ್ರ್ಯಾಂಡ್ ಆಗಿರುವ ಹೈಯರ್‌ನ ಎಕ್ಸ್‌ಕ್ಲೂಸಿವ್ ಸ್ಟೋರ್ ಮಂಗಳೂರಿನಲ್ಲಿ ಶುಭಾರಂಭಗೊಂಡಿತು. ನೂತನ ಹೈಯರ್‌ನ ಎಕ್ಸ್‌ಕ್ಲೂಸಿವ್ ಸ್ಟೋರ್‌ನ್ನು ಮೂಡುಬಿದಿರೆಯ ಆಳ್ವಾಸ್ ಸಂಸ್ಥೆಯ ಚೇರ್ಮನ್ ಡಾ. ಎಂ. ಮೋಹನ್ ಆಳ್ವಾ

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ತಿರ್ಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ದಾರಕ್ಕೆ 5 ಲಕ್ಷ ರೂ.ನೆರವು

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಜೀರ್ಣೋದ್ದಾರಗೊಳ್ಳುತ್ತಿರುವ ಕೊಣಾಲು ಗ್ರಾಮದ ತಿರ್ಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ 5 ಲಕ್ಷ ರೂ. ನೆರವು ನೀಡಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು 5 ಲಕ್ಷ ರೂ.ನೆರವಿನ ಮೊತ್ತದ ಚೆಕ್ ಅನ್ನು ದೇವಸ್ಥಾನದ ಜೀರ್ಣೋದ್ದಾರ ಸಮಿತಿಗೆ ತಿರ್ಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಹಸ್ತಾಂತರಿಸಿ ಸಂದರ್ಭೋಚಿತವಾಗಿ ಮಾತನಾಡಿದರು. ತಿರ್ಲೆ

ಮಂಗಳೂರು: ಮನೆ ಮನೆಗೆ ಮಂತ್ರಾಕ್ಷತೆ ವಿತರಣೆ ಅಭಿಯಾನ

ಜನವರಿ 22ರ ರಾಮಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಅಯೋಧ್ಯೆಯಿಂದ ಬಂದಂತಹ ಪವಿತ್ರ. ಮಂತ್ರಾಕ್ಷತೆಯನ್ನು. ರಾಜ್ಯದ ಎಲ್ಲಾ. ಗ್ರಾಮಗಳ ಪ್ರತಿ ಮನೆಗಳಿಗೆ ವಿತರಿಸುವ. ಅಭಿಯಾನ ಜನವರಿ 15ರವರೆಗೆ ನಡೆಯಲಿದೆ. ಅಯೋದ್ಯೆಯ ರಾಮಜನ್ಮ ಭೂಮಿಯಲ್ಲಿ ಪ್ರಾಣಪ್ರತಿಷ್ಠಗೊಳ್ಳುವ ಸಂದರ್ಭದಲ್ಲಿ ರಾಜ್ಯದ ಸಾವಿರಾರು ಕೇಂದ್ರಗಳಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪೂಜೆ ಹವನ ಸತ್ಸಂಗ,  ಭಜನೆ , ಮುಂತಾದ ಕಾರ್ಯಕ್ರಮ ನಡೆಯಲಿದೆ. ಪ್ರಾಣ ಪ್ರತಿಷ್ಠೆಯ ನೇರಪ್ರಸಾರ ಕೂಡ ಆಯಾಯ

ಮೂಡುಬಿದಿರೆ : ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ಸ್ಪಂದಿಸಿದ ನೇತಾಜಿ ಬ್ರಿಗೇಡ್

ಮೂಡುಬಿದಿರೆ : ನೇತಾಜಿ ಬ್ರಿಗೇಡ್ ಮೂಡುಬಿದಿರೆ ವತಿಯಿಂದ ಮೂಡುಬಿದಿರೆಯ “ಕೋಟಿ – ಚೆನ್ನಯ್ಯ” ಜೋಡುಕರೆ ಕಂಬಳದಲ್ಲಿ ನಡೆದ 14ನೇ ಸೇವಾ ಯೋಜನೆಯಲ್ಲಿ ಸಂಗ್ರಹವಾದ ರೂ.1,34,894 ಧನವನ್ನು ಆಯ್ದ 5 ಮಂದಿ  ಫಲಾನುಭವಿಗಳಿಗೆ  ಸ್ವರಾಜ್ಯ ಮೈದಾನದ ಬಳಿ ಇರುವ ಶ್ರೀ ಆದಿಶಕ್ತಿ ಮಹಾಮ್ಮಾಯಿ ದೇವಸ್ಥಾನ ಮಾರಿಗುಡಿ ಬಳಿ ಹಸ್ತಾಂತರಿಸಲಾಯಿತು. ಕಣ್ಣಿನ ಕ್ಯಾನ್ಸರ್ ಚಿಕಿತ್ಸೆಗಾಗಿ ಕಿನ್ನಿಗೋಳಿ ತಾಳಿಪಾಡಿಯ 6 ತಿಂಗಳ ಮಗು ಪೂಜಿತಾ ಶೆಟ್ಟಿಗಾರ್,  ಗಾಂಧಿ

ಮಂಗಳೂರು: ಹೊಸ ವರ್ಷಾಚರಣೆಗೆ ಬಿಗು ಬಂದೋಬಸ್ತ್

ಮಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಬಿಗು ಬಂದೋಬಸ್ತ್‌ನ್ನು ಏರ್ಪಡಿಸಲಾಗಿದೆ. ಬೀಚ್, ಪಾರ್ಕ್ ಸಹಿತ ಹೊರಾಂಗಣಗಳಲ್ಲಿ ರಾತ್ರಿ 10 ಗಂಟೆಯವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ವರ್ಷಾಚರಣೆಗೆ ಹೊಟೇಲ್, ಚರ್ಚ್, ರೆಸಾರ್ಟ್ ಮೊದಲಾದ ಒಳಾಂಗಣಗಳಲ್ಲಿ ರಾತ್ರಿ 12.30 ರವರೆಗೆ ಅವಕಾಶವಿದೆ ಎಂದರು. ವ್ಯಾಪಕ ಬಂದೋಬಸ್ತ್ ನಡೆಸಲಾಗುವುದು. ನಿಯಮ

ಉಡುಪಿ:  ಜಯಲಕ್ಷ್ಮೀ ಸಿಲ್ಕ್ಸ್ ನಲ್ಲಿ ಮಿಸ್ ಫೈರಿಂಗ್: ಒಬ್ಬರಿಗೆ ಗಾಯ, ಪೊಲೀಸ್ ದೌಡು

ಉಡುಪಿಯ ಬನ್ನಂಜೆಯಲ್ಲಿರುವ ಜಯಲಕ್ಷ್ಮೀ ಸಿಲ್ಕ್ಸ್ ನಲ್ಲಿ ಮಿಸ್ ಫೈರಿಂಗ್ ಆಗಿದ್ದು, ಇದರಿಂದ ಓರ್ವ ಸಿಬ್ಬಂದಿ ಗಾಯಗೊಂಡ ಘಟನೆ ನಡೆದಿದೆ. ಬಟ್ಟೆ ಮಳಿಗೆಯಲ್ಲಿ ಯಾರೋ ಬಿಟ್ಟು ಹೋಗಿದ್ದ ಗನ್ ಪತ್ತೆಯಾಗಿತ್ತು. ಅದನ್ನು ಎತ್ತಿಕೊಂಡ ಸಿಬ್ಬಂದಿ ಆಪರೇಟ್ ಮಾಡಿ ಪರೀಕ್ಷಿಸಲು ಮುಂದಾಗಿದ್ದಾರೆ. ಈ ವೇಳೆ ಅಲ್ಲೇ ಇದ್ದ ಇನ್ನೋರ್ವ ಸಿಬ್ಬಂದಿಗೆ ಗುಂಡು ತಗುಲಿದ್ದು, ಅವರನ್ನು ಕೂಡಲೇ ಉಡುಪಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಉಡುಪಿ ನಗರ ಪೊಲೀಸರು

ಬೈಂದೂರು: ತ್ರಾಸಿ ಬೀಚ್‌ನಲ್ಲಿ ಬಾಲ ಪ್ರತಿಭೆ ತನ್ವಿತಾ ಅವರಿಂದ ಯೋಗಾಸನದ ಪ್ರದರ್ಶನ

ಬೈಂದೂರು: ಕುಂದಾಪುರ ತಾಲೂಕಿನ ಕುಂದಬಾರಂದಾಡಿ ಗ್ರಾಮದ ನಿವಾಸಿ ಪುಷ್ಪಲತಾ ಮತ್ತು ವಸಂತ ಅವರ ದಂಪತಿಗಳ ಪುತ್ರಿ ಬಾಲ ಪ್ರತಿಭೆ ಕು. ತನ್ವಿತಾ ಯೋಗಾಸನದಲ್ಲಿ ಚಿನ್ನ,ಬೆಳ್ಳಿ,ಕಂಚು ಸೇರಿದಂತೆ ಒಟ್ಟು ೬೫ಕ್ಕೂ ಅಧಿಕ ಪ್ರಶಸ್ತಿಗಳನ್ನು ಜಯಿಸುವುದರ ಮೂಲಕ ಯೋಗಾಸನದಲ್ಲಿ ವಿಶಿಷ್ಟವಾದ ಸಾಧನೆ ಮಾಡುತ್ತಿದ್ದಾರೆ. ಇದೀಗ ತ್ರಾಸಿ ಬೀಚ್‌ನಲ್ಲಿ ನಾನಾ ಭಂಗಿಗಳ ಯೋಗಾಸನ ಪ್ರದರ್ಶನ ಮಾಡಿ ನೆರೆದಿದ್ದವರಲ್ಲಿ ಅಚ್ಚರಿ ಮೂಡಿಸಿದ್ದಾರೆ. ಬಾಲ ಪ್ರತಿಭೆ ಕು. ತನ್ವಿತಾ ನಟ ದರ್ಶನ

ಉಡುಪಿ: ಹೊಸ ವರ್ಷಾಚರಣೆಗೆ ನಿಗಾ: ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ

ಉಡುಪಿ: ಹೊಸ ವರ್ಷಚರಣೆಯ ಸಂದರ್ಭ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರವನ್ನು ವಹಿಸಿಕೊಳ್ಳಲಾಗಿದೆ ಎಂದು ಉಡುಪಿ ಪೊಲೀಸ್ ವರಿಷ್ಟಾಧಿಕಾರಿ ಅರುಣ್ ಕುಮಾರ್ ತಿಳಿಸಿದ್ದಾರೆ. ಹಲವೆಡೆ ಹೊಸ ವರ್ಷಚರಣೆ ಸಂಭ್ರಮಾಚರಣೆ ನಡೆಸಲು ಅನುಮತಿ ನೀಡಲಾಗಿದೆ.ಸುಪ್ರಿಂ ಕೋರ್ಟ್ ನಿರ್ದೇಶನದಂತೆ ಹತ್ತು ಗಂಟೆ ವರೆಗೆ ಸೌಂಡ್ಸ್ ಗೆ ಅವಕಾಶ ಇದ್ದು, ಬಳಿಕ ನಿಲ್ಲಿಸುವಂತೆ ಸೂಚಿಸಲಾಗಿದೆ.ತಡ ರಾತ್ರಿ ವರೆಗರ ಡಿಜೆ ಸೌಂಡ್ ಗಳಿಗೆ ಅವಕಾಶ ನೀಡಲಾಗಿಲ್ಲ.ನಿಯಮ ಉಲ್ಲಂಘಿಸಿದವರ