Home Posts tagged #mangalore (Page 232)

ಯಕ್ಷಸಂಭ್ರಮ: ರೆಂಜಾಳ ರಾಮಕೃಷ್ಣ ರಾವ್, ಪೆರುವಾಯಿ ನಾರಾಯಣ ಶೆಟ್ಟಿಗೆ ‘ಯಕ್ಷದೇವ’ ಪ್ರಶಸ್ತಿ  

ಮೂಡುಬಿದಿರೆ: ಬೆಳುವಾಯಿ ಶ್ರೀ ಯಕ್ಷದೇವ ಮಿತ್ರಕಲಾ ಮಂಡಳಿ ವತಿಯಿಂದ 26ನೇ ವರ್ಷದ ಯಕ್ಷಸಂಭ್ರಮ-2023ರ ಕಾಯಕ್ರಮ ಜುಲೈ 30 ರಂದು ಕನ್ನಡ ಭವನದಲ್ಲಿ ದಿನಪೂರ್ತಿ ನಡೆಯಲಿದೆ ಎಂದು ಯಕ್ಷದೇವ ಮಿತ್ರಕಲಾ ಮಂಡಳಿಯ ಸ್ಥಾಪಕ ಅಧ್ಯಕ್ಷ ಎಂ.ದೇವಾನಂದ ಭಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ವೇಷಧಾರಿಗಳಾದ ರೆಂಜಾಳ ರಾಮಕೃಷ್ಣ ರಾವ್ ಮತ್ತು

ಶಾಲೆ ಶಾಲೆಯಲ್ಲಿ ಕನ್ನಡದ ಕಂಪು : ಮಂಜುನಾಥ ಎಸ್. ರೇವಣ್ಕರ್

        ಪ್ರತಿ ಶಾಲೆಯಲ್ಲಿಯೂ ಕನ್ನಡದ ಕಂಪನ್ನು ಹರಡುವ ಪ್ರಯತ್ನದಲ್ಲಿ  ದ ಕ ಜಿಲ್ಲಾ ಕ ಸಾ ಪ ಮಂಗಳೂರು ತಾಲೂಕು ಘಟಕ ತೊಡಗಿಕೊಳ್ಳಲಿದೆ ಎಂದು ಕ ಸಾ ಪ ಮಂಗಳೂರು ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಎಸ್. ರೇವಣ್ಕರ್ ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ  ಪ್ರಾಥಮಿಕ ಶಾಲೆ , ಸ್ಯಾಂಡ್ಸ್ ಪಿಟ್ ಬೆಂಗ್ರೆ ಇಲ್ಲಿನ ವಿದ್ಯಾರ್ಥಿಗಳಿಗೆ ಕನ್ನಡ ಕವನ ಗಾಯನ ಸ್ಪರ್ಧೆಯಲ್ಲಿ ನಿರ್ಣಾಯಕ ಹಾಗೂ ಮುಖ್ಯ

ಅಮರನಾಥ ಯಾತ್ರೆ ಕೈಗೊಂಡಿದ್ದ ದ.ಕ. ಜಿಲ್ಲೆಯ ಯಾತ್ರಾರ್ಥಿಗಳು ಸುರಕ್ಷಿತ

ಬಂಟ್ವಾಳ: ಜಮ್ಮು ಕಾಶ್ಮೀರದ ಪವಿತ್ರ ಅಮರನಾಥ ಯಾತ್ರೆ ಕೈಗೊಂಡಿದ್ದ ದ.ಕ.ಜಿಲ್ಲೆಯ ವಿವಿಧ ತಾಲೂಕಿನ ಒಟ್ಟು ೨೦ ಮಂದಿ ಯಾತ್ರಾರ್ಥಿಗಳು ಸುರಕ್ಷಿತವಾಗಿ ಸಿ.ಆರ್.ಪಿ.ಎಫ್ ನ ಕ್ಯಾಂಪ್‌ನಲ್ಲಿ ಇರುವುದಾಗಿ ತಿಳಿದು ಬಂದಿದೆ. ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಸಂತೋಷ್ ಎಂಬವರ ಜೊತೆ  ಕಳೆದ ಜಿಲೈ 4 ರಂದು 20 ಮಂದಿ ಯಾತ್ರಾರ್ಥಿಗಳು ಯಾತ್ರೆ ಕೈಗೊಂಡಿದ್ದರು. ಅತಿಯಾದ ಮಳೆಗೆ ಭೂಕುಸಿತ  ಉಂಟಾದ ಹಿನ್ನಲೆಯಲ್ಲಿ ಜು.7 ರಿಂದ  ಯಾತ್ರೆಯನ್ನು

ಮಂಗಳೂರು: ಮನಪಾ ಮಾಜಿ ಮೇಯರ್ ರಜನಿ ದುಗ್ಗಣ್ಣ ನಿಧನ

ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಹಾಗೂ ಬಿಜೆಪಿ ನಾಯಕಿ ರಜನಿ ದುಗ್ಗಣ್ಣ ಅವರು ಅಲ್ಪಕಾಲದ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು. ಮಂಗಳೂರು ಪಾಲಿಕೆಯ 8ನೇ ಹೊಸಬೆಟ್ಟು ವಾರ್ಡ್ ಹಾಗೂ ಮುಂಚೂರಿನ 2ನೇ ವಾರ್ಡ್‌ನ ಕಾರ್ಪೋರೇಟರ್ ಆಗಿ ಸೇವೆ ಸಲ್ಲಿಸಿದ್ದರು. 2012ರಲ್ಲಿ ಮಂಗಳೂರು ಪಾಲಿಕೆಯ ಮೇಯರ್ ಆಗಿ ಮಂಗಳೂರು ನಗರದ ಅಭಿವೃದ್ಧಿಗೆ ಶ್ರಮಿಸಿದ್ದರು. ಇವರಿಗೆ ಓರ್ವ ಪುತ್ರ ಮೂವರು ಪುತ್ರಿಯರು ಹಾಗೂ ಬಂಧುಮಿತ್ರರನ್ನು

ಉಳ್ಳಾಲ ಕ್ಷೇತ್ರದ ಮಳೆ ಹಾನಿ ಪ್ರದೇಶಗಳಿಗೆ ಸ್ಪೀಕರ್ ಖಾದರ್ ಭೇಟಿ, ಪರಿಶೀಲನೆ

ಕರ್ನಾಟಕ ವಿಧಾನಸಭೆ ಅಧಿವೇಶನದ ವಾರಾಂತ್ಯದ ಬಿಡುವಿನ ದಿನ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದ ಯು.ಟಿ. ಖಾದರ್ ಅವರು ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಕರ್ನಾಟಕ ಹದಿನಾರನೇಯ ವಿಧಾನಸಭೆಯ ಅಧಿವೇಶನವು ಜುಲೈ ಮೂರರಂದು ಪ್ರಾರಂಭವಾಗಿದ್ದು, ಯು.ಟಿ ಖಾದರ್ ಸಭಾಧ್ಯಕ್ಷರಾದ ಬಳಿಕ ಪೂರ್ಣ ಪ್ರಮಾಣದ ಮೊದಲ ಅಧಿವೇಶನ ನಡೆಯುತ್ತಾ ಇದೆ. ಮೊದಲ ವಾರದ ಅಧಿವೇಶನದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರು ಬಜೆಟ್ ಮಂಡನೆ ನಡೆಸಿದ್ದು , ವಾರಾಂತ್ಯದ ಬಿಡುವು ನೀಡಲಾಗಿದೆ. ಈ

ಉಳ್ಳಾಲ: ಜಾನುವಾರುಗಳ ಮೇಲೆ ಹರಿದ ಕಾರು: ಮೂರು ಜಾನುವಾರು ಮೃತ್ಯು, ಓರ್ವನಿಗೆ ಗಾಯ

ಉಳ್ಳಾಲ: ರಸ್ತೆಬದಿ ಮಲಗಿದ್ದ ಜಾನುವಾರುಗಳ ಮೇಲೆ ಕಾರು ಚಲಿಸಿ ಮೂರು ಜಾನುವಾರುಗಳು ಮೃತಪಟ್ಟು, ವೈದ್ಯ ವಿದ್ಯಾರ್ಥಿ ಗಾಯಗೊಂಡ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪಂಡಿತ್ ಹೌಸ್ ನಲ್ಲಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ. ಮೈಸೂರು ಮೂಲದ ಡಾ.ವಿವೇಕ್ ಶಶಿಕುಮಾರ್ ಗಾಯಗೊಂಡವರು. ದೇರಳಕಟ್ಟೆಯಿಂದ ತೊಕ್ಕೊಟ್ಟು ಕಡೆಗೆ ತೆರಳುತ್ತಿದ್ದ ಕಾರು ನಸುಕಿನ 3.30 ರ ಸುಮಾರಿಗೆ ಜಾನುವಾರುಗಳಿಗೆ ಢಿಕ್ಕಿ ಹೊಡೆದು ಪಲ್ಟಿ ಹೊಡೆದಿದೆ. ಪರಿಣಾಮ ರಸ್ತೆ ಬದಿಯಲ್ಲಿ

ಸಿಎಎಸ್‍ಕೆ ಶತಮಾನೋತ್ಸವ ಟ್ರಸ್ಟ್ ಮತ್ತು ಕ್ಯಾಥೋಲಿಕ್ ಅಸೋಸಿಯೇಶನ್ ಆಫ್ ಸೌತ್ ಕೆನರಾ: 2023ನೇ ಸಾಲಿನ ಸ್ಕಾಲರ್‍ಶಿಪ್ ವಿತರಣಾ ಕಾರ್ಯಕ್ರಮ

1914ರಲ್ಲಿ ಸ್ಥಾಪನೆಯಾದ ಕ್ಯಾಥೋಲಿಕ್ ಅಸೋಸಿಯೇಶನ್ ಆಫ್ ಸೌತ್ ಕೆನರಾ ಹಿಂದಿನ ದಕ್ಷಿಣ ಕನ್ನಡದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅಮೋಘ ಸೇವೆಯನ್ನು ನೀಡಿದೆ. ಸಿಎಎಸ್‍ಕೆ ಅನೇಕ ಪರಿಣಾಮಕಾರಿ ದತ್ತಿ ಮತ್ತು ಸಮುದಾಯ ಸೇವಾ ಯೋಜನೆಗಳನ್ನು ವಿಶೇಷವಾಗಿ ಕಳೆದ ಒಂದು ದಶಕದಲ್ಲಿ ಅನುಷ್ಠಾನಗೊಳಿಸುತ್ತಿದೆ. ಸಿಎಎಸ್‍ಕೆ ಮೂರು ವಿಭಾಗಗಳ ಅಡಿಯಲ್ಲಿ ವಿದ್ಯಾರ್ಥಿವೇತನವನ್ನು ಒದಗಿಸುತ್ತದೆ. ಎಂಡೋಮೆಂಟ್ ಫಂಡ್‍ಗಳಿಂದ ಕೋವಿಡ್ ಬೆಂಬಲ

ಮಂಗಳೂರು : ಎಚ್ಚರಿಕೆ ಕ್ರಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ

ಬಂಟ್ವಾಳದಲ್ಲಿ ಸಂಭವಿಸಿದ ಗುಡ್ಡ ಕುಸಿತ ಪ್ರಕರಣದಲ್ಲಿ ಪ್ರಾಣಹಾನಿ ಸಂಭವಿಸಿದಂತೆ ಜಿಲ್ಲೆಯಲ್ಲಿ ಇನ್ನು ಮುಂದೆ ಈ ರೀತಿಯ ಯಾವುದೇ ಪ್ರಕರಣಗಳು ಮರುಕಳಿಸಬಾರದು, ಈ ದಿಸೆಯಲ್ಲಿ ಗುಡ್ಡದ ಸಮೀಪದ ಅಪಾಯಕಾರಿ ಮನೆಗಳಲ್ಲಿ ವಾಸಿಸುತ್ತಿರುವವರನ್ನು ಕಾಳಜಿ ಕೇಂದ್ರಗಳು ಅಥವಾ ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪಜೀರು: ಫ್ಯಾನಿಗೆ ನೇಣು ಬಿಗಿದು ಯುವತಿ ಆತ್ಮಹತ್ಯೆ

ಉಳ್ಳಾಲ: ಬಾಡಿಗೆ ಮನೆಯಲ್ಲಿ ತಾಯಿ ಮತ್ತು ಅಣ್ಣನೊಂದಿಗೆ ವಾಸವಿದ್ದ ಯುವತಿಯೋರ್ವಳು ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಪಜೀರು ಗ್ರಾಮದ ಅಡಪ್ಪ ರೆಸಿಡೆನ್ಸಿಯಲ್ಲಿ ನಡೆದಿದೆ. ಪ್ರೀತಿಕಾ ಪೂಜಾರಿ(21)ಆತ್ಮ ಹತ್ಯೆಗೈದ ಯುವತಿ. ಪ್ರೀತಿಕ ತನ್ನ ತಾಯಿ ಮತ್ತು ಅಣ್ಣನೊಂದಿಗೆ ಪಜೀರು ಗ್ರಾಮದ ಅಡಪ್ಪ ರೆಸಿಡೆನ್ಸಿಯ ಬಾಡಿಗೆ ಮನೆಯಲ್ಲಿ ವಾಸವಿದ್ದರು.ಮಂಗಳೂರಿನ ಕಾಲ್ ಸೆಂಟರ್ ಒಂದರಲ್ಲಿ ಪ್ರೀತಿಕಾ ಉದ್ಯೋಗದಲ್ಲಿದ್ದರು.ಇಂದು ಮದ್ಯಾಹ್ನ 12.30ರ ವೇಳೆಗೆ

ದ.ಕ ಜಿಲ್ಲೆ : ಮಳೆ ಹಿನ್ನಲೆ ಶಾಲಾ ಕಾಲೇಜುಗಳಿಗೆ ರಜೆ

ಜು.04 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿಹೆಚ್ಚು ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಜು.4ರ ಮಂಗಳವಾರ ಮಂಗಳೂರು, ಮೂಲ್ಕಿ, ಉಲ್ಲಾಳ, ಮೂಡಬಿದರೆ ಹಾಗೂ ಬಂಟ್ವಾಳ ತಾಲೂಕುಗಳ ಶಾಲೆಗಳು‌ ಹಾಗೂ‌ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ರಜೆ ಘೋಷಿಸಿದ್ದಾರೆ.