Home Posts tagged #mangalore (Page 237)

ಮ್ಯಾಪ್ಸ್ ಕಾಲೇಜಿನಲ್ಲಿ ಕೃತಿಗಳ ಬಿಡುಗಡೆ : ಬಿಸು ಹಬ್ಬದ ವಿಚಾರ ವಿನಿಮಯ ಕಾರ್ಯಕ್ರಮ

ತುಳು ಪರಿಷತ್ ಮತ್ತು ಮ್ಯಾಪ್ಸ್ ಕಾಲೇಜು ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಲೇಖಕಿ ಶಾರದಾ ಅಂಚನ್ ಅವರ ನಂಬಿ ಸತ್ಯೋಲು ಮತ್ತು ರಕ್ತ ಶುದ್ಧಿ- ಆರೋಗ್ಯ ವೃದ್ಧಿ ಹಾಗೂ ಡಾ. ಪ್ರಭಾಕರ ನೀರ್‍ಮಾರ್ಗ ಅವರ ಕಾದಂಬರಿ ಓಲಗ ಕೃತಿಗಳ ಬಿಡುಗಡೆ ಕಾರ್ಯಕ್ರಮ ಮತ್ತು ಬಿಸು ಹಬ್ಬದ ವಿಚಾರ ವಿನಿಮಯ ಕಾರ್ಯಕ್ರಮವು ನಗರದ ಬಂಟ್ಸ್ ಹಾಸ್ಟೆಲ್ ಸಮೀಪದ ಮ್ಯಾಪ್ಸ್ ಕಾಲೇಜಿನಲ್ಲಿ

ಏಕಾಂಗಿಯಾಗಿ ಬಾವಿ ತೋಡಿದ ಬಂಟ್ವಾಳದ ಸೃಜನ್ ಗೆ ಸೆಲ್ಯೂಟ್ ಟು ಸೈಲೆಂಟ್ ವರ್ಕರ್ ಪ್ರಶಸ್ತಿ

ಬಂಟ್ವಾಳ: ಏಕಾಂಗಿಯಾಗಿ ಬಾವಿ ತೋಡಿ ಅಸಾಮಾನ್ಯ ಸಾಧನೆ ತೋರಿದ ಬಾಲಕ ನರಿಕೊಂಬು ಗ್ರಾಮದ ನಾಯಿಲ ಕಾಪಿಕಾಡುವಿನ ಸೃಜನ್ ಪೂಜಾರಿಗೆ ಜೆಸಿಐ ಬಂಟ್ವಾಳ ಸೆಲ್ಯೂಟ್ ಟೂ ಸೈಲೆಂಟ್ ವರ್ಕರ್ ಪ್ರಶಸ್ತಿ ನೀಡಿ ಗೌರವಿಸಿದೆ. ಬಾಲಕನ ಸಾಧನೆಯ ಬಗ್ಗೆ ಮಾಧ್ಯಮಗಳ ವರದಿಯನ್ನು ಆಧಾರಿಸಿ ಬುಧವಾರ ಅವರ ಮನೆಗೆ ತೆರಳಿದ ಜೆಸಿಐ ಬಂಟ್ವಾಳದ ಅಧ್ಯಕ್ಷ ರಾಜೇಂದ್ರ ಕೆ. ಹಾಗೂ ಸದಸ್ಯರು ಸೃಜನ್ ಸಾಧನೆಯನ್ನು ಶ್ಲಾಘಿಸಿ ಪ್ರಶಸ್ತಿ ನೀಡಿ ಗೌರವಿಸಿದರು. ಎಲೆ ಮರೆಯ ಕಾಯಿಯಂತೆ ಸಾಧನೆ ಮಾಡುವ

ಮೂಡುಬಿದಿರೆ : ಶಿಷ್ಯನ ಪರವಾಗಿ ಮಾಜಿ ಸಚಿವ ಜೈನ್ ಮತಯಾಚನೆ

ಮೂಡುಬಿದಿರೆ – ತನ್ನ ಶಿಷ್ಯ ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರವಾಗಿ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ಗುರುವಾರ ಪುರಸಭಾ ವ್ಯಾಪ್ತಿಯ ವಾರ್ಡ್ ನಂಬ್ರ 15ರ ಕೊಡಂಗಲ್ಲು ಪರಿಸರದ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು. ಚುನಾವಣೆ ಪ್ರಣಾಳಿಕೆಯ 300 ಗ್ಯಾರಂಟಿ ಕಾರ್ಡ್ ಹಸ್ತಾಂತರಿಸಿದ ಅಭಯಚಂದ್ರ ಅವರು ಮಿಥುನ್ ರೈಯನ್ನು ಮರೆಯದಿರಿ ಎಂದರು. ವಾರ್ಡ್ ಸದಸ್ಯೆ ರೂಪಾ ಸಂತೋಷ್ ಶೆಟ್ಟಿ, ಪುರಸಭಾ ಸದಸ್ಯರಾದ ಸುರೇಶ್

ಬೆಳ್ತಂಗಡಿ : ತೋಟತ್ತಾಡಿ ; ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ

ಬೆಳ್ತಂಗಡಿ. : ತೋಟತ್ತಾಡಿ ಬಿಜೆಪಿಯ ದುರಾಡಳಿತಕ್ಕೆ ಬೇಸಿತ್ತು ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತರಾದ ಹರೀಶ್ ಗೌಡ ವಿಶ್ವನಾಥ್ ಗೌಡ ರವರು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಕ್ಷಿತ್ ಶಿವರಾಂ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಸಂಯೋಜಕರಾದ ಭಗೀರಥ ಜಿ. ಮಾಜಿ ಜಿಲ್ಲಾ ಪಂಚಾಯತ್

ಏ.14ರಂದುಕರಾವಳಿಯಾದ್ಯಂತ ಗೌಜಿ ಗಮ್ಮತ್ ತುಳು ಸಿನಿಮಾ ಬಿಡುಗಡೆ

ಮೋವಿನ್ ಫಿಲಮ್ಸ್ ಬ್ಯಾನರ್‍ನಡಿ ನಿರ್ಮಾಣವಾದ ತುಳು ಸಿನಿಮಾ `ಗೌಜಿ ಗಮ್ಮತ್’ ಏ.14ರಂದು ಕರಾವಳಿಯಾದ್ಯಂತ ಬಿಡುಗಡೆಗೊಳ್ಳಲಿದೆ. ಕರ್ಣ ಉದ್ಯಾವರ ಮೊದಲ ಬಾರಿಗೆ ನಾಯಕ ನಟನಾಗಿ ನಟಿಸಿದ್ದಾರೆ. ನಾಯಕಿಯಾಗಿ ಉಡುಪಿಯ ಸ್ವಾತಿ ಶೆಟ್ಟಿ ಸಾಥ್ ನೀಡಿದ್ದಾರೆ. ಈ ಚಿತ್ರದಲ್ಲಿ ದೊಡ್ಡ ತಾರಾಬಳಗವಿದ್ದು ಕರಾವಳಿಯ ಹಾಸ್ಯ ದಿಗ್ಗಜರೆಂದೇ ಖ್ಯಾತರಾದ ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್ ಮಿಜಾರು

ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಚಿವ ಸುನಿಲ್ ಕುಮಾರ್ ಭೇಟಿ

ಸುಬ್ರಹ್ಮಣ್ಯ: ಉಡುಪಿ ಜಿಲ್ಲೆಯ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಚಿವ ವಿ.ಸುನಿಲ್ ಕುಮಾರ್ ಮಂಗಳವಾರ ರಾತ್ರಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದರು. ಬುಧವಾರ ಬೆಳಗ್ಗೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದರುಶನ ಪಡೆದು, ಪ್ರಾರ್ಥನೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು. ಬಳಿಕ ಹೊಸಳಿಗಮ್ಮನ ದರುಶನ ಪಡೆದು, ಪ್ರಸಾದ ಸ್ವೀಕರಿಸಿದರು. ಕುಕ್ಕೆಯಲ್ಲಿ ಸುನಿಲ್ ಕುಮಾರ್ ಶೇಷ ಸೇವೆ ನೆರವೇರಿಸಿದರು. ಬಳಿಕ ಆದಿ ಸುಬ್ರಹ್ಮಣ್ಯಕ್ಕೆ ತೆರಳಿ ಶ್ರೀ ದೇವರ

ಬಪ್ಪನಾಡು: ಒಂದೂವರೆ ಲಕ್ಷ ಮಲ್ಲಿಗೆ ಚೆಂಡು ಸಮರ್ಪಣೆ

ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಉತ್ಸವದ ಅತ್ಯಂತ ಶ್ರೇಷ್ಠ ಸೇವೆಯಾಗಿರುವ ಶ್ರೀದೇವಿಯ ಶಯನೋತ್ಸವಕ್ಕೆ ಹೂ ಅರ್ಪಿಸುವ ಸೇವೆಯಂಗವಾಗಿ ಈ ಬಾರಿ ಒಂದೂವರೆ ಲಕ್ಷಕ್ಕೂ ಮಿಕ್ಕಿದ ಮಲ್ಲಿಗೆ ಚೆಂಡು ಸಮರ್ಪಣೆಯಾಗಿದೆ ಎಂದು ದೇಗುಲದ ಮೂಲಗಳು ತಿಳಿಸಿವೆ. ಸಂಜೆ 3 ಗಂಟೆಯ ಬಳಿಕ ಮಲ್ಲಿಗೆ ಸಮರ್ಪಣೆ ಸೇವೆ ಆರಂಭ ಗೊಂಡಿತ್ತು. ಮಲ್ಲಿಗೆಯನ್ನು ತಡ ರಾತ್ರಿ ಗರ್ಭಗುಡಿಯೊಳಗೆ ಜೋಡಿಸಿ ದೇವಿಗೆ ಶಯನೋತ್ಸವ ನಡೆಯಿತು.

ಬಿಸಿಸಿಐ ವತಿಯಿಂದ `ಹೊಟೇಲ್ ತಾಜ್ ವಿವಾಂತದಲ್ಲಿ ಇಫ್ತಾರ್ ಕೂಟ

ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ (ಬಿಸಿಸಿಐ) ಮಂಗಳೂರು ಇದರ ವತಿಯಿಂದ ಇಫ್ತಾರ್ ಕೂಟವು ನಗರದ ಹೊಟೇಲ್ ತಾಜ್ ವಿವಾಂತ' ಹೊಟೇಲ್ ನಲ್ಲಿ ನಡೆಯಿತು. ಈ ಸಂದರ್ಭ ರಮಝಾನ್ ತಿಂಗಳು ಮತ್ತು ಝಕಾತ್ ವಿಚಾರವಾಗಿ ಕಚ್ಚಿ ಮೆಮನ್ ಮಸ್ಜಿದ್‍ನ ಖತೀಬ್ ವೌಲಾನ ಶುಹೈಬ್ ನದ್ವಿ ವಿಶೇಷ ಉಪನ್ಯಾಸ ನೀಡಿದರು.ರಮಝಾನ್ ಅಲ್ಲಾಹನ ಉಡುಗೊರೆಯಾಗಿದೆ. ಸೀಮಿತ ಅವಧಿಯಲ್ಲಿ ನೂರಾರು ಪಟ್ಟು ಪುಣ್ಯ ಸಂಪಾದಿಸುವ ಈ ತಿಂಗಳ ಮಹತ್ವವನ್ನು ಪ್ರತಿಯೊಬ್ಬ ಮುಸಲ್ಮಾನ

ಕಿನ್ನಿಗೋಳಿ ಪಂಚಾಯತ್‍ನಿಂದ ಪೂರೈಸುವ ನಳ್ಳಿ ನೀರಿನಲ್ಲಿ ವ್ಯತ್ಯಯ : ಶಾಂತಿನಗರ-ಗುತ್ತಕಾಡು ಪರಿಸರದ ನಾಗರಿಕರ ನಿಯೋಗ ಮುಖ್ಯಾಧಿಕಾರಿ ಭೇಟಿ

ಕಿನ್ನಿಗೋಳಿ: ಪಂಚಾಯತ್ ವತಿಯಿಂದ ಪೂರೈಸುವ ನಳ್ಳಿ ನೀರಿನಲ್ಲಿ ವ್ಯತ್ಯಯ ಉಂಟಾಗಿದ್ದು ಈ ಕುರಿತು ಶಾಂತಿನಗರ – ಗುತ್ತಕಾಡು ಪರಿಸರದ ನಾಗರಿಕರ ನಿಯೋಗ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅವರನ್ನು ಭೇಟಿಯಾಗಿ ಚರ್ಚಿಸಿತು. ಇತ್ತೀಚೆಗೆ ಕುಡಿಯುವ ನೀರಿನ ಅಸಮರ್ಪಕ ಪೂರೈಕೆಯಿಂದ ತಾಳಿಪಾಡಿ ಗ್ರಾಮದ ಶಾಂತಿನಗರ ಗುತ್ತಕಾಡು ಪ್ರದೇಶದಲ್ಲಿ ಜನರು ಸಂಕಷ್ಟ ಅನುಭವಿಸುವಂತಾಗಿದೆ. ಈ ನಿಟ್ಟಿನಲ್ಲಿ ಖಿಲ್ರಿಯಾ ಜುಮಾ ಮಸೀದಿ ಆಡಳಿತ ಸಮಿತಿ ಪ್ರಧಾನ

ರಾಜಕೀಯದಿಂದ ನಿವೃತ್ತಿ ಘೋಷಿಸಿದ ಅಂಗಾರ

ಪಕ್ಷ ಟಿಕೆಟ್ ನೀಡದ ಕುರಿತು ನನ್ನ ಅಸಮಾಧಾನವಲ್ಲ. ಆದರೆ ಇಷ್ಟು ವರ್ಷ ಪಕ್ಷಕ್ಕಾಗಿ ಮತ್ತು ಸಮಾಜಕ್ಕಾಗಿ ಯಾವುದೇ ಕಪ್ಪು ಚುಕ್ಕೆ ಬಾರದಂತೆ ಮಾಡಿದ ಸೇವೆಯನ್ನು ಗೌರವಿಸುವ ಕ್ರಮ ಇದಲ್ಲ. ಪ್ರಾಮಾಣಿಕ ರಾಜಕಾರಣಕ್ಕೆ ಇಂದು ಬೆಲೆ ಇಲ್ಲದಂತಾಗಿದೆ. ನನ್ನ ಪ್ರಾಮಾಣಿಕತೆಯೇ ನನಗೆ ಮುಳುವಾಗಿದೆ. ಲಾಬಿ ಮಾಡುವುದು ನನ್ನ ಗುಣವಾಗಿರಲಿಲ್ಲ. ಅದೇ ನನಗೆ ಹಿನ್ನಡೆಯಾಯಿತು ಎಂದು ಹೇಳಿದ ಅಂಗಾರರು, ನಾನು ಇನ್ನು ರಾಜಕಾರಣದಲ್ಲಿಲ್ಲ. ಚುನಾವಣಾ ಪ್ರಚಾರ ಕಣದಲ್ಲೂ ಇಲ್ಲ. ಹೊಸ