ಬಂಟ್ವಾಳ: ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಲಿದೆ. ಈ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳು ತಯಾರಿಯನ್ನು ಆರಂಭಿಸಿದೆ. ಇತ್ತ ಚುನಾವಣೆಯ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಲು ದ.ಕ. ಜಿಲ್ಲಾಡಳಿತವೂ ಕಾಯೋನ್ಮುಖವಾಗಿದ್ದು ಆಯ್ದ ಮತಗಟ್ಟೆಗಳಲ್ಲಿ(ಶಾಲೆಗಳಲ್ಲಿ) ಬಣ್ಣದ ಚಿತ್ರಗಳನ್ನು ರಚಿಸಿ ಮತದಾರರನ್ನು ಮತಗಟ್ಟೆಗೆ
ಮುದರಂಗಡಿಯಲ್ಲಿ ತೆರೆದ ಬಾವಿಯಲ್ಲಿ ಸ್ಥಳೀಯ ಸಾಕು ನಾಯಿ ಬಿದ್ದ ಮಾಹಿತಿ ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ಸಿಕ್ಕಿದ್ದು ತಕ್ಷಣ ಹಿರಿಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದ ಸಿಬ್ಬಂದಿಗಳು ಬಾವಿಯಲ್ಲಿ ಬಿದ್ದ ನಾಯಿಯನ್ನು ರಕ್ಷಿಸಿದ ಘಟನೆ ಮುದರಂಗಡಿಯಲ್ಲಿ ನಡೆದಿದೆ.ಇವರ ಈ ಕಾರ್ಯಕ್ಕೆ ಸ್ಥಳೀಯರ ಮೆಚ್ಚುಗೆ ವ್ಯಕ್ತವಾಗಿದೆ ನಾಯಿಯನ್ನು ರಕ್ಷಿಸುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗ್ತಿದೆ
ನಗರ ಮರೋಳಿಯಲ್ಲಿ ರಂಗ್ ದೇ ಬರ್ಸಾ ಹೋಲಿ ಸಂಭ್ರಮದ ಪಾರ್ಟಿಗೆ ಬಜರಂಗದಳ ಕಾರ್ಯಕರ್ತರು ದಾಳಿ ಮಾಡಿದ ಘಟನೆ ನಡೆದಿದೆ. ಹೋಳಿ ಆಚರಣೆಯಲ್ಲಿ ಬಣ್ಣ ಎರಚಿಕೊಂಡು ಯುವಕ ಯುವತಿಯರು ಸಂಭ್ರಮಿಸುತ್ತಿದ್ದರು. ಅನ್ಯಧರ್ಮದ ಯುವಕರ ಜೊತೆ ಹೋಳಿ ಆಚರಣೆ ಎಂದು ಆರೋಪಿಸಿ ಭಜರಂಗದಳ ಕಾರ್ಯಕರ್ತರು ದಾಳಿ ನಡೆಸಿ ಬ್ಯಾನರ್ ಹರಿದು ಹಾಕಿ ವಸ್ತುಗಳನ್ನು ಪುಡಿಗೈದಿದ್ದಾರೆ. ಈ ವೇಳೆ ಬಜರಂಗದಳ ಕಾರ್ಯಕರ್ತರು ಮತ್ತು ಆಯೋಜಕರ ನಡುವೆ ಮಾತಿನ ಚಕಮಕಿ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ
ಮಂಗಳೂರು ಮಹಾನಗರಪಾಲಿಕೆ ತಿರುವೈಲ್ ವಾರ್ಡಿನ ಮಾಜಿ ಸದಸ್ಯರುವಾಮಂಜೂರಿನ ಸದಾಶಿವ ನಗರ ಬಡಾವಣೆಯ ನಿವಾಸಿ ಶ್ರೀಮತಿ ಮೀರಾ ಅಶೋಕ್ ರವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಇದೆ ಮಾರ್ಚ್ ತಿಂಗಳ 19ನೇ ತಾರೀಖಿನಭಾನುವಾರದಂದು ನಗರದ ಕೆ .ಎಂ .ಸಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು .ಮಂಗಳೂರು ಮಹಾನಗರಪಾಲಿಕೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದು ಮಾತರವಲ್ಲದೆವಿವಿಧ ಸಂಘಸಂಸ್ಥೆಗಳ ಲ್ಲಿ ಮುಖ್ಯ ಹುದ್ದೆಯನ್ನು ಅಲಂಕರಿಸಿಕೊಂಡು ಸದಾ ಚಟುವಟಿಕೆಯಿಂದ ಜನರನ್ನು ಸಂಘಟಿಸಿಕೊಂಡು
ಭಾರ್ಗವಿ ಬಿಲ್ಡರ್ಸ್ ಅವರಿಂದ ಕೊಟ್ಟಾರದ ಮಾಲೆಮಾರ್ ಬಳಿ ನಿರ್ಮಾಣಗೊಳ್ಳುತ್ತಿರುವ ಅತ್ಯಾಧುನಿಕ ‘ಕೈಲಾಶ್’ ವಸತಿ ಸಮುಚ್ಚಯದಲ್ಲಿ ಗುಣನಾಥ-ಶಿಲ್ಪಾ ದಂಪತಿಯ ಮೋಕ್‌ಅಪ್ ಫ್ಲ್ಯಾಟ್ ಉದ್ಘಾಟನೆಯ ಬಳಿಕ ಜನರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗುತ್ತಿದೆ. ಈ ಸಮುಚ್ಚಯದಲ್ಲಿ ಶೇ.75ರಷ್ಟು ಫ್ಲ್ಯಾಟ್‌ಗಳು ಬುಕ್ಕಿಂಗ್ ಆಗಿವೆ. ಬುಕ್ಕಿಂಗ್ ಮಾಡಿದವರುತಮ್ಮ ಸ್ನೇಹಿತರು, ಪರಿಚಯಸ್ಥರನ್ನು ಇಲ್ಲಿ ಫ್ಲ್ಯಾಟ್ ಬುಕ್ ಮಾಡಲು ಪ್ರೇರೇಪಿಸುತ್ತಿದ್ದಾರೆ. ಇನ್ನು ಕೆಲವೇ
ಕೆ ಕಮಲಾಕ್ಷ ಪೈ (91 ವ) ನಗರದ ಮಣ್ಣಗುಡ್ಡೆಯಲ್ಲಿರುವ ತಮ್ಮ ನಿವಾಸದಲ್ಲಿ ಅಲ್ಪಕಾಲದ ಅಸೌಖ್ಯದಿಂದ ಶನಿವಾರ (ಮಾ 25)ನಿಧನ ಹೊಂದಿದರು. ಎಳವೆಯಿಂದಲೇ ವ್ಯವಹಾರಿಕವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು ಏಳುವರೆ ದಶಕಗಳ ಕಾಲ ತಮ್ಮ ವ್ಯವಹಾರ ಸಂಸ್ಥೆಯನ್ನು ಮುನ್ನಡೆಸಿಕೊಂಡು ಬಂದಿದ್ದರು. ಅವರು ನಾಲ್ವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಬಂಟ್ವಾಳ: ತಾಲೂಕು ಕಚೇರಿಯಲ್ಲಿ ಕಡತಗಳು ಕಾಣೆಯಾಗುತ್ತಿರುವುದು ಏಕೆ ಎಂದು ಲೋಕಾಯುಕ್ತ ಎಸ್ಪಿ ಸೈಮನ್ ಗರಂ ಆದ ಘಟನೆ ಮಂಗಳವಾರ ಬಂಟ್ವಾಳ ತಾಲೂಕಿನಲ್ಲಿ ಕರೆದ ಸಾರ್ವಜನಿಕ ಕುಂದುಕೊರತೆ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ನಡೆಯಿತು. ಎಸ್ಪಿ ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ಕಾರ್ಯಕ್ರಮದಲ್ಲಿ ಸುಮಾರು ಹದಿನೈದರಷ್ಟು ಮಂದಿ ತಮ್ಮ ದೂರು, ದುಮ್ಮಾನ ಸಲ್ಲಿಸಿದರು. ಈ ಸಂದರ್ಭ ಕರೋಪಾಡಿ ಗ್ರಾಮದ ವಿಕ್ಟರ್ ವೇಗಸ್ ಎಂಬವರು ದೂರು ನೀಡಿ, ತನ್ನ ಕಡತಗಳ
ಉಳ್ಳಾಲ: ಕೇರಳದ ಕೊಚ್ಚಿಯಿಂದ ಬೈಕಂಪಾಡಿ ಪೈಂಟ್ ತಯಾರಿಕಾ ಇಂಡಸ್ಟ್ರಿ ಗೆ ರಾಸಾಯನಿಕ ಸಾಗಾಟ ನಡೆಸುತ್ತಿದ್ದ ಟ್ಯಾಂಕರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪು ಬಳಿ ತಡರಾತ್ರಿ ವೇಳೆ ಸಂಭವಿಸಿದೆ. ಹೆದ್ದಾರಿ ಮದ್ಯೆಯೇ ಪಲ್ಟಿಯಾಗಿ ಬಿದ್ದು ಚಾಲಕ ಮಯೂರ್ (40) ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಅವರನ್ನು ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಡರಾತ್ರಿ 1ರ ವರೆಗೆ ನಡೆದ ತೆರವು ಕಾರ್ಯಾಚರಣೆ !ಲಾರಿ ಹಾಗೂ
ಕಾಪುವಿನಲ್ಲಿ ನಡೆಯುವ ಮಾರಿಪೂಜೆ ಹಾಗೂ ಪಡುಬಿದ್ರಿ ದೇವಳದಲ್ಲಿ ನಡೆಯುವ ರಥೋತ್ಸವ ಸಂದರ್ಭ ಅನ್ಯಧರ್ಮಿಯರಿಗೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ದೇವಳಗಳ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ಶೆಟ್ಟಿಯವರಿಗೆ ಬಜರಂಗದಳ ಕಾಪು ಪ್ರಖಂಡ ಸದಸ್ಯರು ಮನವಿ ಸಲ್ಲಿಸಿದ್ದಾರೆ. ದೇಶದ ಕಾನೂನನ್ನು ಹಾಗೂ ಹಿಂದೂ ಸನಾತನ ಧರ್ಮದ ಆಚಾರ-ವಿಚಾರಗಳನ್ನು ಗೌರವಿಸದ ಅನ್ಯಧರ್ಮಿಯರಿಗೆ ಜಾತ್ರಾ ಸಂಧರ್ಭದಲ್ಲಿ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡದಂತೆ ಮನವಿಯನ್ನು
ಮೂಡುಬಿದಿರೆ: ಸಂಸ್ಕೃತಿ, ಪರಂಪರೆ, ಇತಿಹಾಸ ಇವೆಲ್ಲದಕ್ಕೂ ಮಾದರಿಯಾಗಿ ಭಾರತ ಮೆರೆಯುತ್ತಿದೆ. ಕಾಂಗ್ರೆಸ್‍ನದ್ದು ವಿದೇಶಿ ಸಿದ್ದಾಂತ. ರಾಷ್ಟ್ರೀಯತೆಯನ್ನು ಮರೆತು ವಿದೇಶಿ ಸಂಸ್ಕೃತಿಯೊಂದಿಗೆ ಕಾಂಗ್ರೆಸ್ ಸಾಗಿ ಬಂದಿರುವುದರಿಂದ ಇಂದು ನೆಲಕಚ್ಚಿದೆ. ಅಭಿವೃದ್ಧಿಯ ಜೊತೆಗೆ ರಾಷ್ಟ್ರೀಯತೆ ಮೌಲ್ಯಗಳ ಸಿದ್ಧಾಂತಕ್ಕೆ ಅನುಗುಣವಾಗಿ ಮುನ್ನಡೆಯುತ್ತಿರುವ ಬಿಜೆಪಿ ಇಂದು ವಿಶ್ವದಲ್ಲೇ ನಂ.1 ಪಕ್ಷಗಾಗಿ ಗುರುತಿಸಿಕೊಂಡಿದೆ ಎಂದು ಬಿಜೆಪಿ ದ.ಕ ಜಿಲ್ಲಾಧ್ಯಕ್ಷ




























