Home Posts tagged #mangalore (Page 268)

ಅಂತರ ವಿವಿ ಸೌತ್ ಈಸ್ಟ್ ಇಂಡಿಯಾ ವಲಯ ಯುವಜನ ಮೇಳ: ಆಳ್ವಾಸ್ ವಿದ್ಯಾರ್ಥಿಗಳ ಪಾರಮ್ಯ

ಮೂಡುಬಿದಿರೆ:ಕಲಬುರಗಿಯ ಗುಲ್ಬರ್ಗಾ ವಿಶ್ವವಿದ್ಯಾಲಯ ಹಾಗೂ ನವದೆಹಲಿ ಅಸೋಸಿಯೇಷನ್ ಆಫ್ ಇಂಡಿಯನ್ ಯುನಿವರ್ಸಿಟಿ ಆಶ್ರಯದಲ್ಲಿ ನಡೆದ 36ನೇ ಅಂತರ ವಿಶ್ವವಿದ್ಯಾಲಯ ಸೌತ್ ಈಸ್ಟ್ ಇಂಡಿಯಾ ವಲಯ ಯುವಜನ ಮೇಳದ ಏಕಾಂಕ ನಾಟಕ ಪ್ರಥಮ ಹಾಗೂ ಜಾನಪದ ನೃತ್ಯದಲ್ಲಿ ದ್ವಿತೀಯ ಸ್ಥಾನ ಪಡೆದ ಆಳ್ವಾಸ್ ಕಾಲೇಜು ರಾಷ್ಟç ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ. ಆಳ್ವಾಸ್ ಕಾಲೇಜು ತಂಡವು

ಬಿ.ಸಿ.ರೋಡಿನ ಪ್ರಿಯಾ ಎಲೆಕ್ಟ್ರಾನಿಕ್ಸ್‍ನಲ್ಲಿ ಅಗ್ನಿ ಅವಘಡ

ಬಂಟ್ವಾಳ: ಬಿ.ಸಿ.ರೋಡ್ ನ ಹೃದಯಭಾಗದಲ್ಲಿರುವ ಪ್ರಿಯಾ ಎಲೆಕ್ಟ್ರಾನಿಕ್ಸ್ ಫರ್ನಿಚರ್ಸ್ ಮತ್ತು ಕೊಮಾಕಿ ಎಲೆಕ್ಟ್ರಿಕ್ ವೈಕಲ್ ಡಿವಿಜನ್ ನ ಮಳಿಗೆಯ ಮಾಳಿಗೆಯಲ್ಲಿ ದಟ್ಟವಾದ ಹೊಗೆಯೊಂದಿಗೆ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕದಳ ಬೆಂಕಿಯನ್ನು ನಂದಿಸುವಲ್ಲಿ ಹರಸಾಹಸ ಮಾಡುತ್ತಿದ್ದಾರೆ. ಎಲೆಕ್ಟ್ರಿಕ್ ವಾಹನಗಳು ಇರುವ ಜಾಗದಲ್ಲಿ ಬೆಂಕಿ ದಟ್ಟವಾಗಿದ್ದು, ವ್ಯಾಪಕವಾಗಿ ಹರಡುತ್ತಿರುವುದು ಕಂಡುಬಂದಿದ್ದು, ಸ್ಥಳದಲ್ಲಿ ಹಲವಾರು ಜನ ಜಮಾವಣೆಗೊಂಡಿದ್ದು, ನಂದಿಸುವ

2023 ಬಜೆಟ್ ಹೈಲೈಟ್ಸ್

ನವದೆಹಲಿ: 2024ರ ಸಾರ್ವತ್ರಿಕ ಚುನಾವಣೆಯ  ಮುಂಚಿತವಾಗಿ  ಇಂದು ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೀಮಿತ ಸಂಪನ್ಮೂಲಗಳನ್ನು ವಿವೇಚನಾಯಕ್ತವಾಗಿ ಬಳಸುವ ಜಾಣ್ಮೆ ಮೆರೆದಿದ್ದಾರೆ.ಜಾಗತಿಕ ಆರ್ಥಿಕ ಹಿಂಜರಿತದ ಭೀತಿ ಹಿನ್ನೆಲೆಯಲ್ಲಿ ಸವಾಲುಗಳನ್ನು ಎದುರಿಸಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಘೋಷಿಸಿದ್ದಾರೆ. ಬಜೆಟ್ ನಲ್ಲಿ ಏಳು ಆದ್ಯತಾ ವಲಯಗಳನ್ನು ಅವರು ಪ್ರಸ್ತಾಪಿಸಿದ್ದಾರೆ. ಮೂಲ ಸೌಕರ್ಯ ಅಭಿವೃದ್ಧಿಗೆ ವಿಶೇಷ

ಕೋಲ್ಚಾರಿನಲ್ಲಿ ಕಳಪೆ ಮಟ್ಟದ ರಸ್ತೆ ಕಾಮಗಾರಿ, ಪಾದಯಾತ್ರೆ ಮೂಲಕ ಪ್ರತಿಭಟನೆ

ಆಲೆಟ್ಟಿ ಗ್ರಾಮದ ನಾರ್ಕೋಡು ಕೋಲ್ಚಾರು ಕನ್ನಡಿತೋಡು ಮೂಲಕ ಅಂತರ್ ರಾಜ್ಯ ಸಂಪರ್ಕದ ಮುಖ್ಯ ರಸ್ತೆಯು ಲೋಕೋಪಯೋಗಿ ಇಲಾಖೆಗೆ ಸೇರಿದ್ದು ಕಳೆದ 4 ವರ್ಷಗಳ ಹಿಂದೆ ಶಾಸಕ ಎಸ್.ಅಂಗಾರ ರವರು ಕೋಲ್ಚಾರಿನಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು.ಅನುದಾನ ರೂ. 10.5 ಕೋಟಿ ಬಿಡುಗಡೆಗೊಂಡು ಜೆ.ಡಿ.ಸುವರ್ಣ ಎಂಬ ಗುತ್ತಿಗೆದಾರರು ಕಾಮಗಾರಿ ಕೆಲಸ ಮಾಡುತ್ತಿದ್ದಾರೆ. ರಸ್ತೆಅಗಲೀಕರಣದ ಅರ್ಥ್ ವರ್ಕ್ ಮುಗಿದು ಇದೀಗ ಅಂತಿಮ ಹಂತದ ಡಾಮರೀಕರಣ ಕೆಲಸ

ಕಾರ್ಕಳ ಪುರಸಭೆ ಸಾಮಾನ್ಯ ಸಭೆ, ಒಳಚರಂಡಿ ಮಂಡಳಿ ವಿರುದ್ಧ ಕ್ರಿಮಿನಲ್ ದಾಖಲೆ ದಾಖಲಿಸಿ : ಶುಭದರಾವ್ ಸಭೆಯಲ್ಲಿ ಆಗ್ರಹ

ಪುರಸಭೆ ವ್ಯಾಪ್ತಿಯಲ್ಲಿ ಬಹುಕೋಟಿ ರೂಪಾಯಿ ವೆಚ್ಚದ ಒಳಚರಂಡಿ ಕಳಪೆ ಕಾಮಗಾರಿಕೆಯಿಂದ ಕೂಡಿದೆ ಪರಿಸರದ ನಿವಾಸಿಗಳ ಬಾವಿಗಳು ಮಲಿನಗೊಂಡಿವೆ ಇದಕ್ಕಾಗಿ ಒಳಚರಂಡಿ ಮಂಡಳಿ ವಿರುದ್ಧ ಕ್ರಿಮಿನಲ್ ದಾಖಲೆ ದಾಖಲಿಸುವಂತೆ ಶುಭದರಾವ್ ಆಗ್ರಹಿಸಿದರು . ಅಧ್ಯಕ್ಷ ಸುಮಕೇಶವ ಅಧ್ಯಕ್ಷತೆಯಲ್ಲಿ ನಡೆದ ಕಾರ್ಕಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿ ಮೂರು ಮಾರ್ಗದಿಂದ ರಥ ಬೀದಿ ಸೇರಿದಂತೆ ಒಳಚರಂಡಿ ಮೂಲಕ ಹಾದು ಹೋದ ಕಡೆಗಳಲ್ಲಿ ಮಲಿನ ನೀರು ಸೋರಿಕೆಯಾಗುತ್ತಿದೆ. ಒತ್ತಡ

ದೇರೆಬೈಲ್‍ನ ಕೇಬಲ್ ಆಪರೇಟರ್ ಕ್ಲೌಡ್ ಮೆನೇಜಸ್ ನಿಧನ

ಮಂಗಳೂರಿನ ದೇರೆಬೈಲ್‍ನ ನಿವಾಸಿಯಾಗಿರುವ ಕ್ಲೌಡ್ ಮೆನೇಜಸ್ ಅವರು ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಅವರಿಗೆ 53 ವರ್ಷ ಪ್ರಾಯವಾಗಿತ್ತು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಕ್ಲೌಡ್ ಮೇನೇಜಸ್ ಅವರು ನಗರದ ಯೆಯ್ಯಾಡಿಯಲ್ಲಿರುವ ವಿ4 ಡಿಜಿಟಲ್ ಇನ್ಫೋಟೆಕ್ ಪ್ರೈವೆಟ್ ಲಿಮಿಟೆಡ್‍ನ ಪಾರ್ಟನರ್ ಆಗಿದ್ದು, ದೇರೆಬೈಲ್‍ನ

ಬಡಕುಟುಂಬದ ಹೆಣ್ಣು ಮಗಳಿಗೆ ಮದುವೆ ಮಾಡಿಸುವ ಮೂಲಕ ಮಾದರಿಯಾದ ತಿರುವೈಲು ಕಾರ್ಪೋರೇಟರ್ ಹೇಮಲತಾ ರಘು ಸಾಲ್ಯಾನ್

ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುವುದು ಸಾಮಾನ್ಯ. ಆದರೆ ಅವರ ಮಿತಿಯನ್ನು ಮೀರಿಯೂ ಜನ ಸೇವೆ ಮಾಡುವುದು ವಿರಳ. ಅಂತಹ ವಿರಳ ಜನಪ್ರತಿನಿಧಿಯೊನಬ್ಬರು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿದ್ದಾರೆ. ಅವರ ಮಾನವೀಯತೆಯ ಸೇವೆಗೆ ಊರವರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಇವರು ಮಂಗಳೂರು ಮಹಾನಗರ ಪಾಲಿಕೆಯ ತಿರುವೈಲ್ ವಾರ್ಡ್‍ನ ಕಾಪೆರ್Çಲರೇಟರ್ ಹೇಮಲತಾ ರಘು ಸಾಲ್ಯಾನ್. ಪತಿ ರಘು ಸಾಲ್ಯಾನ್ ಜೊತೆ ಸೇರಿ ಸಮಾಜ ಸೇವೆಯಲ್ಲೇ

ಕಾರ್ಕಳದ ಉಮಿಕಲ್ ಬೆಟ್ಟದ ಮೇಲೆ ಪರಶುರಾಮ ಥೀಮ್ ಪಾರ್ಕ್

ಕಾರ್ಕಳ: ಪರಶುರಾಮ ಸೃಷ್ಟಿಯ ಮೂಲಕ ಸಾರ್ಥಕತೆ ಇದೆ. ಇಲ್ಲಿ ಭಾಗವಹಿಸಿದ ನಾವು ಭಾಗ್ಯವಂತರು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು. ಅವರು ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ಉಮಿಕಲ್ ಬೆಟ್ಟದ ಮೇಲೆ 33 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅನಾವರಣ ಗೊಳಿಸಿಮಾತನಾಡಿದರು.ಪರಶುರಾಮನ ಪುತ್ಥಳಿ ನಿರ್ಮಾಣ ಮೂಲಕ ಪುರಾಣಕ್ಕೆ ಹೊಸದೊಂದು ಕುರುಹು ಸಿಕ್ಕಿದೆ ಅಮೂಲಕ ಐತಿಹಾಸಿಕ ದಿನವಾಗಿ ಮೂಡಿಬಂದಿದೆ ಎಂದು ಸಿ ಎಂ ಬೊಮ್ಮಾಯಿ ಬಣ್ಣಿಸಿದರು . ಸಿಕ್ಕ ಅವಕಾಶವನ್ನು

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ

ಸುಬ್ರಹ್ಮಣ್ಯ : ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಇಂದು ಇತಿಹಾಸ ಪ್ರಸಿದ್ದ ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಶಾಸಕ ರಾಜೇಶ್ ನಾಯಕ್ ಅವರ ನೇತೃತ್ವ ದಲ್ಲಿ ನಡೆಯಲಿರುವ ಗ್ರಾಮ ವಿಕಾಸಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಜಿಲ್ಲೆಗೆ ಆಗಿಮಿಸಿರುವ ಅಣ್ಣಾಮಲೈ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಭೇಟಿ ನೀಡಿದರು. ದೇವಳದ ಆಡಳಿತಮಂಡಳಿ

ಉಳ್ಳಾಲ ; ಕುಮ್ಕಿ ಜಮೀನಿನಿಂದ ಮರಗಳ ಕಡಿದುಅಕ್ರಮ ಸಾಗಾಟ

ಉಳ್ಳಾಲ: ಕೋಟೆಕಾರು ಪಟ್ಟಣ ಪಂಚಾಯಿತಿಗೆ ಒಳಪಟ್ಟ ಕುಮ್ಕಿ ಜಮೀನಿನಲ್ಲಿ ಮರಗಳನ್ನು ಕಡಿದು ಅಕ್ರಮವಾಗಿ ಸಾಗಿಸುತ್ತಿರುವ ಕುರಿತು ದ.ಕ ಜಿಲ್ಲಾಧಿಕಾರಿಗಳಿಗೆ ಸ್ಥಳೀಯರು ದೂರು ನೀಡಲಾಗಿದೆ. ಬಗಂಬಿಲದ ಸರ್ವೇ ನಂ. 301/3 ರಲ್ಲಿರುವ ಕುಮ್ಕಿ ಜಮೀನಿಗೆ ಹಕ್ಕುದಾರರಾಗಿರುವ ವ್ಯಕ್ತಿ ಸೇರಿದಂತೆ ಮೂವರು ದೂರು ಸಲ್ಲಿಸಿದ್ದಾರೆ. ಸ್ಥಳೀಯಾಡಳಿತ ಕುಮ್ಕಿ ಜಮೀನನ್ನು ಉಳ್ಳಾಲ ಪುರಸಭೆಗೆ ನೀಡುವ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಆಕ್ಷೇಪಣೆಯನ್ನು ವಕೀಲರ ಮೂಲಕ