ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕುಂಜತ್‌ಬೈಲ್ ದಕ್ಷಿಣ 15ನೇ ವಾರ್ಡ್ನ ಪಳನೀರು ರಸ್ತೆಯ ಅಗಲೀಕರಣದ ಬಗ್ಗೆ ಜಾಗದ ಮಾಲೀಕರ ತಕರಾರು ಇದ್ದ ಕಾರಣ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಡಚಣೆ ಉಂಟಾಗಿತ್ತು. ಶಾಸಕರಾದ ಡಾ. ಭರತ್ ಶೆಟ್ಟಿಯವರು ಶುಕ್ರವಾರ ಪಳನೀರಿಗೆ ಭೇಟಿ ನೀಡಿ ಪರಸ್ಪರ ಸೌಹಾರ್ದ ಮಾತುಕಥೆಯ ಮೂಲಕ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ತಡೆಗೋಡೆ ಸಹಿತ
ಸುರತ್ಕಲ್: “ನಾನೇ ಒರಿಜಿನಲ್ ನಾಗವಲ್ಲಿ, ಮೊನ್ನೆ ಸುರತ್ಕಲ್ ಟೋಲ್ ಗೇಟ್ ಬಳಿ ನೀವು ನೋಡಿದ್ದು ಕಾಂತಾರ ಚಿತ್ರದ ಎರಡನೇ ಭಾಗವಲ್ಲ ಮೂರನೇ ಭಾಗ” ಎಂದು ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ಮಾಧ್ಯಮಗಳ ಮುಂದೆ ಹೇಳಿದರು. ಸುರತ್ಕಲ್ ಟೋಲ್ ವಿರೋಧಿ ಪ್ರತಿಭಟನೆ ಸಂದರ್ಭದ ತಮ್ಮ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಸಿನಿಮಾಗಳ ಟೈಟಲ್ ಕೊಟ್ಟು ಟ್ರೋಲ್ ಮಾಡಲಾಗುತ್ತಿದ್ದು ಈ ಕುರಿತು ಮಾತಾಡಿದ ಪ್ರತಿಭಾ ಅವರು, “ಟ್ರೋಲ್ ಒಳ್ಳೆಯದು,
ಬಂಟ್ವಾಳ: ಮಣಿಹಳ್ಳದಲ್ಲಿ ಕಾರು ಮತ್ತು ಬಸ್ಸಿನ ನಡುವೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ವಿಟ್ಲ ಮೆಸ್ಕಾಂನ ಎಇಇ ಪ್ರವೀಣ್ ಜೋಶಿ ಅವರು ಚಿಕಿತ್ಸೆ ಫಲಕಾರಿಯಾದೆ ಮೃತಪಟ್ಟಿದ್ದಾರೆ. ಎರಡು ಕಾರು ಹಾಗೂ ಬಸ್‍ಗಳ ನಡುವೆ ಅಪಘಾತ ನಡೆದಿದ್ದು, ಇನ್ನೊಂದು ಕಾರಿನಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಟ್ವಾಳ ಕಡೆಯಿಂದ ವಗ್ಗ ಕಡೆಗೆ ಹೋಗುತ್ತಿದ್ದ ಕಾರು ಹಾಗೂ ವಗ್ಗದ ಮದ್ವ ಮನೆಯಿಂದ
ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಟ್ರೋಲ್ ಗಳಿಗೆ ಮಾಜಿ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ತಿರುಗೇಟು ನೀಡಿದ್ದು, ಟ್ರೋಲ್ ಮಾಡಿ ನನ್ನ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ,ಅದಕ್ಕೆ ಹೆದರುವ ಹೆಣ್ಣು ಮಗಳು ಅಲ್ಲ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಮಂಗಳೂರಿನ ಮಹಾಜನಗಳೇ ನೀವು ನನ್ನ ವಿರುದ್ದ ಮಾಡುತ್ತಿರುವ ಟ್ರೋಲ್ ನನ್ನಲ್ಲಿ ಇನ್ನಷ್ಟು ನಿಮ್ಮ ಪರವಾಗಿ ನಿಲ್ಲಲು ಮತ್ತು ಸಾಮಾಜಿಕ ಹೋರಾಟಗಳಲ್ಲಿ
ಮಂಗಳೂರಿನ ಅದ್ಯಪಾಡಿ ಶ್ರೀಕ್ಷೇತ್ರ ಬಿಬಿಲಚ್ಚಿಲ್ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮ ಕಲಶೋತ್ಸವ ಅಷ್ಟಪವಿತ್ರ ನಾಗಬ್ರಹ್ಮಮಂಡಲೋತ್ಸವ ಪ್ರಯುಕ್ತ ನಡೆಯುತ್ತಿರುವ 108 ದಿನಗಳ ಸಂದ್ಯಾ ಭಜನೆಯು ನಡೆಯುತ್ತಿದ್ದೂ ನಿನ್ನೆ ಶ್ರೀ ಬಾಲ ವಿಠೋಭಾ ಭಜನಾ ಮಂಡಳಿ ಪಲ್ಲಿಪಾಡಿ ಕರಿಯಂಗಳ ಇವರಿಂದ ಭಜನಾ ಸಂಕೀರ್ತನೆ ನಡೆಯಿತು. ಈಗಾಗಲೇ ಹಲವಾರು ಭಜನಾ ತಂಡಗಳು ನೋಂದಣಿ ಮಾಡಿಸಿದ್ದು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಜನಾ ತಂಡ ಪಾಲ್ಗೊಳ್ಳುವಂತೆ ಶ್ರೀ
ಚಿಕ್ಕಮಗಳೂರು: ಅರಣ್ಯ ಇಲಾಖೆ ಅಧಿಕಾರಿಗಳ ವಶದಲ್ಲಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ಚಿಕ್ಕಮಗಳೂರು ತಾಲೂಕಿನ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಲಾಖೆಯ ಕಲ್ಲುಹೊಳ ಕೋಟೆಯ ಆನೆ ಶಿಬಿರದ ಶೌಚಾಲಯದಲ್ಲಿ ವ್ಯಕ್ತಿ ಶವ ಪತ್ತೆಯಾಗಿದೆ. ರಾತ್ರಿ ಗಂಧದ ಮರ ಕದಿಯಲು ಬಂದಿದ್ದ ಇಬ್ಬರನ್ನು ವಶಕ್ಕೆ ಪಡೆದಿದ್ದರು. ಅರಣ್ಯ ಇಲಾಖೆ ಕ್ವಾರ್ಟರ್ಸ್ನಲ್ಲಿ ವ್ಯಕ್ತಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ನಂತರ ಆನೆ ಶಿಬಿರಕ್ಕೆ ವ್ಯಕ್ತಿಯ
ಎ.ಜೆ ಸ್ವಾಸ್ಥ್ಯ ಹೆಲ್ತಕಾರ್ಡನ್ನು ನಡೆದ ವಾರ್ಷಿಕ ದಿನಾಚರಣೆಯಂದು, ಎ.ಜೆ ಸಮೂಹ ಸಂಸ್ಥೆಗಳ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದಡಾ. ಎ.ಜೆ. ಶೆಟ್ಟಿ ಅನಾವರಣಗೊಳಿಸಿದರು. ಇದೊಂದು ವಿಷಿಷ್ಟ ವಾದಅರೋಗ್ಯಕಾರ್ಡ್ಆಗಿದ್ದು, ಫಲಾನುಭವಿಗಳಿಗೆ ಆಸ್ಪತ್ರೆ ಸೇವೆಗಳನ್ನುರಿಯಾಯಿತಿಯೊಂದಿಗೆ ಪಡೆದುಕೊಳ್ಳಲ್ಲು ಅನುವು ಮಾಡಿಕೊಡುತ್ತದೆ.ಕಾರ್ಡ್ ಶುಲ್ಕವನ್ನು ಪಾವತಿಸಿ ಮತ್ತುಆಧಾರ್‌ನ್ನು ಪುರಾವೆಯಾಗಿ ನೀಡುವ ಮೂಲಕ ಈ ಕಾರ್ಡ್ಗೆ ನೋಂದಾಯಿಸಿಕೊಳ್ಳಬಹುದು.ಈ
ನಗರದ ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ಘಟಕ, ಕಾಶ್ಯ ವಾರ್ಡ್ ಇವರ ಸಹಯೋಗದೊಂದಿಗೆ ಕಾಶ್ಯ ಪೇಟೆಯಲ್ಲಿ ಪ್ಲಾಸ್ಟಿಕ್ ನಿರ್ಮೂಲನದ ಬಗ್ಗೆ ಪ್ಲಾಸ್ಟಿಕ್ ಹೆಕ್ಕಿಕೋ ಜನಜಾಗೃತಿ ಕಾರ್ಯಕ್ರಮ ನಡೆಯಿತು. ಎನ್‌ಎಸ್‌ಎಸ್ ವಾರ್ಷಿಕ ಶಿಬಿರದ ಉದ್ಘಾಟನಾ ಸಮಾರಂಭವು ಸಂತ ರೀಟಾ ವಿದ್ಯಾಸಂಸ್ಥೆ ಕಾಸ್ಸಿಯಾ ಶಾಲಾ ಸಭಾಭವನದಲ್ಲಿ ಜರಗಿತು.ಎನ್.ಎಸ್.ಎಸ್ ಶಿಬಿರ ಸಸಿಗೆ ನೀರೆರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಡಿದ ಮಂಗಳೂರು ಮಹಾನಗರ ಪಾಲಿಕೆ
ಭಾರತದ ಮೊದಲನೆಯ A-L enabled ಮೋಟರ್ ಸೈಕಲ್ ಆದ ರಿವೋಲ್ಟ್ ಕಂಪನಿಯು ಗ್ರಾಹಕರಿಗಾಗಿ ಹೊಸ ವಿನ್ಯಾಸದ ಆವಿಷ್ಕಾರದೊಂದಿಗೆ ಎಲೆಕ್ಟಿçಕಲ್ ಬೈಕ್‌ನ್ನು ವೆಸ್ಟ್ ಕೋಸ್ಟ್ ನಾ ಸಹಬಾಗಿತ್ವದಲ್ಲಿ ಮಾರುಕಟ್ಟೆಗೆ ಇದೆ ಅಕ್ಟೋಬರ್ ತಿಂಗಳ 27ರ ಗುರುವಾರದಂದು ಮಂಗಳೂರಿನ ಬೇಂದೂರಿವೆಲ್‌ನಲ್ಲಿ ಪರಿಚಯಾ ಮಾಡಲಿದ್ದಾರೆ . ಈಗಾಗಲೇ ಗ್ರಾಹಕರಿಗೆ ಬೇಡಿಕೆಗಾಗಿ ಮೊದಲೇ ಬುಕಿಂಗ್ ತೆರೆದಿದ್ದು ಉತ್ತಮ ಬೇಡಿಕೆ ಬರುತ್ತಿದೆ, ಹೆಚ್ಚಿನ ಮಾಹಿತಿಗಾಗಿ : 8904282323, 8904242323
ಶಿರೂರು: ಕೃಷಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಣಿ ವಿದ್ಯುತ್ ತಂತಿಗೆ ಸ್ಪರ್ಶಿಸಿ ಅವಘಡ ಸಂಭವಿಸಿದ ಘಟನೆ ಮಂಗಳವಾರ ಬೆಳಿಗ್ಗೆ ಶಿರೂರಿನಲ್ಲಿ ನಡೆದಿದೆ.ಶಿರೂರಿನ ಬಿಜೆಪಿ ಮುಖಂಡ ಉದ್ಯಮಿ,ಜನಾನುರಾಗಿ,ಶಿರೂರು ಸರಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ಸತೀಶ ಸುಬ್ರಾಯ ಪ್ರಭು (52)ಮ್ರತಪಟ್ಟ ವ್ಯಕ್ತಿಯಾಗಿದ್ದಾರೆ. ಸತೀಶ ಸುಬ್ರಾಯ ಪ್ರಭು ಅವರು, ಪ್ರಗತಿಪರ ಕೃಷಿಕರು, ಶೈಕ್ಷಣಿಕ, ಧಾರ್ಮಿಕ ಸೇರಿದಂತೆ ಎಲ್ಲಾ ಸಾಮಾಜಿಕ


























