ಕಡಬ: ರೈಲು ನಿಲ್ದಾಣದ ಬಳಿ ಆಕಸ್ಮಿಕವಾಗಿ ರೈಲು ಇಂಜಿನ್ ಢಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕಡಬದ ಸುಬ್ರಹ್ಮಣ್ಯ ರೋಡ್ (ನೆಟ್ಟಣ) ನೆಟ್ಟಣದಲ್ಲಿ ನಡೆದಿದೆ. ಐತ್ತೂರು ಗ್ರಾಮದ ಓಟೆಕಜೆ ನಾಗಣ್ಣ ಗಂಭೀರ ಗಾಯಗೊಂಡ ವ್ಯಕ್ತಿ. ರೈಲು ಇಂಜಿನ್ ಢಿಕ್ಕಿಯಾದ ರಭಸಕ್ಕೆ ಒಂದು ಕಾಲು ಮತ್ತು ಒಂದು ಕೈ ತುಂಡಾಗಿದ್ದು ತುರ್ತು
ಮಂಗಳೂರು ಕಂಬಳ ಕ್ಷೇತ್ರದ ಸಾಧಕ ಯಜಮಾನ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಮೂಡಬಿದ್ರೆಯ ಇರುವೈಲ್ ಪಾಣಿಲ ಬಾಡಪೂಜಾರಿ ವಯೋಸಹಜ ಕಾಯಿಲೆಯಿಂದ ಇಂದು ಮುಂಜಾನೆ ನಿಧನರಾದರು. ಕಂಬಳ ಕ್ಷೇತ್ರದಲ್ಲಿ ಇವರ ಯಜಮಾನ ನೇತೃತ್ವದಲ್ಲಿ ಕೋಣಗಳು ವಿಶೇಷ ಸಾಧನೆ ಮಾಡಿದ್ದು, ಇವರ ಯಜಾಮಾನಿಕೆಯಲ್ಲಿ ಕಂಬಳದ ಉಸೇನ್ ಬೋಲ್ಟ್, ಖ್ಯಾತಿಯ ಅಶ್ವಥುರ ಶ್ರೀನಿವಾಸ ಗೌಡ ಕಂಬಳದಲ್ಲಿ ವಿಶ್ವದಾಖಲೆ ಮಾಡಿದ್ದರು. ಇರುವೈಲ್ ಪಾಣಿಲ ಬಾಡವೂಜಾರಿ ಪ್ರಗತಿಪರ ಕೃಷಿಕರಾಗಿದ್ದು, 23 ವರ್ಷ ಕಂಬಳ
ಬೈಕ್ಕೊಂದಕ್ಕೆ ಲಾರಿಯೊಂದು ಹಿಂದಿನಿಂದ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಉದ್ಯಾವರದಲ್ಲಿ ನಡೆದಿದೆ. ಮೃತ ವ್ಯಕ್ತಿ ಕಟಪಾಡಿ ಸರ್ಕಾರಿ ಗುಡ್ಡೆ ಮೂಡಬೆಟ್ಟು ನಿವಾಸಿ ಹೂವಿನ ವ್ಯಾಪಾರಿ ಮಹಮ್ಮದ್ ರಫೀಕ್ ಬಾವ(35), ವಿವಾಹಿತರಾಗಿದ್ದ ಇವರು ಒಂದು ಮಗುವಿನ ತಂದೆ, ಕಟಪಾಡಿಯಲ್ಲಿ ಹೂವಿನ ವ್ಯಾಪಾರ ಮಾಡಿಕೊಂಡಿದ್ದ ಇವರು ದ್ವಿಚಕ್ರ ವಾಹನದಲ್ಲಿ ಉಡುಪಿ ಕಡೆಗೆ ಹೋಗುತ್ತಿದ್ದ ಉದ್ಯಾವರ ತಲುಪುತಿದ್ದಂತೆ, ಕೇರಳದಿಂದ ಮುಂಬೈಗೆ ಬಾಡಿ ಪಿಕ್ಸ್
ಉಳ್ಳಾಲ : ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತೊಕ್ಕೊಟ್ಟು ಓವರ್ ಬ್ರಿಡ್ಜ್ ಜಂಕ್ಷನ್ ನಿಂದ ಕುಂಪಲ ಬೈಪಾಸ್ ತನಕ ಎರಡೂ ಬದಿಯಲ್ಲಿ ಸರ್ವೀಸ್ ರಸ್ತೆ ನಿರ್ಮಿಸುವಂತೆ ಸಾರ್ವಜನಿಕ ಹೋರಾಟ ಸಮಿತಿಯು ಆಗ್ರಹಿಸಿದೆ. ತೊಕ್ಕೊಟ್ಟು ಹೆದ್ದಾರಿ ಸುರಕ್ಷತಾ ಹೋರಾಟ ಸಮಿತಿಯ ಸಭೆಯು ಸೋಮವಾರ ಸಂಜೆ ಅಂಬಿಕಾರೋಡ್ ಗಟ್ಟಿ ಸಮಾಜ ಭವನದಲ್ಲಿ ಸಮಿತಿಯ ಅಧ್ಯಕ್ಷ ಸುಕುಮಾರ್ ತೊಕ್ಕೊಟ್ಟು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಹೊರಾಟ ಸಮಿತಿಯ ಸಭೆಯಲ್ಲಿ ಸರ್ವ ಪಕ್ಷಗಳ ಮುಖಂಡರು
ಮಂಗಳೂರು . ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ 2022- 2024 ರ ಅವಧಿಗೆ ಅಧ್ಯಕ್ಷರಾಗಿ ಎರಡನೇ ಬಾರಿಗೆ ಅರ್ಹವಾಗಿಯೇ ಅವಿರೋಧವಾಗಿ ಮಯೂರ್ ಉಳ್ಳಾಲ್ಆಯ್ಕೆಯಾಗಿದ್ದಾರೆ. ಕುಲಾಲ ಸಮಾಜದ ಏಳಿಗೆಗೆ ಹತ್ತುಹಲವಾರು ಚಿಂತನೆ ,ಯೋಜನೆ, ಯೋಚನೆಗಳನ್ನು ಹೊಂದಿರುವ ಮಯೂರ್ ಉಳ್ಳಾಲ್ . ಸಂಘದ ಆಡಳಿತದಲ್ಲಿರುವ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನ ಮತ್ತು ಶ್ರೀ ದೇವಿ ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸುತ್ತಾ ಬಂದಿದ್ದಾರೆ
ದೇಶದ ಪ್ರಧಾನ ಕಾರ್ಮಿಕ ಸಂಘಟನೆ CITU ದ ಕ ಜಿಲ್ಲಾ ಸಮ್ಮೇಳನ ಇಂದು ಮಂಗಳೂರಿನ AKG ಭವನದಲ್ಲಿ ನಡೆಯಿತು. ಅಕ್ಟೋಬರ್ 18 ರಂದು ನಡೆಯುವ ಸುರತ್ಕಲ್ ಟೋಲ್ ಗೇಟ್ ಮುತ್ತಿಗೆ ಪ್ರತಿಭಟನೆಯನ್ನು ಬೆಂಬಲಿಸಲು ರಾಜ್ಯಾಧ್ಯಕ್ಷೆ ವರಲಕ್ಷ್ಮಿಯವರ ಉಪಸ್ಥಿತಿಯಲ್ಲಿ ಸಮ್ಮೇಳನದಲ್ಲಿ ನಿರ್ಣಯವನ್ನು ಕೈಗೊಳ್ಳಲಾಯಿತು.
ಮಂಗಳೂರು: ಅಸಂಘಟಿತ ಕಾರ್ಮಿಕರ ಸಾಮಾಜಿಕ ಸುರಕ್ಷತೆಗಾಗಿ ಇ ಶ್ರಮ್ ಕಾರ್ಡ್ ದೇಶದ 38ಕೋಟಿ ಕಾರ್ಮಿಕರಿಗೆ ನೀಡಲು ಗುರಿ ಹೊಂದಲಾಗಿ ದೆ.ಇದುವರೆಗೆ 28ಕೋಟಿ ಕಾರ್ಮಿಕರ ನೋಂದಣಿ ಮಾಡಲಾಗಿದೆ ಎಂದು ಕೇಂದ್ರ ಸರಕಾರದ ಪೆಟ್ರೋಲಿಯಂ, ನೈಸರ್ಗಿಕ ಅನಿಲ,ಕಾರ್ಮಿಕ ಮತ್ತು ಉದ್ಯೋಗ ಖಾತೆಯ ಸಹಾಯಕ ಸಚಿವ ರಾಮೇಶ್ವರ ತೆಲಿ ತಿಳಿಸಿದ್ದಾರೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆ ಯ ಮೂಲಕ ಜನರ ಜೀವನದಲ್ಲಿ ಸುಧಾರಣೆ ಯಾಗಿದೆ.ಮೊದಲ ಅನಿಲ ಉಚಿತ ಮರು ಪೂರಣ ಉಚಿತ ಒಲೆ ಸಹಿತ ಸಂಪರ್ಕ ನೀಡಲು
ಕೆಲವು ದಿನಗಳಿಂದ ನಾಪತ್ತೆಯಾಗಿ ಚೆಂಬುಗುಡ್ಡೆಯ ಯುವಕನ ಶವ ಮಂಜೇಶ್ವರ ಸಮುದ್ರದಲ್ಲಿ ಪತ್ತೆಯಾಗಿದ್ದು, ಇದು ಆಕಸ್ಮಿಕ ಸಾವಲ್ಲ ಇದೊಂದು ಕೊಲೆ ಇದೊಂದು ಕೊಲೆ ಎಂಬುವ ಶಂಕೆ ಕುಟುಂಬಸ್ಥರಿಂದ ವ್ಯಕ್ತಗೊಂಡಿದೆ. ಮೀನು ವ್ಯಾಪಾರಿಯಾಗಿದ್ದ ತೊಕ್ಕೊಟ್ಟು ಸಮೀಪದ ಚೆಂಬುಗಡ್ಡೆಯ ನಿವಾಸಿ ಝಾಕಿರ್ ತೊಕ್ಕೊಟ್ಟಿಗೆ ಹೋಗಿ ಬರುವುದಾಗಿ ಮನೆಯಿಂದ ಹೋಗಿದ್ದು, ಶನಿವಾರ ಸಂಜೆ ಮಂಜೇಶ್ವರ ಸಮುದ್ರದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೀನು ವ್ಯಾಪಾರಿಯಾಗಿದ್ದ ತೊಕ್ಕೊಟ್ಟು ಸಮೀಪದ
ಬಹಳಷ್ಟು ವರ್ಷಗಳಿಂದ ದನಗಳನ್ನು ಕದ್ದು ಅಕ್ರಮವಾಗಿ ಕಸಾಯಿಖಾನೆ ನಡೆಸುತ್ತಿದ್ದ ಬೆಳಪು ತಬ್ರೇಸ್ ಎಂಬಾತನ ಮನೆಗೆ ದಾಳಿ ಮಾಡಿದ ಶಿರ್ವ ಪೊಲೀಸರು ಜೀವಂತ ಕರು, ದನದ ಮಾಂಸ ಸಹಿತ ಮೂವರು ಆರೋಪಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಬೆಳಪುವಿನ ಸುಲ್ತಾನ್ ಅಹಮ್ಮದ್ ಎಂಬವರ ಮಗ ತಬ್ರೇಸ್( 30), ಕಾಪು ಮಲ್ಲಾರಿ ಶಾಲೆ ಬಳಿ ನಿವಾಸಿ ಅಮಾನುಲ್ಲಾ ಅಸೈನ್ ಎಂಬವರ ಮಗ ಮೊಹಮ್ಮದ್ ಅಜೀಮ್(39) ಹಾಗೂ ಬೆಳಪುವಿನ ಮಥುರಾ ಸ್ಟೋರ್ ಬಳಿ ನಿವಾಸಿ ಮಕ್ಬುಲ್ ಹುಸೇನ್ ಎಂಬವರ ಮಗ
9ನೇ ಅಕ್ಟೋಬರ್ 2022: ಅಕ್ಟೋಬರ್ ಎರಡನೇ ಶನಿವಾರದಂದು ವಿಶ್ವ ವಿಶ್ರಾಂತಿ ಮತ್ತು ಪ್ರಶಾಮಕ ಆರೈಕೆ ದಿನವನ್ನು ಆಚರಿಸಲಾಗುತ್ತದೆ. ವಾಯ್ಸ್ ಫಾರ್ ವಿಶ್ರಾಂತಿ ದಿನವನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ಅದೇ ದಿನ ಆಚರಿಸಲಾಗುತ್ತದೆ. ವಿಶ್ವ ಹಾಸ್ಪೈಸ್ ಮತ್ತು ಪ್ರಶಾಮಕ ಆರೈಕೆ ದಿನವನ್ನು ಆಚರಿಸುವುದರ ಮುಖ್ಯ ಉದ್ದೇಶ ಪ್ರಶಾಮಕ ಆರೈಕೆ ಅಗತ್ಯಗಳನ್ನು ಪರಿಹರಿಸುವುದು ಮತ್ತು ಅವಶ್ಯವಿರುವ ರೋಗಿಗಳಿಗೆ ಪ್ರಶಾಮಕ ಆರೈಕೆಯ ಅರಿವು ಹೆಚ್ಚಿಸುವ ದೃಷ್ಟಿಯನ್ನು




























