Home Posts tagged #mangalore (Page 355)

ದುಸ್ಥಿತಿಯಲ್ಲಿದೆ ಮಂಗಳೂರಿನ ನಂತೂರು ಬಸ್ ನಿಲ್ದಾಣ

ಸಾರ್ವಜನಿಕರಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಜವಾಬ್ದಾರಿ ಸರಕಾರದ್ದು. ಆದರೆ ಈ ವಿಚಾರದಲ್ಲಿ ಆಡಳಿತದಲ್ಲಿರುವ ಮಂದಿ ತಮ್ಮ ಲಾಭವನ್ನೇ ನೋಡಿದಲ್ಲಿ ಅಂತಹ ಮೂಲಭೂತ ಸೌಲಭ್ಯಗಳು ಜನರಿಗೆ ಇದ್ದೂ ಇಲ್ಲದಂತಾಗುತ್ತದೆ. ಇಂತಹುದೇ ಒಂದು ವ್ಯವಸ್ಥೆ ಮಂಗಳೂರಲ್ಲಿ ಕಾಣಬಹುದು. ಹೌದು. ಮಂಗಳೂರು ನಗರದ ನಂತೂರು ಸಮೀಪದಲ್ಲಿರುವ ಬಸ್ ನಿಲ್ದಾಣ ಈಗಲೋ, ಆಗಲೋ ಬೀಳುವ

ಮರವಂತೆ ಕಡಲ ತೀರದಲ್ಲಿ ಉಪಾಧ್ಯಕ್ಷ ಫಿಲಂ ಶೂಟಿಂಗ್

ಬೈಂದೂರು ತಾಲೂಕಿನ ವಿಶ್ವಪ್ರಸಿದ್ಧ ಮರವಂತೆ ಕಡಲ ತೀರದಲ್ಲಿ ಹಾಗೂ ಕುಂದಾಪುರ ಉಡುಪಿಯ ಪರಿಸರದಲ್ಲಿ ಇಂದು ಉಪಾಧ್ಯಕ್ಷ ಫಿಲಂ ಶೂಟಿಂಗ್ ನಡೆಯಿತು.ಸ್ಯಾಂಡಲ್‍ವುಡ್‍ನಲ್ಲಿ ಕಾಮಿಡಿ ಕಿಂಗ್ ಎಂದು ಹೆಸರು ಮಾಡಿದ ಖ್ಯಾತರಾದ ಚಲನಚಿತ್ರ ನಟ ಚಿಕ್ಕಣ್ಣ ಕೆಲವೊಂದು ಸಿನಿಮಾಗಳಲ್ಲಿ ಇವರೇ ಹೀರೋಗಿಂತ ಹಾಸ್ಯ ನಟನಾಗಿ ಹೆಚ್ಚಾಗಿ ಮಿಂಚಿದ್ದು, ಈಗ ಉಪಾಧ್ಯಕ್ಷ ಚಿತ್ರದಲ್ಲಿ ನಾಯಕನಾಗಿ ಮೋಡಿ ಮಾಡಲು ಸಜ್ಜಾಗಿದ್ದಾರೆ. ಸಾಕಷ್ಟು ಹಿಟ್ ಚಿತ್ರಗಳ ನಿರ್ಮಾಪಕರಾದ

ಮೆಲ್ಕಾರ್ : ಶ್ರೀ ಗುರು ಕ್ರೆಡಿಟ್ ಕೋ- ಅಪರೇಟಿವ್ ಸೊಸೈಟಿ ನಿ. ಉದ್ಘಾಟನಾ ಕಾರ್ಯಕ್ರಮ

ಬಂಟ್ವಾಳ: ಮೆಲ್ಕಾರ್‍ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಶ್ರೀ ಗುರು ಕ್ರೆಡಿಟ್ ಕೋ- ಅಪರೇಟಿವ್ ಸೊಸೈಟಿ ನಿ. ಇದರ ನೂತನ ಕಡೆಗೋಳಿ ಶಾಖೆಯು ಪುದು ಗ್ರಾಮದ ಕಡೆಗೋಳಿಯ ಶ್ರೀ ನಾರಾಯಣ ಕಾಂಪ್ಲೆಕ್ಸ್‍ನಲ್ಲಿ ಶುಭಾರಂಭಗೊಂಡಿತು.ಸಂಘದ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಸ್ವಾಗತಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ದೇಶಕ್ಕೆ ಆರ್ಥಿಕ ಶಕ್ತಿಯ ಬೆಳಕನ್ನು ದ.ಕ. ಜಿಲ್ಲೆ ನೀಡಿದೆ. ಗ್ರಾಮೀಣ ಭಾಗದ ಜನರಿಗೆ ರಾಷ್ಟ್ರೀೀಕೃತ ಬ್ಯಾಂಕುಗಳು ನೀಡಲು

ಆ.23 : ಕಾಂಗ್ರೆಸ್ ಪಕ್ಷದ ವತಿಯಿಂದ ಪಾದಯಾತ್ರೆ

ಬಂಟ್ವಾಳ: ಸ್ವಾತಂತ್ರ್ಯ ಅಮೃತಮಹೋತ್ಸವದ ಪ್ರಯುಕ್ತ ಕಾಂಗ್ರೆಸ್ ಪಕ್ಷದ ವತಿಯಿಂದ ಪಾದಯಾತ್ರೆ ಕಾರ್ಯಕ್ರಮ ಆ.23 ರಂದು ಮಂಗಳವಾರದಂದು ಹಮ್ಮಿಕೊಳ್ಳಲಾಗಿದ್ದು ನಾವೂರ ಗ್ರಾಮದ ಮಣ್ಣಿಹಳ್ಳ ಜಂಕ್ಷನಲ್ಲಿ ಬೆಳಿಗ್ಗೆ 9.30ಕ್ಕೆ ಪಾದಾಯಾತ್ರೆ ಪ್ರಾರಂಭಗೊಳ್ಳಲಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ತಿಳಿಸಿದರು. ಅವರು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ಪಾದಯಾತ್ರೆಯು ಜಕ್ರಿಬೆಟ್ಟು ಮೂಲಕ ಸಾಗಿ

ಸಿಎಂ ಬೊಮ್ಮಾಯಿ‌ ಮಾಧ್ಯಮ ಸಂಯೋಜಕ ಗುರಲಿಂಗಸ್ವಾಮಿ ನಿಧನ

ಸಿಎಂ ಬೊಮ್ಮಾಯಿ ಮಾಧ್ಯಮ ಸಂಯೋಜಕ ಗುರಲಿಂಗಸ್ವಾಮಿ ನಿಧನ.ಬೆಳಗ್ಗೆ ಜಿಮ್‍ಗೆ ಹೋಗಿ ವರ್ಕೌಟ್ ಮಾಡುವಾಗ ಎದೆನೋವು ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮದ್ಯೆ ನಿಧನ ಹೊಂದಿದ್ದಾರೆ. ಬೊಮ್ಮಾಯಿ ಗೃಹ ಸಚಿವರಾದಾಗಿಂದ ಮಾಧ್ಯಮ ವರ್ಗ ನೋಡಿಕೊಳ್ಳುತ್ತಿದ್ದ ಇವರು ನಾಗರಭಾವಿ ಯುನಿಟಿ ಲೈಫ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ

ಡಿ. ದೇವರಾಜ ಅರಸರ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ನಗರದ ಕುದ್ಮುಲ್ ರಂಗರಾವ್ ಪುರ ಭವನದಲ್ಲಿ ಆ.20ರ ಶನಿವಾರ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ 107ನೇ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನಿಲ್ ಕುಮಾರ್ ಅವರು ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಸಚಿವರು ಹಿಂದುಳಿದ ವರ್ಗಗಳ ವೃತ್ತಿ ಕುಲಕಸುಬುಗಳ ವಿವಿಧ

ಮದರ್ ತೆರೇಸಾ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ದಾಖಲೆ ಮೆರೆದ ಜಿಲ್ಲಾ ಮಟ್ಟದ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆ

ಮಾನವೀಯತೆಯ ಪ್ರತಿರೂಪ ಸಂತ ಮದರ್ ತೆರೇಸಾರವರ 25ನೇ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ಇಂದು(20-08-2022) ನಗರದ ಮಿಲಾಗ್ರಿಸ್ ಪ.ಪೂ.ಕಾಲೇಜ್ ನಲ್ಲಿ ದ.ಕ.ಜಿಲ್ಲಾ ಮಟ್ಟದ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ನಿರೀಕ್ಷೆಗೂ ಮೀರಿ ಜಿಲ್ಲೆಯಾದ್ಯಂತ 78 ಶಿಕ್ಷಣ ಸಂಸ್ಥೆಗಳಿಂದ 480 ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ಸುಮಾರು 520ರಷ್ಟು ಸ್ಪರ್ಧಾಳುಗಳು ಭಾಗವಹಿಸುವ ಮೂಲಕ ದಾಖಲೆ ಮೆರೆದಿರುವುದು ವಿಶೇಷವಾಗಿತ್ತು. ಕಾರ್ಯಕ್ರಮವನ್ನು

ಆ.22;ವೆನ್ಲಾಕ್ ಆಸ್ಪತ್ರೆಯು ಸಮುದಾಯ ವಾಚನಾಲಯ ಉದ್ಘಾಟನಾ ಕಾರ್ಯಕ್ರಮ

ಮಂಗಳೂರು;ವೆನ್ಲಾಕ್ ಆಸ್ಪತ್ರೆ ಮಂಗಳೂರು.ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದ.ಕ ಜಿಲ್ಲೆ. ಯುವ ರೆಡ್ ಕ್ರಾಸ್ ಘಟಕ ಮಂಗಳೂರು ವಿಶ್ವ ವಿದ್ಯಾನಿಲಯ,ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ(ರಿ)ಇದರ ಸಂಯುಕ್ತ ಆಶ್ರಯದಲ್ಲಿ ದಿನಾಂಕ22-8-2022.ಸೋಮವಾರ ಬೆಳಿಗ್ಗೆ 10ಗಂಟೆಗೆ. ವೆನ್ಲಾಕ್ ಆಸ್ಪತ್ರೆ ಮಂಗಳೂರು ಆವರಣದಲ್ಲಿಸಮುದಾಯ ವಾಚನಾಲಯದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ದಕ್ಷಿಣ ಕನ್ನಡ ಸೇರಿದಂತೆ ನೆರೆಹೊರೆಯ ಜಿಲ್ಲೆ ಗಳಿಂದ ವೆನ್ಲಾಕ್ ಆಸ್ಪತ್ರೆಗೆ

ಬಹರೈನ್‍ ಸಂಗೀತ ಗಾನ ಸಂಭ್ರಮ-2022

ಅಮ್ಮ ಕಲಾವಿದರು ಬಹರೈನ್ ಅರ್ಪಿಸುವ ಸಂಗೀತ ಗಾನ ಸಂಭ್ರಮ 22 ಕಾರ್ಯಕ್ರಮದ ಮುಹೂರ್ತ ಪೂಜೆ ಹಾಗೂ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭವು ಆಗಸ್ಟ್ 19ರಂದು ಸ್ಥಳೀಯ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ಗಣ್ಯ ಅತಿಥಿಗಳ ಸಮಕ್ಷಮದಲ್ಲಿ ನೆರವೇರಿತು. ಅಮ್ಮ ಕಲಾವಿದರು ಸಂಘಟನೆಯ ಮುಖ್ಯಸ್ಥರಾದ ಮೋಹನದಾಸ್ ರೈ ಎರುಂಬು ಸಾರಥ್ಯದಲ್ಲಿ ನಡೆಯಲಿರುವ ಈ ಸಂಗೀತ ಕಾರ್ಯಕ್ರಮದಲ್ಲಿ ತಾಯ್ನಾಡಿಂದ ಖ್ಯಾತ ಗಾಯಕ ತುಳುನಾಡ ಗಾನಗಂಧರ್ವ ಜಗದೀಶ ಆಚಾರ್ಯ ಪುತ್ತೂರು ಮತ್ತು ಅವರ ಬಳಗದ ಯುವ

ಕಾರ್ಕಳ : ಚಾಣಕ್ಯ ಕದೀಮರಿಬ್ಬರ ಸೆರೆ

ಒಡವೆ ಕಳ್ಳತನ ಸಹಿತ ವಾಹನಗಳ ಕಳ್ಳತನ ನಡೆಸಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ಕದೀಮ ಕಳ್ಳರಿಬ್ಬರನ್ನು ಕಾರ್ಕಳ ಪೊಲೀಸ್ ಉಪಾಧೀಕ್ಷರ ಹಾಗೂ ವೃತ ನಿರೀಕ್ಷಕರ ತಂಡ ಬಂಧಿಸಿದೆ. ಬಂಧಿತರ ಮೇಲೆ ರಾಜ್ಯಾದ್ಯಂತ ಬಹಳಷ್ಟು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಮೂಲತಃ ಬಜಪೆ ನಿವಾಸಿ ಇದೀಗ ಮೂಳೂರುಎಸ್.ಎಸ್. ರಸ್ತೆಯ ಶ್ರೀ ಸಾಯಿ ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದ ವಾಜೀದ್ ಜೆ.(25) ಹಾಗೂ ಉಡುಪಿ ಕಡಿಯಾಳಿ ಆಚಾರ್ಯ ರಸ್ತೆಯ ಬಾಡಿಗೆ ಮನೆ ನಿವಾಸಿ ಶಹನಾಜ್ (32)