ಪುತ್ತೂರು: ಪ್ರವೀಣ್ ನೆಟ್ಟಾರು ಅವರ ಮೃತ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯಿಂದ ಅವರ ಬೆಳ್ಳಾರೆ ಮನೆಗೆ ಕೊಂಡು ಹೋಗುವ ಸಂದರ್ಭ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪುತ್ತೂರು ಉಪವಿಭಾಗದ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಆದೇಶ ಹೊರಡಿಸಿದ್ದಾರೆ. ಪುತ್ತೂರು ನಗರ
ಪುತ್ತೂರು: ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಅವರ ಮೃತ ದೇಹದ ಅಂತಿಮ ಯಾತ್ರೆಗೆ ಸಂಬಂಧಿಸಿ ಪುತ್ತೂರಿನಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದಾರೆ. ಪ್ರವೀಣ್ ನೆಟ್ಟಾರು ಅವರ ಮೃತ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಗಾರದಿಂದಲೇ ಮೆರವಣಿಗೆ ಮೂಲಕ ದರ್ಬೆ ವೃತ್ತಕ್ಕೆ ಕೊಂಡು ಹೋಗಿ ಅಲ್ಲಿಂದ ಬೆಳ್ಳಾರೆ ಪ್ರವೀಣ್ ಅವರ ಮನೆಗೆ ಕೊಂಡೊಯ್ಯಲಾಗುವುದು. ಮೆರವಣಿಗೆ ಸಂದರ್ಭ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಪುತ್ತೂರಿನ ಬೊಳುವಾರಿನ ವಿಶ್ವ ಕರ್ಮ ಸಭಾ ಭವನದ ಮುಂಭಾಗ ಸರ್ಕಾರಿ ಬಸ್ ಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡಸಿದ್ದಾರೆ. ಇದೀಗ ಪುತ್ತೂರಿನ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಎಲ್ಲಾ ಮಾರ್ಗಗಳಲ್ಲಿ ಬಸ್ ನ್ನು ಸಂಚಾರ ತಡೆ ಹಿಡಿಯಲಾಗಿದೆ. ದೂರದೂರುಗಳಿಗೆ ಸಂಚರಿಸುವ ಪ್ರಯಾಣಿಕರು ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಬಸ್ ಸಂಚಾರದ ಬಗ್ಗೆ ಯಾವುದೇ ರೀತಿಯ ಸ್ಪಷ್ಟ ಮಾಹಿತಿ ಇರಲಿಲ್ಲ. ಈ ನಡುವೆ ಜನವಶ್ಯಕವಾದ ಬಸ್’ಗಳು ಸಂಚಾರ
ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಮುಖಂಡನ ಕಗ್ಗೊಲೆಯಾಗಿದೆ. ಬೆಳ್ಳಾರೆಯ ನೆಟ್ಟಾರು ನಿವಾಸಿ 32 ವರ್ಷದ ಪ್ರವೀಣ್ ನೆಟ್ಟಾರು ಎಂಬಾತನನ್ನು ದುಷ್ಕರ್ಮಿಗಳು ತಲ್ವಾರ್ ನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ಇಟ್ಟುಕೊಂಡಿದ್ದ ಪ್ರವೀಣ್ ತನ್ನ ಅಂಗಡಿಯನ್ನು ಬಂದ್ ಮಾಡುವ ವೇಳೆಗೆ ಒಂದೇ ಬೈಕ್ ನಲ್ಲಿ ಆಗಮಿಸಿದ ಮೂವರು ತಲ್ವಾರ್ ನಿಂದ ಹಲ್ಲೆ ಮಾಡಿ ಹೋಗಿದ್ದಾರೆ. ತಕ್ಷಣ ಸ್ಥಳೀಯರು ಪ್ರವೀಣ್
ಸುಳ್ಯ : ಮಂಗಳೂರು ಸಮಾಚಾರ ಪತ್ರಿಕೆಯ ಪ್ರಾರಂಭವೇ ಪತ್ರಿಕಾ ದಿನಾಚರಣೆಗೆ ನಾಂದಿಯಾಗಿದೆ. ಅದೊಂದು ಪೂರ್ಣ ಪ್ರಮಾಣದ ಪತ್ರಿಕೆಯಾಗಿ ಬೆಳೆದಿತ್ತು. ಆದರೆ ಇಂದಿನ ಕಾಲಘಟ್ಟದಲ್ಲಿ ಮುದ್ರಣ ಮಾಧ್ಯಮ ಕಳೆಗುಂದುತ್ತಿದೆ. ಆದರೂ ತಾಲೂಕು ಮಟ್ಟದ ಪತ್ರಿಕೆಗಳಿಗೆ ಇಂದಿನ ಕಾಲದಲ್ಲಿ ಓದುಗರಿದ್ದಾರೆ. ಜನರ ವಿಶ್ವಾಸದಿಂದಾಗಿ ಪತ್ರಿಕೋದ್ಯಮವು ಇಂದು ಉದ್ಯಮವಾಗಿ ಬೆಳೆದಿದೆ ಎಂದು ಕೇಂದ್ರ ಸಂವಹನ ಶಾಖೆ, ಸಮಾಚಾರ ಮತ್ತು ಪ್ರಸಾರ ಸಚಿವಾಲಯದ ಕ್ಷೇತ್ರ ಪ್ರಚಾರಾಧಿಕಾರಿ ಜೀತು
ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಎಂ.ಪಿ. ಸಿಲ್ಕ್ಸ್ ಮಳಿಗೆಯಲ್ಲಿ ಆಷಾಢ ಪ್ರಯುಕ್ತ ಬಿಗ್ ಸೇಲ್‍ನ್ನು ಹಮ್ಮಿಕೊಂಡಿದ್ದು, ಶೇ.50ರಷ್ಟು ರಿಯಾಯಿತಿಯನ್ನು ಘೋಷಿಸಿದ್ದು, ಉತ್ತಮ ಗುಣಮಟ್ಟದ ವಸ್ತ್ರಗಳು ಕೈಗೆಟಕುವ ದರದಲ್ಲಿ ಸಿಗಲಿದೆ. ವಿವಿಧ ವಿನ್ಯಾಸದ ಮತ್ತು ಉತ್ತಮ ಗುಣಮಟ್ಟವನ್ನು ಹೊಂದಿರುವ ವಸ್ತ್ರ ಮಳಿಗೆ ಎಂ.ಪಿ. ಸಿಲ್ಕ್ಸ್. ಈ ಬಾರಿಯ ಆಷಾಢ ಪ್ರಯುಕ್ತ ಗ್ರಾಹಕರಿಗಾಗಿ ವಿಶೇಷ ರಿಯಾಯಿತಿಯನ್ನು ಘೋಷಿಸಿದ್ದಾರೆ. ಸೂರತ್ ಸೀರೆ, ಫ್ಯಾನ್ಸಿ ಮತ್ತು ಕಾಟನ್
ಹೊಟೇಲ್‍ಗೆ ಹೋಗಿ ಗ್ರಾಹಕರನ್ನು ಹೊರಗೆ ಕಳುಹಿಸಿ ಗೂಂಡಾಗಿರಿ ಪ್ರದರ್ಶಿಸಲು ಆ ಸಂಘಟನೆಗೆ ಅಧಿಕಾರ ನೀಡಿದವರು ಯಾರು ಬಿಜೆಪಿ ಸರಕಾರವೇ ಇವರನ್ನು ಕಳುಹಿಸಿದ್ದೇ ಎಂದು ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಪ್ರಶ್ನಿಸಿದ್ದಾರೆ. ಮಂಗಳೂರಿನ ಖಾಸಗಿ ಹೊಟೇಲ್‍ನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, 2009ರಲ್ಲಿ ಪಬ್ ದಾಳಿ ಆದಾಗಲೂ ರಾಜ್ಯದಲ್ಲಿ ಬಿಜೆಪಿ ಸರಕಾರವಿತ್ತು. ಈಗ ಮತ್ತೆ ಬಿಜೆಪಿ ಸರಕಾರ ಇರುವಾಗ ಚುನಾವಣೆ
ಹಾಸನದ ಆಲೂರಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮಕ್ಕಳು ಕಲುಷಿತ ಆಹಾರ ಸೇವನೆಯಿಂದ ಅಸ್ವಸ್ಥಗೊಂಡಿದ್ದ ಶಾಲೆಗೆ ಶಾಸಕ ಎಚ್ ಕೆ ಕುಮಾರಸ್ವಾಮಿ ನೀಡಿ, ಪರಿಶೀಲನೆ ನಡೆಸಿದ್ರು. ಅಡುಗೆ ಕೊಠಡಿ, ಸಾಮಗ್ರಿಗಳ ಕೊಠಡಿ, ಆಹಾರ ಪದಾರ್ಥಗಳನ್ನು ಪರೀಶೀಲನೆ ಮಾಡಿ, ಶಾಲಾ ಕೊಠಡಿಗಳು, ಸ್ನಾನಗೃಹಗಳು, ಶೌಚಲಯಕ್ಕೆ ಭೇಟಿ ನೀಡಿದ್ರು. ನಂತರ ಮಾತನಾಡಿದ ಅವರು ಸದ್ಯ ಈ ವಸತಿ ಶಾಲೆ ಕಟ್ಟಡದಲ್ಲಿ 204 ಮಕ್ಕಳು ಇದ್ದು 25 ಮಕ್ಕಳಿಗೆ ವಾಂತಿ ಬೇಧಿ ಸುಸ್ತು ಕಾಣಿಸಿಕೊಂಡಿದ್ದು.
ಮಂಜೇಶ್ವರ ಪಾವೂರು ಗೇರುಕಟ್ಟೆ ನಿವಾಸಿ ಪೈಂಟರ್ ಬಾವ ಎಂದೇ ಪರಿಚಿತರಾಗಿರುವ ಮೊಹಮ್ಮದ್ ಎಂಬವರಿಗೆ 1 ಕೋ.ರೂ. ಕೇರಳ ರಾಜ್ಯಲಾಟರಿ ಒಲಿದಿದೆ. ಡ್ರಾ ಆಗುವ ತಾಸುಗಳ ಮೊದಲು ಟಿಕೇಟ್ ತೆಗೆದ ಅದೃಷ್ಟವಂತನಾಗಿದ್ದಾನೆ. ಈತನಿಗೆ 5 ಮಕ್ಕಳ ಪೈಕಿ 2 ಮಕ್ಕಳನ್ನು ಮದುವೆ ಮಾಡಿಸಿ ಕೊಟ್ಟ ಬಳಿಕ 50ಲಕ್ಷ ರೂ. ಗಿಂತಲೂ ಮಿಕ್ಕ ಸಾಲದಲ್ಲಿ ಮುಳುಗಿ ಇದ್ದ ಮನೆಯನ್ನು ಕೂಡಾ ಮಾರಿ ಇನ್ನು ಮುಂದಕ್ಕೆ ಏನೆಂದು ತಿಳಿಯದೆ ಕೂತಿರುವಾಗ ದೇವರು ನನಗೆ ನೀಡಿದ
ಪಡುಬಿದ್ರಿ ಗ್ರಾಮದ ಪಾದೆಬೆಟ್ಟುವಿನಲ್ಲಿ ಬಹಳಷ್ಟು ವರ್ಷಗಳಿಂದ ಅನಧಿಕೃತವಾಗಿ ದಲಿತ ಕಾಲೊನಿಯಲ್ಲಿ ಸುತ್ತಲೂ ವಾಸದ ಮನೆಗಳಿರುವ ಪ್ರದೇಶದಲ್ಲಿ ಗ್ಯಾಸ್ ಗೋಡಾನ್ ಕಾರ್ಯಚರಿಸುತ್ತಿದ್ದರೂ ಈ ಬಗ್ಗೆ ಗ್ರಾ.ಪಂ. ಸಹಿತ ಸಂಬಂಧಿಸಿದ ಇಲಾಖಾಧಿಕಾರಿಗಳು ತೆರವುಗೊಳಿಸಲು ನಿರ್ಲಕ್ಷ್ಯ ಧೋರಣೆ ತಾಳಿದು, ಅನಿವಾರ್ಯ ಸ್ಥಿತಿ ಒದಗಿ ಬಂದರೆ ನಾವೆಲ್ಲರೂ ಒಂದಾಗಿ ಅಪಾಯಕಾರಿ ಗೋಡನ್ ದ್ವಂಸಗೊಳಿಸುವುದಾಗಿ ದಲಿತ ಮುಖಂಡ ಸುಂದರ್ ಮಾಸ್ತರ್ ಎಚ್ಚರಿಸಿದ್ದಾರೆ. ಗೋಡಾನ್ ಪ್ರದೇಶದಿಂದ


















