ಸುಖ ದುಃಖಗಳನ್ನು ಸಮತೋಲನದಲ್ಲಿಡಲು ಆಧ್ಯಾತ್ಮಿಕತೆ ಬೇಕು .ಸುಖ ವೆಂದರೆ ಮನಸ್ಸಿನ ಸ್ಥಿತಿ ಯಾಗಿದೆ ಮನಸ್ಸನ್ನು ಏಕಾಗ್ರತೆಯಲ್ಲಿಟ್ಟು ಆಧ್ಯಾತ್ಮಿಕದ ವಿಚಾರಧಾರೆಗಳನ್ನು ನಮ್ಮಲ್ಲಿ ಇರಿಸಿಕೊಂಡಾಗ ಧರ್ಮದ ಕಡೆಗೆ ನಮ್ಮ ನಡೆಯಲು ಸಾಧ್ಯವಾಗುತ್ತದೆ ತಾಯಂದಿರು ಮಕ್ಕಳಿಗೆ ಜ್ಞಾನದ ಬೆಳಕಾಗಬೇಕು ಯುವ ಸಮುದಾಯ ಜಾಗೃತರದಾಗ ದೇಶ ಸದೃಡ ವಾಗುತ್ತದೆ ಎಂದುಒಡಿಯೂರು ಶ್ರೀ ಗುರು
ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ರಚಿಸುವ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಂದು ದ.ಕ. ಜಿಲ್ಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಟೈಲರ್‍ಗಳು ಬೀದಿಗಿಳಿದು ಪ್ರತಿಭಟಿಸಿದರು. ಕರ್ನಾಟಕ ರಾಜ್ಯ ಟೈಲರ್ ಸಂಘಟನೆಯ ಕರೆಯ ಮೇರೆಗೆ ಜಿಲ್ಲಾ ಮಟ್ಟದಲ್ಲಿ ಮಂಗಳೂರಿನ ಬಲ್ಮಠ ಬಳಿಯ ಶಾಂತಿನಿಲಯ ಸಮೀಪದ ಮೈದಾನದಿಂದ ನಗರದ ಜಿಲ್ಲಾಧಿಕಾರಿ ಕಚೇರಿವರೆಗೆ ಸುಮಾರು ಎರಡು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಟೈಲರ್‍ಗಳು ಭಾಗವಹಿಸಿ
ಪಬ್ ಮೇಲೆ ಬಜರಂಗದಳ ದಾಳಿ ಘಟನೆ ಸಂಬಂಧಿಸಿ ಹೇಳಿಕೆ ನೀಡಿರುವ ಪೆÇಲೀಸ್ ಕಮಿಷನರ್ ಶಶಿಕುಮಾರ್, ನಗರದಲ್ಲಿ ಯಾವುದೇ ಪಬ್ ಅಟ್ಯಾಕ್ ಆಗಿಲ್ಲ. ಅಪ್ರಾಪ್ತ ಯುವಕ- ಯುವತಿಯರು ಇದ್ದರೆಂದು ಆಕ್ಷೇಪ ಎತ್ತಿದ್ದರು ಅಷ್ಟೇ ಎಂದು ಸಮಜಾಯಿಷಿ ನೀಡಿದ್ದಾರೆ.ಇಂದು ಬೆಳಗ್ಗೆ ಬಲ್ಮಠದ ಪಬ್ ಆವರಣಕ್ಕೆ ಬಂದು ಪರಿಶೀಲನೆ ನಡೆಸಿದ ಕಮಿಷನರ್‍ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ನಿನ್ನೆ ರಾತ್ರಿ ಹತ್ತು- ಹನ್ನೆರೆಡು ಮಂದಿ ಪಬ್ ಮುಂಭಾಗದಲ್ಲಿ ಜಮಾಯಿಸಿದ್ದರು. ಪಬ್
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಬೆಲೆ ಏರಿಕೆ ಹಾಗೂ ಜಿಎಸ್‍ಟಿ ನೀತಿಯ ವಿರುದ್ಧ ಕಾಪುಪೇಟೆಯಲ್ಲಿ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ ಪ್ರತಿಭಟನಾ ಸಭೆ ನೆರವೇರಿತು. ಎಸ್ಡಿಪಿಐ ಕಾಪು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಹನೀಫ್ ಮೂಳೂರು ಮಾತನಾಡಿ, ಕೇಂದ್ರದ ತೆರಿಗೆ ನೀತಿಯಿಂದ ಬಡವರು ತಿನ್ನುವ ಅನ್ನದ ಬಟ್ಟಲಿಗೆ ಟ್ಯಾಕ್ಸ್ ಹಾಕಿದ್ದಾರೆ. ಹಾಲು, ಮಜ್ಜಿಗೆ, ಮೊಸರಿಗೆ ಜಿಎಸ್‍ಟಿ ಹಾಕಿ ಜನರನ್ನು ಬದುಕದಂತೆ
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಮರ್ಕಂಜ ಮತ್ತು ಅರಂತೋಡು ಗ್ರಾಮಕ್ಕೆ ಸಂಬಂಧಪಟ್ಟ ಅರಮನೆ ಗಯ ಎಂಬಲ್ಲಿ ತೂಗು ಸೇತುವೆ ಮುರಿದು ಹೋಗಿದ್ದು ಸಂಚಾರಕ್ಕೆ ತೊಡಕುಂಟಾಗಿ ಅಲ್ಲಿನ ಜನತೆ ಸಂಕಷ್ಟಪಡುತ್ತಿದ್ದಾರೆ. 30 ವರ್ಷಗಳಿಂದ ಶಾಸಕರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಒಂದು ಸೇತುವೆ ನಿರ್ಮಾಣ ಮಾಡಿಕೊಡಿ ಎಂದು ಎಷ್ಟು ಕೇಳಿದರು ಸ್ಪಂದನೆ ಇನ್ನೂ ಸಿಕ್ಕಿಲ್ಲ. ಮರ್ಕಂಜ ಮತ್ತು ಅರಂತೋಡು ಗ್ರಾಮಗಳ ನಡುವೆ ಹಂಚಿಹೋಗಿರುವ ಅರಮನೆಗಯದ ನಡುವೆ ಹರಿಯುವ ಹೊಳೆ ಈ ಊರಿನ
ನದಿಗೆ ಅಡ್ಡಲಾಗಿ ಕಟ್ಟುವ ಸೇತುವೆಯೊಂದು ಹೇಗೆ ಊರೊಂದರ ಚಿತ್ರಣವನ್ನೇ ಬದಲಿಸುತ್ತದೆನ್ನುವುದನ್ನು ನಮಗೆ ಅನೇಕ ಬಾರಿ ಊಹಿಸಲೂ ಸಾಧ್ಯವಾಗುವುದಿಲ್ಲ.ಆ ಬದಲಾವಣೆಯಲ್ಲಿ ನಾವೂ ಬದಲಾಗಿ ಬಿಡುತ್ತೇವೆ. ಇಂತಹ ಬದಲಾವಣೆಗಳಾಗುತ್ತವೆ ಎಂದು ತಿಳಿದು ನಾವು ಥ್ರಿಲ್ ಆಗುತ್ತೇವೆ. ಆದರೆ ಬದಲಾವಣೆಗಳು ಘಟಿಸಿ ಊರಿನ ಚಿತ್ರಣ ಬದಲಾದ ಬಳಿಕ ನಮ್ಮೂರು ಹೀಗಿತ್ತು ಎನ್ನುವುದನ್ನು ನಾವು ಬಲು ಬೇಗ ಮರೆತುಬಿಡುತ್ತೇವೆ.ಹಿಂದಿನ ಚಿತ್ರಣಗಳು ಕಾಲಗರ್ಭದಲ್ಲಿ ಅಡಗುತ್ತಿದ್ದಂತೆಯೇ ನಮ್ಮ
ಬೆಳ್ತಂಗಡಿ : ಮನೆಯಲ್ಲಿ ಒಬ್ಬಂಟಿಯಾಗಿದ್ದ ಅಜ್ಜಿಯನ್ನು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿ ಚಿನ್ನಾಭರಣ ಹಾಗೂ ಹಣ ದರೋಡೆ ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಕೆರೆಕೋಡಿ ಮನೆಯಲ್ಲಿ ನಡೆದಿದೆ. ಕಡಿರುದ್ಯಾವರ ಗ್ರಾಮದ ಕಾನರ್ಪ ಕುಮೇರು ನಿವಾಸಿ ಅಶೋಕ್ (28) ವೃದ್ಧೆಯನ್ನು ಕೊಲೆಗೈದ ಆರೋಪಿ. ಅಶೋಕ್ ಕೊಲೆಯಾದ ಅಕ್ಕು ಅವರ ಪುತ್ರ ಡೀಕಯ್ಯ ಅವರ ಪತ್ನಿಯ ಸಹೋದರಿಯ ಪುತ್ರನಾಗಿದ್ದ. ಈತ ಐಸ್ ಕ್ರೀಂ ವಾಹನದಲ್ಲಿ ಕೆಲಸ ಮಾಡುತ್ತಿದ್ದ.
ಬಾಲಕಿಯ ಮೇಲೆ ವ್ಯಕ್ತಿಯೊಬ್ಬರು ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಯುವಕರ ತಂಡವೊಂದು ಹಲ್ಲೆ ನಡೆಸಿದ್ದು, ಈ ವೇಳೆ ಜಗಳ ತಡೆಯಲು ಬಂದ ವ್ಯಕ್ತಿಗೂ ಹಲ್ಲೆ ಮಾಡಿದ್ದು, ಗಂಭೀರ ಗಾಯಗೊಂಡ ಅವರು ಆಸ್ಪತ್ರೆಗೆ ದಾಖಲಿಸುವ ವೇಳೆ ಮೃತಪಟ್ಟ ಘಟನೆ ಬೆಳ್ತಂಗಡಿಯ ಪರಾರಿ ಶಾಂತಿನಗರದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಪರಾರಿ ಶಾಂತಿನಗರದ ನಿವಾಸಿ ಜಾರಪ್ಪ ನಾಯ್ಕ್ (55) ಅವರು ಯುವಕರ ತಂಡದಿಂದ ಹಲ್ಲೆಗೊಳಗಾಗಿ ಮೃತಪಟ್ಟವರು. ಜಾರಪ್ಪ ನಾಯ್ಕ್ ಅವರ
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೊಂಡ ಬಿದ್ದ ಪರಿಣಾಮ ಪದೇ ಪದೇ ಅಪಘಾತಗಳು ಸಂಭವಿಸುತ್ತಲೇ ಇದೆ. ಇಂದು ಹೊಂಡ ತಪ್ಪಿಸಲು ಹೋಗಿ ಕಾರೊಂದು ಡಿವೈಡರ್ ಏರಿ ನಿಂತ ಘಟನೆ ಕಾಪುವಿನಲ್ಲಿ ನಡೆದಿದೆ. ಕಾರೊಂದು ರಸ್ತೆಯ ಹೊಂಡಕ್ಕೆ ಬಿದ್ದು, ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿ ಕಾರು ಚಾಲಕಿ ಅಪಾಯದಿಂದ ಪಾರಾದ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಮೇಲಿದ್ದ ಹೊಂಡದಲ್ಲಿ ನೀರು ತುಂಬಿ ನಿಯಂತ್ರಣ ತಪ್ಪಿ ಕಾರು ಅಪಘಾತವಾಗಿದೆ.
ಬೈಂದೂರು: ಬೈಂದೂರು ಕ್ಷೇತ್ರದ ವ್ಯಾಪ್ತಿಯಲ್ಲಿ ವಿಪರೀತ ರಕ್ಕಸ ಅಲೆಗಳ ಕಡಲ್ಕೊರೆತ ಸೌಪರ್ಣಿಕಾ ನದಿಯ ನೆರೆಹಾವಳಿ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಪದೇ ಪದೇ ಅಪಘಾತವಾಗಿ ಸಾಕಷ್ಟು ಮುಗ್ಧ ಜೀವಗಳು ಮತ್ತು ಜಾನುವಾರುಗಳು ದಿನದಿಂದ ದಿನಕ್ಕೆ ಸಾವನ್ನಪ್ಪುತ್ತಿವೆ. ಅಪಘಾತಗಳು ಹೆಚ್ಚುತ್ತಿರುವುದರಿಂದ ಜನರು ಭೀತರಾಗಿದ್ದು ಸಂಕಷ್ಟದ ನಿವಾರಣೆಗೆ ಜುಲೈ 28ರಂದು ನಡೆಯುವ ಬೃಹತ್ ಜಾತ್ರಾ ಮಹೋತ್ಸವದಲ್ಲಿ ಮಾರಸ್ವಾಮಿ ವರಾಹ ದೇವರಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವುದರ


















