ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಮಸೂತಿ-ಕೂಡಗಿ ರಸ್ತೆಯ ಮೇಲ್ವೇತುವೆಯ ಕೆಳಗಡೆ ಹಾಯ್ದುಹೋಗುವ ಗದಗ-ವಿಜಯಪೂರ ರೈಲ್ವೆ ಮಾರ್ಗದಲ್ಲಿ ರೈಲು ಡಿಕ್ಕಿ ಹೊಡೆದು ಸುಮಾರು 96 ಕುರಿಗಳು ಸಾವನ್ನಪ್ಪಿರುವ ಘಟಣೆ ಸಂಬವಿಸಿದೆ. ಮಳೆ ಬರುತ್ತಿರುವ ಸಂದರ್ಬದಲ್ಲಿ ಸೇತುವೆ ಕೆಳಗಡೆ ಚಾಟಿಗೆ ನಿಂತ ಕುರಿಗಾರರು ಒಂದು ರೈಲ್ವೆ ಹೋದ ನಂತರ ಕುರಿಗಳನ್ನು ಹಳಿ ದಾಟಿಸುವ
ಇತ್ತೀಚೆಗೆ ನಿಧನರಾದ ಹಿರಿಯ ದಲಿತ ಮುಖಂಡ ಪಿ. ಡೀಕಯ್ಯ ಅವರ ಮರಣದ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರಿನ ಹಿನ್ನಲೆಯಲ್ಲಿ ಸೋಮವಾರ ಪದ್ಮುಂಜದಲ್ಲಿ ಅವರ ಮೃತದೇಹವನ್ನು ಹೊರತೆಗೆದು ತಹಶೀಲ್ದಾರ್ ಅವರ ಉಪಸ್ಥಿತಿಯಲ್ಲಿ ಮತ್ತೆ ಮರಣೋತ್ತರಪರೀಕ್ಷೆ ನಡೆಸಲಾಯಿತು.
ಮೂಡುಬಿದಿರೆ: ಯಾವುದೇ ಉದ್ಯಮದಲ್ಲಿ ಏಳುಬೀಳುಗಳು ಸಹಜ. ಸಂಯಮ, ತಾಳ್ಮೆಯಿಂದ ಇದನ್ನು ಎದುರಿಸಿ ಮುನ್ನಡೆಯಬೇಕು. ಉದ್ಯಮದ ಯಶಸ್ಸಿಗೆ ವ್ಯವಹಾರದಲ್ಲಿ ಚಾಕಚಕ್ಯತೆ ಮುಖ್ಯ. ಸ್ಪರ್ಧೆ ಇದ್ದಾಗ ಗುಣಮಟ್ಟವು ಹೆಚ್ಚುತ್ತದೆ. ಈ ಸಂಸ್ಥೆಯು ಗ್ರಾಹಕರ ಆಶೋತ್ತರಗಳನ್ನು ಈಡೇರಿಸಿ ಮುನ್ನಡೆಯಲಿ ಎಂದು ಮೂಡುಬಿದಿರೆ ಶ್ರೀಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಶುಭ ಹಾರೈಸಿದರು. ಪೇಟೆಯ ವಿಜಯನಗರದಲ್ಲಿ ಆರಂಭಗೊಂಡ ಶ್ರೀಕೃಷ್ಣ
ವಿಟ್ಲ: ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ ವಿಟ್ಲ ಇದರ ವತಿಯಿಂದ ಮಹಿಳಾ ಘಟಕದ ನೇತೃತ್ವದಲ್ಲಿ ಆಟಿಡೊಂಜಿ ದಿನ ವಿಟ್ಲದ ಶಾಂತಿನಗರ ಅಕ್ಷಯ ಸಭಾಭವನದಲ್ಲಿ ನಡೆಯಿತು. ಪುತ್ತೂರು ಉಪತಹಶೀಲ್ದಾರ್ ಸುಲೋಚನಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು. ಸತ್ಕಾರ್ಯಗಳಿಗೆ ಸ್ಪಂದಿಸಬೇಕು. ಹಳ್ಳಿಯಲ್ಲಿ ಮಳೆಗಾಲಕ್ಕೆ ಅವಶ್ಯವಿರುವ ವಿವಿಧ ವಸ್ತುಗಳನ್ನು ಸಂಗ್ರಹಿಸಿಡುವುದು ವಾಡಿಕೆ. ಆಟಿ ತಿಂಗಳ ಕಾಲಕ್ಕೆ ಇದು
ಉಳ್ಳಾಲ :ಪ್ರಕರಣವೊಂದರ ಮಹಜರಿಗೆ ತೆರಳುವ ವೇಳೆ ಪೆÇಲೀಸರ ಕೈಯಿಂದ ತಪ್ಪಿಸಲು ಯತ್ನಿಸಿದ ರೌಡಿಶೀಟರ್ ಓರ್ವನಿಗೆಪೊಲೀಸ್ ಫೈರಿಂಗ್ ನಡೆದಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಅಸೈಗೋಳಿಯಲ್ಲಿ ನಡೆದಿದೆ. ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ 14 ಕ್ಕೂ ಅಧಿಕ ಪ್ರಕರಣ ಇರುವ ರೌಡಿಶೀಟರ್ ಮುಕ್ತಾರ್ ಮೇಲೆ ಫೈರಿಂಗ್ ನಡೆದಿದೆ. ಉಳ್ಳಾಲ ಠಾಣಾ ಪೊಲೀಸ್ ಸಿಬ್ಬಂದಿ ವಾಸುದೇವ ಹಾಗೂ ಅಕ್ಬರ್ ಎಂಬವರಿಗೆ ಗಾಯಗಳಾಗಿವೆ. ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ
ಕಟಪಾಡಿ ಮಟ್ಟು ಹೊಳೆಯಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ. ಸುಮಾರು 45ರಿಂದ 50 ವರ್ಷ ವಯಸ್ಸಿನ ಗಂಡಸಿನ ಶವ ಕಟಪಾಡಿ ಮಟ್ಟು ಹೊಳೆಯಲ್ಲಿ ತೇಲಿ ಬರುತ್ತಿದ್ದನ್ನು ಗಮನಿಸಿದ ಸ್ಥಳೀಯರು, ಬಾರೀ ಸೆಳೆತ ಹೊಂದಿದ ನೆರೆಯ ನೀರಿನಲ್ಲಿ ಸಾಹಸಮಯವಾಗಿ ತಡಕ್ಕೆ ಸೇರಿಸಿ ಕಾಪು ಪೊಲೀಸರಿಗೆ ಮಾಹಿತಿ ನೀಡಿದ್ದರು, ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಶವಾಗಾರಕ್ಕೆ ಸಾಗಿಸಿದ್ದು, ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಶ್ರೀ ಕ್ಷೇತ್ರ ಉಚ್ಚಿಲಕ್ಕೆ ಖ್ಯಾತ ಹೋಟೆಲ್ ಉದ್ಯಮಿಗಳಾದ ಶ್ರೀ ಬಂಜಾರ ಪ್ರಕಾಶ್ ಶೆಟ್ಟಿಯವರು ಭೇಟಿ ನೀಡಿ ಶ್ರೀ ಮಹಾಲಕ್ಷ್ಮೀ ಅಮ್ಮನವರ ದರ್ಶನ ಮಾಡಿದರು. ದೇವಸ್ಥಾನದ ಜೀರ್ಣೋದ್ಧಾರ ಸಂದರ್ಭದಲ್ಲಿ ರೂ.25 ಲಕ್ಷ ದೇಣಿಗೆ ನೀಡಿದ ಇವರಿಗೆ ನಾಡೋಜ ಡಾ. ಜಿ. ಶಂಕರ್ ರವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ದ. ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಶ್ರೀ ಜಯ ಸಿ. ಕೋಟ್ಯಾನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾದ ಶ್ರೀ ವಾಸುದೇವ ಸಾಲ್ಯಾನ್, ಉದ್ಯಮಿ ಶ್ರೀಪತಿ ಭಟ್
ಮಂಗಳೂರು: ನಾರಾಯಣಗುರುಗಳ ಅನುಯಾಯಿಗಳು ಮಾಡಿದ ಶಾಂತಿಯುತ ಹೋರಾಟಕ್ಕೆ ಮಣಿದ ಸರ್ಕಾರ ಪಠ್ಯ ಪುನರ್ ಸೇರ್ಪಡೆ ಮಾಡಲು ಆದೇಶಿಸಿದ ಹಿನ್ನೆಲೆ ಹಾಗು ಸಮಾಜದ ಪ್ರಮುಖ ಬೇಡಿಕೆಗಳಾದ ಬ್ರಹ್ಮಶ್ರೀ ನಾರಾಯಣಗುರು ನಿಗಮ (ಬಿಲ್ಲವ ನಿಗಮ) ಸ್ಥಾಪನೆ ಹಾಗೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರು ಇಡಬೇಕು, ಸಮಾಜದ ಏಳಿಗೆಗಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಭಾನುವಾರ ವಿಶೇಷ ಗುರುಪೂಜೆ ಸಲ್ಲಿಸಲಾಯಿತು. ಜಾನಪದ ವಿದ್ವಾಂಸ ಬನ್ನಂಜೆ
ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಮೋಡೇಲ್ ರೆನಿ ಜಾರ್ಜ್ ಅವರು ಸದ್ಯದಲ್ಲೇ ಸಿಡ್ನಿಯಲ್ಲಿ ನಡೆಯಲಿರುವ ಮಿಸ್ ವರ್ಲ್ಡ್ ಯೂನಿವರ್ಸಲ್ ಇಂಟರ್ ನ್ಯಾಶನಲ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಹೊಸದಿಲ್ಲಿಯಲ್ಲಿಯ ನಿವಾಸಿಯಾಗಿರುವ ರೆನಿ ಜಾರ್ಜ್ ಅವರು ನರ್ಸಿಂಗ್ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ಇದೀಗ ಹದಿನೈದು ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿ ವೃತ್ತಿಯಲ್ಲಿದ್ದಾರೆ. 2022ರ ಮಿಸ್ ಇಂಡಿಯಾ ವರ್ಲ್ಡ್ ಯೂನಿರ್ವಸಲ್ ಕಿರೀಟ ಗೆದ್ದಿರುವ
1837 ರ ಅಮರ ಸುಳ್ಯದ ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿ ನಾಯಕ ಕೆದಂಬಾಡಿ ರಾಮಯ್ಯ ಗೌಡರ ಪುತ್ಥಳಿ ಆ.13 ರಂದು ಮಂಗಳೂರಿನ ಬಾವುಟಗುಡ್ಡೆಯಲ್ಲಿ ಅನಾವರಣಗೊಳ್ಳಲಿದ್ದು ಆ ಕಾರ್ಯಕ್ರಮಕ್ಕೆ ಸುಳ್ಯದಿಂದ 5 ಸಾವಿರ ಮಂದಿ ಭಾಗವಹಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಕಾರ್ಯಕ್ರಮದ ಯಶಸ್ಸಿಗೆ ಸಮಿತಿಯನ್ನು ರಚಿಸಿಕೊಂಡು, ನೆನಪಿನಲ್ಲಿಟ್ಟುಕೊಳ್ಳುವ ರೀತಿಯ ಯೋಜನೆ ರೂಪಿಸಲು ಕೂಡಾ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ


















