Home Posts tagged #mangaluru (Page 11)

ಮಂಗಳೂರು: ಡಿ.10 ರಂದು ಕೀರ್ತಿಶೇಷ ಕುಂಬ್ಳೆ ಸುಂದರರಾವ್ ಸಂಸ್ಮರಣಾ ಕಾರ್ಯಕ್ರಮ

ಯಕ್ಷಲೋಕ ವಿಖ್ಯಾತ, ಮಾತಿನ ರಂಗದ ಮಹಾರಥಿ, ಹಿರಿಯ ಯಕ್ಷಗಾನ ಕಲಾವಿದರು, ಸುರತ್ಕಲ್ ಕ್ಷೇತ್ರದ ಶಾಸಕರು, ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರು, ಸಂಸ್ಕಾರ ಭಾರತೀಯ ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವಾರು ಪ್ರತಿಷ್ಟಿತ ಪುರಸ್ಕಾರವನ್ನು ಪಡೆದ ಕುಂಬ್ಳೆ ಸುಂದರರಾವ್‌ರವರ ಸಂಸ್ಮರಣಾ ಕಾರ್ಯಕ್ರಮವನ್ನು ಆಯೋಜಿಸಿದ್ದು, ಡಿಸೆಂಬರ್ ೧೦, ೨೦೨೩ನೇ

ಮಂಗಳೂರು: ಡಿ.9ರಂದು ಬಿಎಂಆರ್ ಗ್ರೂಪ್‌ನಿಂದ 2ನೇ ತಿಂಗಳ ಡ್ರಾ

ಬಿಎಂಆರ್ ಗ್ರೂಪ್ ವತಿಯಿಂದ ಎರಡನೇ ತಿಂಗಳ ಡ್ರಾ ಕಾರ್ಯಕ್ರಮವು ಡಿಸೆಂಬರ್ 9ರಂದು ಕೃಷ್ಣಾಪುರದ ಬಿಎಂಆರ್ ಕಚೇರಿಯಲ್ಲಿ ನಡೆಯಲಿದೆ. ಅದೃಷ್ಟ ಶಾಲಿಗಳಿಗೆ ಆರು ಬಂಪರ್ ಪ್ರೆöÊಸ್ ಗೆಲ್ಲುವ ಅವಕಾಶವಿದ್ದು, ಮೂವರಿಗೆ 75 ಸಾವಿರ ಮೌಲ್ಯದ ಚಿನ್ನದ ನೆಕ್ಲಿಸ್ ಹಾಗೂ ಮೂವರಿಗೆ ಹೋಂಡಾ ಆಕ್ಟಿವಾ ಬಹುಮಾನವಾಗಿ ಗೆಲ್ಲುವ ಅವಕಾಶವಿದೆ. ಡಿಸೆಂಬರ್ 5ರೊಳಗೆ ಹಣ ಪಾವತಿಸಿದವರಿಗೆ 25 ಚಿನ್ನದ ಉಂಗುರ ಮತ್ತು 50 ಮಂದಿಗೆ ಸರ್ಪ್ರೈಸ್ ಬಹುಮಾನ ಗೆಲ್ಲುವ ಅವಕಾಶವಿದೆ. ಹೆಚ್ಚಿನ

ಪಚ್ಚನಾಡಿ ತ್ಯಾಜ್ಯ ಸಂಸ್ಕರಣಾ ಘಟಕ ಸುರಕ್ಷತೆಗೆ ಬೋರ್‍ವೆಲ್ ನೀರಿನ ವ್ಯವಸ್ಥೆ : ಮೇಯರ್ ಸುಧೀರ್ ಶೆಟ್ಟಿ

ಪಚ್ಚನಾಡಿಯ ಕಸ ವಿಲೇವಾರಿ ಘಟಕದ ಸುತ್ತ ಪೈಪ್‍ಲೈನ್ ಅಳವಡಿಸಿ ಸ್ಪ್ರಿಂಕ್ಲರ್ ಹಾಕಿ ಆಕಸ್ಮಿಕ ಬೆಂಕಿ ಅನಾಹುತ ತಡೆಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದರು. ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮಂದೊಗೆ ಮಾತನಾಡಿದರು. ಕಳೆದ ವರ್ಷ ಬೇಸಿಗೆಯಲ್ಲಿ ಕಸ ವಿಲೇವಾರಿ ಘಟಕಕ್ಕೆ ಬೆಂಕಿ ಹೊತ್ತಿಕೊಂಡು ಅವಘಡ ಸಂಭವಿಸಿತ್ತು. ಹೀಗಾಗಿ ಈ ಬಾರಿ ಮುನ್ನೆಚ್ಚರಿಕೆಯಾಗಿ ಎರಡು ಬೋರ್‍ವೆಲ್

ಮಂಗಳೂರಿಗೆ ಬಂದ ಕಾಟಿ ಕೊಟ್ಟ ಎಚ್ಚರಿಕೆ ಏನು?

ಮಂಗಳೂರಿನ ಕದ್ರಿ, ನೀರುಮಾರ್ಗಗಳ ಹಲವೆಡೆ ಕಾಟಿ ನನ್ನ ಕಾಡು ಎಲ್ಲಿದೆ ಎಂದು ಹುಡುಕಿ ಹೋದುದರ ವರದಿಯಾಗಿದೆ. ಮಲೆನಾಡಿನ ಎಲ್ಲ ಕಡೆ ಯಾವ ಬೇಲಿಗಳಿಗೂ ಕಾಟಿ, ಕಾಡುಕೋಣ ಜಗ್ಗುವುದಿಲ್ಲ ಎಂದು ಮಲೆನಾಡಿಗರು ದೂರುತ್ತಿದ್ದಾರೆ. ಕಾಡುಕೋಣಗಳಲ್ಲಿ ಕಾಡೆಮ್ಮೆ ಹೆಣ್ಣು ಇದ್ದರೂ ಕಾಡುಕೋಣ ಎಂದೇ ಕರೆಯುತ್ತಾರೆ. ಇದು ಪುರುಷ ವರ್ಗದ ಮೇಲಾಳ್ಕೆ ಕಿತಾಪತಿ ಎಂದು ಕೆಲವು ಮಹಿಳಾ ಹೋರಾಟಗಾತಿಯರು ದೂರಿದ್ದಾರೆ. ಮಲೆನಾಡಿಗರು ನಮ್ಮ ಬೇಲಿಯನ್ನು ಕಾಡುಕೋಣ ಮುರಿಯುತ್ತಿದೆ ಎಂದು

ಕಟೀಲು ಶಿಕ್ಷಣ ಸಂಸ್ಥೆಯಿಂದ ಭ್ರಮರ ಇಂಚರ ಕಾರ್ಯಕ್ರಮ

ವಿದ್ಯಾರ್ಥಿಗಳು ಹೆತ್ತ ತಂದೆ ತಾಯಿಗಳಿಗೆ, ಕಲಿಸುವ ಗುರುಗಳಿಗೆ ಮೊದಲು ಗೌರವ ಕೊಡಲು ಕಲಿಯಬೇಕು ಎಂದು ಸಿನೆಮಾ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಹೇಳಿದರು. ಅವರು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಧಾನದ ಶಿಕ್ಷಣ ಸಂಸ್ಧೆಗಳ ವತಿಯಿಂದ ನಡೆದ ಭ್ರಮರ ಇಂಚರ ಕಾರ್ಯಕ್ರಮದ ಸಿನೆಮಾ ಮತ್ತು ರಂಗಭೂಮಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಮಕ್ಕಳಿಗೆ ಅವಕಾಶ ಸಿಕ್ಕಾಗ ಇಂತಹ ವೇದಿಕೆಗಳನ್ನು ಬಳಸಿಕೊಂಡಾಗ ತಮ್ಮ ಲ್ಲಿರುವ ಪ್ರತಿಭೆಗಳನ್ನು ಹೊರತೆಗೆಯಲು ಸಾಧ್ಯವಾಗುತ್ತದೆ

ಮಂಗಳೂರು ಸಿಸಿಬಿ ಡಿವೈಎಸ್‌ಪಿ ಪರಮೇಶ್ವರ ಉಡುಪಿಗೆ ಬಡ್ತಿ

ಪರಮೇಶ್ವರ ಅನಂತ ಹೆಗ್ಡೆ ಅವರನ್ನು ಉಡುಪಿಯ ಎರಡನೆಯ ಹೆಚ್ಚುವರಿ ಪೋಲೀಸು ಆಯುಕ್ತರಾಗಿ ನೇಮಕ ಮಾಡಲಾಗಿದೆ.ಮಂಗಳೂರಿನ ಸಿಸಿಬಿ- ಅಪರಾಧ ಪತ್ತೆ ವಿಭಾಗದಲ್ಲಿ ಡಿವೈಎಸ್‌ಪಿ ಆಗಿದ್ದ ಪರಮೇಶ್ವರ ಅವರಿಗೆ ಬಡ್ತಿ ಸಿಕ್ಕಿದೆ.1994ರಲ್ಲಿ ಎಸ್‌ಐ ಆಗಿ ಪರಮೇಶ್ವರ ಅವರು ಪೋಲೀಸು ಇಲಾಖೆಗೆ ಸೇರಿದ್ದರು. ಉಡುಪಿಯಲ್ಲಿ ಈಗಾಗಲೇ ಒಬ್ಬರು ಹೆಚ್ಚುವರಿ ಪೋಲೀಸು ಕಮಿಶನರ್ ಇದ್ದು, ಎರಡನೆಯ ಹೆಚ್ಚುವರಿ ಪೋಲೀಸು ಕಮಿಶನರ್ ಆಗಿ ಪರಮೇಶ್ವರ ಅವರು ಸೇರ್ಪಡೆ ಆಗಿದ್ದಾರೆ.

ಕರಾವಳಿ ಜಿಲ್ಲೆಯಾದ್ಯಂತ “ರಾಪಟ” ಅದ್ಧೂರಿ ಬಿಡುಗಡೆ

ಮಂಗಳೂರು: ಬೊಳ್ಳಿ ಮೂವೀಸ್ ಹಾಗೂ ಅವಿಕಾ ಪ್ರೊಡಕ್ಷನ್ಸ್ ನಿರ್ಮಾಣದ ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು, ಅರ್ಜುನ್ ಕಾಪಿಕಾಡ್ ನಿರ್ದೇಶನದ ಚೊಚ್ಚಲ ಸಿನಿಮಾ ರಾಪಟ ಶುಕ್ರವಾರ ಮುಂಜಾನೆ ಕರಾಳಿಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಗೊಂಡಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತಾಡಿದ ಡಾ. ದೇವದಾಸ್ ಕಾಪಿಕಾಡ್ ಅವರು, “ತುಳು ಭಾಷೆಯಲ್ಲಿ ಬರುವ ಎಲ್ಲಾ ಸಿನಿಮಾಗಳಿಗೂ ತುಳುವರು

Mangaluru ; ಪಂಚಾಯತ್ ಮಟ್ಟದ ಪುಸ್ತಕ ದಾಖಲೆ ಇಡುವವರಿಂದ ಪ್ರತಿಭಟನೆ

ಮಂಗಳೂರಿನ ಗಡಿಯಾರ ಗೋಪುರದ ಎದುರು ಪಂಚಾಯತ್ ಮಟ್ಟದ ಬುಕ್ ಕೀಪಿಂಗ್ ಕೆಲಸ ಮಾಡುವ ಮಹಿಳೆಯರು ಸಿಪಿಎಂ ಸಂಘಟನೆಯ ಮೂಲಕ ಪ್ರತಿಭಟನೆ ಮಾಡಿದರು. ಸಿಪಿಎಂ ನಾಯಕ ಸುನಿಲ್ ಕುಮಾರ್ ಬಜಾಲ್ ಅವರು ಹೋರಾಟದ ಅಗತ್ಯದ ಬಗೆಗೆ ಮಾತನಾಡಿದರು. ಬುಕ್ ಕೀಪಿಂಗ್ ಮಹಿಳೆಯರಿಗೆ ಪಂಚಾಯತ್ ಮಟ್ಟದಿಂದ ಮೂರರಿಂದ ಐದು ಸಾವಿರ ಮಾತ್ರ ಸಂಬಳ ಕೊಡುತ್ತಿದ್ದಾರೆ. ಇದು ಕೆಲವರ ಸಾರಿಗೆ ವೆಚ್ಚ ಕೂಡ ಆಗುವುದಿಲ್ಲ. ಕನಿಷ್ಠ ಹತ್ತು ಸಾವಿರ ಸಂಬಳ ಕೊಡತಕ್ಕದ್ದು ಎಂದು ಪ್ರತಿಭಟನಾಕಾರರು ಒತ್ತಾಯ

ಮಂಗಳೂರಿನಲ್ಲಿ `ಕ್ರಿಸ್ತ ಜಯಂತಿ ಜುಬಿಲಿ ಸಂಭ್ರಮಾಚರಣೆ

ಜಗತ್ತಿನಾದ್ಯಂತ ಕ್ರೈಸ್ತ ಧರ್ಮಸಭೆಯಲ್ಲಿ ಯೇಸು ಕ್ರಿಸ್ತರ ಜನನದ 2025 ವರ್ಷಗಳ ಸ್ಮರಣಾರ್ಥ `ಕ್ರಿಸ್ತ ಜಯಂತಿ ಜುಬಿಲಿ2025′ ಸಂಭ್ರಮಾಚರಣೆಯ ಪೂರ್ವ ಸಿದ್ಧತೆಗಳು ನಡೆಯುತ್ತಿದ್ದು, ಮಂಗಳೂರಿನ ರೋಮನ್ ಕೆಥೊಲಿಕ್ ಧರ್ಮಕ್ಷೇತ್ರದಲ್ಲೂ ಎರಡು ವರ್ಷಗಳ ಪೂರ್ವ ತಯಾರಿಗಳಿಗೆ ಬಿಷಪ್ ಅ.ವಂ. ಡಾ.ಪೀಟರ್ ಪಾವ್ಲ್ ಸಲ್ಡಾನ ಚಾಲನೆ ನೀಡಿದರು. ನಗರದ ಹೋಲಿ ರೋಜರಿ ಕೆಥೆಡ್ರಲ್‍ನಲ್ಲಿ `ಭರವಸೆಯ ಯಾತ್ರಿಕರು’ ಎಂಬ ಧ್ಯೇಯವನ್ನು ಒಳಗೊಂಡ ಜುಬಿಲಿ ಲಾಂಛನದ

ಕೊಟ್ಟಾರಚೌಕಿ ಸರ್ಕಲ್‍ಗೆ ವೀರಯೋಧ ಕ್ಯಾಪ್ಟನ್ ಪ್ರಾಂಜಲ್ ಹೆಸರು

ಕಾಶ್ಮೀರದ ರಜೌರಿಯಲ್ಲಿ ಉಗ್ರರೊಂದಿಗೆ ಹೋರಾಡಿ ದೇಶಕ್ಕಾಗಿ ತನ್ನ ಪ್ರಾಣವನ್ನೇ ಬಲಿದಾನಗೈದ ಕರುನಾಡಿನ ವೀರಯೋಧ ಕ್ಯಾಪ್ಟನ್ ಪ್ರಾಂಜಲ್ ಅವರ ಹೆಸರನ್ನು ಹೆದ್ದಾರಿ ಮತ್ತು ನಗರ ಸಂಪರ್ಕಿಸುವ ಕೊಟ್ಟಾರಚೌಕಿ ಜಂಕ್ಷನ್ ಸರ್ಕಲ್‍ಗೆ ಇಡಲಾಗುವುದು ಎಂದು ಶಾಸಕ ಭರತ್ ಶೆಟ್ಟಿ ತಿಳಿಸಿದ್ದಾರೆ. ಕೊಟ್ಟಾರಚೌಕಿಯಲ್ಲಿ ಅಮರ್ ಜವಾನ್ ಥೀಮ್ ಪಾರ್ಕ್ ನಿರ್ಮಾಣವಾಗಲಿದೆ. ಇದರ ಜೊತೆಗೆ ಮಂಗಳೂರಿನಲ್ಲಿ ಕಲಿತು, ಬೆಳೆದು ಅವಿನಾಭಾವ ಸಂಬಂಧ ಹೊಂದಿರುವ ಕ್ಯಾ. ಪ್ರಾಂಜಲ್