ಮಂಗಳೂರು: ಎಜೆ ಆಸ್ಪತ್ರೆ ಮುಂಭಾಗ ಆಸ್ಪತ್ರೆ ಕಡೆಯಿಂದ ಹೊರ ಬರುತ್ತಿದ್ದಂತೆ ಆಕ್ಟೀವ ಸ್ಕೂಟರ್ ಆಟೋ ರಿಕ್ಷಾಕ್ಕೆ ತಗುಲಿ ದ್ವಿಚಕ್ರ ವಾಹನ ಸವಾರ ಕೆಳಗೆ ಬಿದ್ದಂತೆ ಮುಂಭಾಗದದಿಂದ ಬರುತ್ತಿದ್ದ ಸ್ವಿಫ್ಟ್ ಕಾರು ಮೈಮೇಲೆ ಹರಿದು ಕಾವುರು ನಿವಾಸಿ ಕೌಶಿಕ್ (21) ಮೃತಪಟ್ಟಿರುತ್ತಾರೆ . ಮಂಗಳೂರು ಸಂಚಾರ ಪೂರ್ವ ಪೋಲಿಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ
ಮಂಗಳೂರು: “ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಹೇಳೋರು ಕೇಳೋರು ಯಾರೂ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿರುವ ಗಲಭೆಯಲ್ಲಿ ನಾವಿದನ್ನು ಕಣ್ಣಾರೆ ಕಂಡಿದ್ದೇವೆ. ಅಲ್ಲಿ ಅಮಾಯಕರ ಮೇಲೆ ಹಲ್ಲೆ ಮನೆಗಳ ಮೇಲೆ ದಾಳಿಗಳು ನಡೆದಿವೆ. ಮುಖ್ಯಮಂತ್ರಿ, ಗೃಹಸಚಿವರು ಏನೂ ನಡೆದೇ ಇಲ್ಲವೆಂಬಂತೆ ಮಾತಾಡುತ್ತಿದ್ದಾರೆ” ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್
ಸುರತ್ಕಲ್ ರೈಲ್ವೇ ಸೇತುವೆ ಅಕ್ಕಪಕ್ಕದ ರಸ್ತೆ ಗುಂಡಿ ಮುಚ್ಚಿ ವಾಹನ ಸಂಚಾರಕ್ಕೆ ಯೋಗ್ಯ ರಸ್ತೆ ನಿರ್ಮಿಸಲು ಒತ್ತಾಯಿಸಿ ಹಾಗೂ ಟ್ರಾಫಿಕ್ ಸಮಸ್ಯೆಗೆ ಕಾರಣವಾಗುತ್ತಿರುವ ಕೊಂಕಣ ರೈಲ್ವೆ ರೋರೋ ಘಟಕವನ್ನು ಶೀಘ್ರ ಸ್ಥಳಾಂತರಕ್ಕೆ ಆಗ್ರಹಿಸಿ ಡಿವೈಎಫ್‍ಐ ಸುರತ್ಕಲ್ ಘಟಕದಿಂದ ಪ್ರತಿಭಟನೆ ನಡೆಸಿದರು. ಡಿವೈಎಫ್‍ಐ ಜಿಲ್ಲಾ ಅಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಅವರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಸುರತ್ಕಲ್ ಭಾಗದಲ್ಲಿ ರಸ್ತೆ ಹೊಂಡ
ಮಂಗಳೂರಿನ ಕಲೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಆರಂಭವಾಗಿರುವ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಇದರ ಎರಡನೇ ವರ್ಷದ ಪಿಲಿಪರ್ಬದ ಆಮಂತ್ರಣ ಪತ್ರಿಕೆಯನ್ನು ಪ್ರತಿಷ್ಠಾನದ ಮಾರ್ಗದರ್ಶಕರೂ, ಸಂಸದರೂ, ಭಾಜಪಾ ರಾಜ್ಯಾಧ್ಯಕ್ಷರೂ ಆಗಿರುವ ನಳಿನ್ ಕುಮಾರ್ ಕಟೀಲ್ ಮಂಗಳೂರಿನಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಂಗಳೂರಿನ ಕೇಂದ್ರ ಮೈದಾನದಲ್ಲಿ ಅಕ್ಟೋಬರ್ 21 ರಂದು ನಡೆಯುವ ಪಿಲಿಪರ್ಬ ಈ ವರ್ಷವೂ ಆದ್ದೂರಿಯಾಗಿ ನಡೆಯಲಿದೆ.
ಇಸ್ರೇಲ್ ನಲ್ಲಿರುವ ಕರಾವಳಿಯ ಜನರನ್ನು ಸುರಕ್ಷಿತವಾಗಿ ಕರೆತರುವ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತದೆ. ಯಾರೂ ಭಯ ಪಡುವ ಅಗತ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ನಳಿನ್ ಕುಮಾರ್ ಕಟೀಲ್ ಅವರು, ಯಾರು ಭಯ ಪಡಬೇಕಾಗಿಲ.್ಲ ಇಸ್ರೇಲ್‍ನಲ್ಲಿ ಐದು ಸಾವಿರ ದ.ಕ ಜಿಲ್ಲೆಯ ಜನರು ಇದ್ದಾರೆಂಬ ಮಾಹಿತಿ ಇದೆ. ಈಗಾಗಲೇ ವಿದೇಶಾಂಗ ಇಲಾಖೆ ಸಚಿವರಿಗೆ ಪತ್ರ ಬರೆದಿದ್ದೇನೆ, ಯಾರಿಗೂ
ಒಳ್ಳೆಯ ದಿನಗಳು ಬರಲಿದೆ ಎಂದು ದೇಶದ ಜನತೆಗೆ ಮಂಕುಬೂದಿ ಎರಚಿ ಅಧಿಕಾರಕ್ಕೇರಿದ ನರೇಂದ್ರ ಮೋದಿ ಸರಕಾರ ಕಳೆದ 9 ವರ್ಷಗಳಲ್ಲಿ ನಿರಂತರವಾಗಿ ಕಾರ್ಪೊರೇಟ್ ಕಂಪೆನಿಗಳ ಹಿತ ಕಾಯುವ ಮೂಲಕ ಜನಸಾಮಾನ್ಯರ ಬದುಕನ್ನು ಸರ್ವನಾಶಗೊಳಿಸಿದೆ. ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಯವರ ಕೈಗೊಪ್ಪಿಸಿ ದೇಶದ ಆರ್ಥಿಕತೆಯನ್ನು ದಿವಾಳಿ ಮಾಡಿದೆ.ಇಂತಹ ಜನದ್ರೋಹಿ ಸರಕಾರ ಮತ್ತೆ ಅಧಿಕಾರಕ್ಕೇರಿದರೆ ದೇಶದ ಸ್ವಾತಂತ್ರ್ಯ ಸಮಗ್ರತೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯ ಕಟ್ಟಿಟ್ಟ
ವಿಶ್ವ ಹಿಂದೂ ಪರಿಷತ್‍ನ 60ನೇ ವರ್ಷದ ಪ್ರಯುಕ್ತ ಬಜರಂಗದಳ ನೇತೃತ್ವದಲ್ಲಿ ನಡೆಯುತ್ತಿರುವ ಶೌರ್ಯ ಜಾಗರಣ ರಥಯಾತ್ರೆ ಇಂದು ಬೆಳಗ್ಗೆ ಮಂಗಳೂರು ಪ್ರವೇಶಿಸಿದ್ದು ಅಡ್ಯಾರ್‍ನಲ್ಲಿ ಭವ್ಯ ಸ್ವಾಗತ ಕೋರಲಾಯಿತು. ಈ ವೇಳೆ ವಿಎಚ್ ಪಿಯ ಶರಣ್ ಪಂಪ್ ವೆಲ್, ಪುರುಷೋತ್ತಮ್, ಎಂ.ಬಿ ಪುರಾಣಿಕ್ ಮೊದಲಾದವರು ಉಪಸ್ಥಿತರಿದ್ದರು. ಅಪರಾಹ್ನ 2.30ಕ್ಕೆ ಅಂಬೇಡ್ಕರ್ ವೃತ್ತದಿಂದ ಕದ್ರಿ ಮೈದಾನದ ವರೆಗೆ ಭವ್ಯವಾದ ಶೋಭಾಯಾತ್ರೆ ನಡೆಯಲಿದ್ದು, ವಿವಿಧ ಟ್ಯಾಬ್ಲೋಗಳು
ಮಂಗಳೂರಿನ ಮೆರಿಹಿಲ್‌ನಲ್ಲಿರುವ ನೆಕ್ಸಾ ಮಾಂಡವಿ ಮೋಟಾರ್‍ಸ್‌ನಲ್ಲಿ ಸೆಪ್ಟಂಬರ್ ತಿಂಗಳಿನಲ್ಲಿ 100ಕ್ಕಿಂತಲೂ ಅಧಿಕ ಕಾರುಗಳು ಮಾರಾಟವಾಗಿದೆ. ಗ್ರಾಹಕರ ಅಚ್ಚುಮೆಚ್ಚಿನ ಕಾರುಗಳಾದ ಎಕ್ಸ್‌ಎಲ್ ೬, ಫೋನ್ಕ್ಸ್, ಬಲೆನೋ, ಗ್ರಾಂಡ್ ವಿಟಾರ, ಜಿಮ್ನಿ, ಇಗ್ನೀಸ್, ಇನ್ವಿಕ್ಟೋ, ಕಿಯಾಜ್ ಕಾರುಗಳು ಮಾರಾಟವಾಗಿದೆ. ಕಾರು ಮಾರಾಟ ಕ್ಷೇತ್ರದಲ್ಲಿ ಹೆಸರು ಪಡೆದುಕೊಂಡಿರುವ ನೆಕ್ಸಾ ಕಾರು ಶೋರೂಂ ದಾಖಲೆ ಮಟ್ಟದಲ್ಲಿ ಕಾರುಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿರುವ
ಬೀದಿ ಬದಿ ವ್ಯಾಪಾರಸ್ಥರ ಗುರುತಿನ ಚೀಟಿ ಮತ್ತು ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ ಬೀದಿ ಬದಿ ವ್ಯಾಪಾರಸ್ಥರ ಸಂಘದ ವತಿಯಿಂದ ಮಂಗಳೂರು ಪಾಲಿಕೆಗೆ ಮುತ್ತಿಗೆ ಹಾಕಲಾಯಿತು. ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಂದ ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ. 3 ವರ್ಷಗಳಿಂದ ನಮ್ಮ ಪ್ರಮಾಣ ಪತ್ರವಾಗಲೀ, ಗುರುತಿನ ಚೀಟಿಯನ್ನಾಗಲೀ ನವೀಕರಿಸಿ ನೀಡಿಲ್ಲ ಎಂದು ವ್ಯಾಪಾರಿಗಳು ಆರೋಪಿಸಿದರು. ಬೀದಿ ಬದಿವ್ಯಾಪಾರಿಗಳ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮಾತನಾಡಿ, ಮಹಾ
ಶಿವಮೊಗ್ಗದಲ್ಲಿ ನಡೆದ ಗಲಭೆಗೆ ಕಾಂಗ್ರೆಸ್ ಸರ್ಕಾರದ ಒಂದು ವರ್ಗಕ್ಕೆ ಮೀಸಲಾದ ಮೃದು ನೀತಿಯೇ ಕಾರಣ ಎಂದು ಶಾಸಕ ಡಾ. ಭರತ್ ಶೆಟ್ಟಿ ಆರೋಪ ಮಾಡಿದ್ದಾರೆ. ಸುರತ್ಕಲ್‍ನ ಶಾಸಕ ಕಚೇರಿಯಲ್ಲಿ ಅಹವಾಲು ಸ್ವೀಕರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ರಾಜ್ಯದ ವಿವಿಧಡೆ ಕೋಟಿ ಕೋಟಿ ಜನ ಸೇರುವ ಗಣೇಶ ಚತುರ್ಥಿ ಶಾಂತಿಯುತವಾಗಿ ನಡೆದಿದೆ. ಆದರೆ ಮುಸಲ್ಮಾನ ಬಾಂಧವರ ಹಬ್ಬದ ಸಂಭ್ರಮದ ವೇಳೆ ಇಂತಹ




























