Home Posts tagged #moodabidre (Page 9)

ಮೂಡುಬಿದಿರೆಯ ಬಿ ಶ್ರೀನಿವಾಸ ಬಾಳಿಗ ಇನ್ನಿಲ್ಲ

ಮೂಡುಬಿದಿರೆ : ಇಲ್ಲಿನ ಮೆ. ಜಿ ನಾಗೇಶ್ ಪೈ ಅಂಡ್ ಕೋಸಂಸ್ಥೆಯ ಸ್ಥಾಪಕ ಪಾಲುದಾರ ,ಹಿರಿಯ ವರ್ತಕ ಬಿ ಶ್ರೀನಿವಾಸ ಬಾಳಿಗಾ (89 )ಏಪ್ರಿಲ್ 16ರಂದು ಸ್ವರಾಜ್ಯ ಮೈದಾನ ಬಳಿ ಇರುವ ಗುರುಕೃಪಾ ನಿವಾಸದಲ್ಲಿ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರು ಪ್ರಸ್ತುತ ವ್ಯವಹಾರವನ್ನು ಪಾಲುದಾರರಾಗಿ ಮುನ್ನಡೆಸುತ್ತಿರುವ ಬಿ ಗಣೇಶ್ ಬಾಳಿಗಾ ಸಹಿತ ಇಬ್ಬರು ಪುತ್ರರು, ಇಬ್ಬರು

ನಾಗಶ್ರೀ ನಾಗರಕಟ್ಟೆ ಅವರ `ಕೃಷ್ಣ ಸಿಗಲಿಲ್ಲ’ ಕವನ ಸಂಕಲನ ಬಿಡುಗಡೆ

ಮೂಡುಬಿದಿರೆ: ಕವಿ, ಶಿಕ್ಷಕಿ ನಾಗಶ್ರೀ ನಾಗರಕಟ್ಟೆ ಅವರ ಚೊಚ್ಚಲ ಕವನ ಸಂಕಲನ `ಕೃಷ್ಣ ಸಿಗಲಿಲ್ಲ’ ಕೃತಿಯನ್ನು ರಾಜ್ಯ ಕ.ಸಾ.ಪ. ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಪುನರೂರು ಅವರು ಮೂಡುಬಿದಿರೆಯ ಎಂಸಿಎಸ್ ಸೊಸೈಟಿಯ ಕಲ್ಪವೃಕ್ಷ ಸಭಾಂಗಣದಲ್ಲಿ ಬಿಡುಗಡೆಗೊಳಿಸಿದರು. ಕೃತಿ ಪ್ರಕಟಿಸಿರುವ ಅಜೆಕಾರಿನ ಶ್ರೀ ಮಾಧ್ಯಮ ಮತ್ತು ಪ್ರಕಾಶನ ಸಂಸ್ಥೆಯ ಮುಖ್ಯಸ್ಥ, ಹಿರಿಯ ಪತ್ರಕರ್ತ ಡಾ. ಶೇಖರ ಅಜೆಕಾರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸೊಸೈಟಿ ಅಧ್ಯಕ್ಷ

ಜೈನ ಮಠದ ಭಟ್ಟಾರಕರಿಂದ ಆಶೀರ್ವಾದ ಪಡೆದ ಉಮಾನಾಥ ಕೋಟ್ಯಾನ್

ಮೂಡುಬಿದಿರೆ : ಮುಲ್ಕಿ ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮಾನಾಥ ಎ.ಕೋಟ್ಯಾನ್ ಅವರು ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಆಶೀರ್ವಾದ ಪಡೆದರು. ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಯವರನ್ನು ಗುರುವಾರ ಭೇಟಿಯಾಗಿ ಫಲ ಮಂತ್ರಾಕ್ಷತೆ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಮೇಘನಾಥ ಶೆಟ್ಟಿ, ಎಂಸಿಎಸ್ ಬ್ಯಾಂಕಿನ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್ ಉಪಸ್ಥಿತರಿದ್ದರು.

ಮೂಡುಬಿದಿರೆ : ಶಿಷ್ಯನ ಪರವಾಗಿ ಮಾಜಿ ಸಚಿವ ಜೈನ್ ಮತಯಾಚನೆ

ಮೂಡುಬಿದಿರೆ – ತನ್ನ ಶಿಷ್ಯ ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರವಾಗಿ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ಗುರುವಾರ ಪುರಸಭಾ ವ್ಯಾಪ್ತಿಯ ವಾರ್ಡ್ ನಂಬ್ರ 15ರ ಕೊಡಂಗಲ್ಲು ಪರಿಸರದ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು. ಚುನಾವಣೆ ಪ್ರಣಾಳಿಕೆಯ 300 ಗ್ಯಾರಂಟಿ ಕಾರ್ಡ್ ಹಸ್ತಾಂತರಿಸಿದ ಅಭಯಚಂದ್ರ ಅವರು ಮಿಥುನ್ ರೈಯನ್ನು ಮರೆಯದಿರಿ ಎಂದರು. ವಾರ್ಡ್ ಸದಸ್ಯೆ ರೂಪಾ ಸಂತೋಷ್ ಶೆಟ್ಟಿ, ಪುರಸಭಾ ಸದಸ್ಯರಾದ ಸುರೇಶ್

13ನೇ ವರ್ಷದ ಪಣಪಿಲದಲ್ಲಿ ಜಯ-ವಿಜಯ ಜೋಡುಕರೆ ಕಂಬಳ

ಮೂಡುಬಿದಿರೆ: “ಜಯ-ವಿಜಯ” ಜೋಡುಕರೆ ಕಂಬಳ ಸಮಿತಿ ಪಣಪಿಲ ಇದರ ವತಿಯಿಂದ ನಡೆಯುವ ಹದಿಮೂರನೇ ವರುಷದ ಕಿರಿಯ ವಿಭಾಗದ ಹೊನಲು ಬೆಳಕಿನ ಜಯ-ವಿಜಯ ಜೋಡುಕರೆ ಕಂಬಳವು ನಡೆಯಿತು. 2022-23 ನೇ ಸಾಲಿನ ಕೊನೆಯ ಕಂಬಳ ಇದಾಗಿದ್ದು, ಊರಿನ ದೈವಸ್ಥಾನ, ದೇವಸ್ಥಾನಗಳ ಪ್ರಸಾದ ಮತ್ತು ತೀರ್ಥವನ್ನು ಕರೆಗೆ ಹಾಕುವ ಮೂಲಕ ಪಣಪಿಲ ಅರಮನೆಯ ವಿಮಲ್ ಕುಮಾರ್ ಶೆಟ್ಟಿ ಕಂಬಳವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಪಣಪಿಲ ಕಂಬಳ ಸಮಿತಿಯ ಗೌರವಾಧ್ಯಕ್ಷ ಶಾಸಕ ಉಮಾನಾಥ

ಎಸ್ ಕೆಡಿಆರ್ ಡಿಪಿಯಿಂದ ವಾತ್ಸಲ್ಯ ಕಿಟ್ ವಿತರಣೆ

ಮೂಡುಬಿದಿರೆ: ನಿರ್ಗತಿಕರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ವತಿಯಿಂದ ತಾಲೂಕಿನ ವಾಲ್ಪಾಡಿ, ಇರುವೈಲು ಮತ್ತು ಕಲ್ಲಬೆಟ್ಟುವಿನಲ್ಲಿ ಒಟ್ಟು 7 ಜನರಿಗೆ ವಾತ್ಸಲ್ಯ ಕಿಟ್ ವಿತರಿಸಲಾಯಿತು.ದಕ್ಷಿಣ ಕನ್ನಡ 1ಜಿಲ್ಲೆಯ ನಿರ್ದೇಶಕರಾದ ಸತೀಶ್ ಶೆಟ್ಟಿ ಮೂಡುಬಿದಿರೆ ವಲಯದ ಜನ ಜಾಗ್ರತಿ ಅಧ್ಯಕ್ಷ, ಪುರಸಭಾ ಸದಸ್ಯ ಜೊಸ್ಸಿ ಮಿನೇಜಸ್, ಕಲ್ಲಬೆಟ್ಟುವಿನ ಶಶಿಕಿರಣ್, ಒಕ್ಕೂಟದ ಪದಾಧಿಕಾರಿ ದೀಪ , ಜ್ಞಾನ ವಿಕಾಸ ಸಮನ್ವಯಧಿಕಾರಿ ವಿದ್ಯಾ, ವಲಯದ

ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಹಿಳೆ ನೇಣಿಗೆ ಶರಣು

ಮೂಡುಬಿದಿರೆ: ಕಳೆದೆರಡು ವರ್ಷಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಹಿಳೆಯೋರ್ವರು ಬುಧವಾರ ಬೆಳಿಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡುಬಿದಿರೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಪುರಸಭಾ ವ್ಯಾಪ್ತಿಯ ಪ್ರಾಂತ್ಯ ಗ್ರಾಮದ ಗೌರಿಕೆರೆ ರಾಮ ಮಂದಿರ ಬಳಿಯ ನಿವಾಸಿ ಚಂದ್ರಶೇಖರ ಭಟ್ ಎಂಬವರ ಪತ್ನಿ ಕುಸುಮಾ( 49 ವ) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.ಮನೆಯಲ್ಲಿ ಮಹಿಳೆಯ ಗರ್ಭಿಣಿ ಮಗಳು ಇದ್ದು ಅವರು ಮಲಗಿದ್ದರು. ಬೆಳಿಗ್ಗೆ 8.30ರ ವೇಳೆಗೆ ಮಗಳು

ಮೂಡುಬಿದಿರೆ : ಕುಂಬಳದಾಳ್ ನೆರವಂಡ ತಂಗಮ್ಮ ನಿಧನ

ಮೂಡುಬಿದಿರೆ : ಮೂಲತ: ಕೊಡಗಿನ ಮೂರ್ನಾಡ್ ನಿವಾಸಿ ಕುಂಬಳದಾಳ್ ನೆರವಂಡ ತಂಗಮ್ಮ (88) ಶನಿವಾರ ರಾತ್ರಿ ಮೂಡುಬಿದ್ರಿ ಆಳ್ವಾಸ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಆಳ್ವಾಸ್ ಸಮೂಹ ಸಂಸ್ಥೆಯ ಉದ್ಯೋಗಿ ಮೋಹನ್ ಭೋಪಯ್ಯ ಸೇರಿದಂತೆ 3ಗಂಡು 1ಹೆಣ್ಣು ಮಗಳು ಸಹಿತ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ. ಅವರ ಪಾರ್ಥಿವ ಶರೀರವನ್ನು ಮೂರ್ನಾಡಿನ ನಿವಾಸದಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಇರಿಸಲಾಗಿದ್ದು ಮಧ್ಯಾಹ್ನ 2 ಗಂಟೆಗೆ ಕೊಡವ ಸಮಾಜ ಮಡಿಕೇರಿಯ ಸ್ಮಶಾನದಲ್ಲಿ

ಮೂಡುಬಿದಿರೆ: ಹೈಮಾಸ್ಟ್ ದೀಪ ಲೋಕಾರ್ಪಣೆ

ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಪ್ರಾಂತ್ಯ ಗ್ರಾಮದ 12ನೇ ವಾರ್ಡಿನ ಹಳೆ ಪೊಲೀಸ್ ಠಾಣೆಯ ಬಳಿ ರೂ 9.50 ಲಕ್ಷ ಪುರಸಭಾ ನಿಧಿಯಿಂದ ಮಾಡಿರುವ ಅಭಿವೃದ್ಧಿ ಕಾಮಗಾರಿಗಳಾದ ರಸ್ತೆ ಅಗಲೀಕರಣ ಮತ್ತು ಇಂಟರ್ ಲಾಕ್ ಅಳವಡಿಕೆ, ಚರಂಡಿ ಹಾಗೂ ಹೈ ಮಾಸ್ಟ್ ದೀಪವನ್ನು ಶನಿವಾರ ಸಂಜೆ ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಪುರಸಭಾ ಉಪಾಧ್ಯಕ್ಷೆ ಸುಜಾತ ಶಶಿಕಿರಣ್, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಪುರಸಭಾ ಸದಸ್ಯರಾದ ಸ್ವಾತಿ

ವಿಕಲಚೇತನ ಫಲಾನುಭವಿಗಳಿಗೆ ಸಾಧನಾ ಸಲಕರಣೆ ವಿತರಣೆ

ಮೂಡುಬಿದಿರೆ: 2022-23 ನೇ ಸಾಲಿನ ತಾಲೂಕು ಪಂಚಾಯತ್ ಅನಿರ್ಬಂಧಿತ ಅನುದಾನದಡಿ 14,ಮಂದಿ ಫಲಾನುಭವಿಗಳಿಗೆ ದ್ವಿಚಕ್ರ ವಾಹನ, ವೀಲ್ ಚೆರ್ ಹಾಗೂ ಶ್ರವಣ ಸಾಧನಗಳನ್ನು ಮಾನ್ಯ ಶಾಸಕ ಉಮಾನಾಥ ಎ. ಕೋಟ್ಯಾನ್ ಅವರು ಶನಿವಾರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ವಿತರಿಸಿದರು.ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ದಯಾವತಿ ಈ ಸಂದರ್ಭದಲ್ಲಿದ್ದರು.