ಪೆಟ್ರೋಲ್, ಡ್ರಗ್, ವೆಫನ್ ಸೇರಿ ಮೂರು ಮಾಫಿಯಾಗಳು ಜಗತ್ತಿನ್ನು ಆಳುತ್ತಿದ್ದು, ಇದನ್ನು ಮೋದಿ ನೇತೃತ್ವದ ಸರ್ಕಾರ ದಿಟ್ಟತನದಿಂದ ಎದುರಿಸಿ ನಿಂತಿದೆ. ಜನರಲ್ಲಿ ರಾಷ್ಟ್ರ ಭಕ್ತಿಯ ಉದ್ದೀಪನದ ದೃಷ್ಟಿಯಿಂದ ತಿರಂಗ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದರೆ ಹೇಳಿದರು. ಅವರು ಪುತ್ತೂರು ಟೌನ್ ಬ್ಯಾಂಕ್ ನಲ್ಲಿ
ಪುತ್ತೂರು; ಎರಡು ಪ್ರಬಲ ರಾಜ್ಯಗಳ ಸಂಪರ್ಕದ ಕೊಂಡಿಯಾಗಿರುವ ಕಿರುಸೇತುವೆಯೊಂದು ಯಾರೂ ಕೇಳುವವರಿಲ್ಲದೆ ಅನಾಥಪ್ರಜ್ಞೆಯಿಂದ ಶಿಥಿಲಗೊಂಡು ಬಳಲುತ್ತಿದೆ. ಆರ್ಥಿಕ ಮತ್ತು ಶೈಕ್ಷಣಿಕವಾಗಿ ಬಲಾಡ್ಯವಾಗಿರುವ ಈ ರಾಜ್ಯಗಳ ನಡುವೆ ಈ ಕಿರುಸೇತುವೆಗೆ ಕಾಯಕಲ್ಪವಾಗದೆ ಇಲ್ಲಿ ಸಂಚರಿಸುವ ವಾಹನಗಳಿಗೆ ಮಾರಕ ಪ್ರದೇಶವಾಗಿ ಮಾರ್ಪಟ್ಟಿದೆ. ಸುಮಾರು 42 ವರ್ಷಗಳ ಹಿಂದೆ ನಿರ್ಮಿತವಾಗಿರುವ ಕಿರುಸೇತುವೆಯ ಅನಾಥ ಸ್ಥಿತಿ ಎರಡೂ ರಾಜ್ಯಗಳಿಗೆ ಅರ್ಥವಾಗಿಲ್ಲ. ಎರಡೂ ರಾಜ್ಯಗಳಿಗೆ ಆದಾಯ
ಪುತ್ತೂರು : ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕು ಎನ್ನುವ ಒತ್ತಾಯಗಳು ಊರ್ಜಿತದಲ್ಲಿರುವ ಸಮಯದಲ್ಲಿ ತುಳು ಭಾಷೆ, ಲಿಪಿಯಲ್ಲಿ ಹಲವಾರು ಕೃತಿಗಳು ಬರಲಾರಂಭಿಸಿದೆ. ನೇಪತ್ಯಕ್ಕೆ ಸರಿದಿದ್ದ ತುಳು ಲಿಪಿಯನ್ನು ಮತ್ತೆ ಪರಿಚಯಿಸುವ ಕಾರ್ಯ ಈಗಾಗಲೇ ನಡೆದಿದ್ದು, ಈ ಸಾಲಿಗೆ ಇನ್ನೊಂದು ಹೊಸ ಪ್ರಯತ್ನ ಸೇರ್ಪಡೆಗೊಂಡಿದೆ. ಭಗವದ್ಧೀತೆಯ 18 ಶ್ಲೋಕ ಮತ್ತು ಸಾರವನ್ನು ತುಳು ಲಿಪಿಯಲ್ಲಿ ಮತ್ತು ಕನ್ನಡ ಲಿಪಿಯ ಮೂಲಕ ತುಳುವಿನಲ್ಲಿ ಬರೆಯಲಾಗಿದ್ದು,
ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಎರಡು ಗ್ರಾ ಪಂ ವಾರ್ಡ್ಗಳಿಗೆ ನಡೆದ ಉಪ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು ಒಂದು ಕ್ಷೇತ್ರದ ಫಲಿತಾಂಶ ಪ್ರಕಟವಾಗಿದೆ. ಆರ್ಯಾಪು ಕ್ಷೇತ್ರದಲ್ಲಿ ಪುತ್ತಿಲ ಪರಿವಾರದಿಂದ ಕಣಕ್ಕಿಳಿದಿದ್ದ ಸುಬ್ರಹ್ಮಣ್ಯ ಬಲ್ಯಾಯ ಅವರು ವಿಜಯಿಯಾಗಿದ್ದಾರೆ. ಬಲ್ಯಾಯ ಅವರು ತಮ್ಮ ಹತ್ತಿರದ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಪುರುಷೋತ್ತಮ ಪ್ರಭು ಅವರನ್ನು ಸೋಲಿಸಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿ ರುಕ್ಮಾ ನಾಯ್ಕ
ಸಾಕಷ್ಟು ಕೃಷಿ ಜಾಗವಿದ್ದರೂ ಕೃಷಿಯಲ್ಲಿ ತೊಡಗಿಕೊಳ್ಳಲು ಹಿಂದೇಟು ಹಾಕುವವರೇ ಹೆಚ್ಚು. ಆದರೆ ನಗರದ ಮಧ್ಯದಲ್ಲೇ ಇರುವ ಮಹಿಳೆ ಕೃಷಿ ಭೂಮಿ ಇಲ್ಲದಿದ್ದರೂ ತನ್ನ ಮನೆಯ ಟಾರೇಸ್ ನಲ್ಲಿ ಉತ್ತಮ ಕೃಷಿ ಬೆಳೆಸಿ ಸೈ ಎನಿಸಿಕೊಂಡಿದ್ದಾರೆ. ಅದರಲ್ಲೂ ಮಧುಮೇಹ ನಿಯಂತ್ರಣಕ್ಕೆ ಪರಿಣಾಮಕಾರಿಯಾದ ಔಷಧಿಯಂತೆ ಕೆಲಸ ಮಾಡುವ ಹಣ್ಣುಗಳ ಗಿಡಗಳ ಬೆಳೆಗೇ ಈಕೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ನೆಲದಲ್ಲೇ ಬೆಳೆಯಲು ಹರ ಸಾಹಸ ಪಡಬೇಕಾದ ಹಣ್ಣು ಮತ್ತು ತರಕಾರಿ ಬೆಳೆಗಳನ್ನು ಬೆಳೆಯುವ
ಪುತ್ತೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ 275ರ ಸಂಪ್ಯ ಅಕ್ಷಯ ಕಾಲೇಜು ಬಳಿ ಹೊಸ ಮೋರಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ನಿರ್ಮಾಣದ ವೇಳೆ ರಸ್ತೆ ಮಧ್ಯೆ ಅಪಾಯಕಾರಿ ಹೊಂಡ ನಿರ್ಮಾಣವಾಗಿದೆ. ಹೊಂಡ ಮುಚ್ಚುವಂತೆ ಹೆದ್ದಾರಿ ಇಲಾಖೆಗೆ ಸಾರ್ವಜನಿಕರು ಮನವಿ ಮಾಡಿದ್ದರೂ ಹೊಂಡ ಮುಚ್ಚಿರಲಿಲ್ಲ. ಈ ನಡುವೆ ವಾಹನಗಳು ಅಪಘಾತ ಉಂಟಾಗುವ ಸಂಭವ ಇರುವ ಕಾರಣ ಸಂಪ್ಯ ಬೂತ್ ಅಧ್ಯಕ್ಷರಾದ ಶಾಫಿ ಎಂಬವರು ಶಾಸಕರಿಗೆ ದೂರು ಸಲ್ಲಿಸಿದ್ದರು. ಶಾಸಕರ ಸೂಚನೆಯಂತೆ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕ ಇವರ ಆಶ್ರಯದಲ್ಲಿ ಬಿಲ್ಲವ ವಧು-ವರಾನ್ವೇಷಣೆ ಕಾರ್ಯಕ್ರಮವು ಜುಲೈ 9ರಂದು ಪುತ್ತೂರು ಬಪ್ಪಳಿಗೆಯ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಜುಲೈ 9ರ ಭಾನುವಾರದಂದು ಬೆಳಿಗ್ಗೆ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಡೆಂಜಿ ಅವರು ಉದ್ಘಾಟಿಸಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವಂತಹ ಉತ್ತಮ ನಿರ್ಣಯ ಕೈಗೊಂಡಿರುವುದು ಸಂತೋಷದ ವಿಚಾರವಾಗಿದ್ದು,ಇದಕ್ಕಿಂತಹ ಉತ್ತಮ ಬೇರೊಂದಿಲ್ಲ. ಹೀಗೆಂದು ಹೇಳಿದರು ನಿವೃತ್ತ ಏರ್ ವೇಸ್ ಮಾರ್ಷಲ್ ರಮೇಶ್ ಕಾರ್ಣಿಕ್. ಪುತ್ತೂರಿನ ವಿದ್ಯಾಮಾತಾ ಅಕಾಡೆಮಿ ವತಿಯಿಂದ ಭಾನುವಾರ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಭಾರತೀಯ ಸೇನೆಗೆ ಸೇರುವ ಅಭ್ಯರ್ಥಿಗಳಿಗೆ ಗ್ರೌಂಡ್ ತರಬೇತಿ ಹಾಗೂ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತೀಯ ಸೇನೆಗೆ ಸೇರುವುದರಿಂದ ಅವರ
ಪುತ್ತೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈಯವರನ್ನು ಅವರ ಕಚೇರಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಶಾಸಕರು ಅಧ್ಯಕ್ಷರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಪತ್ರಕರ್ತರ ಕಾರ್ಯಚಟುವಟಿಕೆಯ ಬಗ್ಗೆ ಅಧ್ಯಕ್ಷರು ಶಾಸಕರಿಗೆ ವಿವರಿಸಿದರು. ಈ ಸಂದರ್ಭದಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಕೇಶ್, ಉಪಾಧ್ಯಕ್ಷರುಗಳಾದ ಅಜಮಾಡ ರಮೇಶ್ ಕುಟ್ಟಪ್ಪ, ಭವಾನಿ
ಪುತ್ತೂರು: ಆಶ್ರಯ ಮನೆಯ ಆಸೆಯಲ್ಲಿ, ಇದ್ದ ಮನೆಯನ್ನೂ ಕೆಡವಿ ಬೀದಿಗೆ ಬಿದ್ದ ಬಡ ಕುಟುಂಬವೊಂದು ಪುತ್ತೂರು ತಾಲೂಕಿನ ಮುಂಡೂರು ಗ್ರಾಮಪಂಚಾಯತ್ ವ್ಯಾಪ್ತಿಯ ಕಡ್ಯಾ ಎಂಬಲ್ಲಿದೆ. ಮನೆ ಇಲ್ಲದ ಕಾರಣ ಕಳೆದ ಮೂರು ತಿಂಗಳಿನಿಂದ ಈ ಕುಟುಂಬ ಪ್ಲಾಸ್ಟಿಕ್ ಹೊದಿಕೆಯ ಗುಡಿಸಲಲ್ಲೇ ಬದುಕಬೇಕಾದ ಅನಿವಾರ್ಯ ಸ್ಥಿತಿಯಲ್ಲಿದೆ. ಕಡ್ಯ ಗ್ರಾಮದ ಮೋನಪ್ಪ ಎಂಬವರ ಕುಟುಂಬ ಆಶ್ರಯ ಮನೆಗಾಗಿ ಕಳೆದ ವರ್ಷ ಗ್ರಾಮ ಪಂಚಾಯತ್ಗೆ ಅರ್ಜಿ ಸಲ್ಲಿಸಿತ್ತು. ಇತ್ತೀಚೆಗಷ್ಟೇ ಮೋನಪ್ಪ



























