ಅಪ್ರಾಪ್ತ ವಯಸ್ಸಿನ ಪುತ್ರನಿಗೆ ದ್ವಿಚಕ್ರ ವಾಹನ ಚಲಾಯಿಸಲು ನೀಡಿದ್ದ ಪೋಷಕರಿಗೆ 25 ಸಾವಿರ ರೂ. ದಂಡ ವಿಧಿಸಿದ ಘಟನೆ ಸುಳ್ಯದಲ್ಲಿ ನಡೆದಿದೆ. ಸುಳ್ಯ ಪರಿಸರದಲ್ಲಿ ಬಾಲಕ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ವೇಳೆ ಸುಳ್ಯ ಪೊಲೀಸರು ತಡೆ ಹಿಡಿದು ಪ್ರಕರಣ ದಾಖಲಿಸಿದ್ದರು. ಸುಳ್ಯ ನ್ಯಾಯಾಲಯ ಬಾಲಕನ ಪೋಷಕರಿಗೆ 25 ಸಾವಿರ ರೂ. ದಂಡ ವಿಧಿಸಿದೆ. ಬಾಲಕನಿಗೆ ವಾಹನ ಚಾಲನೆ
ಕೆವಿಜಿ ಪಾಲಿಟೆಕ್ನಿಕ್ ನ ರಾಷ್ಟ್ರೀಯ ಸೇವಾ ಯೋಜನೆಯ ಹಿರಿಯ ವಿದ್ಯಾರ್ಥಿಗಳ ಸಂಘ “ಎನ್.ಎಸ್.ಎಸ್.ಸೇವಾ ಸಂಗಮ ಟ್ರಸ್ಟ್ (ರಿ.)” ಯ ದಶಮಾನೋತ್ಸವದ ಅಂಗವಾಗಿ ಮಹಿಳಾ ದಿನಾಚರಣೆ ಮತ್ತು” ನಾನೂ ನಾಯಕಿ’ ಎಂಬ ವಿಷಯದ ಬಗ್ಗೆ ತರಬೇತಿ ಕಾರ್ಯಕ್ರಮವು ಮಂಡೆಕೋಲು ಗ್ರಾಮ ಪಂಚಾಯತ್ ಮತ್ತು ಗ್ರಂಥಾಲಯದ ಸಹಯೋಗದೊಂದಿಗೆ ನಡೆಯಿತು. ಎನ್ಎಸ್ಎಸ್ ಸೇವಾ ಸಂಗಮ ಟ್ರಸ್ಟ್ ನ ಗೌರವಾಧ್ಯಕ್ಷ ಬಾಲಕೃಷ್ಣ ಬೊಳ್ಳೂರು ಅವರ ಅಧ್ಯಕ್ಷತೆಯಲ್ಲಿ ನಡೆದ
ಸುಳ್ಯ:ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ಮಾ.15ರಿಂದ 18ರ ತನಕ ನಡೆಯಲಿದೆ.4 ದಿನದ ದೈವಂಕಟ್ಟು ಮಹೋತ್ಸವಕ್ಕೆ ಎಲ್ಲಾ ಸಿದ್ಧತೆಗಳು ಅಂತಿಮ ಹಂತದಲ್ಲಿದೆ ಎಂದು ಮಹೋತ್ಸವ ಸಮಿತಿಯ ಮಹೋತ್ಸವ ಸಮಿತಿಯ ಅಧ್ಯಕ್ಷ ಸುಧಾಕರ ರೈ ಹಾಗೂ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಪವಿತ್ರನ್ ಗುಂಡ್ಯ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ. ಅರಂಬೂರು ವಯನಾಟ್ ಕುಲವನ್ ದೈವಸ್ಥಾನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ
ಸುಳ್ಯ: ಸದಾ ಒತ್ತಡದಲ್ಲಿ ಕೆಲಸ ಮಾಡುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿ ದೇಹ ಮತ್ತು ಮನಸ್ಸು ಸದಾ ಉಲ್ಲಸಿತವಾಗಿರಿಸಲು ಕ್ರೀಡೆ ಸಹಕಾರಿ ಎಂದು ಬೀಜದಕಟ್ಟೆ ಸಜ್ಜನ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಉಮ್ಮರ್ ಬೀಜದಕಟ್ಟೆ ಹೇಳಿದ್ದಾರೆ. ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ವತಿಯಿಂದ ಸುಳ್ಯ ಪ್ರೆಸ್ ಕ್ಲಬ್ ಸದಸ್ಯರಿಗಾಗಿ ಹಮ್ಮಿಕೊಂಡ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವನ್ನು ಉದ್ಘಾಟಿಸಿ ಅವರು
ಕಳೆದ 16 ವರುಷಗಳಿಂದ ಹದೆಗೆಟ್ಟಿರುವ ಬೆಳ್ಳಾರೆ ಗ್ರಾಮದ ಬೀಡು-ಪಾಟಾಜೆ ರಸ್ತೆ ಯನ್ನು ಡಾಮರೀಕರಣಗೊಳಿಸುವಂತೆ ಆಗ್ರಹಿಸಿ ಬೆಳ್ಳಾರೆಯ ಮುಖ್ಯ ಪೇಟೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಶೀಘ್ರದಲ್ಲೇ ನಮ್ಮ ಬೀಡು, ಪಾಟಾಜೆ ರಸ್ತೆ ದುರಸ್ತಿಗೊಳಿಸುವ ಭರವಸೆಯನ್ನು ಸರಕಾರ ಹಾಗೂ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಕೊಡದೇ ಹೋದಲ್ಲಿ ಇಲ್ಲಿನ ಎಲ್ಲಾ ನಿವಾಸಿಗಳು ರಸ್ತೆಗೆ ಇಳಿದು ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ. ಈ
ಸುಖ ಯಾವುದನ್ನು ಸೃಷ್ಟಿಸುವುದಿಲ್ಲ ಸತತ ಪರಿಶ್ರಮದಿಂದ ಸಾಹಿತ್ಯ ಸೃಷ್ಟಿಯಾಗುತ್ತದೆ. ಆ ನಿಟ್ಟಿನಲ್ಲಿ ಹಳ್ಳಿಯ ಬೇರುಗಳು ಸಾಹಿತ್ಯವನ್ನು ಸೃಷ್ಟಿಸುತ್ತವೆ ಎಂದು ನಿವೃತ್ತ ಪ್ರಾಧ್ಯಾಪಕರಾದ ಡಾ. ನರೇಂದ್ರ ರೈ ದೇರ್ಲ ಅಭಿಪ್ರಾಯಪಟ್ಟರು. ಅವರು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ಸಂಘವು ಕನ್ನಡ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ಹಮ್ಮಿಕೊಂಡ “ಬರವಣಿಗೆ ಮಾಧ್ಯಮ ಶಿಬಿರ”ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ
ದೇವಚಳ್ಳ : ಶಾಲಾ ರಂಗ ಮಂದಿರ ಮತ್ತು ಸಭಾಭವನ ನಿರ್ಮಾಣಕ್ಕೆ ಮಂಜೂರಾದ ರೂ 1,50,000/- ಅನುದಾನದ ಮಂಜೂರಾತಿ ಪತ್ರ ವಿತರಣೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ದೇವಚಳ್ಳ ಗ್ರಾಮದ ದ ಕ ಜಿ ಪಂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಂಗಮಂದಿರ ಮತ್ತು ಸಭಾಭವನ ನಿರ್ಮಾಣಕ್ಕೆ ರೂ. 1,50,000/ ಅನುದಾನ ಮಂಜೂರು ಆಗಿದ್ದು, ಇದರ ಮಂಜೂರಾತಿ ಪತ್ರವನ್ನು ಸುಳ್ಯ ತಾಲೂಕಿನ ಶ್ರೀ ಕ್ಷೇ ಧ ಗ್ರಾ ಯೋಜನೆಯ ಯೋಜನಾಧಿಕಾರಿಯವರಾದ ಮಾಧವ ಗೌಡರವರು ವಿತರಣೆ ಮಾಡಿದರು.ಈ ಸಂದರ್ಭದಲ್ಲಿ ಯೋಜನಾಧಿಕಾರಿರವರು ಮಾತನಾಡುತ್ತ, ಯೋಜನೆಯ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಸುಳ್ಯ: ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿ ನೂತನ ಅಧ್ಯಕ್ಷರಾಗಿ ಕೆ.ಸಿ.ಸದಾನಂದ ಹಾಗೂ ಉಪಾಧ್ಯಕ್ಷರಾಗಿ ದಿನೇಶ್ ಮಡಪ್ಪಾಡಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಇಂದು ನಡೆದ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದೇ ನಾಮಪತ್ರ ಸಲ್ಲಿಕೆಯಾದ ಕಾರಣ ಅವಿರೋಧ ಆಯ್ಕೆ ನಡೆಯಿತು. ಸಹಕಾರ ಇಲಾಖೆಯ ಶೋಭಾ ಎನ್.ಎಸ್. ಚುನಾವಣಾಧಿಕಾರಿಯಾಗಿದ್ದರು.ನಿರ್ದೇಶಕರಾದ ಪಿ.ಸಿ.ಜಯರಾಮ, ಎ.ವಿ.ತೀರ್ಥರಾಮ, ಜಾಕೆ ಸದಾನಂದ ಗೌಡ, ಚಂದ್ರಾ ಕೋಲ್ಚಾರ್,
ಸುಳ್ಯದ ವ್ಯಕ್ತಿತ್ವ ವಿಕಸನ ತರಬೇತುದಾರರು, ಹಾಗೂ ಎನ್ನೆಂಸಿಯ ಉಪನ್ಯಾಸಕರೂ ಆದ ಡಾ. ಅನುರಾಧಾ ಕುರುಂಜಿ ಯವರು ಕರ್ನಾಟಕ ರಾಜ್ಯಮಟ್ಟದ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿರುತ್ತಾರೆ. ಕರ್ನಾಟಕ ರಾಜ್ಯ ಎನ್ ಎಸ್ ಎಸ್ ಕೋಶ ಮತ್ತು .ಮಂಗಳೂರಿನ ಯೇನೆಪೋಯ ಡೀಮ್ಡ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಫೆ 3 ರಿಂದ 7 ರವರೆಗೆ ಏನೇಪೋಯ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ನಡೆದ ಶಿಬಿರದಲ್ಲಿ ರಾಜ್ಯದ ವಿವಿಧ ಪದವಿ,
ಕೆಳ ಮತ್ತು ಮಧ್ಯಮ ವರ್ಗದ ಜನರ ಏಳಿಗೆಯ ದೃಷ್ಠಿಯಲ್ಲಿ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿರುವುದು ಸ್ವಾಗತಾರ್ಹ. ಅಟಲ್ ಟಿಂಕರ್ ಲ್ಯಾಬ್‌ಗಳನ್ನು ಶಾಲೆಗಳಿಗೆ ವಿಸ್ತರಿಸಿರುವುದು, ಆದಾಯ ತೆರಿಗೆ ಪಾವತಿಯ ಮಿತಿಯನ್ನು 12 ಲಕ್ಷ ರೂ.ಗೆ ಏರಿಸಿರುವುದು, ಕಿಸಾನ್ ಕೆಡಿಟ್‌ನ ಸಾಲದ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಏರಿಸಿರುವುದು ಜೊತೆಗೆ ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಸೆಂಟರ್‌ಗಳನ್ನು ತೆರೆಯುವುದಲ್ಲದೆ ಜೀವರಕ್ಷಕ ಔಷಧಗಳಿಗೆ ಜಿಎಸ್‌ಟಿಯಿಂದ