ದಾರಿ ಕೇಳುವ ನೆಪದಲ್ಲಿ ವೃದ್ಧೆಯೋವ೯ರ ಕುತ್ತಿಗೆಯಿಂದ 3-4 ಪವನಿನ ಕರಿಮಣಿ ಸರವನ್ನು ಎಗರಿಸಿದ ಘಟನೆ ಬೆಳುವಾಯಿ ಸಮೀಪ ಸೋಮವಾರ ನಡೆದಿದೆ.ಬೆಳುವಾಯಿ ಗ್ರಾಮದ ಕಾಯಿದೆ ಮನೆಯ ನಿವಾಸಿ ಎಪ್ಪತ್ತರ ಹರೆಯದ ಇಂದಿರಾ ಅವರು ಸೋಮವಾರದಂದು ತನ್ನ ಅಳಿಯ ಭಾಸ್ಕರ ಅವರ ಗೃಹಪ್ರವೇಶ ಮುಗಿಸಿಕೊಂಡು ಬೆಳುವಾಯಿ- ಕರಿಯಣಂಗಡಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದರು.ಈ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಒಳಪಟ್ಟ ಸ್ಥಳೀಯ ಅಭಯ ಆಂಜನೇಯ ಗುಡಿ ದೇವಸ್ಥಾನದಲ್ಲಿ ಕಳವಾಗಿರುವ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾದ 24 ಗಂಟೆಯೊಳಗೆ ಕಳ್ಳನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಧಾರವಾಡ ಮೂಲದ ವೀರಣ್ಣ ಗೌಡ (26ವ) ಕಳ್ಳತನ ಪ್ರಕರಣದಲ್ಲಿ ಬಂಧಿತನಾದ ಆರೋಪಿ.ದೇಗುಲದ ಪಾರ್ಕಿಂಗ್ ಜಾಗದಲ್ಲಿ ಸುತ್ತಾಡುತ್ತಿದ್ದ ಈತನನ್ನು ಎಸ್.ಐ ಕಾರ್ತಿಕ್.ಕೆ ನೇತೃತ್ವದ ಪೊಲೀಸರ ತಂಡ ಪತ್ತೆ ಹಚ್ಚಿದ್ದಾರೆ. ಜಾಗವೊಂದರ ಬಳಿ
ಮಂಗಳೂರಿನ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆ ಕಣಿಯ ಮನೆಯೊಂದರಲ್ಲಿ ಸೋಮವಾರ ರಾತ್ರಿ ಕಳವು ನಡೆದಿದೆ. ಮನೆಮಂದಿ ಮಲಗಿದ್ದಾಗ ಕಿಟಕಿ ಮುರಿದು ಚಿನ್ನಾಭರಣ ಕಳವು ಮಾಡಲಾಗಿದೆ. ಅಲ್ಲದೆ ಕಳ್ಳರು ಕಾರನ್ನು ಕೂಡ ಕಳವು ಮಾಡಿದ್ದಾರೆಂದು ತಿಳಿದುಬಂದಿದೆ. ಕಳೆದ ಶನಿವಾರ ನಗರದ ಕೋಡಿಕಲ್ ಬಳಿ ಕಳ್ಳತನ ನಡೆದಿತ್ತು. ಚಡ್ಡಿಗ್ಯಾಂಗ್ ಆ ಕೃತ್ಯ ನಡೆಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ಅದೇ ತಂಡ ಕೋಟೆಕಣಿಯಲ್ಲಿಯೂ ಕೃತ್ಯ ಎಸಗಿದೆ ಎಂದು ಅಂದಾಜಿಸಲಾಗಿದೆ.
ದ. ಕ ಜಿಲ್ಲೆಯ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪಾಂಬಾರ್ ಎಂಬಲ್ಲಿ ಜನವರಿ 11ರಂದು ಮಧ್ಯಾಹ್ನ ಸುಮಾರು ೧-೦೦ ಗಂಟೆಯ ಸಮಯಕ್ಕೆ ಮಹಿಳೆಯೊಬ್ಬರಿಂದ ಚಿನ್ನದ ಸರವನ್ನು ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಬಗ್ಗೆ ಬೆಳ್ಳಾರೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ಪತ್ತೆಯ ಬಗ್ಗೆ ರಚಿಸಲಾದ ವಿಶೇಷ ತನಿಖಾ ತಂಡವು ಸುಲಿಗೆ ಮಾಡಿದ ನೌಶಾದ್ ಬಿ ಎ ನರಿಮೊಗರು, ಸುಲಿಗೆಗೆ ಸಹಕರಿಸಿದ ಚಂದ್ರಮೋಹನ್ ಉದ್ಯಾವರ, ಎಂಬವರನ್ನು
ಬೈಂದೂರು ತಾಲೂಕಿನ ಗಂಗೊಳ್ಳಿ, ಮ್ಯಾಂಗನೀಸ್ ರೋಡ್ ಬಳಿ ಲಕ್ಷಾಂತರ ರೂಪಾಯಿ ಸೀಸ ಕಳ್ಳತನ ಮಾಡಿದ ಘಟನೆ ನಡೆದಿದೆ. ಅಕ್ಷಯ ಖಾರ್ವಿ ಎಂಬವರಿಗೆ ಸೇರಿದ ಅಂಗಡಿಯಾಗಿದ್ದು, ಕಳ್ಳಲು ನುಗ್ಗಿ ಲಕ್ಷಾಂತ ರೂಪಾಯಿ ಮೌಲ್ಯದ ಸೀಸ ಎಗರಿಸಿ ಪರಾರಿಯಾಗಿದ್ದರು. ಕಳ್ಳರ ಕೈಚಳಕದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿಸಿ ಕ್ಯಾಮೆರಾ ದೃಶ್ಯ ಆಧರಿಸಿ ಪೊಲೀಸ್ ಕಾರ್ಯಾಚರಣೆಯಲ್ಲಿ ಓರ್ವನನ್ನು ಬಂಧಿಸಲಾಗಿದೆ. ಕಳ್ಳತನದಲ್ಲಿ ಭಾಗಿಯಾಗಿದ್ದ ಅಶ್ಫಕ್ ನನ್ನು ಗಂಗೊಳ್ಳಿ ಪೋಲಿಸರು
ಕುಂದಾಪುರ : ಜಿಲ್ಲೆಯ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾದ ಆನೆಗುಡ್ಡೆ ಶ್ರೀವಿನಾಯಕ ದೇವಳದಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಕುಂದಾಪುರ ಪೊಲೀಸ್ ರು ಭೇಧಿಸಿದ್ದಾರೆ. ಬೀಬಿಜಾನ್ ಶೇಖ್ (58) ಮತ್ತು ಪಾರವ್ವ ಸಿರಗಹಳ್ಳಿ (54) ಕಳ್ಳತನ ಪ್ರಕರಣದಲ್ಲಿ ಬಂಧಿತರು. ಲೋಕೇಶ್ ಮಂಜುನಾಥ ನಾಯ್ಕ ಅವರು ಸುಮಾರು 53.900 ಗ್ರಾಂ ತೂಕದ ಚಿನ್ನದ ಕರಿಮಣಿ ಸರ ಹಾಗೂ ಸುಮಾರು 4 ಗ್ರಾಂ ತೂಕದ ಚಿನ್ನದ ಉಂಗುರವನ್ನು ಖರೀದಿ ಮಾಡಿ ಪರ್ಸಿನಲ್ಲಿಟ್ಟು, ಪತ್ನಿಯ ವ್ಯಾನಿಟಿ
ತೆಂಕ ಎರ್ಮಾಳು ಜಂಕ್ಷನ್ ಬಳಿಯ ಬಾಡಿಗೆ ಮನೆಯೊಂದಕ್ಕೆ ಕನ್ನ ಹಾಕಿದ ಕಳ್ಳರು ನಗ, ನಗದು, ಬಟ್ಟೆ, ಪಾತ್ರೆ ಸಹಿತ ಅಕ್ಕಿಯನ್ನೂ ಕದ್ದೋಯ್ಯದಿದ್ದಾರೆ. ಹೆದ್ದಾರಿ ಪಕ್ಕದ ಬಾಡಿಗೆ ರೂಮ್‌ನಲ್ಲಿ ಹಾವೇರಿ ಮೂಲದ ಮಾಸಪ್ಪ ಎಂಬವರ ಕುಟುಂಬ ವಾಸವಾಗಿದ್ದು, ದಸರಾ ಹಬ್ಬಕ್ಕಾಗಿ ಕಳೆದ ಹದಿನೈದು ದಿನಗಳ ಹಿಂದೆ ರೂಮ್‌ಗೆ ಬೀಗ ಹಾಕಿ ಊರಿಗೆ ಹೋಗಿದ್ದು, ಭಾನುವಾರ ಮುಂಜಾನೆ ೫-೩೦ರ ಸುಮಾರಿಗೆ ರೂಮ್ ಕಡೆಗೆ ಬಂದಾಗ ಮಂದ ಬೆಳಕಿನಲ್ಲಿ ಮನೆಮಂದೆ ವ್ಯಕ್ತಿಯೊಬ್ಬರು ನಿಂತಿದ್ದು
ಪುತ್ತೂರು : ಕಬಕ ಪೇಟೆಯಲ್ಲಿ ನ.15 ರ ರಾತ್ರಿ ಸರಣಿ ಕಳ್ಳತನ ನಡೆದಿದೆ. ಕಬಕ ರೋಟರಿ ಕಟ್ಟಡ ದಲ್ಲಿರುವ ಹೋಟೆಲ್ ವಿಜಿ ಹಾಗೂ ಬ್ರೈಟ್ ಕಾಂಪ್ಲೆಕ್ಸ್ ನಲ್ಲಿರುವ ಕಬಕ ಜನರಲ್ ಸ್ಟೋರ್ ನಿಂದ ನಗದು ಮತ್ತು ಸೊತ್ತುಗಳು ಕಳವಾಗಿದೆ. ರೋಲಿಂಗ್ ಶಟರ್ ನ ಬೀಗ ಮುರಿದು ಒಳ ನುಗ್ಗಿದ ಕಳ್ಳರು ನಗದು ಹಾಗೂ ಚಿಲ್ಲರೆ ಸಾಮಗ್ರಿಗಳನ್ನು ಕಳವು ಗೈದಿರುವುದಾಗಿ ತಿಳಿದುಬಂದಿದೆ. ಸ್ಥಳೀಯ ಗ್ಯಾರೇಜಿಗೂ ಕಳ್ಳರು ನುಗ್ಗಿದ್ದಾರೆಂದು ತಿಳಿದು ಬಂದಿದೆ. ಪುತ್ತೂರು ನಗರ ಠಾಣಾ ಪೊಲೀಸರು
ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಬಬ್ಬು ಸ್ವಾಮಿ ದೈವಸ್ಥಾನದ ಪಕ್ಕದ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಮನೆಯಲ್ಲಿದ್ದು 12 ಸಾವಿರ ನಗದು ಮತ್ತು ಎರಡು ಗ್ರಾಂ ಚಿನ್ನದ ಆಭರಣ ಕದ್ದೊಯ್ದ ಘಟನೆ ನಡೆದಿದೆ. ಉಚ್ಚಿಲದ ನಿವಾಸಿ ಅಬ್ದುಲ್ ಮಲೀಕ್‌ನವರ ಬೈತುಲ್ ಅಲ್ ಸಫಾ ಮನೆಗೆ ಹಿಂಬಾಗಿಲ ಚಿಲಕ ಮುರಿದು ಒಳಪ್ರವೇಶಿಸಿದ ಕಳ್ಳರು, ತಳ ಮಹಡಿ ಮತ್ತು ಮೇಲ್ಮಹಡಿಯ ಎರಡೂ ಕಡೆಗಳ ಬೀಗ ಮುರಿದು ಒಳ ನುಗ್ಗಿದ್ದಾರೆ. ಬೀರುವಿನಲ್ಲಿದ್ದ 12 ಸಾವಿರ ರುಪಾಯಿ ನಗದು ಹಾಗೂ 2ಗ್ರಾಂ
ಮಂಗಳೂರಿನ ಯೆಯ್ಯಾಡಿಯ ಬಾರೆಬೈಲ್‌ನಲ್ಲಿ ನಡೆದು ಹೋಗುತ್ತಿದ್ದ ವಿ೪ನ್ಯೂಸ್‌ನ ಪತ್ರಕರ್ತೆ ಕಾವ್ಯ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ದುಷ್ಕರ್ಮಿಯೋರ್ವ ಎಳೆದು ಪರಾರಿಯಾದ ಘಟನೆ ನಡೆದಿದೆ. ಶುಕ್ರವಾರ ರಾತ್ರಿ ವೇಳೆ ಕಚೇರಿಯಿಂದ ಮನೆಗೆ ತೆರಳುವಾಗ ಈ ಘಟನೆ ಸಂಭವಿಸಿದೆ. ದುಷ್ಕರ್ಮಿಯೋರ್ವ ಬೈಕ್‌ನಲ್ಲಿ ಆಗಮಿಸಿ, ಆಕೆಯ ಕುತ್ತಿಯಲ್ಲಿದ್ದ ಚಿನ್ನದ ಸರವನ್ನ ದೋಚಿ ಪರಾರಿಯಾಗಿದ್ದಾನೆ. ಸರವನ್ನು ಎಳೆಯುವ ಸಂದರ್ಭದಲ್ಲಿ ರಸ್ತೆಗೆ ಉರುಳಿ ಬಿದ್ದು