ಕುಂದಾಪುರ: ಕೆಲವು ದಿನಗಳ ಹಿಂದೆ ಸತ್ತ ತಿಮಿಂಗಲ ತ್ರಾಸಿ- ಮರವಂತೆ ಕಡಲತೀರದಲ್ಲಿ ಹೆದ್ದಾರಿ ಬದಿಯ ದಡದಲ್ಲಿ ಬಿದ್ದಿದೆ. ಬೆಳಗ್ಗಿನಿಂದಲೇ ತಿಮಿಂಗಿಲ ಕೊಳೆತು ನಾರುತ್ತಿದ್ದರೂ ಇದುವರೆಗೆ ಪ್ರವಾಸೋದ್ಯಮ ಇಲಾಖೆಯಾಗಲೀ ಮೀನುಗಾರಿಕಾ ಇಲಾಖೆಯಾಗಲೀ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲದಿರುವುದು ಹೆದ್ದಾರಿ ಪ್ರಯಾಣಿಕರು ಹಾಗೂ ಪ್ರವಾಸಿಗರ ಆಕ್ರೋಶಕ್ಕೆ ಕಾರಣವಾಗಿದೆ.
ನವರಾತ್ರಿಯ ಅಂಗವಾಗಿ ವಿ4 ನ್ಯೂಸ್ ಉಡುಪಿ ವತಿಯಿಂದ ನಿಕ್ಸ್ ಪ್ಯೂರ್ ಸ್ಪೈಸಸ್ & ಮಸಾಲಾಸ್ ಅರ್ಪಿಸುವ “ನಾದಾರ್ಚನೆ” ಸಪ್ತ ಸ್ವರಗಳಲ್ಲಿ ನವ ವೈಭವ, ಖ್ಯಾತ ಹಾಗೂ ಉದಯೋನ್ಮುಖ ಗಾಯಕರಿಂದ ಸಂಗೀತ ಗೋಷ್ಠಿ ಕಾರ್ಯಕ್ರಮವು ಉಡುಪಿಯ ರಿದ್ಧಿ ಕ್ರಿಯೇಷನ್ಸ್ ಸಿನಿ ಸ್ಟುಡಿಯೋದಲ್ಲಿ ಜರುಗಿತ್ತು.ಇದರ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕøತ ಶ್ರೀ ಟಿ. ರಂಗ ಪೈ ಮುಖ್ಯ ಅತಿಥಿಯಾಗಿ ಆಗಮಿಸಿ, ದೀಪ ಬೆಳಗಿಸುವ ಮೂಲಕ
ಕಾರ್ಕಳ: ನಗರದ ಮಂಗಳೂರು ರಸ್ತೆ ಅಭಿವೃದ್ಧಿಯ ಕುರಿತು ಕಾರ್ಕಳ ಪುರಸಭೆ ನಿರ್ಲಕ್ಷಿಸಿದ ಪರಿಣಾಮವಾಗಿ ರಸ್ತೆ ಪೂರ್ತಿ ಹೊಂಡ ಗುಂಡಿಗಳು ತೆರದುಕೊಂಡು ವಾಹನ ಸಂಚಾರಕ್ಕೆ ಅಯೋಗ್ಯವೆನಿಸಿದೆ. ಇದರ ಕುರಿತು ಆಡಳಿತಕ್ಕೆ ಎಚ್ಚರಿಕೆಯ ಪ್ರಯತ್ನಿಸಿದರೆ ಆಡಳಿರೂಢ ಪಕ್ಷವು ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನದೋಂದಿಗೆ ರಾಜಕೀಯಗೊಳಿಸುತ್ತಿದೆ ಎಂದು ಪುರಸಭಾ ಸದಸ್ಯ ಶುಭದರಾವ್ ವಾಗ್ದಾಳಿ ನಡೆಸಿದರು. ಭವಾನಿ ಮಿಲ್‍ನಿಂದ ಮೂರು ಮಾರ್ಗದ ತನಕ ವರೆಗಿನ ಮಂಗಳೂರು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಬೈಂದೂರು ವಲಯ ವತಿಯಿಂದ ನಾವು ಕಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾವುಂದ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಾನಕಿ ವಹಿಸಿದ್ದರು.ಬೈಂದೂರು ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು ಶುಭ ಹಾರೈಸಿದರು. ಸುಮಾರು 10
ಕಾರ್ಕಳ: ಮುಖ್ಯ ಬಸ್ ನಿಲ್ದಾಣದಲ್ಲಿ ಸುಮಾರು ಎರಡು ವರ್ಷಗಳ ಹಿಂದೆ ಮಾನ್ಯ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿಯಿಂದ ಪ್ರಯಾಣಿಕರಿಗೆ ಸುಮಾರು ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ಕುಡಿಯುವ ಶುದ್ಧ ನೀರಿನ ಘಟಕದ ವ್ಯವಸ್ಥೆಯನ್ನು ಮಾಡಿರುತ್ತಾರೆ ಆದರೆ ಇದನ್ನ ಅಳವಡಿಸಿದ ಒಂದು ತಿಂಗಳ ಒಳಗೆ ಕೆಟ್ಟು ಹೋಗಿ ಇದು ಯಾರಿಗೂ ಬೇಡವಾದ ಘಟಕವಾಗಿದೆ. ಈ ನಿಟ್ಟಿನಲ್ಲಿ ನಾವು ಹಲವಾರು ಬಾರಿ ಪುರಸಭೆಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತಂದರು ನಮಗೂ ಈ ಸಮಸ್ಯೆಗೂ ಯಾವುದೇ
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾಪು ಪುರಸಭೆ, ಡೇ ನಲ್ಮ್ ಯೋಜನೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಪು, ಶ್ರೀ ದೇವಿ ಸ್ಪೋರ್ಟ್ ಮತ್ತು ಕಲ್ಟರಲ್ ಕ್ಲಬ್ ಕಾಪು, ಅರಣ್ಯ ಇಲಾಖೆ ಪಡುಬಿದ್ರಿ ವಲಯ ಪ್ರಾಥಮಿಕ ಆರೋಗ್ಯ ಕೇಂದ್ರ ಕಾಪು ಹಾಗೂ ಆರೋಗ್ಯ ನಿರ್ವಹಣೆ ಮತ್ತು ಸಂಶೋಧನಾ ಸಂಸ್ಥೆ ಬೆಂಗಳೂರು, ಯುನಿಸೆಫ್ ಇವರ ಸಹಯೋಗದೊಂದಿಗೆ
ಲಾರಿ ಡಿಕ್ಕಿಯಾಗಿ ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬುಧವಾರ ನಡೆದ ಅಪಘಾತದಲ್ಲಿ ಬೆಳಗಾವಿ ಮೂಲದ ಪ್ರಭಾಕರ್ ಶಂಕರ್ ಪೊದ್ದರವರು ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಅವರ ಮಗ ಸಮರ್ಥ್ ಪೊದ್ದಾ ಗುರುವಾರ ಬೆಳಿಗ್ಗೆ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಸು ನೀಗಿದಾನೆ. ಕಾಪು ಬಳಿಯ ಆನೆಗುಂದಿ ಸರಸ್ವತಿ ಪೀಠದಿಂದ ಗಣೇಶನ ಹಬ್ಬಕ್ಕೆ ರಜೆಯಲ್ಲಿ ಊರಿಗೆ ತೆರಳಿದ್ದ ಏಳನೇ ತರಗತಿಯ ಸಮರ್ಥ್, ಮಂಗಳವಾರ ಸಂಜೆ ಬೆಳಗಾವಿಯ ಹುಕ್ಕೇರಿ ಭಗವಾನ್ ಗಲ್ಲಿಯ
ಬೈಂದೂರು ತಾಲೂಕು ಬಿಲ್ಲವರ ಸಂಘಇವರ ನೇತ್ರತ್ವದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜನ್ಮ ದಿನದಪ್ರಯುಕ್ತ ಬೃಹತ್ ಗುರು ಸಂದೇಶ ವಾಹನ ಜಾಥಾ ಇಂದು ಬೈಂದೂರು ಹೊಸ ಬಸ್ ನಿಲ್ದಾಣ ದಿಂದ ಹೊರಟು ಮರವಂತೆ ಮೈದಾನದಲ್ಲಿ ಮುಕ್ತಾಯಗೊಂಡಿತು.ಬೈಂದೂರು ತಾಲೂಕು ಬಿಲ್ಲವ ಸಂಘದ ಗೌರವಾಧ್ಯಕ್ಷರಾದ ಶ್ರೀ ಕೆ ಗೋಪಾಲ ಪೂಜಾರಿಯವರುಕಾರ್ಯಕ್ರಮವನ್ನು ಉದ್ಘಾಟಿಸಿದರು ಮಾತನಾಡಿದರು. ಎಸ್ ರಾಜು ಪೂಜಾರಿ ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತಾವಿಕ ಮಾತನಾಡಿದರು.ಈ
ಖಾಸಗಿ ವಿಶಾಲ್ ಬಸ್ಸಿನ ಟಯರ್ ಸ್ಫೋಟಗೊಂಡ ಪರಿಣಾಮ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನ ಕಾಲಿಗೆ ಗಂಭೀರ ಹೊಡೆತ ಬಿದ್ದ ಘಟನೆ ಇದೀಗ ಸಂಜೆ ಪಡುಬಿದ್ರಿ ಬಸ್ ತಂಗುದಾಣದಲ್ಲಿ ನಡೆದಿದೆ. ಗಾಯಾಗೊಂಡವರು ಪ್ರಯಾಣಿಕ ಧನರಾಜ್, ಕಾರ್ಕಳದಿಂದ ಮಂಗಳೂರು ಕಡೆಗೆ ಹೋಗಲು ಪಡುಬಿದ್ರಿ ಬಸ್ ತಂಗುದಾಣದಲ್ಲಿ ಬಂದು ನಿಲ್ಲುತ್ತಿದಂತೆ, ಬಸ್ಸಿನ ಬಲ ಬದಿಯ ಹಿಂದಿನ ಟಯರ್ ಬಾರೀ ಸದ್ದಿನೊಂದಿಗೆ ಸ್ಫೋಟಗೊಂಡಿದ್ದು, ಬಸ್ಸಿನ ಟಯರ್ ನ ಮೇಲ್ಭಾಗ ಪ್ಲಾಟ್ ಪಾರ್ಮ್ ಛಿಂದಿಯಾಗಿ
ಸೇವಾಭಾರತಿ (ರಿ.) ಬೆಳ್ತಂಗಡಿ ಮತ್ತು ದಿವ್ಯಾಂಗ ರಕ್ಷಣಾ ಸಮಿತಿ, ಕೊಡವೂರು ಇವರ ಜಂಟಿ ಸಹಯೋಗದಲ್ಲಿ ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆಯ ಪ್ರಯುಕ್ತ ಸೆಪ್ಟೆಂಬರ್ 08, 2022 ರ ಗುರುವಾರದಂದು, ಉಡುಪಿಯ ದಿವ್ಯಾಂಗರಿಂದ ಉಡುಪಿ ಗಾಂಧಿ ಸರ್ಕಲ್‍ನಿಂದ ಪುರಭವನದ ವರೆಗೆ ಗಾಲಿಕುರ್ಚಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ದಿವ್ಯಾಂಗರು ತಮ್ಮ ವೀಲ್ ಚೇರ್ ಬಳಸಿ ವಿಭಿನ್ನವಾದ ಸ್ಟಂಟ್‍ಗಳನ್ನು ಮಾಡಿ ತಮ್ಮ ಸಾಮಥ್ರ್ಯವನ್ನು ಪ್ರದರ್ಶಿಸಿದರು. ಈ



























