ಮಂಗಳೂರು : ಘನತೆವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಉಡುಪಿ ಜಿಲ್ಲೆಯ ಪ್ರವಾಸ ಕೈಗೊಂಡಿರುವ ಹಿನ್ನಲೆಯಲ್ಲಿ ಆ.25ರ ಗುರುವಾರ ಬಜ್ಪೆಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಕೇಂದ್ರ ಸಚಿವರಾದ ಶೋಭಾ ಕರಂದಾಜ್ಲೆ ಅವರು ಈ ವೇಳೆ ರಾಜ್ಯಪಾಲರೊಂದಿಗೆ ಆಗಮಿಸಿದರು. ಇಂಧನ,ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ
ಉಡುಪಿ ಜಿಲ್ಲಾ ರಜತ ಮಹೋತ್ಸವ ಅರ್ಥಪೂರ್ಣವಾಗಿ ಆಚರಿಸುವ ಜೊತೆಯಲ್ಲಿ ಯುವ ಜನತೆಯನ್ನು ಸೈನ್ಯಕ್ಕೆ ಸೇರಲು ಅಗ್ನಿಪಥ್ ಯೋಜನೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಉಡುಪಿ ಜಿಲ್ಲೆ ಮತ್ತು ಟೀಮ್ ನೇಶನ್ ಫಸ್ಟ್ ಸಹಭಾಗಿತ್ವದಲ್ಲಿ, ಶಾಸಕರಾದ ರಘುಪತಿ ಭಟ್ ನೇತೃತ್ವದಲ್ಲಿ ಆಯೋಜಿಸಿರುವ 75 ಕೀ.ಮೀ. ಮ್ಯಾರಥಾನ್ ಓಟ “ಅಗ್ನಿಪಥ್ ದೌಡ್” ಇಂದು ಕಾರ್ಕಳ ಭುವನೆಂದ್ರ ಕಾಲೇಜಿನಿಂದ ಆರಂಭಗೊಂಡಿತು.ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಸಿನಿ ಗ್ಯಾಲಕ್ಸಿ ಅರ್ಪಿಸುವ ಮೋಗವೀರ ಗಾಟ್ ಟ್ಯಾಲೆಂಟ್ ರಿಯಾಲಿಟಿ ಶೋ ಅದ್ಧೂರಿಯಾಗಿ ನಡೆಯಲಿದ್ದು, ಈ ಕಾರ್ಯಕ್ರಮದ ಧ್ವನಿ ಸುರುಳಿ ಮತ್ತು ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ನಡೆಯಿತು.ಉಡುಪಿ ಮತ್ತು ದ.ಕ.ಜಿಲ್ಲಾ ಮೀನು ಮಾರಾಟಗಾರರ ಪೆಡರೆಸನ್ ಮಂಗಳೂರು ಇದರ ಜಿಲ್ಲಾ ಅಧ್ಯಕ್ಷರಾದ ಯಶಪಾಲ್ ಸುವರ್ಣ ಕಾರ್ಯಕ್ರಮ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ರಕ್ತದ ಆಪತ್ಭಾಂದವ ಸತೀಶ್ ಸಾಲ್ಯಾನ್ ರವರನ್ನು ಸನ್ಮಾನಿಸಲಾಯಿತು. ರಿಯಾಲಿಟಿ ಶೋನ ಧ್ವನಿ ಸುರುಳಿ, ಪೆÇೀಸ್ಟರ್
ಸಣ್ಣ ಪುಟ್ಟ ಕೂಲಿ ಕೆಲಸ ಮಾಡುವವರಿಗೂ ಸರ್ಕಾರದ ವಿವಿಧ ಸವಲತ್ತುಗಳು ದೊರೆಯುತ್ತೆ, ಆದರೆ ಕಷ್ಟ ಪಟ್ಟು ತೆಂಗಿನ ಮರ ಹತ್ತಿ ಜೀವನ ನಡೆಸುವವರಿಗೆ ಯಾವುದೇ ಪೂರಕ ವ್ಯವಸ್ಥೆಗಳು ಇಲ್ಲ ಎಂಬ ನೆಲೆಯಲ್ಲಿ ಪ್ರಾಣೇಶ್ ಹೆಜಮಾಡಿ ನೇತ್ರತ್ವದಲ್ಲಿ ಕೇರಾ ಸುರಕ್ಷಾ ವಿಮೆ ಬಗ್ಗೆ ಮಾಹಿತಿ ಹಾಗೂ ನೋಂದಣಿ ಕಾರ್ಯಕ್ರಮ ಹೆಜಮಾಡಿಯಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಲಾಲಾಜಿ ಆರ್. ಮೆಂಡನ್, ಬಾರೀ ಕಷ್ಟದ ಬದುಕು ತೆಂಗಿನ ಮರ ಹತ್ತುವ ಮಂದಿಯದ್ದು,
ಛಾಯಾಚಿತ್ರಗಾರರಿಗೆ ಕಪ್ಪು ಬಿಳುಪು ಯುಗದಲ್ಲಿದ್ದ ಕಷ್ಟ ಕಾರ್ಪಣ್ಯಗಳು ಇಂದಿನ ಡಿಜಿಟಲ್ ಯುಗದಲ್ಲಿ ಇಲ್ಲ. ದಾಖಲೆಗಳನ್ನು ಚಿರಾಯ್ಯುವಾಗಿಸುವಲ್ಲಿ ಛಾಯಾಚಿತ್ರಗಾರರ ಪಾತ್ರ ಪ್ರಮುಖವಾಗಿದೆ ಛಾಯಾಚಿತ್ರಗಾರರಲ್ಲಿ ಉತ್ತಮ ಕಲಾವಿಧ ಅಡಕವಾಗಿದ್ದಾನೆ ಎಂಬುದುದಾಗಿ ಹಿರಿಯ ಪತ್ರಕರ್ತ ರಾಮಚಂದ್ರ ಆಚಾರ್ಯ ಹೇಳಿದ್ದಾರೆ. ಪಡುಬಿದ್ರಿಯ ಎಸ್ ಎಸ್ ಖಾಸಗಿ ಸಭಾಂಗಣದಲ್ಲಿ ವಿಶ್ವ ಛಾಯಾಚಿತ್ರಗಾರರ ದಿನಾಚರಣೆಯ ಅಂಗವಾಗಿ ಹಿರಿಯ ಛಾಯಾಚಿತ್ರಗಾರರಾದ ಬೆಳ್ಮಣ್ ವೆಂಕಟರಾಯ ಕಾಮತ್
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯ, ಮಲಬಾರ್ ಗೋಲ್ಡ್ & ಡೈಮಂಡ್ಸ್ ಉಡುಪಿ, ರೋಟರಿ ಉಡುಪಿ ರೋಯಲ್ ಜಂಟಿಯಾಗಿ ವಿಶ್ವ ಛಾಯಾಗ್ರಹಣ ದಿನ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಹಿರಿಯ ಛಾಯಾಗ್ರಾಹಕ ಜಗನ್ನಾಥ ಶೆಟ್ಟಿ ಹಾಗೂ ಚಂದ್ರಶೇಖರ್ ಅಂಬಲಪಾಡಿ ಇವರಿಗೆ ಛಾಯಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿಶ್ವ ಛಾಯಾಗ್ರಹಣ ದಿನದ ಪ್ರಯುಕ್ತ ನಡೆದ ಛಾಯಾಚಿತ್ರ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು ಮತ್ತು ದೇಶದ ಗಡಿ
ಒಡವೆ ಕಳ್ಳತನ ಸಹಿತ ವಾಹನಗಳ ಕಳ್ಳತನ ನಡೆಸಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ಕದೀಮ ಕಳ್ಳರಿಬ್ಬರನ್ನು ಕಾರ್ಕಳ ಪೊಲೀಸ್ ಉಪಾಧೀಕ್ಷರ ಹಾಗೂ ವೃತ ನಿರೀಕ್ಷಕರ ತಂಡ ಬಂಧಿಸಿದೆ. ಬಂಧಿತರ ಮೇಲೆ ರಾಜ್ಯಾದ್ಯಂತ ಬಹಳಷ್ಟು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಮೂಲತಃ ಬಜಪೆ ನಿವಾಸಿ ಇದೀಗ ಮೂಳೂರುಎಸ್.ಎಸ್. ರಸ್ತೆಯ ಶ್ರೀ ಸಾಯಿ ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದ ವಾಜೀದ್ ಜೆ.(25) ಹಾಗೂ ಉಡುಪಿ ಕಡಿಯಾಳಿ ಆಚಾರ್ಯ ರಸ್ತೆಯ ಬಾಡಿಗೆ ಮನೆ ನಿವಾಸಿ ಶಹನಾಜ್ (32)
ಹಣಕ್ಕಾಗಿ ಯಾವ ಮಟ್ಟಕ್ಕೂ ಇಳಿಯಲು ತಯಾರಿದ್ದ ಈ ಕಾಲಘಟ್ಟದಲ್ಲಿ, ಯಾವುದೋ ಕುಟುಂಬದ ಪರಿಚಯವೇ ಇಲ್ಲದ ಎರಡು ತಿಂಗಳ ಮಗುವಿನ ಚಿಕಿತ್ಸಾ ವೆಚ್ಚ ಭರಿಸುವ ನಿಟ್ಟಿನಲ್ಲಿ ಕಟಪಾಡಿ ಪ್ರೇಂಡ್ಸ್ ಸಂಸ್ಥೆಯ ಸದಸ್ಯರು ಹುಲಿವೇಷ ಹಾಕಿ ಮಾನವೀಯತೆ ಭೂಮಿಯಲ್ಲಿ ಇನ್ನೂ ಸತ್ತಿಲ್ಲ ಎಂಬುದನ್ನು ಸಾಭೀತು ಪಡಿಸಿದ್ದಾರೆ. ಹುಲಿವೇಷ ಎಂದರೆ ಬೇರೆ ವೇಷಗಳಂಥಲ್ಲ…ಇದಕ್ಕೆ ಅದರದ್ದೇ ಆದ ರೀತಿ ರಿವಾಜುಗಳಿದೆ. ಧಾರ್ಮಿಕ ನೆಲೆಗಟ್ಟಿನಲ್ಲಿ ನಡೆಯುವುದೇ ಈ ಹುಲಿವೇಷ. ಬಣ್ಣ ಹಚ್ಚುವ ಮುನ್ನ
ಶ್ರೀ ಕೃಷ್ಣ ಜನ್ಮಾಷ್ಟಮಿಗಾಗಿ ಎರ್ಮಾಳಿನಲ್ಲಿ ಲತಾ ಮನೆಮಂದಿ ಸೇರಿ ಕೊಟ್ಟೆ ಕಡುಬು ತಯಾರಿಯಲ್ಲಿ ತೊಡಗಿದ್ದಾರೆ. ಕೃಷ್ಣ ಜನ್ಮಾಷ್ಟಮಿ ದಿನ ತುಳುವಿನ ಮೂಡೆ ಕನ್ನಡದ ಕೊಟ್ಟೆ ಕಡುಬು ಮಾಡುವುದು ವಾಡಿಕೆ. ಯದುನಂದನನಿಗೆ ಪ್ರಿಯವಾದ ತಿಂಡಿಗಳಲ್ಲಿ ಮೂಡೆಯೂ ಒಂದಾಗಿದ್ದು, ಅಷ್ಟಮಿಯಂದು ಕರಾವಳಿಯ ಎಲ್ಲರ ಮನೆಯಲ್ಲೂ ಮೂಡೆ ಘಮಘಮಿಸುತ್ತಿರುತ್ತದೆ. ಕೇದಗೆ ವರ್ಗದ ಮುಂಡೇವು ಮುಂಡಕ ಎಲೆ, ಪೆÇದರುಗಳು ತುಳುನಾಡಿನಲ್ಲಿ ಮುಖ್ಯವಾಗಿ ತೋಡು ತೊರೆಗಳ ದಂಡೆಗಳಲ್ಲಿ ಕಂಡು
ತಾನು ಆರ್ಥಿಕವಾಗಿ ಬಲಹೀನನಾಗಿದ್ದರೂ ಬೇರೊಬ್ಬರ ಕಷ್ಟಕ್ಕೆ ವಿಡಿಯುವ ತುಡಿತ ಇರುವ ಮನುಷ್ಯ ಅಪರೂಪ.. ಆದರೆ ಅದಕ್ಕೆ ಅಪವಾದವೋ ಎಂಬಂತೆ ಕೂಲಿ ಕೆಲಸ ನಡೆಸಿ ಜೀವನ ಸಾಗಿಸುವ ಅಪ್ರತಿಮ ಅಪ್ಪಟ ಸಮಾಜ ಸೇವಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವಿ ಕಟಪಾಡಿ ಎಂಬುದಾಗಿ ಗಮನಾರ್ಹ. ಉಡುಪಿ ಜಿಲ್ಲೆಯ ಕಟಪಾಡಿ ನಿವಾಸಿ ರವಿ ಕಟಪಾಡಿ ಅದೆಷ್ಟೋ ಬಡ ಕುಟುಂಬಗಳ ಕಷ್ಟಕ್ಕೆ ಸಂಧಿಸುವ ಮೂಲಕ ನಿಜವಾದ ಸಮಾಜ ಸೇವಕ ಎಣಿಸಿದ್ದಾರೆ. ಇದೀಗ ಬಡ ಕುಟುಂಬಗಳ ಮಕ್ಕಳ ಚಿಕಿತ್ಸೆಯ



























