Home Posts tagged #v4news karnataka (Page 100)

ಸುಳ್ಯ: ಸ್ಕೂಟಿ ಮತ್ತು ಕಾರು ಮಧ್ಯೆ ಅಪಘಾತ, ಅಣ್ಣ – ತಂಗಿ ಮೃತ್ಯು

ಸುಳ್ಯ: ಸ್ಕೂಟಿ ಮತ್ತು ಕಾರು ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟಿ ಯಲ್ಲಿದ್ದ ಅಣ್ಣ ಮತ್ತು ತಂಗಿ ಸಾವನ್ನಪ್ಪಿರುವ ದಾರುಣ ಘಟನೆ ಇಂದು ಸುಬ್ರಹ್ಮಣ್ಯ – ಜಾಲ್ಸೂರು ರಾಜ್ಯ ಹೆದ್ದಾರಿಯ ಸುಳ್ಯ ತಾಲೂಕಿನ ಎಲಿಮಲೆ ಸಮೀಪ ಸಂಭವಿಸಿದೆ. ಎಲಿಮಲೆ ಮತ್ತು ಜಬಳೆ ಮಧ್ಯೆ ಇಂದು ಮಧ್ಯಾಹ್ನ ಘಟನೆ ಸಂಭವಿಸಿದೆ. ಕಡಪಾಲ ಬಾಜಿನಡ್ಕ ದೇವಿದಾಸ್ ಎಂಬವರ ಪುತ್ರ ನಿಶಾಂತ್

ಅನ್ಯಜಾತಿಯ ಯುವಕನೊಂದಿಗೆ ಮಗಳು ಪರಾರಿ ,ಕುಟುಂಬದ ಮೂವರು ಆತ್ಮಹತ್ಯೆ

ಶಿಡ್ಲಘಟ್ಟ : ಶಿಡ್ಲಘಟ್ಟ ಗ್ರಾಮಾಂತರ ಪೋಲಿಸ್ ಠಾಣೆಯ ವ್ಯಾಪ್ತಿಯ ಹಂಡಿಗನಾಳ ಗ್ರಾಮದಲ್ಲಿ ಮಗಳು ಅನ್ಯಜಾತಿ ಯುವಕನೊಂದಿಗೆ ಪರಾರಿಯಾದ ಕಾರಣ ಮನನೊಂದು ಒಂದೇ ಕುಟುಂಬದ ಮೂವರು ವಿಷಪೂರಿತ ಗುಳಿಗೆ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಸಂಭವಿಸಿದೆ. ಆತ್ಮಹತ್ಯೆ ಮಾಡಿಕೊಂಡವರು ಶ್ರೀರಾಮಪ್ಪ,ಸರೋಜ ಹಾಗೂ ಮನೋಜ್ ಎಂದು ತಿಳಿದುಬಂದಿದೆ.ಅರ್ಚನಾ ಎಂಬಾಕೆ ಹಂಡಿಗನಾಳ ಗ್ರಾಮದ ಚಾಲಕ ನಾರಾಯಣಸ್ವಾಮಿ ಎಂಬಾತನೊಂದಿಗೆ ಪರಾರಿಯಾಗಿದ್ದಳು. ಇದರಿಂದ ಮನನೊಂದ ಆಕೆಯ ತಂದೆ, ತಾಯಿ

ಮಂಗಳೂರು : ಅನುಮಾನಾಸ್ಪದ ತಿರುಗಾಟ ನಡೆಸುತ್ತಿದ್ದ ಇಬ್ಬರವಶ

ಅನುಮಾನಾಸ್ಪದ ತಿರುಗಾಟ ನಡೆಸುತ್ತಿದ್ದ ಇಬ್ಬರನ್ನು ಉತ್ತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುಂಜಾನೆ 3 ಗಂಟೆ ಸುಮಾರಿಗೆ ಪೊಲೀಸರು ರೌಂಡ್ಸ್ ನಲ್ಲಿದ್ದಾಗ ಕುದ್ರೋಳಿ ಅಳಕೆ ಮಾರುಕಟ್ಟೆ ಪ್ರದೇಶದ ಬಳಿ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದ ರೀತಿಯಲ್ಲಿ ತಿರುಗಾಟ ನಡೆಸುತ್ತಿದ್ದರು. ವಿಚಾರಣೆ ನಡೆಸಿದಾಗ ಒಬ್ಬರು ಕೋಡಿಕಲ್ ನಿವಾಸಿ ಪ್ರಮೋದರಾಜ್ ಹಾಗೂ ಚಿಕ್ಕಮಗಳೂರಿನ ಓಂಕಾರ ಮೂರ್ತಿ ಎಂಬುದು ಬೆಳಕಿಗೆ ಬಂದಿದೆ ಇವರಿಬ್ಬರು ಕಳ್ಳತನ ಅಥವಾ ಇನ್ನಾವುದೋ

ಕ್ಷಯ ರೋಗಿಗಳಿಗೆ ಆಹಾರದ ಕಿಟ್ ವಿತರಣೆ

ಬಂಟ್ವಾಳ: 2025ಕ್ಕೆ ಭಾರತವನ್ನು ಕ್ಷಯ ರೋಗ ಮುಕ್ತಗೊಳಿಸಬೇಕು ಎನ್ನುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಹತ್ವದ ಹೆಜ್ಜೆಯಿಟ್ಟಿದ್ದು ಸೇವಾ ಸಂಸ್ಥೆಗಳು ಕ್ಷಯರೋಗಿಗಳನ್ನು ದತ್ತು ಪಡೆದು ಆರೈಕೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ಕರೆಯನ್ವಯ ಕ್ಷಯರೋಗಿಗಳಿಗೆ ವರದಾನವಾಗಿರುವ ನಿಕ್ಷಯ ಮಿತ್ರ ಯೋಜನೆಯಂಗವಾಗಿ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನವು ಮಂಗಳೂರು ಹಾಗೂ ಬಂಟ್ವಾಳ ತಾಲೂಕು ವ್ಯಾಪ್ತಿಯ ಕೆಲವು ಕ್ಷಯ ರೋಗಿಗಳನ್ನು ದತ್ತು ಪಡೆದಿದ್ದು ಸೋಮವಾರ

ಬೈಂದೂರು :ಚಾಲಕ-ಮಾಲಕರ ಸಂಘದ ಉದ್ಘಾಟನಾ ಸಮಾರಂಭ

ಬೈಂದೂರು: ತಾಲೂಕು ರಿಕ್ಷಾ, ಟೆಂಪೋ, ಟ್ಯಾಕ್ಸಿ, ಚಾಲಕ ಹಾಗೂ ಮಾಲಕರ ಸಂಘ (ರಿ) ಉದ್ಘಾಟನಾ ಸಮಾರಂಭ ದೇವಕಿ ನಂದವನ ಪರಿಚಯ ಉಪ್ಪುಂದ ಸಭಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.. ಉದ್ಘಾಟನಾ ಸಮಾರಂಭ ಶ್ರೀ ಶ್ರೀ ಸತ್ಯ ಸ್ವರೂಪಾನಂದ ಸ್ವಾಮೀಜಿ ಏಳಜಿತ್ ಬೈಂದೂರು ಇವರ ದಿವ್ಯ ಹಸ್ತದಿಂದ ಉದ್ಘಾಟಿಸಲ್ಪಟ್ಟಿತು. ಆಶೀರ್ವಚನದಲ್ಲಿ ಸ್ವಾಮೀಜಿಗಳು ಕರ್ತವ್ಯವೇ ಪೂಜೆ ,ಸಾರ್ವಜನಿಕ ಸೇವೆಯೇ ಯಜ್ಞ ಯಾಗಾದಿಗಳು ಸಂಸ್ಥೆ ನೂರಾರು ವರ್ಷ ಉಳಿದು ಬೆಳೆದು ತನ್ನೆಲ್ಲ

ಬೆಳ್ಳಾರೆ : ತಂಬಿನಮಕ್ಕಿಯಲ್ಲಿ ಬೈಕ್ ಗಳ ಪರಸ್ಪರ ಡಿಕ್ಕಿ

ಬೆಳ್ಳಾರೆ ‌ ಗ್ರಾಮದ ತಂಬಿನಮಕ್ಕಿ ಬಳಿ ನಿನ್ನೆ ರಾತ್ರಿ ಎರಡು ಬೈಕ್ ಗಳ ನಡುವೆ ಪರಸ್ಪರ ಡಿಕ್ಕಿಯಾಗಿ ಓರ್ವ ವ್ಯಕ್ತಿ ಸ್ಥಳದಲ್ಲೆ ಮೃತಪಟ್ಟ ಘಟನೆ ವರದಿಯಾಗಿದೆ. ಮೃತಪಟ್ಟ ವ್ಯಕ್ತಿ ಕೊಡಿಯಾಲದ ಗುತ್ತಿನಮನೆ ನಾರಾಯಣ ಎಂಬುದಾಗಿ ತಿಳಿದು ಬಂದಿದೆ.ಘಟನೆಯಿಂದ ಮತ್ತೋರ್ವರಾದ ಸುಜಿತ್ ಗುತ್ತಿನಮನೆ ಎಂಬುವವರು ಗಾಯಾಳಾಗಿ ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಕಾಪು ಶ್ರೀ ಜನಾರ್ದನ ದೇಗುಲ ಮತ್ತು ಮಾರಿಗುಡಿಗೆ ಮುತಾಲಿಕ್ ಭೇಟಿ

ಪ್ರಖರ ಹಿಂದುತ್ವವಾದಿ, ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸೋಮವಾರ ಸಾವಿರ ಸೀಮೆಯ ಒಡೆಯನ ಶ್ರೀ ಜನಾರ್ದನ ದೇಗುಲ ಹಾಗೂ ಕಾಪು ಶ್ರೀ ಹೊಸಮಾರಿ ಗುಡಿ ದೇಗುಲಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಶ್ರೀ ಜನಾರ್ದನ ದೇಗುಲದಲ್ಲಿ ವೇದಮೂರ್ತಿ ಜನಾರ್ಧನ ತಂತ್ರಿಯವರು ಶಾಲು ಹೊದಿಸಿ ಸನ್ಮಾನಿಸಿ ಪ್ರಸಾದ ವಿತರಿಸಿದರು. ಕಾಪು ಶ್ರೀ ಹೊಸ ಮಾರಿಯಮ್ಮ ದೇವಸ್ಥಾನದಲ್ಲಿ ವೇದಮೂರ್ತಿ ಶ್ರೀನಿವಾಸ್ ತಂತ್ರಿ ಶಾಲು ಹೊದಿಸಿ ಸನ್ಮಾನಿಸಿ ಶ್ರೀದೇವಿಯ ಪ್ರಸಾದ

ಡಾ.ಎಸ್ ರಾಧಾಕೃಷ್ಣನ್ ಅವರ ನೆನಪಿಗಾಗಿ ಶಿಕ್ಷಕ್ ಸಮ್ಮಾನ್-2022

ಸ್ವತಂತ್ರ ಮಾನ್ಯತೆ ಪಡೆದ ಶಾಲಾ ಶಿಕ್ಷಕರ ಒಕ್ಕೂಟ ಪಸ್ಟ್ ಕರ್ನಾಟಕ ಸಂಸ್ಥೆಯು ಡಾ.ಎಸ್ ರಾಧಾಕೃಷ್ಣನ್ ಅವರ ನೆನಪಿಗಾಗಿ ಶಿಕ್ಷಕ್ ಸಮ್ಮಾನ್-2022 ಅನ್ನು ಆಯೋಜಿಸಲಾಗಿತ್ತು. “ಶಿಕ್ಷಣದ ಚೇತರಿಕೆಯ ಹೃದಯದಲ್ಲಿ ಶಿಕ್ಷಕರು” ಎಂಬ ವಿಷಯದೊಂದಿಗೆ ಅಂತರರಾಷ್ಟ್ರೀಯ ಶಿಕ್ಷಕರ ದಿನವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಬಿಝಡ್ ಸಂಸ್ಥೆಯ ಅಧ್ಯಕ್ಷರಾದ ಡಾ ಅಫ್ಶಾದ್ ಅಹ್ಮದ್ ಮತ್ತು ಪ್ರಧಾನ ಕಾರ್ಯದರ್ಶಿ ಬೀಬಿ ಆಯಿಷಾ ಶೇಖ್ ಮತ್ತು ಇಸಿ ಮತ್ತು ಸದಸ್ಯರು

ನೊಂದ ಕುಟುಂಬಗಳ ನೆರವಿಗೆ ಮಿಡಿದ ಹೆಲ್ವ್ ಲೈನ್ ಸೇವಾ ತಂಡ ಹಾಗೂ ಅರ್ಪಣಾ ಸೇವಾ ಸಮಿತಿ

ಹೆಲ್ವ್ ಲೈನ್ ಸೇವಾ ತಂಡ ಹಾಗೂ ಅರ್ಪಣಾ ಸೇವಾ ಸಮಿತಿ ಸಹಯೋಗದೊಂದಿಗೆ ಭವತಿ ಬಿಕ್ಷಾಂದೇಹಿ ಸೇವಾ ಕಾರ್ಯವು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ನಡೆಯಿತು. ಸೇವಾ ಕಾರ್ಯದ ಮುಖ್ಯ ಆಕರ್ಷಣೆಯಾಗಿ ವಿಶೇಷ ವೇಷವು ಎಲ್ಲರ ಗಮನಸೆಳೆಯಿತು. ನೊಂದ ಮೂರು ಕುಟುಂಬಗಳ ಸಹಾಯಕ್ಕಾಗಿ ನೆರವಾಗಲು ಯುವಕರು ಕೈಜೋಡಿಸಿದ್ದು ವಿಶೇಷ. ಕಟೀಲು ದೇವಾಲಯದಲ್ಲಿ ಸುಮಾರು ಒಂದು ಲಕ್ಷದ ಐದು ಸಾವಿರ ರುಪಾಯಿ ಸಂಗ್ರಹಿಸಲಾಗಿದ್ದು. ದಿನಾಂಕ: 05/10/2022 ಬುಧವಾರ ಉಚ್ಚಿಲ ದೇವಸ್ಥಾನ

ಅಶಕ್ತರ ನೆರವಿಗಾಗಿ ಪ್ರೇತವಾದ ದೇವದಾಸ್..!

ನವರಾತ್ರಿ ಬಂತೆಂದರೆ ಸಾಕು ಎಲ್ಲಾ ದೇವಿ ದೇವಸ್ಥಾನಗಳಲ್ಲಿ ವಿಶೇಷ ದೇವಿ ಆರಾಧನೆಗಳು ನಡೆದರೆ, ಇನ್ನೊಂದೆಡೆ ವಿವಿಧ ವೇಷಧಾರಿಗಳು ಮನೆ ಮನೆಗೆ ಆಗಮಿಸುವ ಮೂಲಕ ಜನರ ಮನತಣಿಸುತ್ತಾರೆ. ಹುಲಿವೇಷ, ಪುರುಷವೇಷ, ಸ್ತ್ರೀವೇಷ ಹೀಗೆ ಹಲವು ತರಹದ ವೇಷಗಳನ್ನು ನವರಾತ್ರಿಯ ಒಂಬತ್ತು ದಿನಗಳಲ್ಲಿ ನೋಡಬಹುದು. ಇಂಥಹುದೇ ಒಂದು ವೇಷದ ಮೂಲಕ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ವ್ಯಕ್ತಿಯೊಬ್ಬರು ಕಳೆದ ಹತ್ತು ವರ್ಷಗಳಿಂದ ಗಮನಸೆಳೆಯುತ್ತಿದ್ದಾರೆ. ವಿಶೇಷವಾದ ಪ್ರೇತದ ವೇಷ ಹಾಕುವ