ಉಳ್ಳಾಲ ಕಾಪಿಕಾಡ್ ನಲ್ಲಿ ಹೆದ್ದಾರಿಯಲ್ಲಿ ರಾಂಗ್ ಸೈಡ್ ನಿಂದ ಬಂದ ಬೈಕ್ ಗೆ ಡಿಕ್ಕಿಯಾದ ಕಾರು ಹೆದ್ದಾರಿಯಿಂದ ಕೆಳಕ್ಕುರುಳಿತು. ಬೈಕ್ ಕೆಳಕ್ಕೆ ಎಸೆಯಲ್ಪಟ್ಟು ಸವಾರರಿಗೆ ಗಂಭೀರ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಿನಲ್ಲಿದ್ದವರು ಯಾವುದೆ ಗಾಯಗಳಿಲ್ಲದೆ ಬಚಾವಾಗಿದ್ದಾರೆ.
ಪ್ರತೀ ವರ್ಷ, ವರ್ಷಕ್ಕೆ ಎರಡು ಬಾರಿ ರಾಷ್ಟ್ರೀಯ ಜಂತುಹುಳ ನಿವಾರಣಾ ದಿನಾಚರಣೆ. ಹೊಟ್ಟೆ ಹುಳಗಳ ನಿರ್ಮೂಲನೆಗಾಗಿ ಸರಕಾರವು ರಾಷ್ಟ್ರೀಯ ಜಂತುಹುಳ ನಿವಾರಣಾ ದಿನವನ್ನು ಆಚರಿಸುತ್ತದೆ. ಈ ವರ್ಷ ಆಗಸ್ಟ್ 10ರಂದು 1ರಿಂದ 19 ವರ್ಷ ವಯಸ್ಸಿನ ಎಲ್ಲ ಮಕ್ಕಳು ಹಾಗೂ ಹದಿಹರೆಯದವರಿಗೆ ಆರೋಗ್ಯ ಕಾರ್ಯಕರ್ತರು, ಶಾಲಾ ಶಿಕ್ಷಕರು ಮತ್ತುಅಂಗನವಾಡಿ ಕಾರ್ಯಕರ್ತೆಯರು ಜಂತು ಹುಳ ನಿವಾರಣೆಗಾಗಿ, ವಯಸ್ಸಿಗೆ ಅನುಗುಣವಾಗಿ ಸೂಕ್ತ ಪ್ರಮಾಣದ ಡೋಸೇಜ್ ಪ್ರಕಾರ ಅಲ್ಬೆಂಡಜೋಲ್
ವಿದ್ಯುತ್ ಅವಘಢದಿಂದ ಮುಚ್ಚಿದ ಅಂಗಡಿಯ ಒಳಗೆ ಬೆಂಕಿ ಕಾಣಿಸಿಕೊಂಡು ಅಕ್ವೇರಿಯಂಗಳ ಸಹಿತ ವಿವಿಧ ಜಾತಿಗಳ ಹಕ್ಕಿ ಸಹಿತ ವಿವಿಧ ಜಾತಿಗಳ ಮೀನುಗಳು ಬೆಂಕಿಯಲ್ಲಿ ಸಿಲುಕಿ ಭಸ್ಮವಾದ ಘಟನೆ ನಡೆದಿದೆ. ಘಟನೆಯಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಪಡುಬಿದ್ರಿ ಮುಖ್ಯ ಮಾರುಕಟ್ಟೆ ರಸ್ತೆಯ ಪೊಲೀಸ್ ಠಾಣಾ ಸಮೀಪದ ಗ್ರಾ.ಪಂ. ಕಟ್ಟಡದ ಅವಿಘ್ನ ಅಕ್ವೇರಿಯಂ ಮಾರಾಟದಂಗಡಿಯಲ್ಲಿ ಮುಂಜಾನೆ ಹೊಗೆ ಕಾಣಿಸಿಕೊಂಡಿದ್ದು ಇದನ್ನು ಕಂಡ ಸಾರ್ವಜನಿಕರು ಪೆÇಲೀಸರಿಗೆ ಮಾಹಿತಿ
ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಕುಳಾಯಿ ಜಂಕ್ಷನ್ ಅಭಿವೃದ್ಧಿ ಕಾಮಗಾರಿಗೆ ಶಾಸಕರಾದ ಡಾ.ಭರತ್ ಶೆಟ್ಟಿಯವರು ಗುದ್ದಲಿಪೂಜೆಗೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಡಾ.ಭರತ್ ಶೆಟ್ಟಿಯವರು ಕುಳಾಯಿ ಹೆದ್ದಾರಿ ವಿದ್ಯಾನಗರ ರಸ್ತೆ ನಡುವೆ ಜಂಕ್ಷನ್ ಅಭಿವೃದ್ಧಿಯಾಗಲಿದ್ದು, ಅಪಘಾತ ರಹಿತ ವಲಯವನ್ನಾಗಿ ಮಾಡಲು ಯೋಜನೆ ರೂಪಿಸಲಾಗಿದೆ. ಸುರತ್ಕಲ್ ಜಂಕ್ಷನ್ ಬಳಿಕ ಸುರತ್ಕಲ್ ನ ಟ್ರಾಫಿಕ್ ಐಲ್ಯಾಂಡ್ ಕಾಮಗಾರಿಯನ್ನು
ಮಳೆಯಿಂದ ಹಾನಿಯಾದ ಪಜೀರು ಪಾನೇಲ ಎಂಬಲ್ಲಿ ಮಿಂಗಲ್ ವೇಗಸ್ ಎಂಬುವರ ಮನೆಯ ವೀಕ್ಷಣೆಗೆ ತೆರಳಿದ್ದ ಸಂದರ್ಭ ಶಾಸಕರು, ವಾರ್ಡಿನ ಸದಸ್ಯರೊಬ್ಬರ ರಿಕ್ಷಾವನ್ನು ಚಲಾಯಿಸಿ ಮನೆಯನ್ನು ವೀಕ್ಷಿಸಿದ್ದಾರೆ. ಇವರ ಜೊತೆಗೆ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷಪ್ರಶಾಂತ್ ಕಾಜವ, ಯೂಸುಫ್ ಪಾನೇಲ, ರೊನಾಲ್ಡ್ ರಿಕ್ಷಾದಲ್ಲಿ ಪ್ರಯಾಣಿಕರಾಗಿದ್ದರು.
ಬೆಳ್ಳಾರೆ:ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಬೆಳ್ಳಾರೆ ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ಪೊಲೀಸ್ ಅಧಿಕಾರಿಗಳ ತುರ್ತು ಸಭೆ ನಡೆಯುತ್ತಿದೆ. ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ 6 ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಎನ್.ಐ.ಎ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿರುವುದಾಗಿ ತಿಳಿದುಬಂದಿದೆ.
ಮೂಡುಬಿದಿರೆ: ವಿಶ್ವ ಸ್ತನ್ಯಪಾನ ಸಪ್ತಾಹದಂಗವಾಗಿ ದ.ಕ.ಜಿ.ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು, ಇನ್ನರ್‍ವೀಲ್ ಕ್ಲಬ್ ಮೂಡುಜದಿರೆ ಮತ್ತು ಸಮುದಾಯ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಆರೋಗ್ಯವಂತ ಶಿಶುಗಳ ಪ್ರದರ್ಶನ ಮತ್ತು ಸ್ತನ್ಯಪಾನದ ಮಹತ್ವದ ಬಗ್ಗೆ ಜಾಗೃತಿ ಕಾರ್ಯಕ್ರಮವು ಸಮಾಜ ಮಂದಿರದಲ್ಲಿ ನಡೆಯಿತು. ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಆಡಳತ ವೈದ್ಯಾಧಿಕಾರಿ ಡಾ.ಚಿತ್ರಾ ಕಾರ್ಯಕ್ರಮವನ್ನು ಉದ್ಘಾಟಿಸಿ,
ಕುಂದಾಪುರ: ಎರಡು ಮೂರು ದಿನಗಳಿಂದ ಎಡಬಿಡದೇ ಸುರಿಯುತ್ತಿರುವ ಭಾರಿ ಮಳೆಯಿಂದ ಸೌಪರ್ಣಿಕ ನದಿ ನೀರಿನ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನದಿಯ ಸಮೀಪದಲ್ಲಿರುವ ಊರುಗಳಾದ ಸಾಲ್ಬುಡ-ನಾವುಂದ ಬಡಾಕೆರೆ, ಮರವಂತೆ, ಚಿಕ್ಕಳ್ಳಿ, ಪಡುಕೋಣೆ, ಅರೆಹೊಳೆ ಮುಂತಾದ ಪ್ರದೇಶಗಳು ಮುಳುಗಡೆ ಭೀತಿಯಲ್ಲಿದೆ. ಅಲ್ಲದೆ ಸಾವಿರಾರು ಎಕರೆ ಕೃಷಿ ಭೂಮಿಗಳು ನೆರೆಯಿಂದ ಸಂಪೂರ್ಣ ಜಲಾವೃತವಾಗಿದೆ. ಕುಡಿಯುವ ನೀರಿಗೆ ಜನರ ಆಹಾಕಾರ ಉಂಟಾಗಿದೆ. ನೆರೆ ನೀರು ಜೊತೆ ಕೆಲವೊಂದು ಹಾವುಗಳು
ಬೈಂದೂರು : ಸೋಮವಾರ ಸಂಜೆ ಶಾಲೆಯಿಂದ ಮನೆಗೆ ವಾಪಾಸ್ಸಾಗುವಾಗ ಕಾಲುಸಂಕದಿಂದ ಆಕಸ್ಮಿಕ ಕಾಲು ಜಾರಿ ಹರಿಯುವ ನದಿಗೆ ಬಿದ್ದು ನಾಪತ್ತೆದ ಬೈಂದೂರು ತಾಲೂಕು ಕಾಲ್ತೋಡು ಗ್ರಾಮದ ಚಪ್ಪರಿಕೆ ಸರಕಾರಿ ಹಿ.ಪ್ರಾ.ಶಾಲೆಯ ಎರಡನೇ ತರಗತಿ ವಿದ್ಯಾರ್ಥಿನಿ ಸನ್ನಿಧಿ ಮೃತದೇಹ ಮಂಗಳವಾರ ಸಂಜೆ 6 ಗಂಟೆ ತನಕ ಪತ್ತೆಯಾಗಿಲ್ಲ. ಸನ್ನಿಧಿ ಮೃತದೇಹ ಪತ್ತೆಗೆ ಅಗ್ನಿಶಾಮಕ ದಳ, ಪೊಲೀಸರು, ಸ್ಥಳೀಯರು, ಈಜುಪಟುಗಳು ಹಾಗೂ ಮುಳುಗು ತಜ್ಞರು ನಿರಂತರವಾಗಿ ಶೋಧ ಕಾರ್ಯದಲ್ಲಿ
ದೇಶದ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ’ಯ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಕರೆಯಂತೆ ‘ಹರ್ ಘರ್ ತಿರಂಗಾ’ ಅಭಿಯಾನದಡಿ ಮನೆ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಅರಳಿಸುವ ನಿಟ್ಟಿನಲ್ಲಿ ಉಡುಪಿಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಪ್ರಮುಖರಾದ ಎ.ಪುಂಡಲೀಕ ಕಾಮತ್ ರವರಿಗೆ ಉಡುಪಿ ಶಾಸಕ ಕೆ.ರಘುಪತಿ ಭಟ್ ರಾಷ್ಟ್ರ ಧ್ವಜವನ್ನು ಹಸ್ತಾಂತರಿಸಿ ಆಗಸ್ಟ್ 13ರ ಮುಂಜಾನೆಯಿಂದ ಆಗಸ್ಟ್ 15ರ ಸಂಜೆಯ ತನಕ ದೇವಸ್ಥಾನ, ಸಂಘ-ಸಂಸ್ಥೆಗಳು




























