Home Posts tagged #v4news karnataka (Page 169)

ತೆಂಕ ಎರ್ಮಾಳು ಅಟೋ ಚಾಲಕ ಮಾಲಕ ಸಂಘದ ಅಧ್ಯಕ್ಷರಾಗಿ ಮುಕ್ತಾರ್

ಪಡುಬಿದ್ರಿ: ತೆಂಕ ಎರ್ಮಾಳು ಅಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷರಾಗಿ ಮುಕ್ತಾರ್ ಅಹಮದ್ ಆಯ್ಕೆಯಾಗಿದ್ದಾರೆ.ಗೌರವ ಅಧ್ಯಕ್ಷರಾಗಿ ಪತ್ರಕರ್ತ ಸುರೇಶ್ ಎರ್ಮಾಳ್, ಉಪಾಧ್ಯಕ್ಷರಾಗಿ ರಾಜು ಪೂಜಾರಿ, ಕಾರ್ಯದರ್ಶಿಯಾಗಿ ಭರತ್ ಜಿ. ಶೆಟ್ಟಿಗಾರ್, ಕೋಶಾಧಿಕಾರಿಯಾಗಿ ಶೇಕ್ ಲಿಯಾಕತ್, ಉಪ ಕೋಶಾಧಿಕಾರಿಯಾಗಿ ಅಬ್ದುಲ್ ನದೀಮ್ ಇವರನ್ನು ಅಟೋ ರಿಕ್ಷಾ ಚಾಲಕ ಮಾಲಕ ಸಂಘದ

ಎಂ.ಪಿ ಸಿಲ್ಕ್ಸ್ ಆಷಾಢ ಆಫರ್ ರಿಯಾಯಿತಿ ದರದಲ್ಲಿ ವಿವಿಧ ಬ್ರ್ಯಾಂಡೆಡ್ ವಸ್ತ್ರಗಳು ಶೇ.50ರಷ್ಟು ಡಿಸ್ಕೌಂಟ್

ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಎಂ.ಪಿ. ಸಿಲ್ಕ್ಸ್ ಮಳಿಗೆಯಲ್ಲಿ ಆಷಾಢ ಪ್ರಯುಕ್ತ ಬಿಗ್ ಸೇಲ್‍ನ್ನು ಹಮ್ಮಿಕೊಂಡಿದ್ದು, ಶೇ.50ರಷ್ಟು ರಿಯಾಯಿತಿಯನ್ನು ಘೋಷಿಸಿದ್ದು, ಉತ್ತಮ ಗುಣಮಟ್ಟದ ವಸ್ತ್ರಗಳು ಕೈಗೆಟಕುವ ದರದಲ್ಲಿ ಸಿಗಲಿದೆ. ವಿವಿಧ ವಿನ್ಯಾಸದ ಮತ್ತು ಉತ್ತಮ ಗುಣಮಟ್ಟವನ್ನು ಹೊಂದಿರುವ ವಸ್ತ್ರ ಮಳಿಗೆ ಎಂ.ಪಿ. ಸಿಲ್ಕ್ಸ್. ಈ ಬಾರಿಯ ಆಷಾಢ ಪ್ರಯುಕ್ತ ಗ್ರಾಹಕರಿಗಾಗಿ ವಿಶೇಷ ರಿಯಾಯಿತಿಯನ್ನು ಘೋಷಿಸಿದ್ದಾರೆ. ಸೂರತ್ ಸೀರೆ, ಫ್ಯಾನ್ಸಿ ಮತ್ತು ಕಾಟನ್

ಗೂಂಡಾಗಿರಿಗೆ ಬಜರಂಗದಳವನ್ನು ಸರ್ಕಾರವೇ ಕಳುಹಿಸಿದ್ದೆ..? : ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಹೇಳಿಕೆ

ಹೊಟೇಲ್‍ಗೆ ಹೋಗಿ ಗ್ರಾಹಕರನ್ನು ಹೊರಗೆ ಕಳುಹಿಸಿ ಗೂಂಡಾಗಿರಿ ಪ್ರದರ್ಶಿಸಲು ಆ ಸಂಘಟನೆಗೆ ಅಧಿಕಾರ ನೀಡಿದವರು ಯಾರು ಬಿಜೆಪಿ ಸರಕಾರವೇ ಇವರನ್ನು ಕಳುಹಿಸಿದ್ದೇ ಎಂದು ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಪ್ರಶ್ನಿಸಿದ್ದಾರೆ. ಮಂಗಳೂರಿನ ಖಾಸಗಿ ಹೊಟೇಲ್‍ನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, 2009ರಲ್ಲಿ ಪಬ್ ದಾಳಿ ಆದಾಗಲೂ ರಾಜ್ಯದಲ್ಲಿ ಬಿಜೆಪಿ ಸರಕಾರವಿತ್ತು. ಈಗ ಮತ್ತೆ ಬಿಜೆಪಿ ಸರಕಾರ ಇರುವಾಗ ಚುನಾವಣೆ

ಆಲೂರು : ಕಲುಷಿತ ಆಹಾರ ಸೇವನೆಯಿಂದ 25ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

ಹಾಸನದ ಆಲೂರಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮಕ್ಕಳು ಕಲುಷಿತ ಆಹಾರ ಸೇವನೆಯಿಂದ ಅಸ್ವಸ್ಥಗೊಂಡಿದ್ದ ಶಾಲೆಗೆ ಶಾಸಕ ಎಚ್ ಕೆ ಕುಮಾರಸ್ವಾಮಿ ನೀಡಿ, ಪರಿಶೀಲನೆ ನಡೆಸಿದ್ರು. ಅಡುಗೆ ಕೊಠಡಿ, ಸಾಮಗ್ರಿಗಳ ಕೊಠಡಿ, ಆಹಾರ ಪದಾರ್ಥಗಳನ್ನು ಪರೀಶೀಲನೆ ಮಾಡಿ, ಶಾಲಾ ಕೊಠಡಿಗಳು, ಸ್ನಾನಗೃಹಗಳು, ಶೌಚಲಯಕ್ಕೆ ಭೇಟಿ ನೀಡಿದ್ರು. ನಂತರ ಮಾತನಾಡಿದ ಅವರು ಸದ್ಯ ಈ ವಸತಿ ಶಾಲೆ ಕಟ್ಟಡದಲ್ಲಿ 204 ಮಕ್ಕಳು ಇದ್ದು 25 ಮಕ್ಕಳಿಗೆ ವಾಂತಿ ಬೇಧಿ ಸುಸ್ತು ಕಾಣಿಸಿಕೊಂಡಿದ್ದು.

ಫೈಟಿಂಗ್ ಕಾರ್ಮಿಕನಿಗೆ 1 ಕೋಟಿ ರೂ. ಅದೃಷ್ಟ ಬಹುಮಾನ

ಮಂಜೇಶ್ವರ ಪಾವೂರು ಗೇರುಕಟ್ಟೆ ನಿವಾಸಿ ಪೈಂಟರ್ ಬಾವ ಎಂದೇ ಪರಿಚಿತರಾಗಿರುವ ಮೊಹಮ್ಮದ್ ಎಂಬವರಿಗೆ 1 ಕೋ.ರೂ. ಕೇರಳ ರಾಜ್ಯಲಾಟರಿ ಒಲಿದಿದೆ. ಡ್ರಾ ಆಗುವ ತಾಸುಗಳ ಮೊದಲು ಟಿಕೇಟ್ ತೆಗೆದ ಅದೃಷ್ಟವಂತನಾಗಿದ್ದಾನೆ. ಈತನಿಗೆ 5 ಮಕ್ಕಳ ಪೈಕಿ 2 ಮಕ್ಕಳನ್ನು ಮದುವೆ ಮಾಡಿಸಿ ಕೊಟ್ಟ ಬಳಿಕ 50ಲಕ್ಷ ರೂ. ಗಿಂತಲೂ ಮಿಕ್ಕ ಸಾಲದಲ್ಲಿ ಮುಳುಗಿ ಇದ್ದ ಮನೆಯನ್ನು ಕೂಡಾ ಮಾರಿ ಇನ್ನು ಮುಂದಕ್ಕೆ ಏನೆಂದು ತಿಳಿಯದೆ ಕೂತಿರುವಾಗ ದೇವರು ನನಗೆ ನೀಡಿದ

ಅನಧಿಕೃತ ಗ್ಯಾಸ್ ಗೋಡನ್ ತೆರವುಗೊಳಿಸಲು ನಿರ್ಲಕ್ಷ್ಯ : ಅಪಾಯದಂಚಿನಲ್ಲಿ ದಲಿತ ಕುಟುಂಬಗಳು

ಪಡುಬಿದ್ರಿ ಗ್ರಾಮದ ಪಾದೆಬೆಟ್ಟುವಿನಲ್ಲಿ ಬಹಳಷ್ಟು ವರ್ಷಗಳಿಂದ ಅನಧಿಕೃತವಾಗಿ ದಲಿತ ಕಾಲೊನಿಯಲ್ಲಿ ಸುತ್ತಲೂ ವಾಸದ ಮನೆಗಳಿರುವ ಪ್ರದೇಶದಲ್ಲಿ ಗ್ಯಾಸ್ ಗೋಡಾನ್ ಕಾರ್ಯಚರಿಸುತ್ತಿದ್ದರೂ ಈ ಬಗ್ಗೆ ಗ್ರಾ.ಪಂ. ಸಹಿತ ಸಂಬಂಧಿಸಿದ ಇಲಾಖಾಧಿಕಾರಿಗಳು ತೆರವುಗೊಳಿಸಲು ನಿರ್ಲಕ್ಷ್ಯ ಧೋರಣೆ ತಾಳಿದು, ಅನಿವಾರ್ಯ ಸ್ಥಿತಿ ಒದಗಿ ಬಂದರೆ ನಾವೆಲ್ಲರೂ ಒಂದಾಗಿ ಅಪಾಯಕಾರಿ ಗೋಡನ್ ದ್ವಂಸಗೊಳಿಸುವುದಾಗಿ ದಲಿತ ಮುಖಂಡ ಸುಂದರ್ ಮಾಸ್ತರ್ ಎಚ್ಚರಿಸಿದ್ದಾರೆ. ಗೋಡಾನ್ ಪ್ರದೇಶದಿಂದ

21ನೇ ಒಡಿಯೂರು ಶ್ರೀಗುರುದೇವ ಸೇವಾ ಬಳಗ ಮುಂಬಯಿ ಘಟಕದ ವಾರ್ಷಿಕೋತ್ಸವ

ಸುಖ ದುಃಖಗಳನ್ನು ಸಮತೋಲನದಲ್ಲಿಡಲು ಆಧ್ಯಾತ್ಮಿಕತೆ ಬೇಕು .ಸುಖ ವೆಂದರೆ ಮನಸ್ಸಿನ ಸ್ಥಿತಿ ಯಾಗಿದೆ ಮನಸ್ಸನ್ನು ಏಕಾಗ್ರತೆಯಲ್ಲಿಟ್ಟು ಆಧ್ಯಾತ್ಮಿಕದ ವಿಚಾರಧಾರೆಗಳನ್ನು ನಮ್ಮಲ್ಲಿ ಇರಿಸಿಕೊಂಡಾಗ ಧರ್ಮದ ಕಡೆಗೆ ನಮ್ಮ ನಡೆಯಲು ಸಾಧ್ಯವಾಗುತ್ತದೆ ತಾಯಂದಿರು ಮಕ್ಕಳಿಗೆ ಜ್ಞಾನದ ಬೆಳಕಾಗಬೇಕು ಯುವ ಸಮುದಾಯ ಜಾಗೃತರದಾಗ ದೇಶ ಸದೃಡ ವಾಗುತ್ತದೆ ಎಂದುಒಡಿಯೂರು ಶ್ರೀ ಗುರು ದೇವಾನಂದ ಸ್ವಾಮೀಜಿ ಹೇಳಿದರು. ಶ್ರೀ ಗುರುದೇವದತ್ತ ಸಂಸ್ಥಾನಂ ಶ್ರೀಕ್ಷೇತ್ರ ಒಡಿಯೂರು ಇದರ

ಜಿಲ್ಲಾ ಗೃಹರಕ್ಷಕದಳ ಕಚೇರಿಯಲ್ಲಿ ಕಾರ್ಗಿಲ್ ದಿನಾಚರಣೆ

ದಿನಾಂಕ : 26-07-2022 ನೇ ಮಂಗಳವಾರದಂದು ಮೇರಿಹಿಲ್ ನ ಜಿಲ್ಲಾ ಗೃಹರಕ್ಷಕದಳ ಕಛೇರಿ ಇಲ್ಲಿ ಕಾರ್ಗಿಲ್ ದಿನಾಚರಣೆಯ ಅಂಗವಾಗಿ ಕಾರ್ಗಿಲ್ ನಲ್ಲಿ ಹುತಾತ್ಮರಾದವರಿಗೆ ಗೌರವ ನಮನವನ್ನು ಸಲ್ಲಿಸುತ್ತಾ, 23 ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಆಚರಣೆ ನಡೆಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ವಹಿಸಿದ್ದರು. 1999 ರ ಕಾರ್ಗಿಲ್ ಯುದ್ಧದಲ್ಲಿ ಭಾರತ ದೇಶಕ್ಕಾಗಿ ಮಡಿದ ಆ ಸೈನಿಕರ ಆತ್ಮಗಳಿಗೆ

ಕಲ್ಲೋಣಿ – ದೇವರಕಾನ: ಸಚಿವ ಅಂಗಾರ ಆದೇಶದ ಮೇರೆಗೆ ಜಿಲ್ಲಾಪಂಚಾಯತ್ ಇಂಜೀನಿಯರ್ (PWD) ಮಣಿಕಂಠ ಅವರು ಕಲ್ಲೋಣಿ ದೇವರಕಾನ ರಸ್ತೆಯನ್ನು ವೀಕ್ಷಿಸಿದರು

ಸಚಿವ ಅಂಗಾರ ಅವರ ಆದೇಶದ ಮೇರೆಗೆ ಜಿಲ್ಲಾಪಂಚಾಯತ್ ಇಂಜೀನಿಯರ್ (PWD) ಮಣಿಕಂಠ ಅವರು ಕಲ್ಲೋಣಿ ದೇವರಕಾನ ರಸ್ತೆಯನ್ನು ವೀಕ್ಷಿಸಿ .ಸಾರ್ವಜನಿಕರ ಅಭಿಪ್ರಾಯಗಳನ್ನು ಪಡೆದರು. ಸುಳ್ಯ ಬೆಳ್ಳಾರೆಯ ಮುಖ್ಯರಸ್ತೆ ಕಲ್ಲೋಣಿ ಎಂಬಲ್ಲಿ ಬಹಳ ವರ್ಷ ದಿಂದ ರಸ್ತೆ ಹದಗೆಟ್ಟು ಹೋದ ಕಾರಣದಿಂದ ಒಂದೂವರೆ ಕಿಲೋ ಮೀಟ ರ್ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಸಚಿವರ ಒಪ್ಪಿಗೆ ಪಡೆದು ಕಾಂಕ್ರಿಟೀಕರಣ ಮಾಡಲು ತೀರ್ಮಾನ ತೆಗೆದುಕೊಳ್ಳುವುದು. ಎಂದು ಬೆಳ್ಳಾರೆ ಗ್ರಾಮ ಪಂಚಾಯ್ತಿ ಅಧ್ಯಕ್ಷ

ಮಂಗಳೂರಲ್ಲಿ ಟೈಲರ್ ಅಸೋಸಿಯೇಶನ್ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ರಚಿಸುವ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಂದು ದ.ಕ. ಜಿಲ್ಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಟೈಲರ್‍ಗಳು ಬೀದಿಗಿಳಿದು ಪ್ರತಿಭಟಿಸಿದರು. ಕರ್ನಾಟಕ ರಾಜ್ಯ ಟೈಲರ್ ಸಂಘಟನೆಯ ಕರೆಯ ಮೇರೆಗೆ ಜಿಲ್ಲಾ ಮಟ್ಟದಲ್ಲಿ ಮಂಗಳೂರಿನ ಬಲ್ಮಠ ಬಳಿಯ ಶಾಂತಿನಿಲಯ ಸಮೀಪದ ಮೈದಾನದಿಂದ ನಗರದ ಜಿಲ್ಲಾಧಿಕಾರಿ ಕಚೇರಿವರೆಗೆ ಸುಮಾರು ಎರಡು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಟೈಲರ್‍ಗಳು ಭಾಗವಹಿಸಿ