Mangalore: Honourable Chancellor of Srinivas University and President of A. Shama Rao Foundation Dr. CA. A. Raghavendra Rao felicitated Padmavibhooshana Dr. D. Veerendra Hegde, Dharmadhikari of Sri Kshetra Dharmasthala for being nominated to the Rajya Sabha at Dharmasthala. On this occasion
ಕೂಳೂರಿನ ನದಿ ತೀರದಲ್ಲಿ ಶೇಖರಣೆಗೊಂಡಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಪಲ್ಗುಣಿ ನದಿ ತೀರದಲ್ಲಿ ರಾಶಿ ಬಿದ್ದಿದ್ದ ಪ್ಲಾಸ್ಟಿಕ್, ನದಿಯಲ್ಲಿ ತೇಲಿ ಬಂದ ಟನ್‍ಗಟ್ಟಲೆ ತ್ಯಾಜ್ಯವನ್ನು ಸಂಘ ಸಂಸ್ಥೆ ಸ್ವಯಂ ಸೇವಕರು ಸ್ವಚ್ಚತಾ ಕಾರ್ಯ ನಡೆಸಿದರು. ಎಲ್ಲಾ ತ್ಯಾಜ್ಯಗಳನ್ನು ಸ್ವಯಂ ಸೇವಕರು ಹೆಕ್ಕಿ ಸ್ವಚ್ಛಗೊಳಿಸಿದರು. ಮಂಗಳೂರಿನ ರೇಂಜ್ ಅರಣ್ಯ ಇಲಾಖೆ, ಸಿಒಡಿಪಿ, ಎನ್‍ಇಸಿಎಫ್ ಮೊದಲಾದ ಸಂಘಟನೆಗಳುವರು ಸಹಕಾರ ನೀಡಿದ್ದಾರೆ.
ಮಂಗಳೂರಿನ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ವಿದ್ಯಾರ್ಥಿ ಸಂಘದ ಉದ್ಘಾಟನೆಯು ಇತ್ತೀಚೆಗೆ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಭ್ರಷ್ಟಾಚಾರ ನಿಗ್ರಹ ದಳ ಪಶ್ಚಿಮ ವಲಯದ ಎಸ್ ಪಿ. ಶ್ರೀ ಸೈಮನ್ ಸಿ.ಎ ಅವರು ಮಾತನಾಡಿ ನಿಜವಾದ ನಾಯಕತ್ವ ಎಂದರೆ ಮುನ್ನೆಲೆಯಲ್ಲಿ ಮುನ್ನಡೆಸುವುದಲ್ಲ. ದೊರೆತ ಅವಕಾಶವನ್ನು ವಿಶ್ಲೇಷಿಸಿ ಹಿಂಜರಿಯದೆ ಸವಾಲುಗಳನ್ನು ಎದುರಿಸುವುದು ಎಂದು ಹೇಳಿದರು” . ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಪ್ರಾಂಶುಪಾಲರಾದ ರೆ.ಫಾ ಮೆಲ್ವಿನ್
ಕಡಬ,ಸವಣೂರು : ಮಾತೃಭೂಮಿ ಸಾವಯವ ಕೃಷಿ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ.) ಕಡಬ ,ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ,ಅರಣ್ಯ ಇಲಾಖೆ ಪುತ್ತೂರು ,ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲ ಇದರ ವತಿಯಿಂದ ಸವಣೂರು ಯುವಕ ಮಂಡಲದ ಯುವ ಸಭಾಭವನದಲ್ಲಿ ಸಸಿ ಮತ್ತು ತರಕಾರಿ ಬೀಜ ವಿತರಣೆ ಹಾಗೂ ಕೃಷಿ ಅರಣ್ಯ ರೈತ ಸಹಾಯಧನದ ಬಗ್ಗೆ ಮಾಹಿತಿ ಕಾರ್ಯಗಾರ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಾರ್ಯಪ್ಪ ಮಾತನಾಡಿ,
ಶ್ರೀ. ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಕೆಸರುಡೊಂಜಿ ದಿನ ನೇಜಿ ನಡುವ ಸಂಭ್ರಮ ಮನೆಮಾತಾಗಿತ್ತು.ಮಕ್ಕಳಿಗೆ ಹಳ್ಳಿಯ ವಾತಾವರಣ ಕಲ್ಪಿಸಿಕೊಡಲಾಗಿತ್ತು.ಶಾಲಾ ಮಕ್ಕಳಿಗೆ ಕೃಷಿಯ ಬಗ್ಗೆ ಅರಿವು ಮೂಡಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಕಾರ್ಯಕ್ರಮವನ್ನು ರತ್ನಮಾನಸ ಇಲ್ಲಿನ ಮೇಲ್ವಿಚಾರಕರಾಗಿರುವ ಶ್ರೀ. ಯತೀಶ್ ಬಳಂಜ ಮಾತನಾಡುತ್ತಾ,ಪ್ರಕೃತಿಯ ವಿಸ್ಮಯ,ಅದರಿಂದಾಗುವ ಪ್ರಯೋಜನ,ಅದನ್ನು ಉಳಿಸುವ ಪ್ರಯತ್ನ ವಿದ್ಯಾರ್ಥಿಗಳು
ಮೂಡುಬಿದಿರೆ : ಇಟ್ಟಿಗೆ, ಮರಳು ಮತ್ತು ಸಿಮೆಂಟಿನಿಂದ ಪಕ್ಷವನ್ನು ಕಟ್ಟಲು ಸಾಧ್ಯವಿಲ್ಲ. ಉನ್ನತ ಮಟ್ಟದಲ್ಲಿ ಪಕ್ಷವನ್ನು ಕಟ್ಟಲು ಮತ್ತು ಮತ ಬ್ಯಾಂಕ್ ಪರಿವರ್ತನೆಯಾಗಬೇಕಾದರೆ ಜನ ಸ್ಪಂದನೆ ಅಗತ್ಯ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು. ಅವರು ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಮಾಜ ಮಂದಿರದಲ್ಲಿ ನಡೆದ ಪುತ್ತಿಗೆ ಜಿ.ಪಂ.ಕ್ಷೇತ್ರದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸರಕಾರಗಳು ಗ್ರಾ.ಪಂಗಳ ಮೂಲಕ 42 ವಿವಿಧ
ಯುಎನ್‍ಡಿಪಿ ಮತ್ತು ಎಎಲ್‍ಸಿ ಇಂಡಿಯಾ ಸಂಸ್ಥೆಯ ವತಿಯಿಂದ 5 ದಿನದ ಉದ್ಯಮಶಿಲತೆ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಕುಂಪಲದಲ್ಲಿ ಉದ್ಘಾಟನೆಗೊಂಡಿತು. ಮಹಿಳಾ ಉದ್ಯಮಿ ಗಳನ್ನು ಪ್ರೋತ್ಸಾಹಿಸಿ ಅವರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಈ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಭಾಗಿತ್ವದೊಂದಿಗೆ ಸ್ತ್ರೀ ಶಕ್ತಿ ಗುಂಪಿನ ಆಸಕ್ತ ಮಹಿಳೆಯರು ಈ ತರಬೇತಿಯಲ್ಲಿ ಭಾಗವಹಿಸಿದರು. ನಾರಾಯಣ ಕುಂಪಲ ಅವರು
ವಿಟ್ಲ: ಇಲ್ಲಿನ ಸೂರಿಕುಮೇರು ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುವಲ್ಲಿ ರಸ್ತೆಯ ಮಧ್ಯೆ ಅಡುಗೆ ಎಣ್ಣೆ ಸಾಗಾಟದ ಟ್ಯಾಂಕರ್ ಕೆಟ್ಟು ನಿಂತಿದ್ದರ ಪರಿಣಾಮ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ಕಿಲೋಮೀಟರ್ ಗಟ್ಟಲೆ ವಾಹನಗಳು ಸಾಲಾಗಿ ನಿಂತಿದೆ,ಸ್ಥಳದಲ್ಲಿ ಪೋಲಿಸರು ಮತ್ತು ಸೂರಿಕುಮೇರು ಪರಿಸರದ ಯುವಕರು ವಾಹನಗಳ ಸಂಚಾರಕ್ಕೆ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ಸಾರೆ
ಮಳೆಯಿಂದ ಹಾನಿಗೊಳಗಾಗಿದ್ದ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಉಪ್ಪುಕಳ ಗ್ರಾಮಕ್ಕೆ ಬಂದರು ಹಾಗೂ ಮೀನುಗಾರಿಕೆ ಸಚಿವ ಅಂಗಾರ ಭೇಟಿ ನೀಡಿದ್ದು, ಶೀಘ್ರದಲ್ಲೇ ಸೇತುವೆ ನಿರ್ಮಾಣದ ಭರವಸೆ ನೀಡಿದರು. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 124 ಸೇತುವೆಗಳು ನಿರ್ಮಾಣವಾಗಿವೆ. ವಿಶೇಷ ಪ್ರಾಶಸ್ತ್ಯ ನೀಡಿ ಗ್ರಾಮಗಳನ್ನು ಬೆಸೆಯುವ ಸಂಪರ್ಕ ಸೇತುವೆ ನಿರ್ಮಿಸಲಾಗುತ್ತದೆ. ಉಪ್ಪುಕಳದಲ್ಲೂ ಅತೀ ಶೀಘ್ರದಲ್ಲೇ ಸೇತುವೆ ರಚನೆಯಾಗಲಿದ್ದು, ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡಲಾಗುವುದು
ಕಾರ್ಕಳ : ಕಳೆದ ಮಾರ್ಚ್ ತಿಂಗಳಲ್ಲಿ ಕಾರ್ಕಳದಲ್ಲಿ ಬಹಳ ಅದ್ದೂರಿಯಾಗಿ ಕಾರ್ಕಳ ಉತ್ಸವ ಜರುಗಿದ್ದು. ಈ ಸಂದರ್ಭದಲ್ಲಿ ಕಾರ್ಕಳ ತಾಲೂಕಿನ ಮುಖ್ಯ ರಸ್ತೆಗಳು, ಚರಂಡಿ ಮೋರಿಗಳಿಗೆ ಕೋಟಿಗಟ್ಟಲೆ ರೂಪಾಯಿಗಳನ್ನು ಖರ್ಚು ಮಾಡಿ ಡಾಮರೀಕರ್ಣ ಮಾಡಲಾಗಿತ್ತು. ಇದೀಗ ಕಾರ್ಕಳದ ಮುಖ್ಯ ರಸ್ತೆಗಳಲ್ಲಿ ಒಳ ಚರಂಡಿಯ ತ್ಯಾಜ್ಯ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ಕಾರ್ಕಳ ಮುಖ್ಯ ರಸ್ತೆಯ ಡಾಮರು ಎದ್ದು ಹೊಂಡಗಳು ಬಿದ್ದು ಪಾದಾಚಾರಿಗಳಿಗೆ ಹಾಗೂ ವಾಹನ ಚಾಲಕರಿಗೆ ಹೋಗುವುದೇ ಒಂದು




























