Home Posts tagged V4News (Page 218)

ಪಿಲಿಕುಳದಲ್ಲಿ ಮತ್ಸ್ಯೋತ್ಸವ

ಬಲೆಗೆ ಬಿದ್ದ ಕೆಜಿಗಟ್ಟಲೆ ತೂಕವಿರುವ ಮೀನು . ಬಲೆಯಿಂದ ಇಳಿಸುತ್ತಿದ್ದಂತೆ ಮೀನುಗಳ ಮಾರಾಟ. ಖರೀದಿಸಿದ ಮೀನು ಮಧ್ಯಾಹ್ನಕ್ಕೆ ಔತಣ. ಹೌದು.. ಈ ದೃಶ್ಯ ಕಂಡುಬಂದದ್ದು ಮಂಗಳೂರಿನ ಪಿಲಿಕುಳ ಮತ್ಸ್ಯೋತ್ಸವದಲ್ಲಿ. ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಮತ್ತು ಮೀನುಗಾರಿಕಾ ಇಲಾಖೆಯ ಜಂಟಿ ಆಶ್ರಯದಲ್ಲಿ ಪಿಲಿಕುಳದ ಲೇಕ್ ಗಾರ್ಡನ್ ಕೆರೆಯಲ್ಲಿ ಮತ್ಸ್ಯಬೇಟೆ ನಡೆದು ಅಲ್ಲಿಯೇ

ಮನೋಜ್ ಕನಪಾಡಿ ಕೈಚಳಕದಲ್ಲಿ ಮೂಡಿಬಂದ ಫೈಬರ್ ಆರ್ಟ್

ಬಂಟ್ವಾಳದ ಖ್ಯಾತ ಫೈಬರ್ ಆರ್ಟ್ ಕಲಾವಿದ ಮನೋಜ್ ಕನಪಾಡಿ ಅವರ ಕೈ ಚಳಕದಲ್ಲಿ ಕುರುಕ್ಷೇತ್ರ ಯುದ್ಧದಲ್ಲಿ ಶಸ್ತ್ರ ತ್ಯಾಗ ಮಾಡಿದ ಅರ್ಜುನನಿಗೆ ಗೀತೆಯನ್ನು ಭೋಧಿಸುವ ಶ್ರೀ ಕೃಷ್ಣನ ಬೃಹತ್ ಕಲಾಕೃತಿಯೊಂದು ರಚನೆಗೊಂಡಿದೆ. ಈ ಕಲಾಕೃತಿಯನ್ನು ಮಂಗಳೂರು ಹೊರ ವಲಯದ ಕಿನ್ನಿಗೋಳಿಯ ಎಳತ್ತೂರಿನಲ್ಲಿರುವ ಶ್ರೀ ಶಕ್ತಿ ದರ್ಶನ ಯೋಗಾಶ್ರಮದ ನೂತನ ಮುರಳೀವನದಲ್ಲಿ ಸ್ಥಾಪಿಸಲಾಗಿದೆ. 10 ಅಡಿ ಎತ್ತರದ ನಿಂತ ಭಂಗಿಯಲ್ಲಿರುವ ಶ್ರೀ ಕೃಷ್ಣನ ವಿಗ್ರಹ, 6 ಅಡಿ ಎತ್ತರದ

ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಮಾಡಿಯೇ ಸಿದ್ಧ : ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರಿಗೆ ಮೆಡಿಕಲ್ ಕಾಲೇಜು ಬರಬೇಕು ಎಂಬ ಆಗ್ರಹ ನನಗೆ ಶಾಸಕನಾಗುವ ಮೊದಲೇ ಇತ್ತು. ಅಭಿವೃದ್ದಿಯಾಗುತ್ತಿರುವ ಪುತ್ತೂರಿಗೆ ಈ ಯೋಜನೆಯನ್ನು ಜಾರಿಗೆ ತರಲು ಈಗಾಗಲೇ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು ಕ್ಯಾಬಿನೆಟ್‍ನಲ್ಲಿ ಅನುಮೋದನೆ ಮಾಡಿಸಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಿಸಿಯೇ ಸಿದ್ದ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು. ಅವರು ಮೆಡಿಕಲ್ ಕಾಲೇಜಿಗೆ ನಿಗಧಿಪಡಿಸಲಾದ ಜಾಗವನ್ನು ವೀಕ್ಷಣೆ ಮಾಡಿದರು. ಸುಮಾರು 40 ಎಕ್ರೆ ಸರಕಾರಿ

ಆಂಬ್ಯುಲೆನ್ಸ್ ಢಿಕ್ಕಿ : ಪಾದಚಾರಿ ಮೃತ್ಯು

ಉಳ್ಳಾಲ: ಆಂಬ್ಯುಲೆನ್ಸ್ ಢಿಕ್ಕಿ ಹೊಡೆದು ಪಾದಚಾರಿ ಸಾವನ್ನಪ್ಪಿದ ಘಟನೆ ತಲಪಾಡಿ ಮರೋಳಿ ಬಾರ್ ಎದುರುಗಡೆ ಸಂಭವಿಸಿದೆ. ಕಾಸರಗೋಡು ಮಂಗಲ್ಪಾಡಿ ಹೇರೂರು ನಿವಾಸಿ ಫ್ರಾನ್ಸಿಸ್ ಡಿಸೋಜ (62) ಮೃತರು. ಮನೆಯಿಂದ ತಲಪಾಡಿಗೆ ಬಂದಿದ್ದ ಫ್ರಾನ್ಸಿಸ್, ಮರೋಳಿ ಬಾರ್ ಎದುರುಗಡೆಯಿಂದ ವಾಪಸ್ಸು ಮನೆಗೆ ತೆರಳಲು ರಾಷ್ಟ್ರೀಯ ಹೆದ್ದಾರಿಯನ್ನು ದಾಟುವ ಸಂದರ್ಭ ಕೇರಳದಿಂದ ಮಂಗಳೂರು ಕಡೆಗೆ ಅಮಿತ ವೇಗದಲ್ಲಿ ಬರುತ್ತಿದ್ದ ಖಾಲಿ ಆಂಬ್ಯುಲೆನ್ಸ್ ಫ್ರಾನ್ಸಿಸ್ ಅವರಿಗೆ ಢಿಕ್ಕಿ

ಎಸ್.ಡಿ.ಎಂ ಕಾಲೇಜಿನ ಸಾಧಕರಿಗೆ ಸನ್ಮಾನದ ಗರಿ

ಎಸ್.ಡಿ.ಎಮ್ ಪದವಿ ಮತ್ತು ಸ್ನಾತಕೋತ್ತರ ಕೇಂದ್ರದ ನಿವೃತ್ತ ಸಿಬ್ಬಂದಿ ಸಾಧಕ ಭೋಧಕರು ಮತ್ತು ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರು, ಧರ್ಮಸ್ಥಳದ ಧರ್ಮಧಿಕಾರಿಗಳೂ ಆದ ಡಾ. ಡಿ. ವೀರೆಂದ್ರ ಹೆಗಡೆ ಸನ್ಮಾನಿಸಿದರು. ಇತ್ತೀಚೆಗೆ ನಿವೃತ್ತರಾದ ವಿಶ್ರಾಂತ ಪ್ರಾಂಶುಪಾಲರಾಧ ಡಾ. ಸತೀಶ್ಚಂದ್ರ ಎಸ್, ಡಾ. ಉದಯ ಚಂದ್ರ ಪಿ, ಡಾ. ಜಯಕುಮಾರ್ ಶೆಟ್ಟಿ, ನಿವೃತ್ತ ಪ್ರಾಧ್ಯಾಪಕರಾದ ಡಾ. ಕೆ.ವಿ. ನಾಗರಾಜಪ್ಪ, ಪ್ರೊ. ಅಜಯ್ ಕೊಂಬ್ರಬೈಲು, ಡಾ. ಶಂಕರ್ ನಾರಾಯಣ, ಡಾ. ಬಿ.ಪಿ

ಕಡಬ : ಶಾಸಕಿ ಭಾಗೀರಥಿ ಮುರುಳ್ಯ ಅವರ ನೂತನ ಕಚೇರಿ ಉದ್ಘಾಟನೆ

ಸುಳ್ಯ ತಾಲೂಕಿನ ಶಾಸಕಿ ಭಾಗೀರಥಿ ಮುರುಳ್ಯ ಅವರ ಕಡಬದ ನೂತನ ಕಛೇರಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಡಬ ಮಿನಿ ವಿಧಾನ ಸೌಧದಲ್ಲಿ ನೂತನ ಕಚೇರಿ ಉದ್ಘಾಟಿಸಲಾಯಿತು. ಬೆಳಿಗ್ಗೆ ಗಣಹೋಮ ಪೂಜೆ ನಡೆಸಿದ ಬಳಿಕ ಉದ್ಘಾಟನೆ ನೆರವೇರಿಸಲಾಯಿತು. ಜನಸಂಘ ಹಗೂ ಬಿಜೆಪಿಯ ಹಿರಿಯ ಕಾರ್ಯಕರ್ತರಾದ ಹರಿಶ್ಚಂದ್ರ ರೈ ಪಟ್ಟೆಗುತ್ತು ಪೆರಾಬೆ ಹಾಗೂ ತನಿಯಪ್ಪ ಮಜ್ಜಗುಡ್ಡೆ ಕಡಬ, ಕುಶಾಲಪ್ಪ ಗೌಡ ಕುಡಾಲ ದೀಪ ಬೆಳಗಿಸಿ ಉದ್ಘಾಟನೆ ನೆರವೇರಸಿದರು. ಶಾಸಕಿ ಭಾಗೀರಥಿ ಮುರುಳ್ಯ ಅವರು 94

ಮಂಗಳೂರು : ಮಣಿಪುರದಲ್ಲಿ ಕ್ರೈಸ್ತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ಮಣಿಪುರ ರಾಜ್ಯದಲ್ಲಿ ಸುಮಾರು ಎರಡು ತಿಂಗಳುಗಳಿಂದ ಅಲ್ಲಿನ ಕ್ರೈಸ್ತ ಸಮುದಾಯದವರ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಯನ್ನು ಖಂಡಿಸಿ ಹಾಗೂ ಶಾಂತಿ ಮರು ಸ್ಥಾಪಿಸಿ ನೊಂದವರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಕರ್ನಾಟಕ ಸೀರೋ ಮಲಬಾರ್ ಕೆಥೊಲಿಕ್ ಅಸೋಸಿಯೇಶನ್ ನೇತೃತ್ವದಲ್ಲಿ ನಗರದ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಮಣಿಪುರ ಹಿಂಸಾಚಾರವನ್ನು ತಡೆಗಟ್ಟಲು ಕೇಂದ್ರ ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು, ಪ್ರಧಾನಿಯವರು ಮಣಿಪುರಕ್ಕೆ ಭೇಟಿ

ಮಂಜೇಶ್ವರ : ನೀರಿನ ಕೊಳಕ್ಕೆ ಬಿದ್ದು ಯುವಕರಿಬ್ಬರು ಮೃತ್ಯು

ಪೆರ್ನಾಳ್ ಹಬ್ಬ ಆಚರಿಸಲೆಂದು ಸಂಬಂಧಿಕರ ಮನೆಗೆ ಬಂದಿದ್ದ ಯುವಕರಿಬ್ಬರು ಮಸೀದಿಯ ಸಮೀಪದ ಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೊಗ್ರಾಲ್ ಕೊಪ್ಪಳದಲ್ಲಿ ಶನಿವಾರ ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿದೆ. ಮಂಜೇಶ್ವರ ಮಜಿಬೈಲ್ ನಿವಾಸಿ ಖಾದರ್ – ನಸೀಮಾ ದಂಪತಿಗಳ ಮಕ್ಕಳಾದ ಅಬ್ದುಲ್ ನಾಝಿಂ (22) ಹಾಗೂ ಮೊಹಮ್ಮದ್ ನವಾ (17) ಮೃತ ದುರ್ದೈವಿಗಳು. ಸ್ಥಳಕ್ಕಾಗಮಿಸಿದ ಸ್ಥಳೀಯರು ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಮಂಗಲ್ಪಾಡಿ ಆಸ್ಪತ್ರೆಗೆ

ಮಂಗಳೂರು : ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಪತ್ರಿಕಾ ದಿನಾಚರಣೆ

ಮಂಗಳೂರು : ಕನ್ನಡ ಪ್ರಪ್ರಥಮ ಪತ್ರಿಕೆ ಮಂಗಳೂರು ಸಮಾಚಾರದ ನೆನಪಿನಲ್ಲಿ ನಡೆಯುವ ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ಈ ಪತ್ರಿಕೆ ಹಾಗೂ ಅದರ ಸಂಪಾದಕ ಡಾ.ಹೆರ್ಮನ್ ಮ್ಯೋಗ್ಲಿಂಗ್ ಅವರ ಚರಿತ್ರೆಯನ್ನು ಜನತೆಯ ಮುಂದಿಡುವ ಕೆಲಸ ನಡೆಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರು ಹೇಳಿದರು. ಮಂಗಳೂರು ಬಲ್ಮಠ ಥಿಯೋಲಾಜಿಕಲ್ ಕಾಲೇಜು ಆವರಣದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ನಡೆದ ಪತ್ರಿಕಾ

ಸಾಧನೆಯ ಹೆಜ್ಜೆಗಳಿಂದ ಶೈಕ್ಷಣ ಕ ಪರಂಪರೆಗೆ ಅರ್ಥವಂತಿಕೆ: ಡಾ.ವೀರೇಂದ್ರ ಹೆಗ್ಗಡೆ

ಉಜಿರೆ,ಜುಲೈ 1: ಶಿಸ್ತು, ಸಂಯಮ ಮತ್ತು ಜ್ಞಾನವನ್ನು ರೂಢಿಸಿಕೊಳ್ಳುವ ನಿಟ್ಟಿನಲ್ಲಿ ಜಗತ್ತಿನ ಉಳಿದ ದೇಶಗಳಿಗಿಂತ ಭಾರತದ ವಿದ್ಯಾರ್ಥಿಗಳು ಅಗ್ರಮಾನ್ಯತೆಯನ್ನು ಪಡೆದವರು. ಇಂಥ ವಿಶೇಷ ಶೈಕ್ಷಣ ಕ ಪರಂಪರೆಯ ಅರ್ಥವಂತಿಕೆ ಹೆಚ್ಚಿಸುವ ರೀತಿಯಲ್ಲಿ ವಿದ್ಯಾರ್ಥಿಗಳು ಸಾಧನೆಯ ಹೆಜ್ಜೆಗಳನ್ನಿರಿಸಬೇಕು ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ, ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.ಉಜಿರೆಯ ಎಸ್.ಡಿ.ಎಂ ಕಾಲೇಜಿನ ವಾರ್ಷಿಕೋತ್ಸವ