Home Posts tagged V4News (Page 90)

ಸುಬ್ರಹ್ಮಣ್ಯ: ಚಂಪಾಷಷ್ಠಿ ಮಹೋತ್ಸವ; ಭಕ್ತರಿಂದ ಎಡೆಸ್ನಾನ ಸೇವೆ

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಚೌತಿಯ ದಿನವಾದ  ಶನಿವಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರು ಎಡೆಸ್ನಾನ ಸೇವೆ ನೆರವೇರಿಸಿದರು. ಗೋವು ಸೇವಿಸಿದ ಎಲೆಯ ಮೇಲೆ  ಭಕ್ತರು ಉರುಳು ಸೇವೆ ನಡೆಸುವ ಮೂಲಕ ಚಂಪಾಷಷ್ಠಿಯ ಜಾತ್ರೋತ್ಸವದ ಚೌತಿಯ ದಿನದಂದು ಎಡೆಸ್ನಾನ ಹರಕೆ ಸೇವೆ ಸಲ್ಲಿಸಿದರು. ಸುಮಾರು 95ಭಕ್ತರು

  ಕುಕ್ಕೆ: ಅನ್ನದಾನದ ಸಂಕೇತವಾಗಿ ಶ್ರೀ ದೇವಳದಲ್ಲಿ ಪಲ್ಲಪೂಜೆ

ಸುಬ್ರಹ್ಮಣ್ಯ :ಮಹಾತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಕಾರ್ತಿಕ ಶುದ್ಧ ಚೌತಿಯ ದಿನವಾದ ಶನಿವಾರ ಶ್ರೀ ದೇವಳದಲ್ಲಿ ಪಲ್ಲಪೂಜೆ ನೆರವೇರಿತು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ಒಳಾಂಗಣದಲ್ಲಿ ಪಲ್ಲಪೂಜೆ ನೆರವೇರಿಸಿದರು.ಅಲ್ಲದೆ ಅಕ್ಷಯ ಪಾತ್ರೆಗೆ ಪೂಜೆ ಸಲ್ಲಿಸಿದರು.ಕುಕ್ಕೆಯಲ್ಲಿ ನಿರಂತರ ಅನ್ನದಾನ ನಡೆಯುವುದು ಪ್ರಧಾನವಾಗಿದ್ದು ಜಾತ್ರಾ ಸಮಯ ವಿಶೇಷ ಬೋಜನ ಪ್ರಸಾದ ವಿತರಣೆಯ ಸಂಕೇತವಾಗಿ ಶ್ರೀ

ಮಂಗಳೂರು: ರಾಷ್ಟ್ರಮಟ್ಟದ ಪಲ್ಸರ್ ಮೇನಿಯಾ 2.0ದಲ್ಲಿ ಪ್ರಥಮ ಸ್ಥಾನ ಪಡೆದ ನೌಮಾನ್ ಪಜೀರ್

ಆತ ಗ್ರಾಮೀಣ ಭಾಗದ 20ರ ಹರೆಯದ ಯುವಕ.  ಕಾಲೇಜು ಮೆಟ್ಟಿಲು ಹತ್ತದೇ, ಕಿರಿ ವಯಸ್ಸಿನಿಂದಲೇ ಸ್ಟಂಟ್‌ನಲ್ಲಿ ಅತೀವ ಹುಮ್ಮಸ್ಸು. ಇಂದು ಅದೇ ಹುಮ್ಮಸ್ಸು ರಾಷ್ಟ್ರದ 25,೦೦೦ ಮಂದಿಯ ಎದುರುಗಡೆ, ೨೮  ಸ್ಪರ್ಧಾಳುಗಳನ್ನು ಸೋಲಿಸಿ ಇಡೀ ಗ್ರಾಮದ ಹೆಸರನ್ನು ಕೀರ್ತಿಪತಾಕೆಗೆ ಏರಿಸಿ ಸಾಧನೆ ಮೆರೆದಿದ್ದಾರೆ. ಪಜೀರು ಗ್ರಾಮದ ನಿವಾಸಿ ನೌಮಾನ್ ಪಜೀರು ಎಂಬವರು ಪ್ರತಿಷ್ಠಿತ ಬಜಾಜ್ ಆಟೋ ಲಿಮಿಟೆಡ್ ಇವರು ಮುಂಬಯಿ ಯಲ್ಲಿ ಆಯೋಜಿಸಿದ  ರಾಷ್ಟ್ರಮಟ್ಟದ ಪಲ್ಸರ್ ಮೇನಿಯಾ 2.0

ಕುಂದಾಪುರ: ಸೌಹಾರ್ದ ಕ್ರಿಸ್ಮಸ್ ಆಚರಣೆ

ಉಡುಪಿ: ಕ್ರಿಸ್ತ ಜಯಂತಿ ಹಬ್ಬವು ಶಾಂತಿಯನ್ನು ಸಾರುತ್ತದೆ. ಶಾಂತಿಯ ಸಾಧನವಾಗಲು, ಶಾಂತಿಯ ದೂತರಾಗಲು ನಮ್ಮನ್ನು ಪ್ರೇರೇಪಿಸುತ್ತದೆ. ಕ್ರಿಸ್ತ ಜಯಂತಿಯ ಪ್ರೀತಿಯ ಜ್ಯೋತಿ ನಮ್ಮ ತನುಮನಗಳಲ್ಲಿ ಪ್ರಜ್ವಲಿಸಬೇಕಾದರೆ ನಾವು ಕ್ರಿಸ್ತರಂತೆ ಪ್ರೀತಿ ಸ್ವರೂಪರಾಗಿ ಸೇವಾಮನೋಭಾವದಿಂದ ನಿಸ್ವಾರ್ಥಿಗಳಾಗಬೇಕು ಎಂದು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು. ಅವರು ಶನಿವಾರ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ 

ಕಿನ್ನಿಗೋಳಿ: ಮಾನವನ ಮಾನಸಿಕ, ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ: ಹಿಲ್ಡಾ ಡಿಸೋಜ

ಮನುಷ್ಯನ ಮಾನಸಿಕ ಹಾಗೂ ದೈಹಿಕ ಸದೃಡತೆಗೆ ಕ್ರೀಡೆಯು ಸಹಕಾರಿ ಎಂದು ಕಿನ್ನಿಗೋಳಿ ಲಯನ್ಸ್ ಕ್ಲಬ್‌ನ ಅಧ್ಯಕ್ಷೆ  ಹಿಲ್ಡಾ ಡಿಸೋಜ ಅವರು ಹೇಳಿದರು. ಅವರು ಐಕಳ ಶಕ್ತಿಕಲ್ಯಾಣಿ ಮೈದಾನದಲ್ಲಿ ಐಕಳ ಕಂಬಲ ಫ್ರೆಂಡ್ಸ್ ವತಿಯಿಂದ ಆಶಕ್ತರಿಗೆ ವೈದ್ಯಕೀಯ ನೆರವಿಗಾಗಿ ಐಕಳ ಪ್ರೀಮಿಯರ್ ಲೀಗ್  ಕ್ರಿಕೆಟ್ ಪಂದ್ಯಾಟವನ್ನು ದೀಪ ಬೆಳಗಿಸಿ  ಉದ್ಘಾಟಿಸಿ ಮಾತನಾಡಿದರು. ಐಕಳ ಗ್ರಾಮ ಪಂಚಾಯತ್ ಅಧ್ಯಕ್ಷ ದೀವಾಕರ ಚೌಟ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಈ ವೇಳೆ 

ಉಡುಪಿ: ಸೇಲ್ ಎಕ್ಸ್‌ ಪರ್ಟ್ ಬ್ಯುಸಿನೆಸ್ ಸೊಲ್ಯೂಷನ್ಸ್‌ ನಿಂದ ರೂಪಿ ಬಾಸ್ ಎಮ್‌ ಎಸ್‌ಎಮ್‌ ಇ ಮಿಲನ್ ಕಾರ್ಯಕ್ರಮ

ಸೇಲ್ ಎಕ್ಸ್‌ಪರ್ಟ್ ಬ್ಯುಸಿನೆಸ್ ಸೊ ಲ್ಯೂಷನ್ಸ್ ವತಿಯಿಂದ ಎನ್‌ಎಸ್‌ಇ ಎಮರ್ಜ್, ಮತ್ತು ರೋಟರಿ ಉಡುಪಿ ಮಿಡ್ ಟೌನ್ ಸಹಯೋಗದೊಂದಿಗೆ ಎಮ್‌ಎಸ್‌ಎಮ್‌ಇ ಮಿಲನ್ ಡಿ.19ರಂದು ಉಡುಪಿಯ ಹೊಟೇಲ್ ಕಿದಿಯೂರಿನಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದಾರೆ. ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಎಮ್‌ಎಸ್‌ಎಮ್‌ಇ ಬ್ಯುಸ್‌ನೆಸ್ ಓನರ್ಸ್‌ಗಳಿಗೆ ಖುಷಿಯ ವಿಚಾರ. ರೂಪಿ ಬಾಸ್ಎ ಮ್‌ಎಸ್‌ಎಮ್‌ಇ ಮಿಲನ್ ಎಂಬ ಕಾರ್ಯಾಗಾರವನ್ನು ಆಯೋಜಿಸಿದ್ದು, ಅಮೂಲ್ಯವಾದ ನಾಯಕತ್ವದ ಜ್ಞಾನ, ಮಾರಾಟ

ಕಡಬ:ರಬ್ಬರ್ ತೋಟದ ಕಾರ್ಮಿಕರನ್ನು ಬೆನ್ನಟ್ಟಿದ ಕಾಡಾನೆಗಳು: ಮೂವರಿಗೆ ಗಾಯ

ಕಡಬ: ಕೊಣಾಜೆ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ (ಕೆ.ಎಫ್.ಡಿ.ಸಿ) ದ ರಬ್ಬರ್ ತೋಟದಲ್ಲಿ ರಬ್ಬರ್ ಟಾಪಿಂಗ್ ಮಾಡುತ್ತಿದ್ದ ಕಾರ್ಮಿಕರನ್ನು ಕಾಡಾನೆಗಳು ಬೆನ್ನಟ್ಟಿ ಮೂವರು ಗಾಯಗೊಂಡ ಘಟನೆ ಡಿ.16ರ ಶನಿವಾರ ಮುಂಜಾನೆ ಸಂಭವಿಸಿದೆ. ನಿಗಮದ ಟಾಪಿಂಗ್ ಕಾರ್ಮಿಕ ರಾಜಗೋಪಾಲ್ (49), ಮೇಸ್ತ್ರಿಗಳಾದ ನಾಗಪ್ಪ (53) ಹಾಗೂ ಶಿವರಾಜ್ (43) ಗಾಯಗೊಂಡವರು.ಗಾಯಾಳುಗಳನ್ನು ಕಡಬ ಸಮುದಾಯ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ. ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದಾಗ

ಕಡಬ: ಅಪಘಾತದಲ್ಲಿ ಶಾಲಾ ಬಾಲಕ ಸ್ಥಳದಲ್ಲೇ ಮೃತ್ಯು

ಕಡಬ:ಕಳಾರ ಸಮೀಪ ಡಿ.15 ತಡ ರಾತ್ರಿ ಕಾರು ಮತ್ತು ಸ್ಕೂಟರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಶಾಲಾ ಬಾಲಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆಕಾಣಿಯೂರು ಮೂಲದ ಪ್ರಸ್ತುತ ಕಳಾರದಲ್ಲಿ ವಾಸವಿರುವ ಚಂದ್ರಶೇಖರ ಅವರ ಪುತ್ರ ,ಸರಸ್ವತಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಬಿಪಿನ್ ಮೃತಪಟ್ಟ ಬಾಲಕ.ತಮ್ಮ ನಿವಾಸಕ್ಕೆ ತಲುಪುವ ಸುಮಾರು ನೂರು ಮೀಟರ್ ಅಂತರದಲ್ಲಿ ಈ ಅಪಘಾತ ನಡೆದಿದೆ.ಈ ಅಪಘಾತದಲ್ಲಿ ಮೃತ ಬಾಲಕನ ತಂದೆ ಚಂದ್ರಶೇಖರ ಮತ್ತು ಪುಟಾಣಿ ತಂಗಿ ಗಾಯದೊಂದಿಗೆ

ಕಡಬ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸಿದ್ಧಗೊಂಡ ಆಕರ್ಷಕ ರಥ

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾ ಷಷ್ಠಿಯ ಸಂಭ್ರಮದಲ್ಲಿದ್ದು, ಜಾತ್ರಾ ಮಹೋತ್ಸವದಲ್ಲಿ ಬಹುಪಾಲು ರಥಗಳದ್ದೇ ಆಕರ್ಷಣೆ. ಜಾತ್ರೆಗೆ ಮೂಲ ನಿವಾಸಿಗಳಾದ ಮಲೆಕುಡಿಯ ಜನಾಂಗದವರು ರಚಿಸುವ ಆಕರ್ಷಕ ಬೆತ್ತದ ರಥಗಳು ಭೂಷಣವಾಗಿದೆ. ಕಾರ್ತಿಕ ಮಾಸದ ಶುದ್ಧ ಪೌರ್ಣಿಮಿ ದಿನ ಸಹಸ್ರನಾಮಾರ್ಚನೆಯ ಬಳಿಕ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವ ಸಂದರ್ಭ ಎಳೆಯುವ ರಥಗಳಿಗೆ ಗೂಟ ಪೂಜಾ ಮೂಹೂರ್ತವನ್ನು ಕ್ಷೇತ್ರ ಪುರೋಹಿತರು ನೆರವೇರಿಸಿದ್ದರು. ಆನಂತರ

ಪಡುಬಿದ್ರಿ : ಕಾನೂನು ಬಾಹಿರ ಮಣ್ಣು ಸಾಗಾಟ

ಕಾನೂನು ಬಾಹಿರವಾಗಿ ಮಣ್ಣು ಸಾಗಾಟ ನಡೆಸುತ್ತಿದ್ದ ಟಿಪ್ಪರನ್ನು ತಡೆದ ಸಾರ್ವಜನಿಕರು ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಪಡುಬಿದ್ರಿಯ ಇಕ್ಕಟ್ಟಾದ ಸರ್ವಿಸ್ ರಸ್ತೆಯಲ್ಲಿ ಸಾಲುಗಟ್ಟಿ ಟಿಪ್ಪರ್ ಗಳು ಮಣ್ಣಿಗೆ ಹೊದಿಕೆಯನ್ನೇ ಹಾಕದೆ ಕಾನೂನು ಬಾಹಿರವಾಗಿ ಸಾಗಾಟ ನಡೆಸುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಬಹಳಷ್ಟು ಬಾರಿ ಎಚ್ಚರಿಕೆಯನ್ನು ನೀಡಿದರೂ ಮಾನ್ಯತೆ ನೀಡದೆ ತಮ್ಮ ಚಾಲಿ ಮುಂದುವರಿಸಿದ್ದರಿಂದ ಆಕ್ರೋಶಗೊಂಡ ಸಾರ್ವಜನಿಕರು ಪಡುಬಿದ್ರಿ ಗ್ರಾ.ಪಂ.