Home Posts tagged #v4newskarnataka (Page 119)

ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ದಿವಾಳಿ ಅಂಚಿಗೆ : ಭ್ರಷ್ಟಾಚಾರ, ಸೋರಿಕೆ ತಡೆಗಟ್ಟಿ, ಮಂಡಳಿ ಉಳಿಸಿ ಎಂದು ಬೃಹತ್ ಪ್ರತಿಭಟನೆ

ಬೆಂಗಳೂರು, ಸೆ, 21; ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಪ್ರತಿ ವರ್ಷ 2000 ಸಾವಿರ ಕೋಟಿ ರೂಗಿಂತ ಹೆಚ್ಚು ಹಣ ಖರ್ಚು ಮಾಡಲು ಅನುಮೋದನೆ ನೀಡಿದ್ದು, ಇದರಿಂದ ಭಾರೀ ಸೋರಿಕೆ, ಕಮೀಷನ್ ವ್ಯವಹಾರ ಹೆಚ್ಚಾಗಲು ಕಾರಣವಾಗಿದೆ. ಮಂಡಳಿಯನ್ನು ದಿವಾಳಿ ಅಂಚಿಗೆ ಕೊಂಡೊಯ್ಯುವ ಪ್ರಯತ್ನವನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು

ಸ್ವ ಉದ್ಯೋಗದ ಮೂಲಕ ಆರ್ಥಿಕ ಸ್ವಾವಲಂಬನೆಯೊಂದಿಗೆ ಸದೃಢ ಸಮಾಜ ನಿರ್ಮಾಣ : ಡಾ. ರಾಜೇಂದ್ರ ಕೆ.ವಿ.

ಆರ್ಥಿಕ ಸ್ವಾವಲಂಬನೆ ಸಾಧಿಸಲು ಸ್ವ ಉದ್ಯೋಗವನ್ನು ಸೂಕ್ತವಾದ ಮಾಹಿತಿ ಯೊಂದಿಗೆ ಮಾಡುವುದರಿಂದ ಸದೃಢ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಿದಂತಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ತಿಳಿಸಿದ್ದಾರೆ. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ತೋಟಗಾರಿಕಾ ಇಲಾಖೆ, ಮೀನುಗಾರಿಕಾ ಇಲಾಖೆ ಮತ್ತು ಪಶು ಸಂಗೋಪನಾ ಇಲಾಖೆಯ ಸಹಯೋಗದಲ್ಲಿ ಪತ್ರಕರ್ತರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಹಮ್ಮಿಕೊಂಡಿದ್ದ ಸ್ವ ಉದ್ಯೋಗ ಮಾಹಿತಿ ಶಿಬಿರವನ್ನು ನಗರದ ಬೆಂದೂರ್

ಸುಳ್ಯ : ಸರ್ಕಾರಿ ಜಾಗ ಅತಿಕ್ರಮಣಕ್ಕೆ ಮುಂದಾದವರ ವಿರುದ್ಧ ಕ್ರಮಕ್ಕೆ ಆಗ್ರಹ

ಸುಳ್ಯ ತಾಲೂಕಿನ ಜಯನಗರ ಮಿಲಿಟರಿ ಜಾಗಕ್ಕೆ ಸಂಬಂಧಿಸಿದ ಸರಕಾರಿ ಜಾಗವನ್ನು ಅತಿಕ್ರಮಣಕ್ಕೆ ಸ್ಥಳೀಯರೊಬ್ಬರು ಯತ್ನಿಸಿದ್ದು, ಈ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರವುದನ್ನು ಖಂಡಿಸಿ, ಜಾಗ ಅತಿಕ್ರಮಣಕ್ಕೆ ಮುಂದಾದವರ ವಿರುದ್ಧ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ ತಿಳಿಸಿದ್ದಾರೆ.ನೀ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ಜಯನಗರದ ಸರಕಾರಿ ಶಾಲೆಯ ಸಮೀಪ ಗೋಪಾಲ್ ನಾಯಕ್ ಎಂಬವರಿಗೆ

ಕೊಲ್ಯ : ಟೆಂಪೊ ರಿಕ್ಷಾ ಬೈಕ್ ನಡುವೆ ಅಪಘಾತ

ಉಳ್ಳಾಲ, ರಾಷ್ಟ್ರೀಯ ಹೆದ್ದಾರಿ 66ರ ಕೊಲ್ಯ ಬಳಿ ಟೆಂಪೊ ರಿಕ್ಷಾ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಗಾಯಗೊಂಡಿದ್ದಾರೆ. ನೀರುಮಾರ್ಗ ನಿವಾಸಿಗಳಾದ ಲೆನನ್ ಮತ್ತು ಶೋಧನ್ ಗಾಯಗೊಂಡಿದ್ದು, ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ವಿವರ : ತಲಪಾಡಿ ಕಡೆಯಿಂದ ಕೊಲ್ಯ ಕಡೆಗೆ ಟೆಂಪೋ ರಿಕ್ಷಾವೊಂದು ರಾಷ್ಟ್ರೀಯ ಹೆದ್ದಾರಿ ಕೊಲ್ಯ ಜಂಕ್ಷನ್ ಬಳಿ ತಿರುವು ತೆಗೆದುಕೊಳ್ಳುತ್ತಿದ್ದಾಗ ಮಂಗಳೂರಿನಿಂದ ಕಾಸರಗೋಡು ಕಡೆ

ತ್ರಾಸಿ-ಮರವಂತೆ ಬೀಚ್‍ನಲ್ಲಿ ತಿಮಿಂಗಿಲದ ಮೃತದೇಹ ಪತ್ತೆ

ಕುಂದಾಪುರ: ಕೆಲವು ದಿನಗಳ ಹಿಂದೆ ಸತ್ತ ತಿಮಿಂಗಲ ತ್ರಾಸಿ- ಮರವಂತೆ ಕಡಲತೀರದಲ್ಲಿ ಹೆದ್ದಾರಿ ಬದಿಯ ದಡದಲ್ಲಿ ಬಿದ್ದಿದೆ. ಬೆಳಗ್ಗಿನಿಂದಲೇ ತಿಮಿಂಗಿಲ ಕೊಳೆತು ನಾರುತ್ತಿದ್ದರೂ ಇದುವರೆಗೆ ಪ್ರವಾಸೋದ್ಯಮ ಇಲಾಖೆಯಾಗಲೀ ಮೀನುಗಾರಿಕಾ ಇಲಾಖೆಯಾಗಲೀ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲದಿರುವುದು ಹೆದ್ದಾರಿ ಪ್ರಯಾಣಿಕರು ಹಾಗೂ ಪ್ರವಾಸಿಗರ ಆಕ್ರೋಶಕ್ಕೆ ಕಾರಣವಾಗಿದೆ. ಮಂಗಳವಾರ ತಡರಾತ್ರಿ ಸುಮಾರು 500 ಕೆಜಿ ತೂಕದ ತಿಮಿಂಗಿಲದ ಸತ್ತ ರೀತಿಯಲ್ಲಿ ಕಂಡುಬಂದಿದೆ. ತ್ರಾಸಿ

ವ್ಯಸನ ಕ್ಕೆ ದಾಸರಾಗಿರುವ ವ್ಯಕ್ತಿಗಳಿಗೆ ಮನ ಪರಿವರ್ತನೆ ಮಾಡಬೇಕು : ಡಾ. ದೀಕ್ಷಾ ಶೆಣೈ

ಮೂಡುಬಿದಿರೆ : ಮಾದಕ ದ್ರವ್ಯ ಸೇವನೆ, ಮಾದಕ ವ್ಯಸನ ಈ ಸಮಾಜಕ್ಕೆ ಅಂಟಿಕೊಂಡಿರುವ ಕೆಟ್ಟ ರೋಗ. ಈ ದುಶ್ಚಟಕ್ಕೆ ದೊಡ್ಡ ದೊಡ್ಡ ನಗರಗಳಲ್ಲಿ ಸಣ್ಣ ಸಣ್ಣ ಮಕ್ಕಳಿಂದ ಹಿಡಿದು ಅತೀ ವೃದ್ಧರು ಕೂಡ ಬಲಿಯಾಗುವ ಮೂಲಕ ಇದು ರಾಷ್ಟ್ರೀಯ ಸಮಸ್ಯೆಯಾಗಿ ತಲೆದೂರಿದೆ. ಇಂತಹ ವ್ಯಸನಕ್ಕೆ ದಾಸರಾಗಿರುವ ವ್ಯಕ್ತಿಗಳಿಗೆ ಧೈರ್ಯ ತುಂಬಿ ಮನ ಪರಿವರ್ತನೆ ಮಾಡಬೇಕು ಎಂದು ಆಳ್ವಾಸ್‍ನ ಪ್ರಕೃತಿ – ಯೋಗ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ದೀಕ್ಷಾ ಶೆಣೈ

ಬಸ್‍ನಲ್ಲಿ ಅಧಿಕಾರಿಯ ಪರ್ಸ್ ಕದ್ದ ಮಹಿಳೆ : ವೀಡಿಯೋ ವೈರಲ್

ಪುತ್ತೂರು : ಪುತ್ತೂರಿಗೆ ಬರುವ ಖಾಸಗಿ ಬಸ್ ನಲ್ಲಿ ಪ್ರಯಾಣಿಕ ಮಹಿಳೆಯೊಬ್ಬರು ಮತ್ತೊಂದು ಮಹಿಳೆಯ ಪರ್ಸ್ ಕದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಪರ್ಸ್ ಕಳೆದುಕೊಂಡ ಪುತ್ತೂರು ತಾಲೂಕು ಪಂಚಾಯಿತಿಯ ಯೋಜನಾಧಿಕಾರಿ ಸುಕನ್ಯ ಪುತ್ತೂರು ಠಾಣೆಗೆ ಸಿಸಿಟಿವಿ ದೃಶ್ಯ ಆಧರಿಸಿ ದೂರು ನೀಡಿದ್ದು, ಕಳ್ಳತನಗೈದ ಮಹಿಳೆಗಾಗಿ ಪೆÇಲೀಸರು ಹುಡುಕಾಟ ಪ್ರಾರಂಭಿಸಿದ್ದರೆ. ಆದರೆ ಹುಡುಕಾಟಕ್ಕೆ ಖಾಸಗಿ ಬಸ್ ಬಸ್ಸಿನೊಳಗೆ ಅಳವಡಿಸಿದ್ದ ಸಿಸಿಟಿವಿಯ ದೃಶ್ಯವೇ ಪ್ರಮುಖ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಬ್ರಹ್ಮಸಭೆ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಇದರ ಸಾರಥ್ಯದಲ್ಲಿ ಬ್ರಹ್ಮಸಭೆಯು ನಂತೂರಿನ ಶ್ರೀ ಭಾರತೀ ಕಾಲೇಜಿನ ಶಂಕರ ಶ್ರೀ ಸಭಾಂಗಣದಲ್ಲಿ ನಡೆಯಿತು. ಮಂಗಳೂರಿನ ನಂತೂರು ಭಾರತಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಬ್ರಹ್ಮಸಭೆಯ ಉದ್ಘಾಟನಾ ಸಮಾರಂಭ ಜರುಗಿತ್ತು. ಇನ್ನು ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಆರ. ಅಶೋಕ್ ಹಾರನಹಳ್ಳಿ ಅವರು ಉದ್ಘಾಟಿಸಿದರು. ತದ ಬಳಿಕ ಮಾತನಾಡಿದ ಅವರು, ಒಂದು ಕಾಲದಲ್ಲಿ ನಾನು

ಸುಳ್ಯ : ಇನ್ನು ದುರಾಸ್ಥಿಯಾಗದೆ ಉಳಿದ 1954 ನೇ ಇಸವಿಯ ಪುನರ್ಜಿತ ರಸ್ತೆ

ಸುಳ್ಯ ತಾಲೂಕಿನ ಅಮರಪಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆ ಇದಾಗಿದ್ದು ಸತತ ಹತ್ತು ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದೆ. ಸಂಪೂರ್ಣ ಕೆಸರು ಮಯವಾಗಿರುವ ಈ ರಸ್ತೆ ಶೇಣಿಯಿಂದ ಹೊಸಮಜಲು ಎಂಬಲ್ಲಿಗೆ ಸಂಪರ್ಕ ಕಲ್ಪಿಸುತ್ತದೆ. ಅಮರ ಪಡ್ನೂರು ಗ್ರಾಮದ ಅತೀ ಪುರಾತನ ರಸ್ತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಲ್ಲದೆ 25 ಕ್ಕಿಂತ ಹೆಚ್ಚು ಮನೆಯವರು ಈ ರಸ್ತೆಯನ್ನೆ ಅವಲಂಬಸಿರುತ್ತಾರೆ. 1954 ನೇ ಇಸವಿಯಲ್ಲಿ ಪುನರ್ಜಿತ ರಸ್ತೆ ಇದೀಗ ಸಂಪೂರ್ಣ ಹದಗೆಟ್ಟು

ಮಂಗಳೂರು ದಸರಾ : ಹಿಂದಿನ ವರ್ಷಗಳಿಗಿಂತ ಹೆಚ್ಚಿನ ಜನ ಸೇರಲಿದ್ದಾರೆ – ಬಿ.ಜನಾರ್ದನ ಪೂಜಾರಿ

ಮಂಗಳೂರು ದಸರಾ ಈ ಬಾರಿ ಹಿಂದಿನ ದಸರಾಕ್ಕಿಂತಲೂ ವಿಶಿಷ್ಟ ರೀತಿಯಲ್ಲಿ ನಡೆಯಲಿದೆ ಎಂದು ಕುದ್ರೋಳಿ ಶ್ರೀ ಗೋಕರ್ಣ ನಾಥ ಕ್ಷೇತ್ರದ ನವೀಕರಣದ ರೂವಾರಿ ಮಾಜಿ ವಿತ್ತ ಸಚಿವ ಬಿ.ಜನಾರ್ದನ ಪೂಜಾರಿ ತಿಳಿಸಿದ್ದಾರೆ. ಅವರು ಕುದ್ರೋಳಿ ಕ್ಷೇತ್ರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಯವರಿಗೂ ಆಹ್ವಾನ ನೀಡಲಾಗುವುದು. ಅವರು ಭೇಟಿ ನೀಡುತ್ತಾರೆ ಎನ್ನುವ ವಿಶ್ವಾಸವಿದೆ. ಕೊರೋನ ಕಾರಣದಿಂದ ಈ ಹಿಂದಿನ ವರ್ಷ ವಿಜೃಂಭಣೆಯಿಂದ ಆಚರಿಸಲು ಸಾಧ್ಯವಾಗಿಲ್ಲ.