ಬಾಲಿವುಡ್ ಬ್ಲಾಕ್ ಬ್ಲಸ್ಟರ್ ಚಿತ್ರಗಳ ನಿರ್ಮಾಪಕ ಹಾಗೂ ಲೋಕೋಪಕಾರಿ ಅಬ್ದುಲ್ ಗಫರ್ ನಾಡಿಯಾಡ್ ವಾಲಾ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದಾಗಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮೂವರು ಪುತ್ರಿಯರು ಹಾಗೂ ಮೂವರು ಪುತ್ರರು. ಅಪಾರ ಅಭಿಮಾನಿಗಳನ್ನು ಅವರು ಅಗಲಿದ್ದಾರೆ. ಹೀರಾಪೇರಿ ಮತ್ತು ವೆಲ್ ಕಮ್
ಸಣ್ಣ ಪುಟ್ಟ ಕೂಲಿ ಕೆಲಸ ಮಾಡುವವರಿಗೂ ಸರ್ಕಾರದ ವಿವಿಧ ಸವಲತ್ತುಗಳು ದೊರೆಯುತ್ತೆ, ಆದರೆ ಕಷ್ಟ ಪಟ್ಟು ತೆಂಗಿನ ಮರ ಹತ್ತಿ ಜೀವನ ನಡೆಸುವವರಿಗೆ ಯಾವುದೇ ಪೂರಕ ವ್ಯವಸ್ಥೆಗಳು ಇಲ್ಲ ಎಂಬ ನೆಲೆಯಲ್ಲಿ ಪ್ರಾಣೇಶ್ ಹೆಜಮಾಡಿ ನೇತ್ರತ್ವದಲ್ಲಿ ಕೇರಾ ಸುರಕ್ಷಾ ವಿಮೆ ಬಗ್ಗೆ ಮಾಹಿತಿ ಹಾಗೂ ನೋಂದಣಿ ಕಾರ್ಯಕ್ರಮ ಹೆಜಮಾಡಿಯಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಲಾಲಾಜಿ ಆರ್. ಮೆಂಡನ್, ಬಾರೀ ಕಷ್ಟದ ಬದುಕು ತೆಂಗಿನ ಮರ ಹತ್ತುವ ಮಂದಿಯದ್ದು,
ಶ್ರೀಗಣೇಶೋತ್ಸವದ ಪ್ರಯುಕ್ತ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯು ನಡೆಸುವ ಚಿತ್ರಕಲೆ ಹಾಗೂ ಕರಕುಶಲ ಕಲೆಯ ಪ್ರದರ್ಶನ ಹಮ್ಮಿಕೊಂಡಿದೆ. ಆಗಸ್ಟ್ 27 ಮತ್ತು 28 ರಂದು ಬೆಳಗ್ಗೆ 10.00 ಗಂಟೆಯಿಂದ ಸಾಯಂಕಾಲ 6.00 ಗಂಟೆಯ ತನಕ ಕಾವೆರಿ ಕಾಂಪ್ಲೆಕ್ಸ್,ಕಲ್ಲಾರೆ, ಮುಖ್ಯರಸ್ತೆ, ಪುತ್ತೂರು, ಇದರಲ್ಲಿ ಗಣೇಶನ ನಾನಾ ರೀತಿ ಯ ಕರಕುಶಲ ಕಲೆ, ಕ್ಲೇ ಮೊಡೆಲಿಂಗ್ ಚಿತ್ರಕಲೆಗಳು ಇವೆ. ಇದನ್ನು ಸಂಸ್ಥೆಯ ವಿದ್ಯಾರ್ಥಿಗಳು ಮಾಡಿದ ಚಿತ್ರಕಲೆ ಹಾಗೂ ಕ್ಲೇ ಮೊಡೆಲಿಂಗ್
ಉಜಿರೆ: “ಕ್ರಿಯಾಶೀಲತೆ, ಧೈರ್ಯ, ಸಾಮರ್ಥ್ಯ ಮತ್ತು ಸಂವಹನ ಕೌಶಲಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಸತತ ಪ್ರಯತ್ನ ಹಾಗೂ ಏಕಾಗ್ರತೆಯಿಂದ ಜೀವನದಲ್ಲಿ ಗೆಲುವು ಸಾಧಿಸಬಹುದು” ಎಂದು ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎನ್ ದಿನೇಶ್ ಚೌಟಾ ಹೇಳಿದರು. ಅವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ವಿಜ್ಞಾನ ವಿಭಾಗವು ಆಯೋಜಿಸಿದ್ದ 2022ನೇ ಸಾಲಿನ ವಿಜ್ಞಾನಸಿಂಚನ ಎಂಬ ಅಂತರ್ ಕಾಲೇಜು
ಉಜಿರೆ: ಜೀವನದಲ್ಲಿ ಗೆಲುವು ಸಾಧಿಸಬೇಕಿದ್ದರೆ, ಮೊದಲು ಜ್ಞಾನದ ಸಂಪನ್ಮೂಲಗಳನ್ನು ತಿಳಿದುಕೊಂಡು, ಸಿಗುವ ಜ್ಞಾನವನ್ನು ನಿರ್ವಹಿಸಿ, ಕಾರ್ಯಗತಗೊಳಿಸಬೇಕು. ನಾವು ದುಡಿಯುವ ಹಣ ಇಂದು ಬಂದರೆ, ನಾಳೆಯ ದಿನ ಮತ್ತೆ ಖಾಲಿಯಾಗುತ್ತದೆ. ಆದರೆ, ನಾವು ಗಳಿಸುವ ಜ್ಞಾನ ನಮ್ಮ ಕೊನೆಯ ತನಕ ನಮ್ಮ ಮಸ್ತಕದಲ್ಲೇ ಇರುತ್ತದೆ ಎಂದು, ಬೆಳ್ತಂಗಡಿಯ ವಕೀಲರಾದ ರೊಟೇರಿಯನ್, ಧನಂಜಯ ರಾವ್ ಅಭಿಪ್ರಾಯಪಟ್ಟರು. ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ
ಮನುಷ್ಯ ಸಂಬಂಧಗಳು ದೂರವಾಗುವ ಈ ಕಾಲಘಟ್ಟದಲ್ಲಿ ವರ್ಷಕ್ಕೆ ಒಂದು ಬಾರಿಯಾದರೂ ನಾವೆಲ್ಲಾರೂ ಒಟ್ಟು ಸೇರ ಬೇಕು ಸಂಬಂಧಗಳು ಮತ್ತೆ ಬೆಸೆಯ ಬೇಕುಎಂಬ ದೂರ ದೃಷ್ಟಿಯಿಂದ ನಮ್ಮ ಹಿರಿಯರು ನಮಗೆ ಬಿಟ್ಟು ಹೋದ ಬಲುದೊಡ್ಡ ಆಸ್ತಿ ಈ ದೈವ ದೇವಸ್ಥಾನಗಳು ಎಂಬುದಾಗಿ ಸಮಾಜ ಸೇವಕ ಸುರೇಶ್ ಶೆಟ್ಟಿ ಗುರ್ಮೆ ಹೇಳಿದ್ದಾರೆ. ಅವರು ಪಣಿಯೂರು ಭಗವಾನ್ ಶ್ರೀ ಬಬ್ಬುಸ್ವಾಮಿ ದೈವಸ್ಥಾನ ಜೀರ್ಣೋದ್ಧಾರ ಸಂಕಲ್ಪಕ್ಕಾಗಿ ರಚಿಸಿದ ಮನವಿ ಪತ್ರವನ್ನು ಬಿಡುಗಡೆಗೊಳಿಸುವ ಕಾರ್ಯಕ್ರಮದಲ್ಲಿ
ಸುರತ್ಕಲ್ ಟೋಲ್‍ನ್ನು ಹೆಜಮಾಡಿ ಹಾಗೂ ತಲಪಾಡಿ ಜತೆ ಒಂದು ತಿಂಗಳೊಳಗೆ ವಿಲೀನಕ್ಕೆ ನಿರ್ಧರಿಸಲಾಗಿದೆ.ನಗರದ ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು. ಎನ್‍ಎಚ್‍ಐ ಅಧಿಕಾರಿ ಲಿಂಗೇಗೌಡ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ
ಕಾರ್ಕಳದಲ್ಲಿ 2015ರಲ್ಲಿ ಜರುಗಿದ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಪುರಸಭೆಯ ವತಿಯಿಂದ ಸ್ವಾಗತ ಕಮಾನು ಅಂಚೆ ಇಲಾಖೆಗೆ ಸೇರಿದ ನಿವೇಶನ ಇರಿಸಲಾಗಿದೆ. ಸುಮಾರು ಏಳು ವರ್ಷಗಳು ಕಳೆದರೂ ಕಬ್ಬಿಣದ ಆಧಾರ ಸ್ತಂಭಗಳು ತುಕ್ಕು ಹಿಡಿದು ಹೋಗಿದ್ದು, ತೆರಿಗೆ ಹಣ ಪೋಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಅಶ್ಪಕ್ ಅಹಮ್ಮದ್ ಆರೋಪಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಶ್ಪಕ್ ಅಹಮ್ಮದ್ ಅವರು, ಸ್ವಾಗತ ಕಮಾನುವಿಗೆ 2 ಲಕ್ಷ ರೂಪಾಯಿ ಖರ್ಚು ಮಾಡಿ ನಿರ್ಮಿಸಲಾಗಿತ್ತು.
ಪುತ್ತೂರು ಮತ್ತು ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಮೃತ ಮಹೋತ್ಸವದ ಪ್ರಯುಕ್ತ ಸೋಮವಾರ ಪುತ್ತೂರು – ದರ್ಬೆಯಿಂದ ವಿಟ್ಲದ ತನಕ ನಡೆದ ಸ್ವಾತಂತ್ರ್ಯೋತ್ಸವ ನಡಿಗೆಯ ಸಮಾರೋಪ ಸಮಾರಂಭ ವಿಟ್ಲದಲ್ಲಿ ನಡೆಯಿತು.ಕೆಪಿಸಿಸಿ ವಕ್ತಾರ ನಿಕೇತ್‍ರಾಜ್ ಮೌರ್ಯ ಅವರು ಸಮಾರೋಪ ಭಾಷಣ ಮಾಡಿ, ಮಾತನಾಡಿ .ದೇಶವನ್ನು ಭಾಷೆ, ಜಾತಿ ಹೆಸರಿನಲ್ಲಿ ಒಡೆಯುವ ಕೆಲಸವಾಗುತ್ತಿದೆ.ದೇಶದಲ್ಲಿ ಜನರಿಗೆ ರಾಷ್ಟ್ರ ಪ್ರಜ್ಞೆಯನ್ನು ಬೆಳೆಸುವ
ಛಾಯಾಚಿತ್ರಗಾರರಿಗೆ ಕಪ್ಪು ಬಿಳುಪು ಯುಗದಲ್ಲಿದ್ದ ಕಷ್ಟ ಕಾರ್ಪಣ್ಯಗಳು ಇಂದಿನ ಡಿಜಿಟಲ್ ಯುಗದಲ್ಲಿ ಇಲ್ಲ. ದಾಖಲೆಗಳನ್ನು ಚಿರಾಯ್ಯುವಾಗಿಸುವಲ್ಲಿ ಛಾಯಾಚಿತ್ರಗಾರರ ಪಾತ್ರ ಪ್ರಮುಖವಾಗಿದೆ ಛಾಯಾಚಿತ್ರಗಾರರಲ್ಲಿ ಉತ್ತಮ ಕಲಾವಿಧ ಅಡಕವಾಗಿದ್ದಾನೆ ಎಂಬುದುದಾಗಿ ಹಿರಿಯ ಪತ್ರಕರ್ತ ರಾಮಚಂದ್ರ ಆಚಾರ್ಯ ಹೇಳಿದ್ದಾರೆ. ಪಡುಬಿದ್ರಿಯ ಎಸ್ ಎಸ್ ಖಾಸಗಿ ಸಭಾಂಗಣದಲ್ಲಿ ವಿಶ್ವ ಛಾಯಾಚಿತ್ರಗಾರರ ದಿನಾಚರಣೆಯ ಅಂಗವಾಗಿ ಹಿರಿಯ ಛಾಯಾಚಿತ್ರಗಾರರಾದ ಬೆಳ್ಮಣ್ ವೆಂಕಟರಾಯ ಕಾಮತ್




























