ಮಂಗಳೂರಿನ ಬೋಂದೆಲ್‍ನಲ್ಲಿರುವ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರವೇಶಕ್ಕೆ ಸಂಬಂಧಿಸಿದಂತೆ ಪ್ರಥಮ ಸೆಮಿಸ್ಟರ್ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪಾಲಿಟೆಕ್ನಿಕ್‍ಗಳಲ್ಲಿ ಪ್ರವೇಶ ಪಡೆಯಲು ಅವಧಿಯನ್ನು ವಿಸ್ತರಿಸಿದ್ದಾರೆ. ಸಂಸ್ಥೆಗಳ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯ ಮೇರೆಗೆ ಪ್ರಥಮ ಸೆಮಿಸ್ಟರ್‍ನಲ್ಲಿ ಭರ್ತಿ ಆಗದ
ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಬ್ಬಳ್ಳಿ ಗ್ರಾಮದ ಮಹೇಶ್ ಎಂಬುವರ ಜಮೀನಿನಲ್ಲಿ ನೀರು ಇಲ್ಲದ ಬಾವಿಯಲ್ಲಿ ಗಂಡು ಜಿಂಕೆಯೊಂದು ಬಿದ್ದಿದ್ದ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಜಿಂಕೆಯನ್ನು ರಕ್ಷಣೆ ಮಾಡಲಾಗಿದೆ. ಅರಣ್ಯ ಸಂರಕ್ಷಣಾಧಿಕಾರಿ ಬಂಡೀಪುರ ಹುಲಿ ಯೋಜನೆಯ ಡಾ. ರಮೇಶ್ ಕುಮಾರ್ ರವರ ಮಾರ್ಗದರ್ಶನದಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ. ರವೀಂದ್ರರವರ ನೇತೃತ್ವದಲ್ಲಿ..ವಲಯ ಅರಣ್ಯ ಅಧಿಕಾರಿ ಡಾ. ಲೋಕೇಶ್ ಹಾಗೂ ಪಶು ವೈದ್ಯರಾದ
ಪುತ್ತೂರು: ರಮಾನಾಥ ರೈ ಅವರ ಶಾಸಕರಾಗಿ, ಸಚಿವರಾಗಿ ಹಲವಾರು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಿದ್ದು, ಅವರ ಮಾರ್ಗದರ್ಶನ, ಸೇವೆಗಳು ಇನ್ನೂ ರಾಜ್ಯಕ್ಕೆ ಬೇಕಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷರಾದ ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದರು. ಅವರು ಪೆರ್ನೆ ಎ.ಎಂ. ಅಡಿಟೋರಿಯಂನಲ್ಲಿ ಬೆಳ್ಳಿಪ್ಪಾಡಿ ರಮಾನಾಥ ರೈ ಹುಟ್ಟು ಹಬ್ಬ ಅಭಿನಂದನಾ ಸಮಿತಿ , ಯುವ ಕಾಂಗ್ರೆಸ್ ವಿಟ್ಲ-ಉಪ್ಪಿನಂಗಡಿ ಮತ್ತು ವಲಯ ಕಾಂಗ್ರೆಸ್ ಪೆರ್ನೆ ಇವುಗಳ ನೇತೃತ್ವದಲ್ಲಿ ರಮಾನಾಥ ರೈ ಅವರ 71ನೆಯ
ಮುತ್ತೂಟ್ ಮಿನಿ ಫೈನಾನ್ಸಿಯರ್ಸ್ ಲಿಮಿಟೆಡ್ : ಶಾಲಾ ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ ಸುಳ್ಯ ತಾಲೂಕು ಬೆಳ್ಳಾರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದರ್ಖಾಸ್ತು ಇಲ್ಲಿ ಮುತ್ತೂಟ್ ಮಿನಿ ಫೈನಾನ್ಸಿಯರ್ಸ್ ಲಿಮಿಟೆಡ್ಇದರ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್ ವಿತರಿಸುವ ಕಾರ್ಯಕ್ರಮ "ಬ್ಯಾಗ್ ಆಫ್ ಜಾಯ್" ಜರಗಿತು. ಸುಮಾರು 100 ವರ್ಷಗಳ ಅನುಭವ ಹೊಂದಿರುವ ಭಾರತದ ಕೆಲವೇ ಕೆಲವು ಕಂಪನಿಗಳಲ್ಲಿ ಮುತ್ತೂಟ್ ಮಿನಿ ಕೂಡ ಒಂದು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರ ಮೊಬೈಲ್ ನಂಬರ್ ಹ್ಯಾಕ್ ಆಗಿದ್ದು,8590710748 ಮೊಬೈಲ್ ನಂಬರ್ ನಿಂದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರ ಹೆಸರು ಹಾಗೂ ಫೋಟೋ ಬಳಸಿ ವಾಟ್ಸ್ ಅಪ್ ಮೂಲಕ ಸಂದೇಶ ಕಳುಹಿಸಿ ಅಪರಿಚಿತರು ಸಹಾಯ ಅಥವಾ ಹಣವನ್ನು ವರ್ಗಾಯಿಸಲು ಕೇಳಬಹುದು. ಆ ನಂಬರ್ ಜಿಲ್ಲಾಧಿಕಾರಿಯವರದ್ದಾಗಿರುವುದಿಲ್ಲ ಆದಕಾರಣ ಯಾರೂ ಕೂಡ ಯಾವುದೇ ರೀತಿಯಲ್ಲಿ ಸಹಾಯ ಅಥವಾ ಹಣವನ್ನು ಆ ನಂಬರ್ ಗೆ ವರ್ಗಾಯಿಸದಂತೆ ಜಿಲ್ಲಾಧಿಕಾರಿ ಡಾ.
ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವಿನ ದಿನಾಂಕ ಘೋಷಣೆಗೆ ಆಗ್ರಹಿಸಿ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಟೋಲ್ ಗೇಟ್ ಹೋರಾಟ ಸಮಿತಿ ನೇತೃತ್ವದಲ್ಲಿ ಒಂದು ದಿನದ ಧರಣಿ ಸುರತ್ಕಲ್ ಟೋಲ್ ಗೇಟ್ ಬಳಿ ನಡೆಯಿತು. ಧರಣಿ ಸ್ಥಳಕ್ಕೆ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ಲಿಂಗೇಗೌಡ ಭೇಟಿ ನೀಡಿದ್ರು. ಇದೇ ವೇಳೆ ಪ್ರತಿಭಟನಾ ನಿರತರು ಟೋಲ್ ಗೇಟ್ ತೆರವು ದಿನಾಂಕ ಘೋಷಣೆ ಮಾಡುವಂತೆ ಅವರನ್ನು ಆಗ್ರಹಿಸಿದರು. ಪೇಪರ್ ವರ್ಕ್ ನಡೆಯುತ್ತಿದೆ. 20 ದಿನಗಳಿಂದ
ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿಯಲ್ಲಿ ಮೆಸ್ಕಾಂ ಸಿಬ್ಬಂದಿ ಗಳು ಟ್ರಾನ್ಸ್ಪರ್ಮಾರ್ ಅಳವಡಿಸುತ್ತಿದ್ದ ವೇಳೆ ಬರುತ್ತಿದ್ದ ವಾಹನಗಳನ್ನು ನಿಲ್ಲಿಸುತ್ತಿದ್ದರೂ ಮುನ್ನಗ್ಗಿ ಬಂದ ಕಾರೊಂದು ಕಾರ್ಯನಿರತ ಮೆಸ್ಕಾಂ ಸಿಬ್ಬಂದಿಗಳಿಗೆ ಗುದ್ದಿದ ಮೂವರು ಗಾಯಗೊಂಡಿದ್ದಲ್ಲದೆ, ವಿದ್ಯುತ್ ಕಂಬ ಕಾರಿನ ಮೇಲೆ ಬಿದ್ದ ಘಟನೆ ಶಿರ್ವದಲ್ಲಿ ಸಂಭವಿಸಿದೆ. ಶಿರ್ವ ನ್ಯಾರ್ಮ ಎಂಬಲ್ಲಿ ಟ್ರಾನ್ಸ್ಫಾರ್ಮರ್ ಕೆಲಸ ಪ್ರಗತಿಯಲ್ಲಿದ್ದು, 12 ಮಂದಿ ಮೆಸ್ಕಾಂ ಸಿಬ್ಬಂದಿ ಕೆಲಸ
ಮಂಜೇಶ್ವರಂ: ಮಂಜೇಶ್ವರ ಹೊಸಂಗಡಿಯಲ್ಲಿ ಕಾರ್ಯಾಚರಿಸುತ್ತಿರುವ ಅನಂತ ಗ್ಯಾಸ್ ಏಜೆನ್ಸಿ ಮೂಲಕ ವಿತರಿಸಲಾಗುತ್ತಿರುವ ಅಡುಗೆ ಅನಿಲ ವಿತರಣೆಯಲ್ಲಿ ತೂಕ ಕಡಿಮೆ ಇರುವುದಾಗಿ ಆರೋಪಿಸಿ ಗ್ರಾಹಕರೊಬ್ಬರು ವೀಡಿಯೋ ಒಂದನ್ನು ವೈರಲ್ ಮಾಡಿದ ಬೆನ್ನಲ್ಲೇ ಗ್ರಾಹಕರಲ್ಲಿ ಭಾರೀ ಆತಂಕ ಸೃಷ್ಟಿಯಾಗಿತ್ತು.ಆದರೆ ಏಜನ್ಸಿ ಕಚೇರಿ ಮುಂಬಾಗದಲ್ಲಿ ಇರಿಸಲಾಗಿದ್ದ ತೂಕ ಕಡಿಮೆ ಕಂಡು ಬಂದ ಅಡುಗೆ ಅನಿಲವನ್ನು ಬೇರೆಯೇ ಇಡಲಾಗಿತ್ತೆಂದೂ ಅದನ್ನು ವಿತರಿಸುವ ಉದ್ದೇಶವಿರಲಿಲ್ಲವೆಂದೂ ಗ್ಯಾಸ್
ಕಾರ್ಕಳ: ಕಾರ್ಕಳದ ದುರ್ಗಾ ಗ್ರಾಮದ ಕುಕ್ಕಜ ಪಲ್ಕೆ ಎಂಬಲ್ಲಿ ಬೀಸಿದ ಸುಂಟರಗಾಳಿಗೆ ರಿಯಾಜ್ ಎಂಬವರ ಮನೆ ಹಂಚು ಹಾಗೂ ಚಾವಣಿ ಹಾರಿ ಹೋಗಿ ಸುಮಾರು ಐವತ್ತು ಸಾವಿರದಷ್ಟು ನಷ್ಟ ಉಂಟಾಗಿದೆ. ಅದಲ್ಲದೆ ಸಾಕಿದ ಕುರಿಯ ಮೇಲೆ ಚಾವಣಿ ತಗಡು ಬಿದ್ದು ಸುಮಾರು ಏಳು ಸಾವಿರ ರೂಪಾಯಿ ಮೌಲ್ಯದ ಕುರಿ ಸಾವನಪ್ಪಿದೆ. ಅದೇ ರೀತಿ ಜಹೀರ್ ಎಂಬವರ ಮನೆ ಚಾವಣಿ ಹಾರಿ ಹೋಗಿ ಸುಮಾರು 25,000 ನಷ್ಟ ಉಂಟಾಗಿದೆ. ಅಲ್ಲಿ ಸಮೀಪ ಮುನಾವರ್ ಸಾಹೇಬರ ಮನೆ ಚಾವಣಿ ಹಾರಿ […]
ಮೂಡುಬಿದಿರೆ: ಜೇಸಿಐ ಮೂಡುಬಿದಿರೆ ತ್ರಿಭುವನ್ ವತಿಯಿಂದ ಜೇಸಿ ಸಪ್ತಾಹದಂಗವಾಗಿ ನಿಶ್ಮಿತಾ ಪ್ಯಾರಡೈಸ್‍ನಲ್ಲಿ ನಡೆದ ಅವಿಭಜಿತ ದ.ಕ.ಜಿಲ್ಲಾ ಮಟ್ಟದ ಕರೋಕೆ ಸಂಗೀತ ರಿಯಾಲಿಟಿ ಶೋ ಸ್ಪರ್ಧೆಯಲ್ಲಿ ಬಂಟ್ವಾಳದ ಸಾತ್ವಿಕ್ ವಿನ್ನರ್ ಆಗಿ ಮೂಡಿ ಬಂದರು. ಹೆಬ್ರಿಯ ಸಂದೀಪ್ ರನ್ನರ್ ಅಪ್ ಹಾಗೂ ಮಂಗಳೂರಿನ ಅಭಿನವ್ ಎಸ್. ಭಟ್ ತೃತೀಯ ಬಹುಮಾನ ಗಳಿಸಿದರು. ರವಿ ಮಿಜಾರು, ಮುರಾರಿ ರಾವ್ ಹೊಸಬೆಟ್ಟು ಹಾಗೂ ಅನುಷಾ ಉಡುಪಿ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದರು. ಸಂಜೆ




























