ಸುಳ್ಯ ತಾಲೂಕು ಪೆರುವಾಜೆ ಗ್ರಾಮದ ಮೂರನೆಯ ವಾರ್ಡಿನ ನಾಗನ ಮಜಲು ಎಂಬಲ್ಲಿ ರಸ್ತೆ ಬಿರುಕು ಬಿಟ್ಟ ವರದಿಗೆ ಸ್ಪಂದಿಸಿದ ತಾಲೂಕು ತಹಶೀಲ್ದಾರ್ ಶ್ರೀಮತಿ ಅನಿತಾ ಲಕ್ಷ್ಮಿ ಆದೇಶದ ಮೇರೆಗೆ ಪೆರುವಾಜೆ ಗ್ರಾಮದ ನೋಡಲ್ ಆಫೀಸರ್ ಗಳಾದ ಪೆರುವಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಅಲೆಕ್ಕಾಡಿ ಮತ್ತು ಗ್ರಾಮ ಲೆಕ್ಕಾಧಿಕಾರಿ ಶಿವರಾಜ್ ಹಾಗೂ ಮೆಸ್ಕಾಂ
ಉಳ್ಳಾಲ: ರಾಜ್ಯದ ಏಳು ಜಿಲ್ಲೆಗಳಲ್ಲಿ ತೀವ್ರ ಮಳೆಯಾಗಿದ್ದು, ಇಲ್ಲಿ ಸಂಪೂರ್ಣ ಹಾನಿಗೀಡಾದ ಮನೆಯವರಿಗೆ ತಕ್ಷಣ ರೂ. 5 ಲಕ್ಷ ಪರಿಹಾರ ನೀಡುವಂತೆ ಏಳು ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಅವರು ಕಡಲ್ಕೊರೆತಕ್ಕೀಡಾದ ಉಳ್ಳಾಲ ತಾಲೂಕಿನ ಉಚ್ಚಿಲ, ಬಟ್ಟಂಪಾಡಿ, ಸೀಗ್ರೌಂಡ್ ಹಾಗೂ ಮೊಗವೀರಪಟ್ನ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬಂದರು ಹಾಗೂ ಮೀನುಗಾರಿಕಾ ಸಚಿವರುಗಳ ಜೊತೆಗೆ ಭೇಟಿ
ಸ್ವಾಮಿ ವಿವೇಕಾನಂದರು ಕಂಡಂತಹ ಭಾರತವನ್ನು ನಾವು ನಿರ್ಮಾಣ ಮಾಡುವತ್ತ ಮುಂದುವರಿಯಬೇಕಿದ್ದು ಪ್ರಸ್ತುತದ ದಿನಗಳು ದೇಶಾದ್ಯಂತ ಅದಕ್ಕೆ ಪೂರಕ ವಾತಾವರಣ ನಿರ್ಮಿಸಿದ್ದು ಆ ನಿಟ್ಟಿನಲ್ಲಿ ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು.ಬೋಳಿಯಾರಿನ ಅಮರ್ ದೀಪ್ ಸಭಾಂಗಣದಲ್ಲಿ ಬೆಂಗಳೂರಿನ ದಿ ಮೈಸೂರು ಎಲೆಕ್ಟಿಕಲ್ ಇಂಡಸ್ಟ್ರೀಸ್ ಲಿ. ನ ಸಾಂಸ್ಥಿಕ ಸಾಮಾಜಿಕ ಜವಬ್ದಾರಿ(ಸಮೈಸೂರುಆರ್ ) ಯಡಿಯಲ್ಲಿ ಚೇರ್
ತೋಡಾರು ಜಂಕ್ಷನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಡಸಮೇತ ಆಲದ ಧರೆಗುರುಳಿದ್ದು ಅಡಿಯಲ್ಲಿದ್ದ ಹಣ್ಣಿನ ಅಂಗಡಿ ಜಖಂಗೊಂಡಿದೆ.ಆಲದ ಮರದ ಬುಡದಲ್ಲಿಯೇ ತೋಡಾರಿನ ಅಬೂಬಕ್ಕರ್ ಎಂಬವರು ಹಣ್ಣಿನ ವ್ಯಾಪಾರ ನಡೆಸುತ್ತಿದ್ದರು. ಇಂದು ಬೆಳಿಗ್ಗೆ ಬೀಸಿದ ಗಾಳಿಯ ರಭಸಕ್ಕೆ ಬುಡ ಸಮೇತ ಆಲದ ಮರದ ಬಿದ್ದಿದೆ .ಸ್ಥಳೀಯರಿಂದ ಮಿಂಚಿನ ಕಾರ್ಯಾಚರಣೆ ಮರದ ಗೆಲ್ಲುಗಳ ತೆರವಿಗೆ ಕಾರ್ಯಾರಂಭ,ಸಹಕಾರಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ತಾತ್ಕಾಲಿಕ ವ್ಯವಸ್ಥೆ ಸುಗಮ ವಾಹನ ಸಂಚಾರಕ್ಕಾಗಿ
ಕೆಲದಿನಗಳ ಹಿಂದೆ ಭೂಕಂಪನದಿಂದ ಹಾನಿಗೊಳಪಟ್ಟ ಸುಳ್ಯ ತಾಲೂಕಿನ ವಸಂತ ಭಟ್ ಅವರ ಮನೆಗೆ ಕಂದಾಯ ಸಚಿವರಾದ ಆರ್. ಅಶೋಕ್, ಇಂಧನ,ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸುನಿಲ್ ಕುಮಾರ್, ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್, ಸುಳ್ಯ ತಾಲೂಕು ತಹಶೀಲ್ದಾರ್ ಅನಿತಾ ಲಕ್ಷ್ಮೀ ಅವರು ಜು.7ರ ಗುರುವಾರ ಭೇಟಿ
ಕಾರ್ಮಿಕ ಇಲಾಖೆಯ ವತಿಯಿಂದ ಕಾರ್ಮಿಕರ ಸಮಸ್ಯೆಗಳನ್ನು ಬಗೆ ಹರಿಸುವ ಸಲುವಾಗಿ, ಪರಿಹಾರ ಒದಗಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಕಾರ್ಮಿಕ ಅದಾಲತ್ ನಡೆಸಲಾಗುತ್ತಿದ್ದು, ಈ ಪ್ರಯುಕ್ತ ನಗರದ ಯೆಯ್ಯಾಡಿ ಶರ್ಬತ್ ಕಟ್ಟೆಯ ಸಮೀಪದಲ್ಲಿರುವ ಕಾರ್ಮಿಕ ಇಲಾಖೆ ಕಚೇರಿಯಲ್ಲಿ “ಕಾರ್ಮಿಕ ಅದಾಲತ್-2 ವಾಹನ ಜಾಥಾಕ್ಕೆ ಚಾಲನೆ ಸಿಕ್ಕಿತ್ತು. ಸಹಾಯಕ ಕಾರ್ಮಿಕ ಆಯುಕ್ತರಾದ ಶಿವ ಕುಮಾರ್ ಚಾಲನೆ ನೀಡಿದರು. ತದಬಳಿಕ ಮಾತನಾಡಿದ ಅವರು, ಕಾರ್ಮಿಕ ಸಚಿವರ ಸೂಚನೆ ಮೇರೆಗೆ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ಬಳಿಯಿಂದಾಗಿ ಅದ್ಯಪಾಡಿಗೆ ತೆರಳುವ ರಸ್ತೆ ಭಾರೀ ಮಳೆಗೆ ಕೊಚ್ಚಿ ಹೋಗಿದೆ ಇದು ಅದ್ಯಪಾಡಿ-ಕೈಕಂಬ ಸಂಪರ್ಕಿಸುವ ರಸ್ತೆಯಾಗಿದ್ದು, ಕೆಲ ದಿನಗಳ ಹಿಂದೆಯೇ ಇಲ್ಲಿ ಮೋರಿ ಕುಸಿದಿತ್ತು. ಆ ಬಳಿಕ ರಸ್ತೆಯ ಎರಡೂ ಬದಿಗಳಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಿ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ, ವಿಮಾನ ನಿಲ್ದಾಣದ ಹೊರಭಾಗದಲ್ಲಿ
ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶ್ವಮಾನವ ಕುವೆಂಪು ಕಲಾ ಉತ್ಸವ ಮತ್ತು ವಿಶ್ವ ಕನ್ನಡ ಸಮ್ಮೇಳನ ಹಾಗೂ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮ ಮಾಡುವ ಏಕೈಕ ಸಂಸ್ಥೆಯಿಂದ ಕುವೆಂಪು 118ನೇ ಜಯಂತಿ ಕರ್ನಾಟಕ ರತ್ನ ಡಾಕ್ಟರ್ ದೇ ಜವರೇಗೌಡ ಜಯಂತಿ ಗುರು-ಶಿಷ್ಯರ ಕಾರ್ಯಕ್ರಮದ ಪ್ರಯುಕ್ತ ವಿವಿಧ ಕನ್ನಡ ಸಾಂಸ್ಕೃತಿಕ ಉತ್ಸವ ಹಾಗೂ ಅಬುದಾಬಿ ದುಬೈ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿಯವರಿಗೆ ಕರ್ನಾಟಕ ರತ್ನ ಡಾಕ್ಟರ್ ದೇ ಜವರೇಗೌಡ ಪ್ರಶಸ್ತಿಯನ್ನು ದಿನಾಂಕ 6
ತುಳುನಾಡಿನ ಇತಿಹಾಸದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಜೈನ ಮನೆತನದ ವಾರಸುದಾರ, ಮೂಡುಬಿದಿರೆಯ ಬಲ್ಲಾಳ್ ಕುಟುಂಬದ ರಾಹುಲ್ ಬಲ್ಲಾಳ್ (51) ಅವರು ಇಂದು ನಿಧನರಾಗಿದ್ದಾರೆ. ತುಳುನಾಡಿನ ಭವ್ಯ ಪರಂಪರೆ, ಪರೋಪಕಾರಿಗಳು ಆಗಿರುವಂತಹ ಶ್ರೀಮಂತ ಜೈನ ಮನೆತನದ ವಾರಸುದಾರರಾದ ಕೃಷಿಕರೂ, ಉದ್ಯಮಿ ಜಯವರ್ಮರಾಜ್ ಬಲ್ಲಾಳ್ ಅವರ ಸುಪುತ್ರರಾಗಿದ್ದ ರಾಹುಲ್ ಬಲ್ಲಾಳ್ ಕಾನೂನು ಪಧವೀಧರರು. ತನ್ನ ಕುಟುಂಬದ ಕೃಷಿ ಹಾಗೂ ಹೋಟೇಲ್ ಉದ್ಯಮವನ್ನು ಮುನ್ನಡೆಸಲು ರಾಹುಲ್ ಅವರು
ಪಂಜಿಕಲ್ಲು ಗ್ರಾಮದಲ್ಲಿ ಕಾರ್ಮಿಕರು ಉಳಿದುಕೊಂಡಿದ್ದ ಶೆಡ್ ಮೇಲೆ ಬುಧವಾರ ಗುಡ್ಡ ಕುಸಿತದಿಂದ ಮಣ್ಣಿನಡಿಗೆ ಸಿಲುಕಿದ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಆಸ್ಪತ್ರೆಗೆ ದಾಖಲಾಗಿದ್ದವರ ಪೈಕಿ ಓರ್ವ ರಾತ್ರಿ ಮೃತಪಟ್ಟಿದ್ದರೆ, ಇನ್ನೋರ್ವ ಮುಂಜಾವ ಕೊನೆಯುಸಿರೆಳೆದಿದ್ದಾನೆ. ಓರ್ವ ಬಂಟ್ವಾಳದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಣ್ಣಿನಡಿಯಿಂದ ರಕ್ಷಿಸಲ್ಪಟ್ಟು ಗಂಭೀರಾವಸ್ಥೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ




























