Home Posts tagged #v4newskarnataka (Page 53)

ಕೋಲ್ಚಾರಿನಲ್ಲಿ ಕಳಪೆ ಮಟ್ಟದ ರಸ್ತೆ ಕಾಮಗಾರಿ, ಪಾದಯಾತ್ರೆ ಮೂಲಕ ಪ್ರತಿಭಟನೆ

ಆಲೆಟ್ಟಿ ಗ್ರಾಮದ ನಾರ್ಕೋಡು ಕೋಲ್ಚಾರು ಕನ್ನಡಿತೋಡು ಮೂಲಕ ಅಂತರ್ ರಾಜ್ಯ ಸಂಪರ್ಕದ ಮುಖ್ಯ ರಸ್ತೆಯು ಲೋಕೋಪಯೋಗಿ ಇಲಾಖೆಗೆ ಸೇರಿದ್ದು ಕಳೆದ 4 ವರ್ಷಗಳ ಹಿಂದೆ ಶಾಸಕ ಎಸ್.ಅಂಗಾರ ರವರು ಕೋಲ್ಚಾರಿನಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು.ಅನುದಾನ ರೂ. 10.5 ಕೋಟಿ ಬಿಡುಗಡೆಗೊಂಡು ಜೆ.ಡಿ.ಸುವರ್ಣ ಎಂಬ ಗುತ್ತಿಗೆದಾರರು ಕಾಮಗಾರಿ ಕೆಲಸ

ಕಾರ್ಕಳ ಪುರಸಭೆ ಸಾಮಾನ್ಯ ಸಭೆ, ಒಳಚರಂಡಿ ಮಂಡಳಿ ವಿರುದ್ಧ ಕ್ರಿಮಿನಲ್ ದಾಖಲೆ ದಾಖಲಿಸಿ : ಶುಭದರಾವ್ ಸಭೆಯಲ್ಲಿ ಆಗ್ರಹ

ಪುರಸಭೆ ವ್ಯಾಪ್ತಿಯಲ್ಲಿ ಬಹುಕೋಟಿ ರೂಪಾಯಿ ವೆಚ್ಚದ ಒಳಚರಂಡಿ ಕಳಪೆ ಕಾಮಗಾರಿಕೆಯಿಂದ ಕೂಡಿದೆ ಪರಿಸರದ ನಿವಾಸಿಗಳ ಬಾವಿಗಳು ಮಲಿನಗೊಂಡಿವೆ ಇದಕ್ಕಾಗಿ ಒಳಚರಂಡಿ ಮಂಡಳಿ ವಿರುದ್ಧ ಕ್ರಿಮಿನಲ್ ದಾಖಲೆ ದಾಖಲಿಸುವಂತೆ ಶುಭದರಾವ್ ಆಗ್ರಹಿಸಿದರು . ಅಧ್ಯಕ್ಷ ಸುಮಕೇಶವ ಅಧ್ಯಕ್ಷತೆಯಲ್ಲಿ ನಡೆದ ಕಾರ್ಕಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿ ಮೂರು ಮಾರ್ಗದಿಂದ ರಥ ಬೀದಿ ಸೇರಿದಂತೆ ಒಳಚರಂಡಿ ಮೂಲಕ ಹಾದು ಹೋದ ಕಡೆಗಳಲ್ಲಿ ಮಲಿನ ನೀರು ಸೋರಿಕೆಯಾಗುತ್ತಿದೆ. ಒತ್ತಡ

ದೇರೆಬೈಲ್‍ನ ಕೇಬಲ್ ಆಪರೇಟರ್ ಕ್ಲೌಡ್ ಮೆನೇಜಸ್ ನಿಧನ

ಮಂಗಳೂರಿನ ದೇರೆಬೈಲ್‍ನ ನಿವಾಸಿಯಾಗಿರುವ ಕ್ಲೌಡ್ ಮೆನೇಜಸ್ ಅವರು ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಅವರಿಗೆ 53 ವರ್ಷ ಪ್ರಾಯವಾಗಿತ್ತು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಕ್ಲೌಡ್ ಮೇನೇಜಸ್ ಅವರು ನಗರದ ಯೆಯ್ಯಾಡಿಯಲ್ಲಿರುವ ವಿ4 ಡಿಜಿಟಲ್ ಇನ್ಫೋಟೆಕ್ ಪ್ರೈವೆಟ್ ಲಿಮಿಟೆಡ್‍ನ ಪಾರ್ಟನರ್ ಆಗಿದ್ದು, ದೇರೆಬೈಲ್‍ನ

ಬಡಕುಟುಂಬದ ಹೆಣ್ಣು ಮಗಳಿಗೆ ಮದುವೆ ಮಾಡಿಸುವ ಮೂಲಕ ಮಾದರಿಯಾದ ತಿರುವೈಲು ಕಾರ್ಪೋರೇಟರ್ ಹೇಮಲತಾ ರಘು ಸಾಲ್ಯಾನ್

ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುವುದು ಸಾಮಾನ್ಯ. ಆದರೆ ಅವರ ಮಿತಿಯನ್ನು ಮೀರಿಯೂ ಜನ ಸೇವೆ ಮಾಡುವುದು ವಿರಳ. ಅಂತಹ ವಿರಳ ಜನಪ್ರತಿನಿಧಿಯೊನಬ್ಬರು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿದ್ದಾರೆ. ಅವರ ಮಾನವೀಯತೆಯ ಸೇವೆಗೆ ಊರವರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಇವರು ಮಂಗಳೂರು ಮಹಾನಗರ ಪಾಲಿಕೆಯ ತಿರುವೈಲ್ ವಾರ್ಡ್‍ನ ಕಾಪೆರ್Çಲರೇಟರ್ ಹೇಮಲತಾ ರಘು ಸಾಲ್ಯಾನ್. ಪತಿ ರಘು ಸಾಲ್ಯಾನ್ ಜೊತೆ ಸೇರಿ ಸಮಾಜ ಸೇವೆಯಲ್ಲೇ

ಕಾರ್ಕಳದ ಉಮಿಕಲ್ ಬೆಟ್ಟದ ಮೇಲೆ ಪರಶುರಾಮ ಥೀಮ್ ಪಾರ್ಕ್

ಕಾರ್ಕಳ: ಪರಶುರಾಮ ಸೃಷ್ಟಿಯ ಮೂಲಕ ಸಾರ್ಥಕತೆ ಇದೆ. ಇಲ್ಲಿ ಭಾಗವಹಿಸಿದ ನಾವು ಭಾಗ್ಯವಂತರು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು. ಅವರು ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ಉಮಿಕಲ್ ಬೆಟ್ಟದ ಮೇಲೆ 33 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅನಾವರಣ ಗೊಳಿಸಿಮಾತನಾಡಿದರು.ಪರಶುರಾಮನ ಪುತ್ಥಳಿ ನಿರ್ಮಾಣ ಮೂಲಕ ಪುರಾಣಕ್ಕೆ ಹೊಸದೊಂದು ಕುರುಹು ಸಿಕ್ಕಿದೆ ಅಮೂಲಕ ಐತಿಹಾಸಿಕ ದಿನವಾಗಿ ಮೂಡಿಬಂದಿದೆ ಎಂದು ಸಿ ಎಂ ಬೊಮ್ಮಾಯಿ ಬಣ್ಣಿಸಿದರು . ಸಿಕ್ಕ ಅವಕಾಶವನ್ನು

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ

ಸುಬ್ರಹ್ಮಣ್ಯ : ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಇಂದು ಇತಿಹಾಸ ಪ್ರಸಿದ್ದ ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಶಾಸಕ ರಾಜೇಶ್ ನಾಯಕ್ ಅವರ ನೇತೃತ್ವ ದಲ್ಲಿ ನಡೆಯಲಿರುವ ಗ್ರಾಮ ವಿಕಾಸಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಜಿಲ್ಲೆಗೆ ಆಗಿಮಿಸಿರುವ ಅಣ್ಣಾಮಲೈ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಭೇಟಿ ನೀಡಿದರು. ದೇವಳದ ಆಡಳಿತಮಂಡಳಿ

ಉಳ್ಳಾಲ ; ಕುಮ್ಕಿ ಜಮೀನಿನಿಂದ ಮರಗಳ ಕಡಿದುಅಕ್ರಮ ಸಾಗಾಟ

ಉಳ್ಳಾಲ: ಕೋಟೆಕಾರು ಪಟ್ಟಣ ಪಂಚಾಯಿತಿಗೆ ಒಳಪಟ್ಟ ಕುಮ್ಕಿ ಜಮೀನಿನಲ್ಲಿ ಮರಗಳನ್ನು ಕಡಿದು ಅಕ್ರಮವಾಗಿ ಸಾಗಿಸುತ್ತಿರುವ ಕುರಿತು ದ.ಕ ಜಿಲ್ಲಾಧಿಕಾರಿಗಳಿಗೆ ಸ್ಥಳೀಯರು ದೂರು ನೀಡಲಾಗಿದೆ. ಬಗಂಬಿಲದ ಸರ್ವೇ ನಂ. 301/3 ರಲ್ಲಿರುವ ಕುಮ್ಕಿ ಜಮೀನಿಗೆ ಹಕ್ಕುದಾರರಾಗಿರುವ ವ್ಯಕ್ತಿ ಸೇರಿದಂತೆ ಮೂವರು ದೂರು ಸಲ್ಲಿಸಿದ್ದಾರೆ. ಸ್ಥಳೀಯಾಡಳಿತ ಕುಮ್ಕಿ ಜಮೀನನ್ನು ಉಳ್ಳಾಲ ಪುರಸಭೆಗೆ ನೀಡುವ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಆಕ್ಷೇಪಣೆಯನ್ನು ವಕೀಲರ ಮೂಲಕ

ಪತ್ರಕರ್ತ ನವೀನ್ ಸೂರಿಂಜೆ ಕೃತಿ ‘ಕುತ್ಲೂರು ಕಥನ’ ಬಿಡುಗಡೆ

ಮಂಗಳೂರು: ಪತ್ರಕರ್ತ ನವೀನ್ ಸೂರಿಂಜೆ ಬರೆದ ಕೃತಿ ಕುತ್ಲೂರು ಕಥನವನ್ನು ಖ್ಯಾತ ಚಿಂತಕ ಹರ್ಷ ಮಂದರ್ ಬಿಡುಗಡೆಗೊಳಿಸಿದರು. ಬಿಜ್ಜೋಡಿಯ ಶಾಂತಿ ಕಿರಣ ಸಭಾಂಗಣದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಕೃತಿಯ ಅನವಾರಣಗೊಳಿಸಿದ ಹರ್ಷ ಮಂದರ್ ಅವರು ಈ ಕೃತಿಯನ್ನು ಭಾಷಾ ಸಮಸ್ಯೆ ಕಾರಣದಿಂದಾಗಿ ಓದಲು ಸಾಧ್ಯವಾಗದೆ ಇರುವುದಕ್ಕೆ ಬೇಸರ ಇದೆ. ಆದರೆ ಇದರಲ್ಲಿರುವ ವಿಷಯಗಳನ್ನು ಅರಿತುಕೊಂಡಿದ್ದೇನೆ. ಈ ಕೃತಿ  ಸಂವಿಧಾನ ರಕ್ಷಣೆಗೆ ಸಹಾಯಕವಾಗಿದೆ ಎಂದು ಹೇಳಿದರು. ಒಂದು ಊರಿನ

ಉರ್ವಶೆ 2023- ಕೆಎಂಸಿ, ಮಣಿಪಾಲದಲ್ಲಿ ರಾಷ್ಟ್ರೀಯ ಸ್ತ್ರೀ ಮೂತ್ರರೋಗ ಶಾಸ್ತ್ರ ವಿಚಾರ ಸಂಕಿರಣ

ಮಣಿಪಾಲ, 27ನೇ ಜನವರಿ 2023:ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ಉಪವಿಭಾಗವಾಗಿರುವ ಸ್ತ್ರೀ ಮೂತ್ರರೋಗ ಶಾಸ್ತ್ರ ವಿಭಾಗವು ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ 2023 ರ ಜನವರಿ 21 – 22 ರಂದು ಮೊದಲ ರಾಷ್ಟ್ರೀಯ ಸ್ತ್ರೀ ಮೂತ್ರರೋಗ ಶಾಸ್ತ್ರ ವಿಚಾರ ಸಂಕಿರಣ (ಉರ್ವಶೆ 2023 )ವನ್ನು ಆಯೋಜಿಸಿತ್ತು. ತಂಡವು ಆಯೋಜಿಸಿದ ದೇಶದ ವಿವಿಧ ಭಾಗಗಳಿಂದ ಸ್ತ್ರೀ ಶ್ರೋಣಿಯ (ಸ್ತ್ರೀ ಪೆಲ್ವಿಕ್) ಮೆಡಿಸಿನ್ ಮತ್ತು ಪುನರ್ನಿರ್ಮಾಣ

ಲಾರಿಯಿಂದ ಮೀನಿನ ತ್ಯಾಜ್ಯ ನೀರು ; ಸರಣಿ ಅಪಘಾತ, ಟ್ಯಾಂಕರ್ ತಡೆದು ಪ್ರತಿಭಟಿಸಿದ ಸ್ಥಳೀಯರು

ಉಳ್ಳಾಲ: ಫಿಸ್ ಮಿಲ್ ತ್ಯಾಜ್ಯಯುಕ್ತ ನೀರು ಟ್ಯಾಂಕರಿನಿAದ ರಸ್ತೆಯುದ್ದಕ್ಕೂ ಹರಿದು, ಸ್ಥಳೀಯರು ಟ್ಯಾಂಕರ್ ಳಾರಿಯನ್ನು ತಡೆದು ಪ್ರತಿಭಟಿಸಿದ ಘಟನೆ ಉಳ್ಳಾಲದಲ್ಲಿ ಇಂದು ನಡೆದಿದೆ. ಫಿಶ್ ಮೀಲ್ ತ್ಯಾಜ್ಯ ಹೊತ್ತಿದ್ದ ಟ್ಯಾಂಕರ್ ಒಂದು ಇಂದು ಬೆಳಿಗ್ಗೆ ಉಳ್ಳಾಲ ಕೋಟೆಪುರದ ಫ್ಯಾಕ್ಟರಿ ಕಡೆ ಸಾಗುತ್ತಿದ್ದ ವೇಳೆ ಅಬ್ಬಕ್ಕ ವೃತ್ತದಿಂದ ಮೊಗವೀರ ಪಟ್ಣದವರೆಗೆ ರಸ್ತೆಯುದ್ದಕ್ಕೂ ದುರ್ನಾತ ಬೀರುವ ರಾಸಾಯನಿಕ ಮಿಶ್ರಿತ ತ್ಯಾಜ್ಯವನ್ನ ಚೆಲ್ಲುತ್ತಾ ಸಾಗಿದೆ.ಪರಿಣಾಮ