Home Posts tagged #v4newskarnataka (Page 62)

ಪಡೀಲ್‍ನ ಮನೆಯೊಂದರಲ್ಲಿ ಆಕಸ್ಮಿಕ ಬೆಂಕಿ

ಮಂಗಳೂರಿನ ಪಡೀಲ್‍ ಕೊಡಕಲ್‍ನಲ್ಲಿ ಇಂದು ಜಯ ಶೆಟ್ಟಿ ಎಂಬವರ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು ಹಲವಾರು ಪ್ರಮುಖ ದಾಖಲೆ ಪತ್ರಗಳ ಸಹಿತ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಬೆಂಕಿ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಅಗ್ನಿ ಶಾಮಕದಳದ ಸಹಾಯದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ ಜಯಶೆಟ್ಟಿ

ಅಯ್ಯಪ್ಪ ವೃತದಾರಿ ಹೃದಯಾಘಾತದಿಂದ ನಿಧನ

ಮೂಡುಬಿದಿರೆ: ಅಯ್ಯಪ್ಪ ವೃತದಾರಿ ಮೂಡುಬಿದಿರೆ ಮಿಜಾರು ಸಮೀಪದ ಕೊಪ್ಪದ ಕುಮೇರು ಶೇಖರ ಪೂಜಾರಿ (74) ಅವರು ಶಬರಿಮಲೆಗೆ ಹೋಗಿದ್ದ ವೇಳೆ ಹೃದಯಾಘಾತದಿಂದ ಭಾನುವಾರ ನಿಧನರಾಗಿದ್ದಾರೆ. ಶೇಖರ ಪೂಜಾರಿ ಅವರು ಕಳೆದ 48 ವರ್ಷಗಳಿಂದ ಅಯ್ಯಪ್ಪ ಮಾಲಾಧಾರಿಯಾಗಿ ಶಬರಿಮಲೆಗೆ ಯಾತ್ರೆ ಹೋಗುತ್ತಿದ್ದರು. ಮೂಡುಬಿದಿರೆ ಪರಿಸರದಲ್ಲಿ ಹಿರಿಯ ಮಾಲಾಧಾರಿಯಾಗಿದ್ದ ಅವರು ಈ ವರ್ಷ 48 ನೇ ವರ್ಷದ ಮಾಲಾಧಾರಿಯಾಗಿದ್ದರು. ಯಾತ್ರೆ ಕೈಗೊಂಡಿದ್ದ ಅವರು ಭಾನುವಾರ ಇರುಮುಡಿ ಹೊತ್ತು

ಬೆಳುವಾಯಿ ನಿವಾಸಿ ಕುವೈಟ್‌ನಲ್ಲಿ ಸಾವು

ಮೂಡುಬಿದಿರೆ: ಪಡುಮಾರ್ನಾಡು ಗ್ರಾಮದ ಕೆಸರ್‌ಗದ್ದೆಯ ನಿವಾಸಿಯೊಬ್ಬರು ಕುವೈಟ್‌ನಲ್ಲಿ ಹೃದಯಾಘಾತಕ್ಕೊಳಗಾಗಿ ನಿಧನರಾದ ಘಟನೆ ಸೋಮವಾರ ನಡೆದಿದೆ. ಮೃತ ವ್ಯಕ್ತಿ ರೋಷನ್ ಹೆಗ್ಡೆ (46)ಎಂದು ತಿಳಿದುಬಂದಿದೆ. ಇವರು ನಿವೃತ್ತ ಶಿಕ್ಷಕಿ ಕೆಸರ್‌ಗದ್ದೆಯ ನಳಿನಿ ರಾಮಚಂದ್ರ ಹೆಗ್ಡೆ ಅವರ ಪುತ್ರ. ಕಳೆದ ತಿಂಗಳು ತನ್ನ ಮಾವನ ಮಗನ ಮದುವೆ ಕಾರ್ಯಕ್ರಮಕ್ಕೆ ಪತ್ನಿ ಹಾಗೂ ಮಗನೊಂದಿಗೆ ಊರಿಗೆ ಬಂದಿದ್ದ ಅವರು ಕಾರ್ಯಕ್ರಮ ಮುಗಿಸಿ ಕುವೈಟ್‌ಗೆ ವಾಪಾಸಾಗಿದ್ದರು. ಸೋಮವಾರ

ಕೆಲ್ಲಪುತ್ತಿಗೆ ಭೂತರಾಜ ಕ್ಷೇತ್ರದಲ್ಲಿ ಪುನರ್ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ

ಮೂಡುಬಿದಿರೆ: ದರೆಗುಡ್ಡೆ ಗ್ರಾಮದ ಕೆಲ್ಲಪುತ್ತಿಗೆ ಪುರಾತನ ಶ್ರೀ ಭೂತರಾಜ ಕ್ಷೇತ್ರದಲ್ಲಿ ಭೂತರಾಜ, ಬ್ರಹ್ಮದೇವರು ಧರ್ಮರಸು, ಕಕ್ಕಿನಂತಾಯ, ಕೊಡಮಣಿತ್ತಾಯ ಬ್ರಹ್ಮಬೈದರ್ಕಳ, ಮಾಯಂದಾಲೆ ಸಾನಿಧ್ಯ ದೇವತೆಗಳ ಗುಡಿಗಳನ್ನು ಜೀರ್ಣೋದ್ಧಾರಗೊಳಿಸಿದ್ದು, ಪುನರ್ ಪ್ರತಿಷ್ಠೆ-ಬ್ರಹ್ಮಕಲಶೋತ್ಸವ ಹಾಗೂ ವರ್ಷಾವಧಿ ರಂಗಪೂಜಾ ನೇಮೋತ್ಸವವು ಮಂಗಳವಾರ ನಡೆಯಿತು. ಬೆಳಿಗ್ಗೆ ಕೆಲ್ಲಪುತ್ತಿಗೆ ಪರಾಡಿಗುತ್ತಿನಿಂದ ಭೂತರಾಜ ಕ್ಷೇತ್ರಕ್ಕೆ ಸಕಾಲ ಬಿರುದಾವಳಿಗಳೊಂದಿಗೆ ದೈವಗಳ

ಕೆ.ಎಸ್‌ ಹೆಗ್ಡೆ ಆಸ್ಪತ್ರೆ ವೈದ್ಯ ಡಾ.ಜಯರಾಮ ಶೆಟ್ಟಿ ಹೃದಯಾಘಾತದಿಂದ ನಿಧನ

ಉಳ್ಳಾಲ: ದೇರಳಕಟ್ಟೆ ಯ ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ರೇಡಿಯೇಷನ್‌ ಆಂಕಾಲಜಿ ಕ್ಯಾನ್ಸರ್ ವಿಭಾಗದ ತಜ್ಞ ವೈದ್ಯರಾದ ಗುರುಪುರ ಪರಾರಿ ದೋಟ ಕೊಳಕೆಬೈಲು ನಿವಾಸಿ ಪ್ರಸ್ತುತ ಮಂಗಳೂರಿನಲ್ಲಿ ವಾಸಿಸುತ್ತಿರುವ ಡಾ. ಜಯರಾಮ ಶೆಟ್ಟಿ(53) ಹೈದಯಾಘಾತದಿಂದ ಜ.,11ರಂದು ಬುಧವಾರ ನಿಧನ ಹೊಂದಿದರು. ಮಂಗಳೂರಿನ ಕೆ.ಎಂಸಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಸ್ನಾತಕೋತ್ತರ ಉನ್ನತ ಶಿಕ್ಷಣ ಪಡೆದ ಬಳಿಕ ಸುಮಾರು ಒಂದು ದಶಕಗಳಿಗಿಂತ ಹೆಚ್ಚು ಕಾಲ

ಜನವರಿ 15 ರಂದು ವಿವೇಕ ರಥ ಕಡಬಕ್ಕೆ : ಅದ್ದೂರಿ ಸ್ವಾಗತಕ್ಕೆ ನಿರ್ಧಾರ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕಡಬ ತಾಲೂಕು ಪಂ. ಜಿಲ್ಲಾ ಯುವ ಜನ ಒಕ್ಕೂಟ, ಕಡಬ ತಾಲೂಕು ಯುವ ಜನ ಒಕ್ಕೂಟ, ಕಡಬ ತಾಲೂಕು ಯುವಕ-ಯುವತಿ ಮಂಡಲಗಳು, ಕಡಬ ಸರಕಾರಿ ಪದವಿಪೂರ್ವ ಕಾಲೇಜಿನ ರಾಷ್ಟಿಯ ಸೇವಾ ಯೋಜನೆ ಇವುಗಳ ಸಂಯುಕ್ತ ಆಶ್ರದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯ ಪ್ರಯುಕ್ತ ಯುವ ಸಪ್ತಾಹ ಕಾರ್ಯಕ್ರಮವನ್ನು ಜನವರಿ ೧೫ ರಂದು ಕಡಬದಲ್ಲಿ ವಿಶಿಷ್ಠವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಕಡಬ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಶಿವಪ್ರಸಾದ್ ರೈ

ಸಿ.ಎ. ಇಂಟರ್ ಮೀಡಿಯಟ್ ಪರೀಕ್ಷಾ ಫಲಿತಾಂಶ,ಆಳ್ವಾಸ್ ನ ಸಾಧನೆ.

ಮೂಡುಬಿದಿರೆ: ನವೆಂಬರ್ 2022 ರಲ್ಲಿ ನಡೆದ ಸಿ.ಎ. ಇಂಟರ್ ಮೀಡಿಯಟ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಕಾಲೇಜಿನ 10 ಜನ ವಿದ್ಯಾರ್ಥಿಗಳು ಗ್ರೂಪ್ -01 ಮತ್ತು ಗ್ರೂಪ್-02 ವಿಭಾಗದಲ್ಲಿ ಉತ್ತೀರ್ಣರಾಗಿ, 32.25% ಫಲಿತಾಂಶ ಪಡೆದಿದ್ದಾರೆ. ಕಾಲೇಜಿನ ಬಿ.ಕಾಂ. ಪ್ರೊಫೆಶನಲ್ ವಿದ್ಯಾರ್ಥಿಗಳಾದ ಆರನ್ ರೇಗೋ(486), ಚೇತನಾ ಕೋಡಿಹಳ್ಳಿ(471), ತುಳಸಿ(446), ಲೋಹಿತ್ ಈಶ್ವರ್ ಮೊಗೇರ್ (440), ವಿನಿಶಾ ಎಸ್. ಎಂ.(432), ಸುಶ್ಮಾ ಹೆಚ್.ಪಿ, ಶ್ರೀವತ್ಸ ಎಂ.,ಪ್ರೇರಣಾ ಎಸ್

ಮಂಗಳೂರಿನ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಭಾರೀ ಡ್ರಗ್ಸ್ ಜಾಲ

ಮಂಗಳೂರಲ್ಲಿ ಭಾರೀ ಡ್ರಗ್ಸ್ ಮಾಫಿಯಾ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಖಾಸಗಿ ವೈದ್ಯಕೀಯ ಕಾಲೇಜಿನ ವೈದ್ಯರು, ವೈದ್ಯಕೀಯ ವಿದ್ಯಾರ್ಥಿ ಸಹಿತ 10 ಮಂದಿಯನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿ ಕಾಲೇಜಿನ ಬಿಡಿಎಸ್ ವಿದ್ಯಾರ್ಥಿ, ವಿದೇಶಿ ಪ್ರಜೆ ನೀಲ್ ಕಿಶೋರಿಲಾಲ್ ರಾಮ್ ಜಿ ಶಾ , ಡಾ. ಸಮೀರ್ , ಡಾ. ಮಣಿಮಾರನ್ ಮುತ್ತು ,

ಜ.12ರಂದು ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಸ್ವಚ್ಛ ಉಡುಪಿ

ಸ್ವಾಮಿ ವಿವೇಕಾನಂದ ಜಯಂತಿಯ ಪ್ರಯುಕ್ತ ಜನವರಿ 12ರ ಗುರುವಾರದಂದು ಭಾರತ ಸೇವಾದಳ ಉಡುಪಿ ಜಿಲ್ಲಾ ಸಮಿತಿಯ ನೇತ್ರತ್ವದಲ್ಲಿ, ಮತ್ತು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗು ರಜತೋತ್ಸವ ಸಮಿತಿಯ ಸಹಯೋಗದೊಂದಿಗೆ ಜಿಲ್ಲೆಯ ಎಲ್ಲಾ 1096 ಸರಕಾರೀ, ಅನುದಾನಿತ ಮತ್ತು ಖಾಸಗಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಸುಮಾರು 1,60,000 ಶಾಲಾ ಮಕ್ಕಳಿಂದ ಏಕಕಾಲದಲ್ಲಿ ಆಯಾಯ ಶಾಲೆಗಳ ಅಕ್ಕ ಪಕ್ಕದ ವಠಾರದಲ್ಲಿ “ಸ್ವಚ್ಛ

ಜ.20ರಂದು ಬಹುನಿರೀಕ್ಷಿತ “ಶಕಲಕ ಬೂಮ್ ಬೂಮ್” ಚಿತ್ರ ತೆರೆಗೆ

ಯುಎನ್ ಸಿನೆಮಾಸ್ ಬ್ಯಾನರ್ ನಡಿ ನಿರ್ಮಾಣಗೊಂಡಿರುವ ಶಕಲಕ ಬೂಮ್ ಬೂಮ್ ತುಳು ಚಿತ್ರ ಇದೇ ಬರುವ ಜ.20ರಂದು ತುಳುನಾಡಿನಾದ್ಯಂತ ಬಿಡುಗಡೆಯಾಗಲಿದೆ. ಕಾಮಿಡಿ ಹಾಗೂ ಹಾರರ್ ವಿಭಿನ್ನ ಕಥಾಹಂದರದ ಹೊಂದಿರುವ ಶಕಲಕ ಬೂಮ್ ಬೂಮ್ ತುಳು ಚಿತ್ರ ಇದೇ ಬರುವ ಜ.20ರಂದು ತುಳುನಾಡಿನಾದ್ಯಂತ ತೆರೆ ಕಾಣಲಿದೆ. ಈ ಕುರಿತು ಮಂಗಳೂರಿನ ಪ್ರತಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರ ನಿರ್ಮಾಪಕರಾದ ನಿತ್ಯಾನಂದ ನಾಯಕ್ ನರಸಿಂಗೆ ಮಾತನಾಡಿದ ಈ ಚಲನಚಿತ್ರವನ್ನು ಶ್ರೀಶ ಎಳ್ಳಾರೆ