Home Posts tagged #v4newskarnataka (Page 95)

ಕೆಳಮಟ್ಟದ ರಾಜಕಾರಣ ಯಾರೂ ಮಾಡಬಾರದು : ಗೋಪಾಲ ಪೂಜಾರಿ

ಕುಂದಾಪುರ: ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಮಂಜೂರು ಮಾಡಿದ ಕೆಲವು ಯೋಜನೆಗಳನ್ನು ಇಂದು ಮುಖ್ಯಮಂತ್ರಿಗಳ ಮೂಲಕ ಶಂಕುಸ್ಥಾಪನೆ ಮಾಡಲಾಗುತ್ತಿದೆ. ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾಡಳಿತ ಜನತೆಗೆ ತಪ್ಪು ಮಾಹಿತಿ ಕೊಡುವುದನ್ನು ಮೊದಲು ನಿಲ್ಲಿಸಬೇಕು. ಇಂತಹ ಕೆಳಮಟ್ಟದ ರಾಜಕಾರಣ ಹಿಂದೆ ಯಾವೊಬ್ಬ

ನಮ್ಮದು ಜನರಿಗೆ ಸ್ಪಂದಿಸುವ ಸರ್ಕಾರ : ಬೊಮ್ಮಾಯಿ

ಕುಂದಾಪುರ: ಜನಪ್ರಿಯ ಸರ್ಕಾರವಿದ್ದರೆ, ಜನಪರ ನಾಯಕ ಅದರ ಮುಖ್ಯಸ್ಥನಾದರೆ ಯಾವ ರೀತಿ ಜನಸ್ಪಂದನೆ ಸಿಗುತ್ತದೆ ಎನ್ನುವುದಕ್ಕೆ ಈ ಬೈಂದೂರಿನ ಅಭಿವೃದ್ದಿಯ ಕತೆಯೇ ಸಾಕ್ಷಿ. ನಮ್ಮ ಸರ್ಕಾರದÀ ಅಭಿವೃದ್ದಿಯ ಕೆಲಸಗಳು ನಿಮ್ಮ ಮುಂದಿವೆ. ಕೇಂದ್ರ, ರಾಜ್ಯ ಸರ್ಕಾರದಂತೆ ಬೈಂದೂರಿನಲ್ಲಿಯೂ ಸಂಸದ ಹಾಗೂ ಶಾಸಕರ ಡಬಲ್ ಇಂಜಿನ್ ಸಮನ್ವಯತೆ ಇದೆ. ಇದು ಕೇವಲ ಬಾಯಿ ಮಾತಿನ ಸರ್ಕಾರವಲ್ಲ, ನಮ್ಮದು ಜನರಿಗೆ ಸ್ಪಂದಿಸುವ ಸರ್ಕಾರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬಿಗ್ ಬಾಸ್ ಸ್ವರ್ಧಿ ರೂಪೇಶ್ ಶೆಟ್ಟಿಗೆ ಬೆದರಿಕೆ

ಮಂಗಳೂರು: ತುಳು ಸಿನಿಮಾ ನಟ, ಬಿಗ್ಬಾಸ್ ಸ್ಪರ್ಧಿ ರೂಪೇಶ್ ಶೆಟ್ಟಿಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿರುವ ಬಗ್ಗೆ ದೂರು ದಾಖಲಾಗಿದೆ. ಬೆದರಿಕೆ ಬಗ್ಗೆ ರೂಪೇಶ್ ಕುಟುಂಬದ ಸದಸ್ಯರು ಮಂಗಳೂರು ಪೆÇಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಬಿಗ್ಬಾಸ್ನಲ್ಲಿ ರೂಪೇಶ್ ಹೇಳಿರುವ ಹೇಳಿಕೆಗಳ ಹಿನ್ನೆಲೆ ಕೆಲವರು ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ. ರೂಪೇಶ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ರೂಪೇಶ್ ಅವರ ಕುಟುಂಬ ಸದಸ್ಯರು ದೂರು ನೀಡಿದ್ದು,

ಮುಖ್ಯಮಂತ್ರಿ ಆಗಮನ ಹಿನ್ನಲೆ ಕಾಪುವಿನಲ್ಲಿ ವ್ಯಾಪಾರಿಗಳಿಗೆ ಸಮಸ್ಯೆ ಇಲ್ಲ : ಎಸ್. ಅಂಗಾರ

ಕಾಪುವಿನಲ್ಲಿ ನಡೆಯಲಿರುವ ಬಿಜೆಪಿಯ ಜನಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿಗಳು ಬರುವವರಿದ್ದು, ಕಾರ್ಯಕ್ರಮ ಕಾಪುವಿನಲ್ಲಿ ನಡೆಯುತ್ತಿದ್ದರೂ ವ್ಯಾಪಾರಿಗಳಿಗೆ ಯಾವುದೇ ಸಮಸ್ಯೆಯಾಗದು ಎಂಬುದಾಗಿ ಉಸ್ತುವಾರಿ ಸಚಿವ ಅಂಗಾರ ಹೇಳಿದರು.ಅವರು ಕಾಪುವಿನ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಇದು ಪಕ್ಷದ ಕಾರ್ಯಕ್ರಮ ಆಗಿದ್ದು ಪೇಟೆ ಒಳಭಾಗದಲ್ಲಿ ನಡೆಯುತ್ತಿದ್ದರೂ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು

ಬೆಳ್ಳಾರೆ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಪಿಎಫ್‍ಐ, ಎಸ್‍ಡಿಪಿಐ ಮುಖಂಡರ ಮನೆ ಮೇಲೆ ದಾಳಿ

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ರಾಜ್ಯದ ಹಲವೆಡೆ ಪಿಎಫ್‍ಐ, ಎಸ್ಡಿಪಿಐ ಮುಖಂಡರ ಮನೆಗಳ ಮೇಲೆ ಎನ್‍ಐಎ ಅಧಿಕಾರಿಗಳು ಮತ್ತೆ ದಾಳಿ ನಡೆಸಿದ್ದು, ಮೂವರನ್ನು ವಶಕ್ಕೆ ಪಡೆದಿದ್ದಾರೆ. ದಕ್ಷಿಣ ಕನ್ನಡ, ಮೈಸೂರು, ಹುಬ್ಬಳ್ಳಿ ಸೇರಿದಂತೆ ಹಲವಡೆ ನಿಷೇಧಿತ ಪಿಎಫ್‍ಐ ಸಂಘಟನೆಯ ಮುಖಂಡರ ಮನೆಗಳ ಮೇಲೆ ಎನ್‍ಐಎ ಅಧಿಕಾರಿಗಳು ಇಂದು ಮುಂಜಾನೆ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆಂದು ತಿಳಿದುಬಂದಿದೆ.

ದೇರೇಬೈಲ್‍ನಲ್ಲಿ ಕೇದಾರ್ ವಸತಿ ಸಮುಚ್ಚಯಕ್ಕೆ ಶಿಲಾನ್ಯಾಸ

ಐಶಾರಾಮಿ ಹಾಗೂ ಕೈಗೆಟಕುವ ದರದಲ್ಲಿ ಮನೆಗಳನ್ನು ನಿರ್ಮಿಸಿ ಗ್ರಾಹಕರಿಗೆ ಹಸ್ತಾಂತರಿಸುತ್ತಿರುವ ಮುಕುಂದ್ ಎಂಜಿಎಂ ರಿಯಾಲ್ಟಿ' ಸಂಸ್ಥೆಯು ಇದೀಗ ನಗರದ ಜನತೆಗೆ ಎಲ್ಲಾ ಸೌಕರ್ಯಗಳನ್ನು ಒಳಗೊಂಡ ಅಪಾರ್ಟ್‍ಮೆಂಟ್ಕೇದಾರ್-ಹೈ ಲಿವಿಂಗ್ ಲಕ್ಶುರಿ ಹೋಮ್ಸ್’ ಎಂಬ ವಸತಿ ಸಮುಚ್ಚಯ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿತು. ಮಂಗಳೂರಿನ ಜನತೆಯ ಆವಶ್ಯಕತೆಯನ್ನು ಮನಗಂಡಿರುವ `ಮುಕುಂದ್ ಎಂಜಿಎಂ ರಿಯಾಲ್ಟಿ’ ಸಂಸ್ಥೆಯು ಆಧುನಿಕ ಸೌಲಭ್ಯಗಳನ್ನು

ಕೇರಳದ ಅನನ್ಯತೆ ಅರಸಿ ಗ್ರಾಮಗಳ ಪ್ರವಾಸದಲ್ಲಿರುವ ಯುವಕರು

ಮಂಜೇಶ್ವರ: ಜಗತ್ತಿನ ಮಲಯಾಳಿಗಳಿಗೆ ಕೇರಳದ ಬಗ್ಗೆ ವಿಭಿನ್ನ ಅಭಿವ್ಯಕ್ತಿ ನೀಡುವ ಹಾಗೂ ಕೇರಳವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಮಲಪ್ಪುರಂ ಜಿಲ್ಲೆಯ ಇಬ್ಬರು ಯುವಕರು ಕೇರಳದ ಅನನ್ಯತೆ ಅರಸಿ ಗ್ರಾಮಗಳ ಪ್ರವಾಸದ ಹೆಸರಿನಲ್ಲಿ ಕೇರಳದ ಉತ್ತರ ಭಾಗವಾದ ಗಡಿನಾಡ ಪ್ರದೇಶಕ್ಕೆ ತಲುಪಿದ್ದಾರೆ. ಕೇರಳ ಎಂದರೇನು ಎಂಬುದನ್ನು ತಿಳಿದುಕೊಳ್ಳಲು ಹಾಗೂ ಅಲ್ಲಿನ ಭಾಷೆ, ಸಂಸ್ಕೃತಿ, ಅಭಿರುಚಿ, ವಿವಿಧ ವ್ಯಾಪಾರ, ಕೃಷಿ, ಪ್ರವಾಸೋದ್ಯಮ ಮತ್ತಿತರ ಅಪರೂಪದ

ರಾಜ್ಯಮಟ್ಟದ ವಿಶ್ವಕರ್ಮ ಕಾಷ್ಠಶಿಲ್ಪ ಸಭಾ ದಶಮಾನೋತ್ಸವ ಆಚರಣೆ

ಬೆಂಗಳೂರು; ರಾಷ್ಟ್ರೀಯ ಶಿಕ್ಷಣ ನೀತಿಯಡಿ ಕೌಶಲ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದು, ಈ ಯೋಜನೆಯಡಿ ಇರುವ ಉಜ್ವಲ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಅರಿವು ಮೂಡಿಸಲು ನವೆಂಬರ್ 6 ರಂದು ಯಲಹಂಕದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ವಿಶ್ವಕರ್ಮ ಕಾಷ್ಠಶಿಲ್ಪ ಸಭಾ ದಶಮಾನೋತ್ಸವ ಸಮಾರಂಭ ಆಯೋಜಿಸಲಾಗಿದೆ ಎಂದು ವಿಶ್ವ ಕರ್ಮ ಕಾಷ್ಠಶಿಲ್ಪ ಅಧ್ಯಕ್ಷ ಎಮ್.ಜಿ. ನಾಗೇಶ್ ಆಚಾರ್ಯ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮರದ

ಕಟೀಲು ಯಕ್ಷಗಾನದ ಕಾಲಮಿತಿ ಹಿಂಪಡೆಯುವಂತೆ ಆಗ್ರಹಿಸಿ ಪಾದಯಾತ್ರೆ

ಮಂಗಳೂರು: ಕಟೀಲು ಯಕ್ಷಗಾನ ಮೇಳಗಳ ಪ್ರದರ್ಶನ ವನ್ನು ಕಾಲಮಿತಿಗೊಳಪಡಿಸುವ ನಿರ್ಧಾರವನ್ನು ಹಿಂಪಡೆಯಬೇಕು, ಯಕ್ಷಗಾನ ಪರಂಪರೆಯಂತೆ ರಾತ್ರಿ ಯಿಂದ ಬೆಳಗ್ಗಿನವರೆಗೆ ಯಕ್ಷಗಾನ ಪ್ರದರ್ಶನಗೊಳ್ಳಬೇಕು ಎಂದು ಆಗ್ರಹಿಸಿ ಶ್ರೀ ಕಟೀಲು ಮೇಳದ ಯಕ್ಷಗಾನ ಸೇವಾ ಸಮಿತಿಗಳು ಮತ್ತು ಖಾಯಂ ಸೇವಾದಾರರ ಒಕ್ಕೂಟವಾದ ಶ್ರೀ ಕಟೀಲು ಯಕ್ಷಸೇವಾ ಸಮನ್ವಯ ಸಮಿತಿ ದಕ್ಷಿಣ ಕನ್ನಡ ಮತ್ತು ಉಡುಪಿ ವತಿಯಿಂದ ನ. 6ರಂದು ಬೆಳಗ್ಗೆ 8.30ರಿಂದ ಬಜಪೆ ಶ್ರೀ ಶಾರದಾ ಶಕ್ತಿ ಮಂಟಪದಿಂದ ಶ್ರೀ ಕ್ಷೇತ್ರ

ಹರೇಕಳ ಹಾಜಬ್ಬ ಅವರ ದಶಕದ ಕನಸು ನನಸು

ಮಂಗಳೂರು: ಅಕ್ಷರಸಂತ, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರ ದಶಕದ ಕನಸಾಗಿದ್ದ ಪದವಿ ಪೂರ್ವ ಕಾಲೇಜು ಮಂಜೂರಾಗಿದೆ. ಹರೇಕಳದ ನ್ಯೂಪಡ್ಪಿವಿಗೆ ಕಷ್ಟಪಟ್ಟು ಸರಕಾರಿ ಶಾಲೆ ಪಡೆಯುವಲ್ಲಿ ಯಶಸ್ವಿಯಾಗಿದ್ದ ಅವರು ಬಳಿಕ ನಿರಂತರ ಪ್ರಯತ್ನದಿಂದ ಪ್ರೌಢಶಾಲೆ ವರೆಗೆ ಗಳಿಸಿದ್ದರು. ಹಾಜಬ್ಬ ಅನಕ್ಷರಸ್ಥರಾಗಿದ್ದರೂ ತನ್ನೂರಿನ ಎಲ್ಲ ಮಕ್ಕಳೂ ಅಕ್ಷರಸ್ಥರಾಗಿರಬೇಕು ಎಂಬ ಕನಸು ಕಂಡವರು. ಮಂಗಳೂರಿನ ಹಂಪನಕಟ್ಟೆ ಬಳಿ ಬುಟ್ಟಿ ಯಲ್ಲಿ ಕಿತ್ತಳೆ ಹಣ್ಣುಗಳ ಮಾರಾಟ ಮಾಡುತ್ತಿದ್ದ