Home Posts tagged #v4stream (Page 90)

ಮಂಗಳೂರು ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನ : ಶತಮಾನದ ಶಾರದೋತ್ಸವಕ್ಕೆ ವೈಭವದ ತೆರೆ

ಮಂಗಳೂರಿನ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದ 100ನೇ ವರ್ಷದ ಶಾರದಾ ಮಹೋತ್ಸವದಲ್ಲಿ ಪೂಜಿಸಲ್ಪಟ್ಟ ಶ್ರೀ ಶಾರದಾ ಮಾತೆಯ ವಿಸರ್ಜನಾ ಶೋಭಯಾತ್ರೆ ಗುರುವಾರ ರಾತ್ರಿ ಶ್ರದ್ಧಾಭಕ್ತಿಯಿಂದ ನೆರವೇರಿತು. ಸರಸ್ವತಿ ಕಲಾ ಮಂಟಪದಲ್ಲಿ ಬೆಳಗ್ಗಿನಿಂದ ಸೇವಾರೂಪದಲ್ಲಿ ಪ್ರತೀ ವರ್ಷದಂತೆ ಶಾರದಾ ಹುಲಿವೇಷಧಾರಿಗಳಿಂದ ಹುಲಿವೇಷ ಕುಣಿತ ನಡೆಯಿತು. ರಾತ್ರಿ ಮಹಾಮಂಗಳಾರತಿ ಆಗಿ

ಪ್ರಸಿದ್ಧ ವೈದ್ಯ ಡಾ. ಸುರೇಶ್ ಸುರತ್ಕಲ್ ನಿಧನ

ಪ್ರಸಿದ್ಧ ವೈದ್ಯ ಡಾ. ಸುರೇಶ್ ಸುರತ್ಕಲ್ ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ತಜ್ಞ ವೈದ್ಯರಾಗಿ ಜಿಲ್ಲೆಯಲ್ಲಿಯೇ ಪ್ರಸಿದ್ಧ ರಾಗಿದ್ದರು. ಕೋವಿಡ್ ಸಂದರ್ಭದಲ್ಲಿಯೂ ಜೀವನದ ಹಂಗು ತೊರೆದು ಅನೇಕ ಮಂದಿಗೆ ಚಿಕಿತ್ಸೆ ನೀಡಿ ಮಾದರಿಯಾಗಿದ್ದರು. ಅವರು ಸುರತ್ಕಲ್‍ನಲ್ಲಿ ತನ್ನ ತಾಯಿಯ ಹೆಸರಿನಲ್ಲಿ ಆರಂಭಿಸಿದ್ದ ಸುಸಜ್ಜಿತ ಪುಷ್ಪಾ ಕ್ಲಿನಿಕ್ ಮತ್ತು ಡಯಾಗ್ನೋಸಿಸ್ ಸೆಂಟರ್ ಆರಂಭಿಸಿ ಸುಮಾರು 5 ದಶಕಗಳಿಂದ ಅದನ್ನು

ಪಿಲಿಕುಳ‌ : ಇರುವೆಗಳಿಂದ ಹಾನಿಗೊಳಗಾಗಿದ್ದ ಹಾವು ಸುರಕ್ಷಿತ

ಮಂಗಳೂರಿನ ಪ್ರಸಿದ್ಧ ಪ್ರವಾಸಿ ತಾಣಗಳಲ್ಲೊಂದಾದ ಪಿಲಿಕುಳ‌ ಜೈವಿಕ ಉದ್ಯಾನವನದಲ್ಲಿ ಹಾವೊಂದಕ್ಕೆ ಇರುವೆಗಳ ಹಿಂಡು ಕಾಟ ಕೊಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಕ್ಕೆ ಸ್ವತಃ ಪಿಲಿಕುಳದ ನಿರ್ದೇಶಕರೇ ಸ್ಪಷ್ಟನೆ ನೀಡಿದ್ದು, ‘ಇರುವೆಯ ಕಿರುಕುಳಕ್ಕೊಳಗಾಗಿದ್ದ ಹಾವು ಸುರಕ್ಷಿತವಾಗಿದೆ’ ಎಂದು ಮಾಹಿತಿ ನೀಡಿದ್ದಾರೆ. ಪಿಲಿಕುಳ‌ ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ, ಮಾತನಾಡಿ ವಿಡಿಯೋ ವೈರಲ್ ಆಗಿರುವ ಬಗ್ಗೆ

ಉತ್ತರಕಾಶಿ : ಹಿಮಪಾತಕ್ಕೆ ಸಿಲುಕಿ 19 ಮಂದಿ ಪರ್ವತಾರೋಹಿಗಳು ಮೃತ

ಉತ್ತರಕಾಶಿಯಲ್ಲಿ ನಡೆದ ಹಿಮಪಾತಕ್ಕೆ ಸಿಲುಕಿ 19 ಮಂದಿ ಪರ್ವತಾರೋಹಿಗಳು ಮೃತಪಟ್ಟಿದ್ದಾರೆ.  ಹಿಮಪಾತ ಅಪಘಾತದ ಮೂರನೇ ದಿನ ಎಲ್ಲಾ ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.ಈಗಾಗಲೇ  ರಕ್ಷಣಾ ತಂಡವು  19 ಪರ್ವತಾರೋಹಿಗಳ ಮೃತದೇಹಗಳನ್ನು ಹೊರತೆಗೆದಿದ್ದು ಇನ್ನುಳಿದವರ ಶೋಧ ಕಾರ್ಯ ಹೆಲಿಕಾಪ್ಟರ್‌ ಮೂಲಕ  ಮುಂದುವರಿದಿದೆ. ಹಿಮಪಾತದ ತೀವ್ರತೆಯಿಂದ  ಗುರುವಾರ ಮಧ್ಯಾಹ್ನದ ನಂತರ  ರಕ್ಷಣಾವನ್ನು

ತೊಕ್ಕೊಟ್ಟು-ಕಾಪಿಕಾಡ್ ಹೆದ್ದಾರಿಯಲ್ಲಿ ಅವೈಜ್ಞಾನಿಕ ಯೂಟರ್ನ್ : ಪ್ರತಿನಿತ್ಯ ಅಪಘಾತ – ಪ್ರಾಣ ಭಯದಲ್ಲಿ ಸ್ಥಳೀಯರು

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಉಳ್ಳಾಲ ತಾಲೂಕಿನ ತೊಕ್ಕೊಟ್ಟು ಓವರ್ ಬ್ರಿಡ್ಜ್ ಜಂಕ್ಷನ್‍ನಿಂದ ಕುಂಪಲ ಬೈಪಾಸ್ ತನಕ ಸರ್ವಿಸ್ ರಸ್ತೆಯನ್ನು ವಿಸ್ತರಿಸಬೇಕು. ಹಾಗೂ ಕಾಪಿಕಾಡ್ ಬಳಿ ಇರುವ ಅವೈಜ್ಞಾನಿಕ ಯೂಟರ್ನ್ ಓಪನ್ ರಸ್ತೆಯನ್ನು ಮುಚ್ಚಬೇಕು ಎಂದು ಆಗ್ರಹಿಸಿ ತೊಕ್ಕೊಟ್ಟು ಹೆದ್ದಾರಿ ಸುರಕ್ಷತಾ ಹೋರಾಟ ಸಮಿತಿ ಜಿಲ್ಲಾಡಳಿತÀ ಹಾಗೂ ಹೆದ್ದಾರಿ ಇಲಾಖೆಗೆ ಮನವಿ ಮಾಡಿದೆ. ಮನವಿ ಹಿನ್ನಲೆಯಲ್ಲಿ ಸ್ಥಳ ಪರಿಶೀಲನೆ ಮಾಡಿದ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದ

ಪಿಲಿಕುಳ ನಿಸರ್ಗಧಾಮ : ಹಾವಿನ ಕೋಣೆಯೊಂದರಲ್ಲಿ ಕಚ್ಚುವ ಇರುವೆ ಪ್ರತ್ಯಕ್ಷ

ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿ ಹಾವೊಂದರ ಕೋಣೆ ತುಂಬಾ ಕಚ್ಚುವ ಇರುವೆಗಳು ಸೃಷ್ಠಿಯಾಗಿದ್ದು ಇದರಿಂದ ಹಾವು ನರಕ ಅನುಭವಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪಿಲಿಕುಳ ನಿಸರ್ಗಧಾಮದಲ್ಲಿರುವ ಹಾವೊಂದು ಇರುವೆಗಳು ಕಚ್ಚಿ ನೋವನ್ನು ಅನುಭವಿಸುತ್ತಿರುವ ದೃಶ್ಯವನ್ನು ಪಿಲಿಕುಳಕ್ಕೆ ಭೇಟಿ ಕೊಟ್ಟ ಪ್ರವಾಸಿಗರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲ ತಾಣದಲ್ಲಿ ಹರಿಯಬಿಟ್ಟಿದ್ದಾರೆ. ಪಿಲಿಕುಳದಲ್ಲಿ ಪ್ರವಾಸಿಗರ ವೀಕ್ಷಣೆಗೆ

ಮಂಗಳೂರು : ದಸರಾ ಕವಿಗೋಷ್ಠಿಯಲ್ಲಿ ಮೊಳಗಿದ ಬಹು ಭಾಷಿಕತೆ

ಮಂಗಳೂರಿನ ತುಳು ಪರಿಷತ್ ,ಮಯೂರಿ ಫೌಂಡೇಷನ್ ಮತ್ತು ಕರ್ನಾಟಕ ಥಿಯಾಲಾಜಿಕಲ್ ಕಾಲೇಜು, ಕರಾವಳಿ ಲೇಖಕಿಯರ-ವಾಚಕಿಯರ ಸಂಘ ಹಾಗೂ ಸಾಮರಸ್ಯ ಮಂಗಳೂರು ಇವರ ಸಹಭಾಗಿತ್ವದಲ್ಲಿ ದಸರಾ ಬಹು ಭಾಷಾ ಕವಿಗೋಷ್ಠಿ ಮಂಗಳೂರಿನ ಬಲ್ಮಠದ ಸಹೋದಯದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮಯೂರಿ ಫೌಂಡೇಶನ್‍ನ ಅಧ್ಯಕ್ಷರು ಹಾಗೂ ಹಿರಿಯ ಕವಿ ಜಯ.ಕೆ.ಶೆಟ್ಟಿ ಅವರು ಉದ್ಘಾಟಿಸಿ ಮಾತನಾಡಿ, ದಸರಾ ಹಿನ್ನೆಲೆಯಲ್ಲಿ ತುಳುನಾಡಿನ ಎಲ್ಲಾ ಭಾಷಿಗರು ಒಂದೇ ವೇದಿಕೆಗೆ ಬರುವ ಮುಲಕ ತುಳುನಾಡಿನ

ನೊಂದವರ ಪಾಲಿನ ಆಶಾ ಕಿರಣ ಶಾರದಾ ಹುಲಿವೇಷ ತಂಡ

ಬದುಕಿನಲ್ಲಿ ನೋವುನ್ನುತ್ತಿರುವ ಅದೇಷ್ಟೋ ಕುಟುಂಬಗಳ ನೋವಿಗೆ ಹೆಗಲು ನೀಡಿದ… ಸುರತ್ಕಲ್ ಗೆಳೆಯರ ಬಳಗ ತಂಡದ ಹನ್ನೇಡನೇ ವರ್ಷದ ಶ್ರೀ ಶಾರದಾ ಹುಲಿವೇಷ ಅಬ್ಬರದಿಂದಲೇ ರಥಬೀದಿಯ ಶಾರದಾ ಮಾತೆಯ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲು ತೆರಳಿದೆ. ಮಾತೃ ಸಂಸ್ಥೆಯ ಸಕ್ರಿಯ ಸದಸ್ಯ ದಿವಂಗತ ಮಂಜುನಾಥ್ ಮಂಗಳೂರು ಇವರ ಸವಿ ನೆನಪಲ್ಲಿ ಈ ಬಾರಿ ಈ ಹುಲಿವೇಷ ತಂಡ… ಬಹಳಷ್ಟು ಉತ್ಸಾಹಿ ಯುವಕರು ಹಾಗೂ ಪುಟಾಣಿ ಮಕ್ಕಳು ಹುಲಿವೇಷ ಧರಿಸುವ ಮೂಲಕ ಈ ಬಾರಿಯ ಸಮಾಜ ಸೇವೆಗೆ

ಸುಹಾನಾ ಟ್ರಾವೆಲ್ಸ್‍ನ ನೂತನ ಕಚೇರಿ ಶುಭಾರಂಭ

ಮಂಗಳೂರಿನ ಫಳ್ನೀರ್‍ನಲ್ಲಿರುವ ಸ್ಟರಕ್ ರಸ್ತೆಯ ಸ್ಟರಕ್ ಅವೆನ್ಯೂ ಕಟ್ಟಡದಲ್ಲಿ ಸುಹಾನಾ ಟ್ರಾವೆಲ್ಸ್‍ನ ನೂತನ ಕಚೇರಿ ಶುಭಾರಂಭಗೊಂಡಿತು. ಮಂಜೇಶ್ವರದ ಸಯ್ಯದ್ ಅಥಾವುಲ್ಲ ತಂಙಳ್ ನೂತನ ಕಚೇರಿಯನ್ನು ಉದ್ಘಾಟಿಸಿದರು… ಈ ವೇಳೆ ಬಂದರ್ ಅಲ್ ಮದ್ರಸತುಲ್ ಅಝ್ಹಾರಿಯದ ಮುಅಲ್ಲಿಂ ಮಹಮ್ಮದ್ ಹನೀಫ್ ದುಅ ನೆರವೇರಿಸಿದರು….. ಈ ವೇಳೆ ಸಂಸ್ಥೆಯ ಗ್ರಾಹಕರನ್ನು ಸನ್ಮಾನಿಸಲಾಯಿತು. ಸುಹಾನಾ ಟ್ರಾವೆಲ್ಸ್ ಜನರಿಗೆ ಉತ್ತಮ ಸೇವೆಯನ್ನು ನೀಡಲಿದ್ದು, ಇಲ್ಲಿ ಏರ್

ಪಾಜಕಕ್ಷೇತ್ರದಲ್ಲಿ ವಿಜೃಂಭಣೆಯಿಂದ ಮಧ್ವಜಯಂತಿ ಮಹೋತ್ಸವ

ಆಚಾರ್ಯ ಮಧ್ವರ ಅವತರ ಭೂಮಿಯಾದ ಪಾಜಕಕ್ಷೇತ್ರದಲ್ಲಿ ವಿಜಯದಶಮಿಯಂದು ಮಧ್ವಜಯಂತಿ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು.ಪ್ರಾತಃ ಕಾಲದಲ್ಲಿ ಸೋದೆ ವಾದಿರಾಜ ಮಹಾಮುನಿಗಳಿಂದ ಪ್ರತಿಷ್ಠಿತ ಆಚಾರ್ಯರ ಪ್ರತಿಮೆಗೆ ಪಂಚಾಮೃತ ಅಭಿಷೇಕ ಸಹಿತ ವಿಶೇಷ ಪೂಜೆಗಳು ನಡೆದವು, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಮಹಾಪೂಜೆಯನ್ನು ನೆರವೇರಿಸಿ ಅನುಗ್ರಹ ಸಂದೇಶ ನೀಡಿದರು. ಆಗಮಿಸಿದ ವಿವಿಧ ವಿದ್ವಾಂಸರು ಸರ್ವಮೂಲ ಪಾರಾಯಣ ಹಾಗೂ ಉಪನ್ಯಾಸಗಳನ್ನು