Home Posts tagged #v4stream (Page 89)

5G ವಂಚಕರ ಬಗ್ಗೆ ಇರಲಿ ಎಚ್ಚರ : ಓಟಿಪಿ ನೀಡಿ ವಂಚನೆಗೊಳ್ಳಬೇಡಿ

5G ಅಥವಾ 5 ನೇ ಜನರೇಷನ್ನಿನ ಮೊಬೈಲ್ ನೆಟ್ ವರ್ಕ್ ಕೇವಲ ಇಂಟರ್ನೆಟ್ ಸ್ಪೀಡ್ ನ್ನು ಮಾತ್ರವೇ ಅಪ್ ಗ್ರೇಡ್ ಮಾಡುವುದಿಲ್ಲ ಬದಲಾಗಿ ಇದು ಮುಂದಿನ ಜನರೇಷನ್ನಿನ ಟೆಕ್ನಾಲಜಿಯನ್ನು ಡ್ರೈವ್ ಮಾಡುತ್ತದೆ. ಇದೀಗ 5G ಯಲ್ಲಿ ಕೆಲ ಸೈಬರ್ ಹ್ಯಾಕರ್’ಗಳು ಕೂಡ ಹೊಸ ರೀತಿಯ ವಂಚನೆಗೆ ಮುಂದಾಗಿದ್ದಾರೆ. ಈ ಹೊಸ ರೂಪದ ಸೈಬರ್ ಕ್ರೈಮ್ಗೆ ಬಲಿಯಾಗಬೇಡಿ ಎಂದು ತಜ್ಞರು

ಮಹಾರಾಷ್ಟ್ರ: ಟ್ರಕ್‌ ಹಾಗೂ ಬಸ್ ಅಪಘಾತ: ಬೆಂಕಿ ಹೊತ್ತಿ 10 ಮಂದಿ ಸಜೀವ ದಹನ, 24 ಮಂದಿಗೆ ಗಾಯ

ಮುಂಬೈ: ಮಹಾರಾಷ್ಟ್ರದ ನಾಸಿಕ್‌ನಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿ ಸಂಭವಿಸಿದ ಅಪಘಾತದಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಔರಂಗಾಬಾದ್ ರಸ್ತೆಯಲ್ಲಿ ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಸಂಭವಿಸಿದ ದುರ್ಘಟನೆಯಲ್ಲಿ 24 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸ್ಲೀಪರ್ ಕೋಚ್ ಬಸ್‌ನಲ್ಲಿ ಸುಮಾರು 30 ಮಂದಿ ಪ್ರಯಾಣಿಕರಿದ್ದರು. ನಂದೂರ್ ನಾಕಾ ಎಂಬಲ್ಲಿ ಟ್ರಕ್‌ಗೆ ಡಿಕ್ಕಿ ಹೊಡೆದ ಕೆಲವೇ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ:ನಾಟಕಕಾರ, ಸಾಹಿತ್ಯ ಮತ್ತು ಸಮಾಜ ಸೇವಕ ದಿ ಎ. ಶಿವಾನಂದ ಕರ್ಕೇರ ಅವರ ಸವಿ ನೆನಪು ಕಾರ್ಯಕ್ರಮ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ನಾಟಕಕಾರ, ಸಾಹಿತ್ಯ ಮತ್ತು ಸಮಾಜ ಸೇವಕ ದಿ ಎ. ಶಿವಾನಂದ ಕರ್ಕೇರ ಅವರ ಸವಿ ನೆನಪು ಕಾರ್ಯಕ್ರಮವನ್ನು ನಗರದ ತುಳು ಭವನದಲ್ಲಿ ಆಯೋಜಿಸಲಾಗಿತ್ತು. ಮಂಗಳೂರಿನ ಉರ್ವಸ್ಟೋರಿನ ತುಳಭವನದಲ್ಲಿ ಸಿರಿ ಚಾವಡಿಯಲ್ಲಿ ನಾಟಕಕಾರ , ಸಾಹಿತ್ಯ ಮತ್ತು ಸಮಾಜ ಸೇವಕ ದಿ ಎ. ಶಿವಾನಂದ ಕರ್ಕೇರ ಅವರ ಸವಿ ನೆನಪು ಕಾರ್ಯಕ್ರಮದ ಪ್ರಯಕ್ತ ಅವರ ಭಾವಚಿತ್ರಕ್ಕೆ ಗಣ್ಯರು ಪುಪ್ಪನಮನ ಸಲ್ಲಿಸಿದರು. ಇನ್ನು ಸಭಾ ಕಾರ್ಯಕ್ರಮವನ್ನು ಪ್ರಪುಲ್ಲ

ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಪ್ರೋತ್ಸಾಹ ಧನ : ದಕ್ಷಿಣ ಕನ್ನಡ ಹಾಲು ಒಕ್ಕೂಟದ ಮಂಡಳಿಯಿಂದ ನಿರ್ಧಾರ

ದಕ್ಷಿಣ ಕನ್ನಡ ಹಾಲು ಒಕ್ಕೂಟ ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ 2 ರೂಪಾಯಿ 5 ಪೈಸೆ ಪ್ರೋತ್ಸಾಹಧನವನ್ನು ನೀಡುವುದಾಗಿ ಒಕ್ಕೂಟದ ಅಧ್ಯಕ್ಷರಾದ ಕೆ.ಪಿ. ಸುಚರಿತ ಶೆಟ್ಟಿ ತಿಳಿಸಿದ್ದಾರೆ. ಅವರು ಕುಲಶೇಖರದ ಹಾಲು ಒಕ್ಕೂಟದ ಆಡಳಿತ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು. ಅಕ್ಟೋಬರ್ 11ರಂದು ನಡೆಯಲಿರುವ ವಿಶೇಷ ಸಭೆಯಲ್ಲಿ ರೈತರಿಗೆ ಪ್ರೋತ್ಸಾಹಧನವಾಗಿ ವಿಶೇಷವಾಗಿ 29.5 ಪೈಸೆಯನ್ನು ನೀಡುತ್ತಿದ್ದು ಅದಕ್ಕೆ 2 ರೂಪಾಯಿ 5 ಪೈಸೆ ಏರಿಸಿ

ನಿಡ್ಡೋಡಿಯಲ್ಲಿ ಮತ್ತೆ ಅನಧಿಕೃತ ಸರ್ವೇಗೆ ಯತ್ನ- ಹಿಮ್ಮೆಟ್ಟಿಸಿದ ಗ್ರಾಮಸ್ಥರು

ಮೂಡುಬಿದಿರೆ : ಪಡುಬಿದ್ರಿ ಯುಪಿಸಿಎಲ್ ನಿಂದ ಕೇರಳಕ್ಕೆ ವಿದ್ಯುತ್ ಪ್ರಸರಣಕ್ಕಾಗಿ ಸರ್ವೇ ನಡೆಸಲಾಗುತ್ತಿದೆ ಎಂದು ಹೇಳಿಕೊಂಡು ಅನಧಿಕೃತವಾಗಿ ನಿಡ್ಡೋಡಿ ಪರಿಸರದಲ್ಲಿ ಸರ್ವೇ ಕಾರ್ಯಕ್ಕಾಗಿ ಆಗಮಿಸಿದ ಅನಧಿಕೃತ ವ್ಯಕ್ತಿಗಳನ್ನು ಮಾತೃಭೂಮಿ ಸಂರಕ್ಷಣಾ ಸಮಿತಿ ಸೇರಿದಂತೆ ಗ್ರಾಮಸ್ಥರು ಹಿಮ್ಮೆಟ್ಟಿಸಿದ ಘಟನೆ ಶುಕ್ರವಾರ ನಡೆದಿದೆ.ಜಿಲ್ಲಾಡಳಿತವಾಗಲೀ ಸ್ಥಳೀಯಾಡಳಿತದಿಂದಾಗಲೀ ಯಾವುದೇ ಪರವಾನಿಗೆ ಪಡೆಯದೇ ಸರ್ವೇ ನಡೆಸಲು ಆಗಮಿಸಿದ್ದರು. ಈ ಕುರಿತು ಸ್ಥಳೀಯರು

ತೊಕ್ಕೊಟ್ಟು : ಒಂದು ದಿನದ ಗಂಡುಮಗು ರಸ್ತೆ ಬದಿಯಲ್ಲಿ ಪತ್ತೆ

ಉಳ್ಳಾಲ: ರಸ್ತೆ ಬದಿಯಲ್ಲಿ ಒಂದು ದಿನದ ಮಗುವನ್ನು ಬಿಟ್ಟು ಹೋಗಿರುವ ಘಟನೆ ತೊಕ್ಕೊಟ್ಟು ಕಾಪಿಕಾಡು ಅಂಬಿಕಾರೋಡಿನ ಗೇರು ಅಭಿವೃದ್ದಿ ಕೇಂದ್ರದ ಬಳಿ ನಡೆದಿದ್ದು, ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತೊಕ್ಕೊಟ್ಟು ಕಾಪಿಕಾಡ್ ನಿವಾಸಿ ಅಮರ್ ಎಂಬವರ ಮನೆಯ ಎದುರುಗಡೆ ಗೇಟಿನ ಹೊರಗಡೆ ನಿಲ್ಲಿಸಿದ್ದ ಕಾರಿನ ಅಡಿಯಲ್ಲಿ ಮಗು ಪತ್ತೆಯಾಗಿದೆ. ಮನೆಮಂದಿ ಬೆಳಿಗ್ಗೆ ಏಳುವಾಗ ಮಗು ಕೂಗುತ್ತಿರುವುದನ್ನು ಗಮನಿಸಿ ಹೊರಹೋದಾಗ ಕಾರಿನ ಕೆಳಗಡೆ ಬಿಳಿ

ಗೋಲ್ಡ್ ಮೊಬೈಲ್ ಮತ್ತು ಎಸ್‍ಎಲ್‍ವಿ ಟ್ರೇಡರ್ಸ್ ಮಳಿಗೆ ಶುಭಾರಂಭ

ರಾಷ್ಟ್ರೀಯ ಹೆದ್ದಾರಿ 66ರ ನಾಯ್ಕನಕಟ್ಟೆ ಸರ್ಕಲ್ ಬಳಿ ನೂತನವಾಗಿ ಗೋಲ್ಡ್ ಮೊಬೈಲ್ ಮತ್ತು ಎಸ್‍ಎಲ್‍ವಿ ಟ್ರೇಡರ್ಸ್ ಮಳಿಗೆ ಶುಭಾರಂಭಗೊಂಡಿತು. ಇಲ್ಲಿ ಎಲ್ಲಾ ತರಹದ ಕಂಪನಿ ಮೊಬೈಲಗಳು ಹಾಗೂ ವಿವಿಧ ಕಂಪನಿಯ ಮೊಬೈಲ್ ರೀಚಾರ್ಜ್‍ಗಳು ಸಿಮ್ ಕಾರ್ಡ್‍ಗಳು, ಗ್ರಾಹಕರಿಗೆ ಪಾನ್ ಕಾರ್ಡ್, ಲ್ಯಾಂಡ್ ಲಿಂಕ್ಸ್, ವಿವಿಧ ಕಂಪನಿಯ ಮೋಟಾರ್ ಸೈಕಲ್‍ಗಳು, ಮಿನಿ ಎಟಿಎಂ ಇನ್ನಿತರ ಎಲ್ಲಾ ಗ್ರಾಹಕರಿಗೆ ಬೇಕಾಗುವ ಸೌಲಭ್ಯಗಳು ಸಿಗುತ್ತದೆ

ಗೇಟು ಮೈಮೇಲೆ ಬಿದ್ದು ಬಾಲಕ ಸಾವು

ಮಂಗಳೂರು ಪಾಂಡೇಶ್ವರ ನಿವಾಸಿ 7 ವರ್ಷದ ಬಾಲಕ ಮೈಮೇಲೆ ಗೇಟು ಬಿದ್ದು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸವಾದ್ ಎಂಬವರ 7 ವರ್ಷ ಪ್ರಾಯದ ಹಮ್ದಾನ್ ಎಂಬ ಮುದ್ದಾದ ಮಗು ಮೃತ ದುರ್ದೈವಿ. ಹಮ್ದಾನ್ ನಿನ್ನೆ ಆಟವಾಡುವಾಗ ಮೈಮೇಲೆ ಗೇಟು ಬಿದ್ದಿತ್ತು. ತಕ್ಷಣ ಚಿಕಿತ್ಸೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ನಿಟ್ಟೆ ಡಾ. ಶಂಕರ ಅಡ್ಯಂತಾಯ ಸ್ಮಾರಕ ಪದವಿ ಪೂರ್ವ ಕಾಲೇಜು :ಎನ್. ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ

“ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಿಂದ ಕೇವಲ ಕೆಲಸ ಮಾಡಿಸಲು ಇರುವುದಲ್ಲ. ವಿದ್ಯಾರ್ಥಿ ದೆಸೆಯಿಂದಲೇ ಮಕ್ಕಳು ಸಾಮಾಜಿಕವಾಗಿ ತಾವು ಹೇಗೆ ಬದುಕಬೇಕು, ಜೀವನದಲ್ಲಿ ಎದುರಾಗಬಹುದಾದ ಸವಾಲುಗಳನ್ನು ಮೆಟ್ಟಿ ನಿಲ್ಲುವುದು, ಆತ್ಮವಿಶ್ವಾಸ ಬೆಳೆಸಿಕೊಳ್ಳುವುದು, ಸಹಬಾಳ್ವೆಯ ಮಹತ್ವ ಮೊದಲಾದವುಗಳನ್ನು ತಿಳಿಸಿಕೊಡುತ್ತದೆ. ಒಟ್ಟಿನಲ್ಲಿ ವಿದ್ಯಾರ್ಥಿಯ ವ್ಯಕ್ತಿತ್ವದ ಸರ್ವತೋಮುಖ ಅಭಿವೃದ್ಧಿಗೆ ಎನ್‍ಎಸ್‍ಎಸ್ ದಾರಿದೀಪವಾಗಬಲ್ಲ ಜೀವನ

ಬೈಂದೂರು ಶ್ರೀ ಭದ್ರಕಾಳಿ ದೇವಸ್ಥಾನ ಚಣಕ್ಕಳಿ ಬಡಾಕೆರೆ ಶರನ್ನವರಾತ್ರಿ ಉತ್ಸವ

ಬೈಂದೂರು ತಾಲೂಕಿನ ಸುಪ್ರಸಿದ್ಧ ದೇವಸ್ಥಾನ ಶ್ರೀ ಭದ್ರಕಾಳಿ ದೇವಸ್ಥಾನ ಚಣಕ್ಕಳಿ ಬಡಾಕೆರೆ ಇಂದು ವಿಜಯ ದಶಮಿ ಪ್ರಯುಕ್ತ ಮಂಜುನಾಥ್ ಅಡಿಗ ಬಡಾಕೆರೆ ಇವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನದ ಮೂಲಕ ಇಂದು ದೇವಿಯ ಸನ್ನಿಧಾನದಲ್ಲಿ ದುರ್ಗಾ ಹೋಮ ವಿಶೇಷ ಮಹಾಪೂಜೆ ಅನ್ನದಾನ ಸೇವೆ ಸಂಪನ್ನಗೊಂಡಿದೆ. ಸಂಜೆ 6:00 ರಿಂದ 8.30 ರವರೆಗೆ ಶ್ರೀ ರಾಮ ಭಜನಾ ಮಂಡಳಿ ಬಡಾಕೆರೆ ಇವರಿಂದ ಭಜನಾ ಕಾರ್ಯಕ್ರಮವು ಅದ್ದೂರಿನಿಂದ ನಡೆದಿದೆ. ಈ ಸಂದರ್ಭದಲ್ಲಿ ಸಂತೋಷ್ ಮೊಗವೀರ