ತಮಿಳುನಾಡು ; ಲಂಚಕೋರ ಇಡಿ- ಜಾರಿ ನಿರ್ದೇಶನಾಲಯದ ಅಧಿಕಾರಿ ಬಂಧನ
ಸರಕಾರಿ ನೌಕರರೊಬ್ಬರಿಂದ 20 ಲಕ್ಷ ರೂಪಾಯಿ ಲಂಚ ಪಡೆಯುತಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿ ಅಂಕಿತ್ ತಿವಾರಿ ಅವರನ್ನು ತಮಿಳುನಾಡು ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳದವರು ಡಿಂಡಿಗಲ್‍ನಲ್ಲಿ ವಶಕ್ಕೆ ಪಡೆದರು. ಸ್ಥಳೀಯ ಕೋರ್ಟು ತಿವಾರಿಯನ್ನು ಡಿಸೆಂಬರ್ 15ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇದರ ಬೆನ್ನಿಗೇ ಮಧುರೈಯಲ್ಲಿರುವ ಇಡಿ- ಜಾರಿ ನಿರ್ದೇಶನಾಲಯದ ಪ್ರಾದೇಶಿಕ ಕಚೇರಿಗೆ ಭ್ರಷ್ಟಾಚಾರ ನಿಗ್ರಹ ದಳದವರು ಜಾರಿ ಮಾಡಿದರು. ಹಾಗೆಯೇ ಅಂಕಿತ್ ತಿವಾರಿ ಅವರು ಮನೆಯಲ್ಲೂ ಶೋಧ ನಡೆಸಿ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡರು.