ತೋಕೂರು: ಬಾಲ್ಯದಲ್ಲಿ ಮಕ್ಕಳಿಗೆ ಸ್ಪರ್ಧಾ ಮನೋಭಾವವನ್ನು ಬೆಳೆಸಿಕೊಳ್ಳುವುದು ಉತ್ತಮ – ಸುನೀತಾ ಗುರುರಾಜ್

ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ) ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ವೇದಿಕೆ, ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆ, ಅಭಿವೃದ್ಧಿ ಸಮಿತಿ ಮತ್ತು ಗುರು ಮಂದಿರ ನಿರ್ಮಾಣ ಸಮಿತಿ, ಎಸ್. ಕೋಡಿ, ತೋಕೂರು ಇದರ ಸಹಭಾಗಿತ್ವದಲ್ಲಿ ಸಪ್ಟೆಂಬರ್ 7,.2025 ರಂದು ನೆರವೇರಲಿರುವ ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜನ್ಮದಿನಾಚರಣೆಯ ಪ್ರಯುಕ್ತ ಸ್ಥಳೀಯ ಮಕ್ಕಳಿಗೆ, ಆಶುಭಾಷಣ, ರಸಪ್ರಶ್ನೆ ಸಂಗೀತ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆಯನ್ನು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ನೆರವೇರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ನವೀನ್ ಕುಮಾರ್ ಹರಿಪಾದೆಯವರು ವಹಿಸಿದ್ದರು,

ಸ್ಪರ್ಧೆಗಳ ತೀರ್ಪುಗಾರರಾಗಿ ಶ್ರೀಮತಿ ವನಿತಾ ಆರ್ ಆಚಾರ್ಯ, ಶ್ರೀ ಭಾಸ್ಕರ್ ಅಮೀನ್ ತೋಕೂರು, ಶ್ರೀಮತಿ ಸುನೀತಾ ಗುರುರಾಜ್ ರವರು ವಹಿಸಿದ್ದರು ಸ್ಪರ್ಧೆಯನ್ನು ಉದ್ದೇಶಿಸಿ ಶ್ರೀಮತಿ ಸುನೀತಾ ಗುರುರಾಜ್ ರವರು ಮಾತನಾಡಿ ಬಾಲ್ಯದಲ್ಲಿ ಮಕ್ಕಳಿಗೆ ಸ್ಪರ್ಧಾ ಮನೋಭಾವವನ್ನು ಬೆಳೆಸಿದಲ್ಲಿ ವಿದ್ಯಾ ಕ್ಷೇತ್ರದಲ್ಲಿ ಹಾಗೂ ಇತರ ವಿವಿಧ ಕ್ಷೇತ್ರಗಳಲ್ಲಿ ಮಕ್ಕಳು ಪರಿಪೂರ್ಣತೆಯನ್ನು ಸಾಧಿಸುತ್ತಾರೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು
ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷರಾದ ಶ್ರೀ ಗುರುರಾಜ್ ಎಸ್ ಪೂಜಾರಿ, ಉಪಾಧ್ಯಕ್ಷರಾದ ಶ್ರೀ ದಿನಕರ್ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಅಭಿಜಿತ್ ಸುವರ್ಣ,ಮಾಜಿ ಅಧ್ಯಕ್ಷರಾದ ಶ್ರೀ ಅಶೋಕ್ ಕರ್ಕೇರ, ಗುರು ಮಂದಿರ ನಿರ್ಮಾಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಭಾಸ್ಕರ್ ಅಮೀನ್ ತೋಕೂರು, ಕೋಶಾಧಿಕಾರಿ ಶ್ರೀ ಹೇಮನಾಥ್ ಅಮೀನ್, ಮಹಿಳಾ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಶಾಂತ ಎ ಕರ್ಕೇರ, ಶ್ರೀ ಮನೋಜ್ ಅತ್ತೂರು, ಶ್ರೀ ಲೋಹಿತ್ ಎಲ್ ಕೋಟ್ಯಾನ್, ಶ್ರೀ ಪದ್ಮನಾಭ, ಶ್ರೀ ಭಾಸ್ಕರ್ ಪೂಜಾರಿ, ಶ್ರೀ ಮನ್ವಿತ್, ಶ್ರೀಮತಿ ಸರೋಜಿನಿ ಜೆ ಕೋಟ್ಯಾನ್, ಶ್ರೀಮತಿ ಅಮಿತಾ ದಿನಕರ್ ಸಾಲಿಯಾನ್, ಶ್ರೀಮತಿ ಜಯಶ್ರೀ, ಶ್ರೀಮತಿ ದಮಯಂತಿ ಮತ್ತು ಶ್ರೀಮತಿ. ನಳಿನಾಕ್ಷಿ ರವರು ಉಪಸ್ಥಿತರಿದ್ದರುಮಕ್ಕಳಿಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರನ್ನು ಆಯ್ಕೆ ಮಾಡಲಾಗಿದ್ದು, ವಿಜೇತರಿಗೆ ನಾರಾಯಣಗುರು ಜಯಂತಿಯ ದಿನದಂದು ವಿತರಿಸಲಾಗುವುದು ಎಂದು ಸಮಿತಿಯವರು ತಿಳಿಸಿದ್ದಾರೆ.
