ತ್ರಾಸಿ ಕಡಲ ತೀರದಲ್ಲಿ ಪತ್ತೆಯಾದ ಬೃಹತ್ ಮೀನು : ಅಧಿಕಾರಿಗಳ ಪರಿಶೀಲನೆ
ತ್ರಾಸಿ ಕಡಲ ತೀರದಲ್ಲಿ ಪತ್ತೆಯಾದ ಬೃಹತ್ ಮೀನಿನ ಕಳೇಬರವನ್ನು ಅರಣ್ಯಾಧಿಕಾರಿಗಳು ಮತ್ತು ಮಂಗಳೂರಿನ ರೀಪೋರ್ಚ್ ಮೆರೈನ್ ಕನ್ಸರ್ವೇಶನ್ ಸಂಸ್ಥೆಯ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಸತ್ತಿರುವ ಮೀನು ಪೈಲೆಟ್ ವೇಲ್ ಎನ್ನುವ ಅಪರೂಪದ ತಿಮಿಂಗಲದ ಪ್ರಭೇದ ಎಂದು ತಿಳಿಸಿದ್ದಾರೆ.

ತ್ರಾಸಿ ಕಡಲ ತೀರದಲ್ಲಿ ಬೃಹತ್ ಮೀನು ಬಿದ್ದು ಕೊಳೆತ ಸ್ಥಿತಿಯಲ್ಲಿರುವುದು ಬುಧವಾರ ಬೆಳಿಗ್ಗೆ ಬೆಳಕಿಗೆ ಬಂದಿತ್ತು. ಸ್ಥಳೀಯ ” ಬೀಚ್ ಬಾಯ್ಸ್’ ತಂಡ ಮೀನನ್ನು ಅಲ್ಲಿಯೇ ಮರಳಿನಲ್ಲಿ ದಫನ ಮಾಡಿದ್ದರು. ಇದಾದ ಬಳಿಕ ಅರಣ್ಯ ಇಲಾಖೆ ಹಾಗೂ ಮಂಗಳೂರಿನ ರೀಪೋರ್ಚ್ ಮರೈನ್ ಕನ್ಸರ್ವೇಶನ್ ಸಂಸ್ಥೆಯ ಸಿಬ್ಬಂದಿಗಳು ತ್ರಾಸಿ ಕಡಲ ತೀರಕ್ಕೆ ಆಗಮಿಸಿ ದಫನ ಮಾಡಿರುವ ಮೀನಿನ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಆರ್.ಎಂ.ಸಿಯ ತೇಜಸ್ವಿನಿ, ಯಾವುದೇ ರೀತಿಯ ಪ್ರಾಣಿಗಳು, ಮೀನುಗಳು ತೊಂದರೆಯಲ್ಲಿದ್ದಲ್ಲಿ ಅಥವಾ ಸಾವನ್ನಪ್ಪಿದಲ್ಲಿ ತಿಳಿಸುವಂತೆ ಸೂಚಿಸಿದರು.ಬಳಿಕ ಮಾತನಾಡಿದ ಇನ್ನೊಬ್ಬ ಅಧಿಕಾರಿ ವಿರಿಲ್ ಸ್ಟೀಫನ್ ಮಾತನಾಡಿ, ಸಾಧ್ಯವಾದಷ್ಟು ತ್ಯಾಜ್ಯಗಳನ್ನು ಸಮುದ್ರ ಪಾಲಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದರು.ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಎನ್ಜಿಓ ಸಿಬ್ಬಂದಿಗಳು ಗಂಗೊಳ್ಳಿ ಆರಕ್ಷಕ ಠಾಣಾ ಸಿಬ್ಬಂದಿಗಳು ಮತ್ತು ಸ್ಥಳೀಯ ಬೀಚ್ ಬಾಯ್ಸ್ ಯುವಕರು ಉಪಸ್ಥಿತರಿದ್ದರು.

















