ಉಳ್ಳಾಲ : ಗಾಂಜಾ ವ್ಯಸನಕ್ಕೆ ಬಲಿಯಾಗಿದ್ದ ಯುವಕ ಆತ್ಮಹತ್ಯೆ
ಬೈಕ್ ಕಳವುಗೈದು ಉಳ್ಳಾಲ ಪೊಲೀಸರಿಂದ ಬಂಧಿತನಾಗಿದ್ದ ಆರೋಪಿ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾನೆ.ಗಾಂಜಾ ವ್ಯಸನಕ್ಕೆ ಬಲಿಯಾಗಿದ್ದ ಯುವಕ ಸೇದಲು ಗಾಂಜಾ ಸಿಗದೆ ಜಿಗುಪ್ಸೆಗೊಂಡು ಇಂದು ಬೆಳಿಗ್ಗೆ ಮನೆಯಲ್ಲಿ ಸಾವಿಗೆ ಶರಣಾಗಿದ್ದಾನೆ.
ತಲಪಾಡಿ ಗ್ರಾಮದ ನಾರ್ಲ,ಪಡೀಲ್ ನಿವಾಸಿ ಪೈಝಲ್(24) ಆತ್ಮಹತ್ಯೆಗೈದ ಯುವಕ.ಫೈಝಲ್ ಇಂದು ಬೆಳಿಗ್ಗೆ ತನ್ನ ಮನೆಯ ಮೊದಲ ಅಂತಸ್ತಿನ ಕೊಠಡಿಯ ಫ್ಯಾನಿಗೆ ನೈಲಾನ್ ಬಟ್ಟೆಯಿಂದ ಕುಣಿಕೆ ಬಿಗಿದು ಆತ್ಮಹತ್ಯೆಗೈದಿದ್ದಾನೆ.ಮನೆಯಲ್ಲಿ ಫೈಸಲ್ ತಾಯಿ, ತಂಗಿ ಮತ್ತು ಅಜ್ಜಿ ಇದ್ದು ತಾಯಿ ಮನೆಯ ಮೇಲಿನ ಅಂತಸ್ತಿಗೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ.ಫೈಝಲ್ ನಿತ್ಯವೂ ಬೆಳಗ್ಗೆ 9:00 ರಿಂದ 10 ಗಂಟೆ ಅವಧಿಯಲ್ಲಿ ಗಾಂಜಾ ಸೇದುವ ಚಟ ಬೆಳೆಸಿದ್ದನಂತೆ.ಇಂದು ಗಾಂಜಾ ಸಿಗದ ಕಾರಣದಿಂದ ಜಿಗುಪ್ಸೆಗೊಂಡು ಆತ್ಮಹತ್ಯೆಗೈದಿರುವುದಾಗಿ ತಿಳಿದು ಬಂದಿದೆ.
ಉಳ್ಳಾಲ ಠಾಣಾ ವ್ಯಾಪ್ತಿಯ ಪಂಡಿತ್ ಹೌಸ್ ಎಂಬಲ್ಲಿ ನಡೆದ ಬೈಕ್ ಕಳವು ಪ್ರಕರಣದಲ್ಲಿ ಫೈಝಲ್ ನನ್ನ ಪೊಲೀಸರು ಬಂಧಿಸಿದ್ದು ಮೃತ ಫೈಝಲ್ ಪ್ರಕರಣವನ್ನ ಎದುರಿಸುತ್ತಿದ್ದ.ಇಷ್ಟಲ್ಲದೆ ಉಳ್ಳಾಲ ಠಾಣೆಯಲ್ಲಿ ಈತನ ವಿರುದ್ಧ ಗಾಂಜ ಸೇವನೆಯ ಕೇಸು ದಾಖಲಾಗಿದೆ.ಉಳ್ಳಾಲ ಪೊಲೀಸರು ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾಣಿಸಿ ಪ್ರಕರಣ ದಾಖಲಿಸಿದ್ದಾರೆ