ತುಳುನಾಡಿನ ರಂಗ ಕಲಾವಿದ ಯತೀಶ್ ಶೆಟ್ಟಿ ಉಚ್ಚಿಲ ಅನಾರೋಗ್ಯದಿಂದಾಗಿ ವಿಧಿವಶ

ತುಳುನಾಡಿದ ಹತ್ತು ಹಲವು ನಾಟಕ ತಂಡಗಳಲ್ಲಿ ತನ್ನ ನಟನಾ ಸಾಮರ್ಥ್ಯವನ್ನು ತೋರಿಸಿ ಅಲ್ಲದೇ ವಿ4ನ್ಯೂಸ್ ಕರ್ನಾಟಕದ ಕಾಮಿಡಿ ಪ್ರೀಮಿಯರ್ ಲೀಗ್‌ನಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಪ್ರಸಿದ್ಧ ಕಲಾವಿದ ಯತೀಶ್ ಶೆಟ್ಟಿ ಉಚ್ಚಿಲರವರು ಅನಾರೋಗ್ಯದ ಕಾರಣದಲ್ಲಿ ವಿಧಿವಶರಾಗಿದ್ದಾರೆ.

ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು ತನ್ನ ಉತ್ತಮ ನಡವಳಿಕೆ ಮತ್ತು ಉತ್ತಮ ನಟನೆಯ ಮೂಲಕ ಎಲ್ಲ ಮೆಚ್ಚುಗೆಗೆ ಪಾತ್ರರಾಗಿದ್ದ ಯತೀಶ್ ಶೆಟ್ಟಿ ಉಚ್ಚಿಲರವರು ಅನಾರೋಗ್ಯದಿಂದ ತನ್ನ ಚಿಕ್ಕ ವಯಸ್ಸಿನಲ್ಲಿಯೇ ವಿಧಿಯ ಆಟಕ್ಕೆ ಬಲಿಯಾಗಿದ್ದಾರೆ. ತನ್ನ ಸಾಫ್ಟ್ ಇಂಜಿನಿಯರ್ ವೃತ್ತಿಯ ಜೊತಗೆ ಸಾಕ್ಷಿ ಕಲಾವಿದರು ಬೆಳಪು, ಜವನೆರ್ ಉಚ್ಚಿಲ, ಸಂಸಾರ ಕಲಾವಿದರು ಪಣಿಯೂರು, ಸನ್ನಿದಿ ಕಲಾವಿದರು ಉಡುಪಿ ಹೀಗೆ ಅನೇಕ ಹತು ಹಲವು ತಂಡಗಳಲ್ಲಿ ನಟಿಸಿದ್ದಾರೆ. ನಟನೆ ಮಾತ್ರವಲ್ಲದೆ ಬರವಣಿಗೆಯಲ್ಲಿ ಕೂಡ ಸೈ ಎನಿಕೊಂಡಿದ್ದರು.

ಒರ್ವ ಉತ್ತಮ ಕಲಾವಿದ. ಇನ್ನು ಅನೇಕ ವರ್ಷಗಳ ಕಾಲ ಬದುಕಬೇಕು ಕಲಾಮಾತೆಯ ಸೇವೆಯನ್ನು ಮಾಡಬೇಕು ಎನ್ನುವ ಅವರ ಕನಸ್ಸನ್ನು ನುಚ್ಚು ನೂರಾಗಿದೆ. ತಾನು ಬದುಕ್ಕಿದ್ದು ಅಲ್ಪಕಾಲವಾದರು ಆ ಸಮಯದಲ್ಲಿ ಅನೇಕ ಬಂದು ಮಿತ್ರರನ್ನು ಕಲಾವಿದನಾಗಿ ಅನೇಕ ಅಭಿಮಾನಿಗಳನ್ನು ಗಳಿಸಿದ್ದು. ತಾಯಿ ಮತ್ತು ಒರ್ವ ತಮ್ಮನನ್ನು ಅಗಲಿದ್ದು ಅವರ ಅಗಲಿಕೆಯ ದುಖ:ವನ್ನು ಸಹಿಸುವ ಶಕ್ತಿಯನ್ನು ಆ ದೇವರು ಅವರ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ನೀಡಲಿ ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎನ್ನುವುದೇ ನಮ್ಮ ಆಶಯ.

Related Posts

Leave a Reply

Your email address will not be published.