ಮಂಗಳೂರಿನಲ್ಲಿ ದಂಪತಿ ಆತ್ಮಹತ್ಯೆ

ಲಾಕ್ ಡೌನ್ ನಿಂದಾಗಿ ಕೆಲಸವಿಲ್ಲದೆ ಆರ್ಥಿಕ ನಷ್ಟದಿಂದಾಗಿ ದಂಪತಿ ಆತ್ಮಹತ್ಯೆ ಮಾಡಿರುವ ಘಟನೆ ಮಂಗಳೂರಲ್ಲಿ ನಡೆದಿದೆ. ಕಳೆದ 2 ತಿಂಗಳಿಂದ ಕೆಲಸವಿಲ್ಲದೇ ಮನೆಯಲ್ಲಿ ಇದ್ದ ದಂಪತಿ ತೀರಾ ಹಣಕಾಸಿನ ಮುಗ್ಗಟ್ಟಿಗೆ ಬಿದ್ದು, ಆತ್ಮಹತ್ಯೆಗೆ ಶರಣಾರಾಗಿದ್ದಾರೆ. ಈ ಘಟನೆ ಪತಿಯು ಕಲಾವಿದರು ಆಗಿದ್ದು, ಇದೀಗ ಅವರ ಸಾವು ಕಲಾವಿದರಿಗೆ ತಲ್ಲಣಗೊಳ್ಳಿಸಿದೆ.

ಪಿಂಟೋಸ್ ಲೇನ್ ನಿವಾಸಿ 55 ವರ್ಷದ ಸುರೇಶ್ ಮತ್ತು ವಾಣಿಶ್ರೀ ಮೃತಪಟ್ಟವರು. ಸುರೇಶ್ ಅವರ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದ್ದು ವಾಣಿಶ್ರೀ ಶವ ಮನೆಯ ಟೆರೇಸಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುರೇಶ್ ಅವರು ಖ್ಯಾತ ತಬಲ ಕಲಾವಿದರಾಗಿದ್ದರು. ಅವರ ಪತ್ನಿ ವಾಣಿ ಖಾಸಗಿ ಕಾಲೇಜುವೊಂದರಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು. ಹಣಕಾಸು ಮುಗ್ಗಟ್ಟು ಆತ್ಮಹತ್ಯೆಗೆ ಕಾರಣವೆಂದು ಶಂಕಿಸಲಾಗಿದೆ. ಮನೆಯಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ಚಿಟ್ ಫಂಡ್‍ನಲ್ಲಿ ಆದ ನಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಡೆತ್ ನೋಟ್‍ನಲ್ಲಿ ಚಿಟ್ ಫಂಡ್ ನಷ್ಟದ ಬಗ್ಗೆ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪೆÇಲೀಸ್ ಮೂಲಗಳಿಂದ ತಿಳಿದುಬಂದಿದೆ. ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

 

 

Related Posts

Leave a Reply

Your email address will not be published.