ಮೂಡುಬಿದಿರೆ: ನೀರುಡೆ ನಿವಾಸಿ ಓಲ್ವಿನ್ ಪಿಂಟೋ ನಾಪತ್ತೆ
ಮೂಡುಬಿದಿರೆ: ತಾಲೂಕಿನ ನಿಡ್ಡೋಡಿ ಗ್ರಾ. ಪಂ ವ್ಯಾಪ್ತಿಯ ನೀರುಡೆ ನಿವಾಸಿ ಓಲ್ವಿನ್ ಪಿಂಟೋ(59) ಅವರು ಸೆ.8ರಿಂದ ನಾಪತ್ತೆಯಾಗಿರುವ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
3 ವರ್ಷಗಳ ಹಿಂದೆ ಮಂಗಳೂರು ತಲಪಾಡಿಯಲ್ಲಿ ಹಾಸ್ಟೇಲ್ ಒಂದರಲ್ಲಿ ಕೆಲಸ ಮಾಡುಕೊಂಡಿದ್ದವರು, ಇತ್ತೀಜೆಗೆ ಮನೆಗೆ ಬಂದು ಕೃಷಿ ಕೆಲಸ ಮಾಡುತ್ತಿದ್ದರು. ಸೆ.8 ರಂದು ಸಂಜೆ 4.30 ಕ್ಕೆ ಮನೆಯಲ್ಲಿ ತನ್ನ ಮೊಬೈಲ್ ಬಿಟ್ಟು ಮನೆಯಿಂದ ಹೊರಗೆ ಹೋದವರು ಮತ್ತೆ ಮರಳಿ ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ.
ನಾಪತ್ತೆಯಾಗಿರುವ ಓಲ್ವಿನ್ ಪಿಂಟೋ 152 ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು, ಹಿಂದಿ, ಕನ್ನಡ, ಮರಾಠಿ, ತುಳು, ಭಾಷೆ ಮಾತನಾಡುತ್ತಾರೆ. ಕಾಣೆಯಾದ ದಿನ ಕಪ್ಪು ಪಟ್ಟಿಯ ಟಿ ಶರ್ಟ್ ಮತ್ತು ಕಪ್ಪು ಬಣ್ಣದ ಬರ್ಮುಡ ಧರಿಸಿದ್ದು. ಇವರ ಪತ್ತೆಯಾದಲ್ಲಿ ಪೊಲೀಸ್ ನಿಯಂತ್ರಣ ಕೋಣೆಗೆ ತಿಳಿಸಲು ದೂರವಾಣೆ ಸಂಖ್ಯೆ – 08258-236333, 0824-2220526, 0824-2220808, 22212108 ಸಂಪರ್ಕಿಸುವಂತೆ ಮೂಡುಬಿದಿರೆ ಪೊಲೀಸರು ತಿಳಿಸಿದ್ದಾರೆ.