ಮನೆ ಮನೆಗೆ ದಿನಸಿ ಸಾಮಾಗ್ರಿ ವಿತರಣೆ : ಉಡುಪಿಯ ಸ್ಪೀಡ್ ಡೆವಿಲ್ಸ್ ಯುವಕರ ತಂಡದ ಕಾರ್ಯ
ಲಾಕ್ ಡೌನ್ನಿಂದಾಗಿ ದುಡಿಮೆ ಇಲ್ಲದೇ ಹಲವು ಕುಟುಂಬಗಳು ಸಂಕಷ್ಟದಲ್ಲಿವೆ. ಹೀಗಾಗಿ ಸಂಕಷ್ಟದ ಕುಟುಂಬಗಳ ಹಸಿವು ನೀಗಿಸುವ ಕೆಲಸವನ್ನು ಸದ್ದಿಲದೇ ಮಾಡುತ್ತಿದೆ. ಉಡುಪಿಯ ಸ್ಪೀಡ್ ಡೆವಿಲ್ಸ್ ಎನ್ನುವ ಹೆಸರಿನ ಯುವಕರು ಸಂಕಷ್ಟದಲ್ಲಿ ಕುಟುಂಬಗಳ ಮನೆ ಮನೆಗೆ ತೆರಳಿ ಹಸಿವು ನೀಗಿಸುತ್ತಿದೆ.
ಇಡೀ ದೇಶವೇ ಕೊವಿಡ್ ಮಹಾಮಾರಿ ಯಿಂದ ಹಾಕಲಾಗಿರುವ ಲಾಕ್ ಡೌನ್ ಗೆ ತತ್ತರಿಸಿ ಹೋಗಿದೆ.ದುಡಿಮೆಯಿಲ್ಲದೇ ಜನ ಹಸಿವಿನಿಂದ ಸಂಕಷ್ಟದಲ್ಲಿದ್ದಾರೆ.ಒಂದೊತ್ತು ಊಟಕ್ಕೂ ಪರದಾಡುತ್ತಿದ್ದಾರೆ.ನಿರ್ಗತಿಕರಿಗೆ ಕೆಲವೊಂದು ಸಮಾಜ ಸೇವಕರು ಉಪಹಾರ,ಊಟದ ವೆವಸ್ಥೆ ಮಾಡುತ್ತಿದ್ದಾರೆ.ಅದ್ರೆ ಸ್ವಾಭಿಮಾನಿ ಗಳಾದ ಕರಾವಳಿಗರು ಹಸಿದರು ಮತ್ತೊಬ್ಬರ ಬಳಿ ಕೈ ಚಾಚುವುದಿಲ್ಲ.ಹೀಗಾಗಿ ಸಂಕಷ್ಟದಲ್ಲಿರುವ ಕುಟುಂಬಗಳನ್ನ ಗುರುತಿಸಿ ,ಹಸಿವು ನೀಗಿಸುವ ಮಹಾ ಕಾರ್ಯದಲ್ಲಿ ಉಡುಪಿಯ ಯುವಕರ ತಂಡವೊಂದು ತೆರೆಮೆರೆಯಲ್ಲಿ ಮಾಡುತ್ತಿದೆ.
ಸ್ಪೀಡ್ ಡೆವಿಲ್ಸ್ ಎನ್ನುವ ಯುವಕರ ತಂಡ ಹಸಿದ ಕುಟುಂಬಗಳಿಗೆ ಆಹಾರದ ಕಿಟ್ ಕೊಡುವ ಕಾರ್ಯ ಮಾಡುತ್ತಿದೆ.ವಾಟ್ಸ್ ಅಪ್ ಗ್ರೂಪ್ ನಿಂದ ಪ್ರಾರಾಂಭವಾದ ಈ ತಂಡ ಪ್ರತಿದಿನ ನೂರಾರು ಮನೆಗಳಿಗೆ ಅಹಾರ ಕಿಟ್ ವಿತರಿಸುತ್ತಿದ್ದಾರೆ.ತಾವು ದುಡಿದ ದುಡಿಮೆಯ ಒಂದು ಭಾಗದಲ್ಲೇ ಅಹಾರ ಕಿಟ್ ನೀಡಲು ಮುಂದಾದ ಯುವಕರಿಗೆ ಇತರ ಸ್ನೇಹಿತರು ಕೈ ಜೋಡಿಸಿದ್ದಾರೆ.


							
							
							














