Home 2022 September (Page 3)

16 ದಿನದ ಅವಳಿ ಶಿಶುಗಳನ್ನು ಕತ್ತು ಹಿಸುಕಿ ಕೊಂದ ತಾಯಿ

ಭೋಪಾಲ್: ಅತ್ತೆಯೊಂದಿಗೆ ಜಗಳ ಮಾಡಿಕೊಂಡು ಮಹಿಳೆಯೊಬ್ಬರು ತನ್ನ 16 ದಿನಗಳ ಅವಳಿ ಮಕ್ಕಳನ್ನು ಕತ್ತು ಹಿಸುಕಿ ಕೊಂದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಸಪ್ನಾ ಧಾಕಡ್ ತನ್ನ ಮಕ್ಕಳನ್ನು ಕೊಂದ ಆರೋಪಿ. ಮಕ್ಕಳನ್ನು ಹತ್ಯೆ ಮಾಡಿ ನಿರ್ಜನ ಪ್ರದೇಶದಲ್ಲಿ ಎಸೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈಕೆಯ ಪತಿ ಮದ್ಯವ್ಯಸನಿ ಹಾಗೂ ಕೆಲಸವಿಲ್ಲದವನೆಂದು ಅತ್ತೆ

ಪ್ರವಾಸೋದ್ಯಮ ಉತ್ತೇಜನಕ್ಕೆ ಹಲವು ಕ್ರಮ: ಜಿಲ್ಲಾಧಿಕಾರಿ ಡಾ. ರಾಜೇಂದ್ರ

ಮಂಗಳೂರು : ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದೃಷ್ಟಿಯಲ್ಲಿ ಕರಾವಳಿ ಉತ್ಸವ ಹಮ್ಮಿಕೊಳ್ಳುವ ಬಗ್ಗೆ ಮುಂದಿನ ವಾರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರೊಂದಿಗೆ ಸಭೆ ನಡೆಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ತಿಳಿಸಿದರು. ಅವರು ಸೆ.27ರ ಮಂಗಳವಾರ ಜಿಲ್ಲಾಡಳಿತ, ಮಂಗಳೂರು ಸ್ಮಾರ್ಟ್ ಸಿಟಿ, ಕೇಂದ್ರ ಸರ್ಕಾರದ ಪರಿಸರ,

ಹೋಟೆಲ್ ಓಶಿಯನ್ ಪರ್ಲ್ ಸೆ. 30 ರಂದು ಉಜಿರೆಯಲ್ಲಿ ಶುಭಾರಂಭ

ಅಥಿತಿ ಸೇವೆಗೆ ಮತ್ತು ಉತ್ತಮ ಗುಣ ಮಟ್ಟದ ಆಹಾರ ಕ್ರಮಕ್ಕೆ ಹೆಸರು ವಾಸಿಯಾದ ಹೋಟೆಲ್ ಓಷನ್ ಪರ್ಲ್, ಉಜಿರೆ 30 ಸೆಪ್ಟೆಂಬರ್ 2022 ರಂದು ತನ್ನ 4ಶಾಖೆಯನ್ನು ತೆರೆಯಲಿದೆ. ಓಷನ್ ಪರ್ಲ್ ಹೋಟೆಲ್ಸ್ ಪ್ರೈ. ಲಿಮಿಟೆಡ್ ಸಂಸ್ಥೆ, ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಮೂರು ಶಾಖೆಗಳನ್ನು ಹೊಂದಿದ್ದು, ಅವುಗಳೆಂದರೆ ದಿ ಓಷನ್ ಪರ್ಲ್, ಮಂಗಳೂರು, ದಿ ಓಷನ್ ಪರ್ಲ್, ಉಡುಪಿ

ಕುಂಭಾಶಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ : ನವರಾತ್ರಿ ಪ್ರಯುಕ್ತ ಚಂಡಿಕಾಯಾಗ

ಕುಂದಾಪುರ: ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ದಕ್ಷಿಣ ಶೃಂಗೇರಿ ಶ್ರೀ ಶಾರದಾ ಪೀಠದ ಆಡಳಿತಕ್ಕೆ ಒಳಪಟ್ಟಿರುವ ಕುಂಭಶ್ರೀ ಶ್ರೀ ನಾಗಾಚಲ ಅಯ್ಯಪ್ಪಸ್ವಾಮಿ ಮತ್ತು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸೆಪ್ಟೆಂಬರ್ 26ರಿಂದ ಅಕ್ಟೋಬರ್ 5ರವರೆಗೆ ನವರಾತ್ರಿ ಉತ್ಸವ ನಡೆಯಲಿದೆ. ಶ್ರೀ ಶಾರದಾ ಪೀಠ ಶೃಂಗೇರಿಯ ಪ್ರಾಂತೀಯ ಧರ್ಮಾಧಿಕಾರಿಗಳು, ವೇದಮೂರ್ತಿ ಲೋಕೇಶ್

ಶಾಂತಿ ಸಾಮರಸ್ಯ ಹದಗೆಡುವ ಸಂಘಟನೆಗಳ ವಿರುದ್ದ ಕ್ರಮಕೈಗೊಳ್ಳಲಿ : ಯು.ಟಿ.ಖಾದರ್

ದೇಶದಲ್ಲಿ ಶಾಂತಿ ಸಾಮರಸ್ಯ ಹದಗೆಡಿಸುವ ಯಾವುದೇ ಸಂಘಟನೆ ವಿರುದ್ಧ ಕ್ರಮ ಆಗಬೇಕು. ಇದು ಸರ್ಕಾರದ ಜವಾಬ್ದಾರಿ, ಹಾಗಾಗಿ ಎಲ್ಲಾ ಸಂಘ ಸಂಸ್ಥೆಗಳ ಮೇಲೆ ಕ್ರಮ ಆಗಲಿ ಎಂದು ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಹೇಳಿದರು. ಅವರು ಮಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು. ಹಲ್ಲೆ, ಅಶಾಂತಿ, ಕೋಮುದ್ವೇಷದ ಸಂಘಟನೆ ವಿರುದ್ದ ಕ್ರಮ ಕೈಗೊಳ್ಳಲಿ. ತಾರತಮ್ಯ ಮಾಡದೇ

ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ವಾರ್ಷಿಕ ಮಹಾಸಭೆ

ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ 30ನೇ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 24, 2022 ರ ಶನಿವಾರದಂದು ಸಂಘದ ಕೋಟೇಶ್ವರ ಗೋವಿಂದ್ರಾಯ ವಿಠ್ಠಲ ಕಾಮತ್ ಸಭಾಂಗಣದಲ್ಲಿ ಜರುಗಿತ್ತು. ಶ್ರೀ ಕೆ ಪ್ರಶಾಂತ್ ಬಾಳಿಗಾ, ಕೆ.ಕೆ. ಫಿಶ್ ನೆಟ್ ಕೋ, ನೇಜಾರ್ ಇವರು 2022-23 ನೇ ಸಾಲಿನ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ, ಶ್ರೀ ಹರೀಶ್

ಕಾರ್ಕಳ ಪುರಸಭೆ : ಬೀದಿ ನಾಯಿಗಳ ಉಪಟಳಕ್ಕೆ ಕಡಿವಾನ ಹಾಕುವಂತೆ ಆಗ್ರಹ

ಕಾರ್ಕಳ: ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಾಟ ಎಲ್ಲೆಮೀರಿದೆ. ಅದಕ್ಕೆ ಕಡಿವಾಣ ಹಾಕುವುದಕ್ಕೆ ಇನ್ನೂ ಸಾಧ್ಯವಾಗಿಲ್ಲ. ಒಂದೊಂದು ಕಾರಣಗಳನ್ನು ಅಧಿಕಾರಿಗಳು ಸಭೆಗೆ ನೀಡುತ್ತಿರುವುದರಿಂದ ಸಮಸ್ಯೆ ಶಾಶ್ವತವಾಗಿ ಉಳಿದಿದೆ. ಕೂಡಲೇ ಕ್ರಮಕೈಗೊಳ್ಳಿ ಎಂದು ಪುರಸಭಾ ಪ್ರತಿಪಕ್ಷ ಮುಖಂಡ ಅಶ್ಪಕ್ ಅಹಮ್ಮದ್ ಆಗ್ರಹಿಸಿದಾರೆ.ಕಾರ್ಕಳ ಪುರಸಭೆಯ ಅಧ್ಯಕ್ಷೆ ಸುಮಾ

7 is Not Even ಕಿರುಚಿತ್ರದ ಪೋಸ್ಟರ್ ಬಿಡುಗಡೆ

ವಾಗ್ಮಿ ಸಿನಿ ಕ್ರಿಯೇಷನ್ಸ್ ಅರ್ಪಿಸುವ ಕೆ. ನಂದಿಕೇಶ ಹೆಗ್ಡೆಯವರು ನಿರ್ಮಿಸಿ ಜಗದೀಶ್ ಶೆಟ್ಟಿಯವರು ನಿರ್ದೇಶಿಸಿರುವ 7 is Not Even ಕಿರುಚಿತ್ರದ ಪೋಸ್ಟರ್ ಬಿಡುಗಡೆ ಕಿರುಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಮಂಗಳೂರು ಪೊಲೀಸ್ ಆಯುಕ್ತರಾದ ಎನ್ ಶಶಿಕುಮಾರ್ ಅವರು ಪೋಸ್ಟರ್ ಬಿಡುಗಡೆ ಗೊಳಿಸಿ ಸಿನಿ ತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ

PFI ಪರ ಮಾತನಾಡಿದರೆ ಕಠಿಣ ಕ್ರಮ: ಡಿಜಿಪಿ ಪ್ರವೀಣ್ ಸೂದ್

ದೇಶದಲ್ಲಿ ಈಗಾಗಲೇ ಕೇಂದ್ರ ಗೃಹ ಇಲಾಖೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ)ನಿಷೇಧವನ್ನು ಹೊರಡಿಸಿರುವುದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ)ಪ್ರವೀಣ್ ಸೂದ್ ತಿಳಿಸಿದ್ದಾರೆ.ರಾಜ್ಯದಲ್ಲಿ ಪಿಎಫ್ ಐ ಚಟುವಟಿಕೆಗಳನ್ನು ನಡೆಸುವುದಾಗಲಿ, ಆ ಸಂಘಟನೆ ಪರವಾಗಿ ಮಾತನಾಡುವುದಾಗಲೀ ಮಾಡಬಾರದು. ಅಂತಹವರ

ನಗರೋತ್ಥಾನ ಯೋಜನೆಯಡಿ ಕಮಿಷನ್ ದಂಧೆ

ಮೂಡುಬಿದಿರೆ: ಇಲ್ಲಿನ ಪುರಭಾಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆಯಲ್ಲಿ ಸರಕಾರದಿಂದ ರೂ 1 ಕೋಟಿ ಅನುದಾನ ಬಂದಿದ್ದು ಈ ಕಾಮಗಾರಿಯಲ್ಲಿ ಶೇ. 20ರಷ್ಟು ಕಮೀಷನ್ ವ್ಯವಹಾರ ನಡೆದಿದೆ ಎಂದು ವಿಪಕ್ಷೀಯ ಸದಸ್ಯ ಸುರೇಶ್ ಕೋಟ್ಯಾನ್, ಶಂಕ ವ್ಯಕ್ತಪಡಿಸಿ, ಆರೋಪಿಸಿದ ಘಟನೆ ನಡೆದಿದೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯರು ಆರೋಪಕ್ಕೆ ಸಾಕ್ಷಿ