Home 2022 September (Page 6)

ಮಂಗಳೂರು : ವೆಂಕಟರಮಣ ದೇವರಿಗೆ ಸ್ವರ್ಣ ಕವಚ ಸಮರ್ಪಣೆ

ಶ್ರೀ ವೆಂಕಟರಮಣ ದೇವಸ್ಥಾನ ದಲ್ಲಿ ಪೂಜಿಸಲ್ಪಡುವ ಶ್ರೀ ಮೂಲ ವೆಂಕಟರಮಣ , ಗೋಪಾಲಕೃಷ್ಣ ಹಾಗೂ ಹಯಗ್ರೀವ ದೇವರಿಗೆ ಸಮಾಜ ಭಾಂದವರಿಂದ ಸೇವಾರೂಪದಲ್ಲಿ ನೂತನವಾಗಿ ನಿರ್ಮಿಸಲಾದ ಸ್ವರ್ಣ ಕವಚಗಳನ್ನು ನವರಾತ್ರಿಯ ಪರ್ವ ದಿನವಾದ ಇಂದು ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ಶ್ರೀ ದೇವರಿಗೆ ಸಮರ್ಪಿಸಲಾಯಿತು . ಈ ಸಂದರ್ಭದಲ್ಲಿ

ಖಂಬದಕೋಣೆ ರೈತ ಸೇವಾ ಸಹಕಾರಿ ಸಂಘದ ಮಹಾಸಭೆ

ಉಪ್ಪುಂದ: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಉಪ್ಪುಂದ ಇದರ 2021-22ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಎಸ್.ಪ್ರಕಾಶ್‍ಚಂದ್ರ ಶೆಟ್ಟಿ ಮಾತನಾಡಿ ಸಾರ್ವಜನಿಕ ಸೇವೆಯಲ್ಲಿ ಸಂಘವು ವರ್ಷದಲ್ಲಿ ಎಲ್ಲ ವ್ಯವಹಾರಗಳಲ್ಲೂ ಗುರಿ ಮೀರಿದ ಸಾಧನೆಯನ್ನು ಮಾಡಿದೆ. ವರದಿ ವರ್ಷದಲ್ಲಿ

ಮೂಡುಬಿದರೆ : ಸ್ವಚ್ಛತಾ ಕಾರ್ಯಕ್ರಮ, ಸೆಂಚುರಿ ವಾರ ಪೂರೈಸಿದ ನೇತಾಜಿ ಬ್ರಿಗೇಡ್

ಮೂಡುಬಿದಿರೆ: ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಿಂದ ಸ್ವಚ್ಛತಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮೂಡುಬಿದಿರೆಯನ್ನು ತ್ಯಾಜ್ಯ ಮುಕ್ತ ಸ್ವಚ್ಛ -ಸುಂದರ ನಗರವನ್ನಾಗಿಸಲು ಹೊರಟಿರುವ ನೇತಾಜಿ ಬಿಗ್ರೇಡ್ (ರಿ) ಸಂಘಟನೆಯು ದಸರಾ ಹಬ್ಬದ ಪ್ರಯುಕ್ತ ಭಾನುವಾರದಂದು ಸ್ವರಾಜ್ಯ ಮೈದಾನದಲ್ಲಿರುವ ಶ್ರೀ ಆದಿಶಕ್ತಿ ಮಹಾದೇವಿ ದೇವಸ್ಥಾನದ ಪರಿಸರದಲ್ಲಿ

ಕಾರ್ಕಳ : ವಿಶ್ವ ಹೃದಯ ದಿನಾಚರಣೆ, ಹೃದಯಕ್ಕಾಗಿ ನಡಿಗೆ ,ಓಟ

ಕಾರ್ಕಳ ರೋಟರಿ ಕ್ಲಬ್ ರಾಕ್ ಸಿಟಿ ಡಾ. ಟಿಎಂಎ. ಆಸ್ಪತ್ರೆ ಕಾರ್ಕಳ ಇವರ ಆಶ್ರಯದಲ್ಲಿ ವಿಶ್ವ ಹೃದಯ ಆರೋಗ್ಯ ದಿನದ ಅಂಗವಾಗಿ ನೂರಾರು ಶಾಲಾ ವಿದ್ಯಾರ್ಥಿಗಳು ಹಲವಾರು ಸಂಘಟನೆಗಳು ಅನಂತಶಯನ ವೃತ್ತದಿಂದ ಕಾರ್ಕಳ ಬಂಡಿ ಮಠ ಬಸು ನಿಲ್ದಾಣದವರೆಗೆ ಹೃದಯಕ್ಕಾಗಿ ನಡಿಗೆ ಓಟವನ್ನು ಆಯೋಜಿಸಿದ್ದರು. ಸಮಾರೋಪ ಸಮಾರಂಭದಲ್ಲಿ ಪ್ರಾಸ್ತಾವಿಕ ಭಾಷಣ ಮಾತನಾಡಿದ ಡಾ. ಭರತೇಶ್

ಮಂಗಳೂರು ರಥಬೀದಿ ಶ್ರೀ ಶಾರದಾ ಮಹೋತ್ಸವ: ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠಾಪನೆ

ನಗರದ ರಥಬೀದಿಯ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಶತಮಾನೋತ್ಸವದ ಪರ್ವ ಕಾಲದಲ್ಲಿ ಇಂದು (ಸೆ.26) ಶ್ರೀ ಕಾಶೀಮಠಾಧಿಪತಿ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀ ಪಾದಂಗಳವರ ದಿವ್ಯ ಹಸ್ತದಲ್ಲಿ ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ ನೆರವೇರಿತು. ಈ ಪುಣ್ಯಪ್ರದ ಸಂದರ್ಭದಲ್ಲಿ ಶ್ರೀ ಶಾರದಾ ಮಾತೆಗೆ ಸ್ವರ್ಣ ನವಿಲು, ಸ್ವರ್ಣ ವೀಣೆ, ಸ್ವರ್ಣ ಕೈಬಳೆ ಅಲ್ಲದೇ ಇತರ

ತಪ್ಪಿದರೆ ಸುನಿಲ್ ಪೇ ಪೋಸ್ಟರ್ ಬಿಡುಗಡೆ : ಕಾಂಗ್ರೆಸ್ ವಕ್ತಾರ ಶುಭದರಾವ್ ಎಚ್ಚರಿಕೆ

ವಿಪಕ್ಷ ನಾಯಕರಾದ ಸಿದ್ದರಾಮಯ್ಯರನ್ನು ಭ್ರಷ್ಟಾಚಾರದ ಪಿತಾಮಹ ಎಂದು ಕರೆದಿರುವ ಸಚಿವ ಸುನೀಲ್ ಕುಮಾರ್ ಅವರು ಭ್ರಷ್ಟಾಚಾರ ದಾಖಲೆ ಬಹಿರಂಗಪಡಿಸಬೇಕು ಇಲ್ಲವೆ ಕ್ಷಮೆಯಾಚಿಸಬೇಕು ತಪ್ಪಿದ್ದಲ್ಲಿ PAYCM ಮಾದರಿಯಲ್ಲಿ SUNILPAY ಪೋಸ್ಟರ್ ಬಿಡುಗಡೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಕಾರ್ಕಳದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,

ನಾಡಹಬ್ಬ ಮೈಸೂರು ದಸರಾ ಸಂಭ್ರಮ : ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ

ವಿಶ್ವವಿಖ್ಯಾತ ನಾಡಹಬ್ಬ ದಸರಾ ಸಂಭ್ರಮ ಆರಂಭವಾಗಿದ್ದು, ಚಾಮುಂಡಿ ಬೆಟ್ಟದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಾಲನೆ ನೀಡಿದರು.ಇದೇ ಮೊದಲ ಬಾರಿಗೆ ದಸರಾ ಉದ್ಘಾಟನೆಗೆ ರಾಷ್ಟ್ರಪತಿ ಆಗಮಿಸಿದ್ದು, ಬೆಳಿಗ್ಗೆ ವೃಶ್ಚಿಕ ಲಗ್ನದಲ್ಲಿ ಚಾಮುಂಡಿ ದೇವಿಗೆ ಅಗ್ರ ಪೂಜೆ ಸಲ್ಲಿಸುವ ಮೂಲಕ ಸಾಂಪ್ರದಾಯಿಕ, ವೈಭವಯುತವಾದ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇಗುಲ ಉಚ್ಚಿಲ ದಸರಾ : ಡಾ.ಜಿ.ಶಂಕರ್ ಅವರಿಂದ ಉದ್ಘಾಟನೆ

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದಲ್ಲಿ ಈ ಬಾರಿ ಅದ್ದೂರಿಯಾಗಿ ನಡೆಯಲಿರುವ ಉಚ್ಚಿಲ ದಸರಾ ಉತ್ಸವ-2022ರ ಅಂಗವಾಗಿ ದೇವಳದ ಪರಿಸರ ಮತ್ತು ಹೆಜಮಾಡಿಯಿಂದ ಕಾಪು ದೀಪಸ್ಥಂಭದವರೆಗೆ ನಿರ್ಮಿಸಲಾದ ಭವ್ಯವಾದ ವಿದುದ್ದೀಪಾಲಂಕಾರ ವ್ಯವಸ್ಥೆಯನ್ನು ಶ್ರೀ ಕ್ಷೇತ್ರದ ಸ್ವಾಗತ ಗೋಪುರ ಬಳಿ ದೇವಳದ ಗೌರವ ಅಧ್ಯಕ್ಷ ಡಾ.ಜಿ.ಶಂಕರ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು,

ಬೈಂದೂರು ತಾಲೂಕು ಆಡಳಿತದ ವತಿಯಿಂದ ಉಡುಪಿ ಜಿಲ್ಲೆಯ ರಜತ ಮಹೋತ್ಸವ ಕಾರ್ಯಕ್ರಮ

ಜಿಲ್ಲೆಯ ಆಧ್ಯಾತ್ಮಿಕ, ಧಾರ್ಮಿಕ ತಳಗಟ್ಟಿನಲ್ಲಿನ ಸಾಂಸ್ಕøತಿಕ ಶ್ರೀಮಂತಿಕೆಯನ್ನು ಹೊಸ ಪೀಳಿಗೆಗೆ ಪರಿಚಯಿಸಿ ರಾಷ್ಟ್ರಮಟ್ಟಕ್ಕೆ ವಿಸ್ತರಿಸಬೇಕು ಎಂದು ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕøತಿ ಖಾತೆ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ. ಅವರು ಬೈಂದೂರು ತಾಲೂಕು ಆಡಳಿತದ ವತಿಯಿಂದ ಉಡುಪಿ ಜಿಲ್ಲೆಯ ರಜತ ಮಹೋತ್ಸವ ಕಾರ್ಯಕ್ರಮವನ್ನು ನಾಗೂರು ಶ್ರೀಗೋಪಾಲಕೃಷ್ಣ

ದಸರಾ ದರ್ಶಿನಿಗೆ ಶಾಸಕ ವೇದವ್ಯಾಸ ಕಾಮತ್‍ರಿಂದ ಚಾಲನೆ

ಮಂಗಳೂರು: ದಸರಾ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗದಿಂದ ಮಂಗಳೂರು ಸುತ್ತಮುತ್ತಲಿನ ದೇವಸ್ಥಾನಗಳ ದರ್ಶನದ ವಿಶೇಷ ಪ್ಯಾಕೇಜ್ ಪ್ರವಾಸ ಕಾರ್ಯಚರಣೆಗೆ ಶಾಸಕರಾದ ಡಿ. ವೇದವ್ಯಾಸ ಕಾಮತ್ ಅವರು ನಗರದ ಕೆಎಸ್‍ಆರ್ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಚಾಲನೆ ನೀಡಿದರು. ಮಂಗಳೂರು ಬಸ್ ನಿಲ್ದಾಣದಿಂದ ಬೆಳಿಗ್ಗೆ 8-9ಗಂಟೆಗೆ ಹೊರಟು