Home 2023 July (Page 4)

ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಣಿಪುರ ಹಿಂಸಾಚಾರ ಖಂಡಿಸಿ ಪ್ರತಿಭಟನೆ

ಮಣಿಪುರದಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸುಧೀರ್ ಕುಮಾರ್ ಅವರು, ಮೈಥೇಯಿ-ಕುಕಿ-ನಾಗಾ ಸಮುದಾಯದಲ್ಲಿ ಎಷ್ಟು ಸಂಖ್ಯೆ ಇದೆ ಗೊತ್ತಿಲ್ಲ. ಚುನಾವಣೆ ಉದ್ದೇಶದಿಂದ ಬಿಜೆಪಿ ಸರ್ಕಾರ ಮೈಥೇಯಿ ಪರವಾಗಿ ನಿಂತಿದೆ. ಬಿಜೆಪಿ ಮನುಷ್ಯ ವಿರೋಧಿ ನೀತಿ

ಮಣಿಪುರ ಕೃತ್ಯ ಖಂಡಿಸಿ ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆ

ಮಹಿಳೆಯರನ್ನು ಮಾತೆಯರೆನ್ನುವ ಬಿಜೆಪಿ ಸರ್ಕಾರದ ಇನ್ನೊಂದು ಮುಖ ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡುವುದರ ಮೂಲಕ ಮಣಿಪುರದಲ್ಲಿ ಬಹಿರಂಗಗೊಂಡಿದೆ ಎಂಬುದಾಗಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ. ಅವರು ಬಿಜೆಪಿ ಆಡಳಿತ ನಡೆಸುತ್ತಿರುವ ಮಣಿಪುರ ರಾಜ್ಯದಲ್ಲಿ ನಡೆದ ಪೈಶಾಚಿಕ ಕೃತ್ಯವನ್ನು ವಿರೋಧಿಸಿ ಕಾಪು ಬ್ಲಾಕ್ ಕಾಂಗ್ರೆಸ್ ಕಾಪು ಪೇಟೆಯಲ್ಲಿ

ಮಂಗಳೂರಿನಲ್ಲಿ ಮಣಿಪುರ ಹಿಂಸಾಚಾರ ಖಂಡಿಸಿ ಕಥೋಲಿಕ್ ಸಭಾದ ನೇತೃತ್ವದಲ್ಲಿ ಪ್ರತಿಭಟನೆ

ಮಣಿಪುರದ ಹಿಂಸಾಚಾರವನ್ನು ನಿಲ್ಲಿಸಿ, ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ನೀಡಲು ಕೇಂದ್ರ ಸರ್ಕಾರ ವಿಫಲವಾದರೆ ದೆಹಲಿ ಮತ್ತು ಮಣಿಪುರ ಚಲೋ ನಡೆಸಲಾಗುವುದು ಎಂದು ಕರ್ನಾಟಕ ಕ್ರೈಸ್ತ ಸಂಘಟನೆಯ ಅಧ್ಯಕ್ಷ ಸ್ಟ್ಯಾನಿ ಪಿಂಟೊ ಎಚ್ಚರಿಕೆ ನೀಡಿದರು. ಕಥೋಲಿಕ್ ಸಭಾದ ನೇತೃತ್ವದಲ್ಲಿ ಮಂಗಳೂರು ಧರ್ಮಕ್ಷೇತ್ರದ ಮಹಿಳಾ ಆಯೋಗ, ಕ್ರೈಸ್ತ ಐಕ್ಯತೆಯ ಆಯೋಗ, ಮಂಗಳೂರು

ಶಿಕ್ಷಣ ಇಲಾಖಾ ಕರಾಟೆ ಕ್ರೀಡಾ ಕೂಟದಲ್ಲಿ ಬಂಗಾರದ ಪದಕ ಗಳಿಸಿದ ಆದಿತ್ಯ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ , ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ , ಮಂಗಳೂರು ಉತ್ತರ ವಲಯ ದ ವತಿಯಿಂದ ತಾಲೂಕು ಮಟ್ಟದ ಪ್ರಾಥಮಿಕ / ಪ್ರೌಢ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ 2023 -2024 ಮುಲ್ಕಿಯ ಸಿ . ಯಸ್ . ಐ . ಇ ಶಾಲೆ ಕಾರ್ನಾಡು ಇಲ್ಲಿ ಆಯೋಜಿಸಲಾಗಿದ್ದು . ಇಲಾಖೆಯ ಕರಾಟೆ ಕ್ರೀಡೆಯಲ್ಲಿ ( 62-65 ) ವಿಭಾಗದಲ್ಲಿ

ಖಾಸಗಿ ವಿಚಾರ ಹರಿದಾಡಿ ದುರ್ಬಳಕೆ ಮಾಡಿದವರಿಗೆ ಶಿಕ್ಷೆ ಆಗಬೇಕು : ಶೋಭಾ ಕರಂದ್ಲಾಜೆ

ಉಡುಪಿಯ ಕಾಲೇಜೊಂದರ ಶೌಚಾಲಯಲ್ಲಿ ನಡೆದ ಶೂಟಿಂಗ್ ಘಟನೆ ದೇಶದ ಗಮನ ಸೆಳೆದಿದೆ. ನಮಗೆ ನಮ್ಮ ವಿದ್ಯಾರ್ಥಿನಿಯರ ರಕ್ಷಣೆ ಮುಖ್ಯವಾಗಿದೆ. ಖಾಸಗಿ ವಿಚಾರ ಹೊರಗಡೆ ಹರಿದಾಡಿ ದುರ್ಬಳಕೆ ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು

ಪಡುಬಿದ್ರಿ : ಗಾಳಿಗೆ ಟ್ರಾನ್ಸ್ ಫಾರ್ಮರ್ ಧರೆಗೆ

ರಾತ್ರಿ ಬೀಸಿದ ಬಾರೀ ಮಳೆಗಾಳಿಗೆ ವಿದ್ಯುತ್ ಟ್ರಾನ್ಸ್ ಫಾರ್ಮರ್ ಧರೆಗುರುಳಿ ಮೆಸ್ಕಾಂಗೆ ಸುಮಾರು ಐದು ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ.ಪಡುಬಿದ್ರಿ ಮೆಸ್ಕಾಂ ವ್ಯಾಪ್ತಿಯ ಎರ್ಮಾಳು ಪೊಂದಾಡು ಆಲಡೆ ಬೆಟ್ಟು ಎಂಬಲ್ಲಿ ರಾತ್ರಿ ಹೊತ್ತು ಈ ಘಟನೆ ನಡೆದಿದ್ದು, ಹಗಲು ಹೊತ್ತು ನಡೆದಿದ್ದರೆ ಬಾರೀ ಅನಾಹುತ ನಡೆಯುವ ಸಾಧ್ಯತೆ ಇತ್ತು ಎನ್ನುತ್ತಾರೆ ಸ್ಥಳೀಯರು, ವಿದ್ಯುತ್

ಅವ್ಯವಸ್ಥೆಯ ಆಗರವಾದ ಮೂಡುಬಿದರೆ ಕರಿಂಜೆಯ ಘನತ್ಯಾಜ್ಯ ವಿಲೇವಾರಿ ಘಟಕ

ಎಲ್ಲೆಲ್ಲೂ ಪ್ಲಾಸ್ಟಿಕ್, ಕೊಳೆತ ತ್ಯಾಜ್ಯಗಳ ರಾಶಿ, ವಿಲೇವಾರಿ ಆಗದೆ ಉಳಿದಿರುವ ಗೊಬ್ಬರದ ರಾಶಿ, ಸಿಯಾಳದ ಚಿಪ್ಪುಗಳ ರಾಶಿ, ಕೊಳೆತ ಪದಾರ್ಥಗಳಿಂದ ಹರಿಯುತ್ತಿರುವ ನೀರು, ಅದರ ಮೇಲಿನಿಂದ ಗುಂಯ್ ಎಂದು ಹಾರುತ್ತಾ ಡೆಂಗ್ಯೂ, ಮಲೇರಿಯಾ ರೋಗಕ್ಕೆ ಆಹ್ವಾನ ನೀಡುತ್ತಿರುವ ಸೊಳ್ಳೆಗಳು. ಇಂತಹ ಸನ್ನಿವೇಶ ಕಂಡು ಬಂದದ್ದು ಮೂಡುಬಿದಿರೆ ಪುರಸಭೆಯ ಘನತ್ಯಾಜ್ಯ ವಿಲೇವಾರಿ

ಉಳ್ಳಾಲ: ಪೋಕ್ಸೊ ಕಾಯಿದೆಯಡಿ ದಾಖಲಾದ ಪ್ರಕರಣದ ಆರೋಪಿ ಪರಾರಿ

ಉಳ್ಳಾಲ: ಅಪ್ರಾಪ್ತ ವಿದ್ಯಾರ್ಥಿನಿ ವಿರುದ್ಧ ಕಿರುಕುಳ ನೀಡಿದ ರಿಕ್ಷಾ ಚಾಲಕನ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.ಅಂಬ್ಲಮೊಗರು ನಿವಾಸಿ ಇಕ್ಬಾಲ್ ಎಂಬಾತ ನ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ. ಬಸ್ಸಿಗಾಗಿ ಕಾಯುವ ಸಂದರ್ಭ ಮಾತನಾಡಿಸಲು ಯತ್ನಿಸಿದ್ದ ರಿಕ್ಷಾ ಚಾಲಕ ವಿದ್ಯಾರ್ಥಿನಿ

ಉಡುಪಿಯಲ್ಲಿ ಬಿಜೆಪಿಯಿಂದ ಪ್ರತಿಭಟನೆ

ಉಡುಪಿಯ ಕಾಲೇಜಿನ ಶೌಚಾಲಯದಲ್ಲಿ ವೀಡಿಯೋ ಚಿತ್ರೀಕರಣ ಪ್ರಕರಣದ ವಿರುದ್ಧ ಇಂದು ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ “ಬೃಹತ್ ಪ್ರತಿಭಟನೆ ಮತ್ತು ಸಮಗ್ರ ತನಿಖೆಗೆ ಹಕ್ಕೊತ್ತಾಯ” ಸಭೆ ನಡೆಸಿದರು.   ಬಿಜೆಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ರವರ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಕಛೇರಿಯ ಬಳಿಯಿಂದ ಹೊರಟ ಉಡುಪಿ ಸಿಟಿ

ಉಳ್ಳಾಲ: ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ ಲಾರಿ

ಉಳ್ಳಾಲ: ಓವರ್ ಲೋಡ್ ಇದ್ದ ಲಾರಿ ತಿರುವೊಂದರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ ಘಟನೆ ನಾಟೆಕಲ್ – ಮಂಜನಾಡಿ ಮಾರ್ಗ ಮಧ್ಯೆ ಸಂಭವಿಸಿದ್ದು, ಘಟನೆಯಲ್ಲಿ ಚಾಲಕ ಅಲ್ಪಸ್ವಲ್ಪ ಗಾಯದಿಂದ ಪಾರಾಗಿದ್ದು, ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೇರಳಕಟ್ಟೆ ಕಡೆಯಿಂದ ತೌಡುಗೋಳಿ ಕಡೆಗೆ ಪ್ಲೈವುಡ್ ಇದ್ದ ಲಾರಿ ತೆರಳುತ್ತಿದ್ದು, ಈ ನಡುವೆ