Home 2023 November (Page 6)

ಡಿಕೆಶಿ ಮೇಲಿದ್ದ ಸಿಬಿಐ ತನಿಖೆ ಪ್ರಕರಣ ವಾಪಸ್: ನಳಿನ್ ಪ್ರತಿಕ್ರಿಯೆ

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಾಮಾಣಿಕರು, ಪಾರದರ್ಶಕವಾಗಿ ಇದ್ದಿದ್ದೇ ಆದರೆ ಅವರ ವಿರುದ್ಧದ ಪ್ರಕರಣ ಹಿಂಪಡೆಯುವ ಅಗತ್ಯ ಇರಲಿಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು. ಸಚಿವ ಸಂಪುಟ ಸಭೆಯಲ್ಲಿ ಡಿಕೆಶಿ ಅವರ ಮೇಲಿದ್ದ ಸಿಬಿಐ ತನಿಖೆ ಪ್ರಕರಣ ವಾಪಸ್ ಪಡೆಯಲು ನಿರ್ಧರಿಸಿದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದರು.

ಕಾರ್ಕಳ: ಬೈಕ್‍ಗೆ ಕಾರು ಢಿಕ್ಕಿ, ಬೈಕ್ ಸವಾರರಿಗೆ ಗಂಭೀರ ಗಾಯ

ಬೈಕ್‍ಗೆ ಕಾರು ಡಿಕ್ಕಿಯಾಗಿ ಬೈಕ್ ಸವಾರರು ಗಂಭೀರ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಮುಂಡ್ಕೂರು ಸಂಕಲ ಕರಿಯ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ ಟೈಲ್ಸ್ ಕೆಲಸ ಮಾಡುವ ಕಾರ್ಮಿಕರಾದ ತೌಶಿಪ್ ಮತ್ತು ತನ್ವೀರ್ ಗಂಭೀರ ಗಾಯಗೊಂಡಿದ್ದು, ಅವರನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಿನ್ನಿಗೋಳಿ ಕಡೆಯಿಂದ ಮುಂಡ್ಕೂರು ಕಡೆ

ಮಣ್ಣಗುಡ್ಡೆಯ ವರ್ಟೆಕ್ಸ್ ಲಾಂಜ್‍ನಲ್ಲಿಎನ್ನಿಯೋಂಗ್ ಕೊರಿಯಾ

ಮಂಗಳೂರಿನ ಮಣ್ಣಗುಡ್ಡೆಯ ವರ್ಟೆಕ್ಸ್ ಲಾಂಜ್ ಮತ್ತು ಬೈ ಲೈಪ್ ಸಹಯೋಗದಲ್ಲಿ ಎನ್ನಿಯೋಂಗ್ ಕೊರಿಯಾ ಕಾರ್ಯಕ್ರಮವು ವರ್ಟೆಕ್ಸ್ ಲಾಂಜ್ ನಲ್ಲಿ ನಡೆಯಿತು. ಮಂಗಳೂರಿನ ಮಣ್ಣಗುಡ್ಡೆಯ ಗಾಂಧಿ ಪಾರ್ಕ್ ಪಕ್ಕದಲ್ಲಿರುವ ವರ್ಟೆಕ್ಸ್ ಲಾಂಜ್ ನಲ್ಲಿ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಸಿ ,ಸೈ ಎನ್ನಿಸಿಕೊಂಡಿದ್ದಾರೆ.ಇದೀಗ ಎನ್ನಿಯೋಂಗ್ ಕೊರಿಯಾ ಮನೋರಂಜನಾ ಕಾರ್ಯಕ್ರಮ

ಬೆಳ್ತಂಗಡಿ: ಸ್ಯಾಕ್ರೋಫೋನ್ ಕಲಾವಿದ ಡಿ.ಬಿ.ಪ್ರಕಾಶ ದೇವಾಡಿಗರಿಗೆ ಅಮೇರಿಕದ ಪುತ್ತಿಗೆ ಮಠದಲ್ಲಿ “ಕೃಷ್ಣಾನುಗ್ರಹ ಪತ್ರ” ಪ್ರದಾನ

ಬೆಳ್ತಂಗಡಿ: ಸ್ಯಾಕ್ಸೋಫೋನ್ ವಾದನ ಕ್ಷೇತ್ರದಲ್ಲಿ ರಾಜ್ಯದ ಅತ್ಯುನ್ನತ ಕಲಾವಿದ, ಆಕಾಶವಾಣಿ ಮತ್ತು ದೂರದರ್ಶನದ ಎ ಗ್ರೇಡ್ ಕಲಾವಿದರೂ ಆಗಿರುವ ಧರ್ಮಸ್ಥಳ ಬಿ ಪ್ರಕಾಶ ದೇವಾಡಿಗರಿಗೆ ಅಮೇರಿಕಾದ ಪುತ್ತಿಗೆ ಮಠದಲ್ಲಿ “ಕೃಷ್ಣಾನುಗ್ರಹ ಪತ್ರ” ಮನ್ನಣೆ ದೊರೆತಿದೆ.ಅಮೇರಿಕಾದ ಫಿನಿಕ್ಸ್‌ನ ಪುತ್ತಿಗೆ ಮಠದ ಪೀಠಾದಿಪತಿಗಳಾದ ಶ್ರೀ ಸುಗುಣೇಂದ್ರ ತೀರ್ಥ

ಸುರತ್ಕಲ್: ವಿಜಯಕುಮಾರ್ ಕೊಡಿಯಾಲ್ ಬೈಲ್‌ರಿಗೆ ರಂಗಚಾವಡಿ ಪ್ರಶಸ್ತಿ

ಸುರತ್ಕಲ್: ರಂಗಚಾವಡಿ ಮಂಗಳೂರು ಸಾಹಿತ್ಯಿಕ ಸಾಂಸ್ಕೃತಿಕ ಸಂಘಟನೆ ಮಂಗಳೂರು ಇದರ ಆಶ್ರಯದಲ್ಲಿ ಸುಭಾಷಿತ ನಗರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್ (ರಿ) ಸುರತ್ಕಲ್ ಇವರ ಸಹಯೋಗದೊಂದಿಗೆ ರಂಗಚಾವಡಿ ವರ್ಷದ ಹಬ್ಬ, ರಂಗಚಾವಡಿ ಪ್ರಶಸ್ತಿ ೨೦೨೩ ಪ್ರದಾನ ಸಮಾರಂಭ ಡಿಸೆಂಬರ್ ೩ ರಂದು ಭಾನುವಾರ ಸಂಜೆ ೪.೩೦ ಕ್ಕೆ ಸುರತ್ಕಲ್ ಬಂಟರ ಭವನದಲ್ಲಿ ನಡೆಯಲಿದೆ. 2023 ರ

ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆಗೆ ಮೋಸ – ಕಾರ್ಖಾನೆಗೆ 14 ಕೋಟಿ ರೂಪಾಯಿಗೂ ಹೆಚ್ಚು ನಷ್ಟ

ಹಂದಾಡಿ ಪಂಚಾಯತ್ ಬೈಕಾಡಿಯಲ್ಲಿರುವ ಬ್ರಹ್ಮಾವರ ಸಹಕಾರ ಸಕ್ಕರೆ ಕಾರ್ಖಾನೆಯ ಚರ ಸ್ಥಿರ ಆಸ್ತಿಗಳನ್ನು ನಾನಾ ಬಗೆಯಲ್ಲಿ ವಂಚಿಸಿ ವಿಲೇವಾರಿ ಮಾಡಿ ಕಾರ್ಖಾನೆಗೆ 14 ಕೋಟಿ ರೂಪಾಯಿಗೂ ಹೆಚ್ಚು ನಷ್ಟ ಉಂಟು ಮಾಡಿದ ಬಿಜೆಪಿ ನಾಯಕ ಸುಪ್ರಸಾದ ಶೆಟ್ಟಿ ಸೇರಿ 18 ಮಂದಿ ಆರೋಪಿಗಳಿಗೆ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನಿರಾಕರಿಸಿ ಅವರ

ಜಾಗತಿಕ ಮೀನು ಕ್ಷಾಮಕ್ಕೆ ಮಂಗಳೂರು ಮುನ್ನುಡಿ

ವಿಶ್ವ ಸಂಸ್ಥೆಯು 2055ಕ್ಕೆ ಜಗತ್ತು ಮೀನಿನ ಕ್ಷಾಮ ಎದುರಿಸಲಿದೆ ಎಂದು ಎಚ್ಚರಿಸಿತ್ತು. ಆ ಬಗೆಗೆ ಎಚ್ಚರಿಸಿ ಆಗಲೇ ಲೇಖನ ಬರೆಯಲಾಗಿದೆ. ಈಗ ಮೀನಿನ ಕ್ಷಾಮವು ತುಳುನಾಡನ್ನು ಸಮೀಪಿಸಿದೆ. ಮೀನು ಬರಕ್ಕೆ ಕಾರಣವೇನು? ಅತಿ ಮೀನುಗಾರಿಕೆ, ಮಾಲಿನ್ಯ, ಮೀನು ಆವಾಸದ ನೆಲೆ ನಾಶ, ಹವಾಮಾನ ಬದಲಾವಣೆ ಇವೆಲ್ಲ ಕಾರಣಗಳಿವೆ. ಈಗ ಭೂಬಿಸಿಯ ಗುಮ್ಮ ಒಳತೂರಿದೆ. ಈಗಾಗಲೇ ಲೋಕದ 80%

ನ. 25 ಮತ್ತು 26 ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ತುಳುನಾಡಿನ ಕಂಬಳ

ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ನವೆಂಬರ್ 25 ಮತ್ತು 26ರಂದು ನಡೆಯಲಿರುವ ಕಂಬಳ ಕ್ರೀಡೆಗಾಗಿ ಕೋಣಗಳನ್ನು ಅದ್ದೂರಿ ಮೆರವಣಿಗೆ ಮೂಲಕ ಕರೆದೊಯ್ಯುವ ಕಾರ್ಯಕ್ರಮ ಉಪ್ಪಿನಂಗಡಿಯಿಂದ ಇಂದು ಆರಂಭಗೊಂಡಿದೆ. ಉಪ್ಪಿನಂಗಡಿಯ ಜೂನಿಯರ್ ಕಾಲೇಜು ಮೈದಾನದಿಂದ ನಿರ್ಗಮನ ಕಾರ್ಯಕ್ರಮ ನಡೆಯಿತು. ಸುಮಾರು 150 ಜೋಡಿ ಕೋಣಗಳನ್ನು ಕರಾವಳಿಯ ನಾನಾ ಭಾಗಗಳಿಂದ ಉಪ್ಪಿನಂಗಡಿಗೆ ಕರೆತಂದು

ಮಂಗಳೂರು ; ಅಪಾಯಕ್ಕೆ ಆಹ್ವಾನ ನೀಡುವಂತಿದ್ದ, ತ್ರಿಶೂಲ ರೀತಿಯಲ್ಲಿದ್ದ ಕಬ್ಬಿಣದ ಸರಳುಗಳ ಕತ್ತರಿಸುವ ಕಾರ್ಯ

ಖಾಸಗಿ ಸಂಸ್ಥೆಯೊಂದು ಮಂಗಳೂರಿನ ನಾರಾಯಣ ಗುರು ವೃತ್ತದಿಂದ ಉರ್ವಾ ಸ್ಟೋರ್‍ಗಳ ನಡುವೆ ಡಿವೈಡರ್‍ಗೆ ಕಬ್ಬಿಣದ ಚೂಪಾದ ಸರಳುಗಳನ್ನು ಅಳವಡಿಸಲಾಗಿದ್ದು, ಅದರಲ್ಲಿ ತ್ರಿಶೂಲ ರೀತಿಯ ಚೂಪಾದ ಕಬ್ಬಿಣದ ಸರಳುಗಳಿದ್ದು ಇದು ಅಪಾಯವನ್ನ ಆಹ್ವಾನಿಸುವಂತಿತ್ತು. ಯಾವುದೇ ಅಪಘಾತಗಳು ನಡೆದಾಗ ಆ ಡಿವೈಡರ್ ಮೇಲೆ ಬಿದ್ದರೆ ಜೀವಕ್ಕೆ ಹಾನಿಯಾಗುವ ಸಾಧ್ಯತೆ

ಒಕ್ಕಲಿಗ ಗೌಡ ಸಮುದಾಯ ಭವನ ಶಿಲಾನ್ಯಾಸ ಸಮಾರಂಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭಾಗಿ ಖಚಿತ

ಕಡಬ: ಒಕ್ಕಲಿಗ ಗೌಡ ಸಮುದಾಯ ಭವನದ ಶಿಲಾನ್ಯಾಸ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಮಿಸುವುದು ಖಚಿತವಾಗಿದೆ. ಕಡಬ ಒಕ್ಕಲಿಗ ಗೌಡ ಸಂಘದ ನಿಯೋಗ ಡಿ.ಕೆ. ಶಿವಕುಮಾರ್ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ, ಡಿ. 26ರಂದು ನಡೆಯುವ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಗಮಿಸುವಂತೆ ವಿನಂತಿಸಿಕೊಂಡರು. ಸಕಾರಾತ್ಮಕವಾಗಿ ಸ್ಪಂದಿಸಿರುವ ಡಿ.ಕೆ. ಶಿವಕುಮಾರ್