Home 2024 (Page 46)

ನೀಟ್ ಫಲಿತಾಂಶ, ರಾಜಸ್ತಾನ, ಗುಜರಾತ್, ತಮಿಳುನಾಡು ಉತ್ತಮ ಸಾಧನೆ

ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ವಲಯವಾರು ನೀಟ್ ಫಲಿತಾಂಶ ಪ್ರಕಟವಾಗಿದ್ದು ರಾಜಸ್ತಾನ, ಗುಜರಾತ್ ಮತ್ತು ತಮಿಳುನಾಡಿನ ಕೆಲವು ಪ್ರದೇಶಗಳು ಉತ್ತಮ ಸಾಧನೆ ಮಾಡಿವೆ. ಹರಿಯಾಣದ 720ಕ್ಕೆ 720 ಪಡೆದಿದ್ದ ಒಬ್ಬರು ಕೂಡ ಮತ್ತೆ ಆ ಸಾಧನೆ ಪಡೆದಿಲ್ಲ. 700ಕ್ಕೆ ಮೇಲೆ ಅಂಕ ಗಳಿಸಿದವರಿಗೆ ಮರು ಪರೀಕ್ಷೆ ನಡೆಸಲಾಗಿತ್ತು. ನೀಟ್ ಫಲಿತಾಂಶದಂತೆ 2,250 ಮಂದಿ ಸೊನ್ನೆ ಅಂಕ

ವಿಜಯ ಅಮೃತರಾಜ್, ಲಿಯಾಂಡರ್‌ರಿಗೆ ಸಾಧನೆಗೆ ಪುರಸ್ಕಾರ

ಭಾರತದ ಪ್ರಸಿದ್ಧ ಟೆನ್ನಿಸ್ ಆಟಗಾರರಾದ ವಿಜಯ ಅಮೃತರಾಜ್ ಮತ್ತು ಲಿಯಾಂಡರ್ ಪಯಸ್‌ರಿಗೆ ಅಂತರರಾಷ್ಟ್ರೀಯ ಟೆನ್ನಿಸ್ ಹಾಲ್ ಆಫ್ ಫೇಮ್ ಗೌರವ ಸಂದಿದೆ. ಟೆನ್ನಿಸ್ ಆಟಗಾರರಾಗಿ ಲಿಯಾಂಡರ್ ಪಯಸ್ ಮತ್ತು ಟೆನ್ನಿಸ್‌ಗೆ ನೀಡಿರುವ ಕೊಡುಗೆಗಾಗಿ ವಿಜಯ ಅಮೃತ್‌ರಾಜ್ ಅವರುಗಳಿಗೆ ಈ ಗೌರವ ಸಲ್ಲುತ್ತಿದೆ. ಇಲ್ಲಿಗೆ ೨೮ ದೇಶಗಳ ೨೬೭ ಜನರು ಟೆನ್ನಿಸ್ ಹಾಲ್ ಆಫ್ ಫೇಮ್ ಗೌರವ

ಸುರತ್ಕಲ್ ಬಂಟರ ಸಂಘದಲ್ಲಿ ಸಸಿ ವಿತರಣೆ, ಸಾಧಕರಿಗೆ ಸನ್ಮಾನ

ಸುರತ್ಕಲ್: ಬಂಟರ ಸಂಘ ಸುರತ್ಕಲ್, ರೋಟರಿ ಕ್ಲಬ್ ಬೈಕಂಪಾಡಿ ಹಾಗೂ ಸುಭಾಷಿತ ನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಸುರತ್ಕಲ್ ಇದರ ಸಹಯೋಗದಲ್ಲಿ ಮೇಬೈಲು ಸದಾಶಿವ ಶೆಟ್ಟಿ ನೇತೃತ್ವದಲ್ಲಿ 15ನೇ ವರ್ಷದ ಸಸಿ ವಿತರಣಾ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಗೌರವಾರ್ಪಣೆ ಕಾರ್ಯಕ್ರಮ ಇಲ್ಲಿನ ಬಂಟರ ಭವನದಲ್ಲಿ ಜರುಗಿತು.

ಮಂಗಳೂರು : ಮಾತಾ ಅಮೃತಾನಂದಮಯಿ ಮಠದ ವತಿಯಿಂದ ಗುರು ಪೂರ್ಣಿಮಾ ಉತ್ಸವ

ಮಂಗಳೂರು : ಗುರುಪೂರ್ಣಿಮೆಯು ವ್ಯಕ್ತಿಯೊಳಗಿನ ದೋಷಗಳನ್ನೆಲ್ಲ ಪರಿಹರಿಸಿ ಆತನನ್ನು ಸ್ವಯಂಪೂರ್ಣ ಮತ್ತು ಸರ್ವಾಂಗೀಣ ವ್ಯಕ್ತಿಯಾಗಿ ರೂಪಿಸುವ ದಿವ್ಯದಿನವಾಗಿದೆ. ಗುರು ಮತ್ತು ಗುರಿ ಎರಡೂ ಆತನನ್ನು ಗೊಂದಲರಹಿತನನ್ನಾಗಿ ಮಾಡುತ್ತದೆ ಎಂದು ಮಾತಾ ಅಮೃತಾನಂದಮಯಿ ಮಠದ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರು ಹೇಳಿದರು. ನಗರದ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ

ಶಾಸಕರಾದ ಗುರುರಾಜ್ ಗಂಟಿಹೊಳೆ ಗುಜ್ಜಾಡಿ ನಾಯಕವಾಡಿ ಕಡಲ ಕೊರೆತ ವೀಕ್ಷಣೆ

ಬೈಂದೂರು; ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ತ್ರಾಸಿ ಗ್ರಾಮ ಪಂಚಾಯಿತ ವ್ಯಾಪ್ತಿಯ ಗುಜ್ಜಾಡಿ, ನಾಯಕವಾಡಿ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಸಮುದ್ರ ಅಲೆಗಳ ಆರ್ಭಟದಿಂದ ಉಂಟಾದ ಕಡಲ ತೀರದ ಹಾನಿಗಳ ಕುರಿತು‌ ಸ್ಥಳೀಯರು ಹಾಗೂ ಊರಿನ ಪ್ರಮುಖರಿಂದ ಮಾಹಿತಿ ಪಡೆದು. ತುರ್ತು ಪರಿಹಾರದ ಕಾರ್ಯ ಬಗ್ಗೆ ಮುಂಜಾಗ್ರತಾ ಕ್ರಮದ ಕುರಿತು ಚರ್ಚೆ

ಪುತ್ತೂರು: ಸರ್ವೆ ಗೌರಿ ಹೊಳೆ ಬಳಿ ನಾಪತ್ತೆಯಾಗಿದ್ದ ಸನ್ಮಿತ್‌ ಮೃತದೇಹ ಪತ್ತೆ

ಪುತ್ತೂರು: ಸರ್ವೆ ಗೌರಿ ಹೊಳೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದ್ದ ಕುದ್ಮಾರು ಗ್ರಾಮದ ತೆಕ್ಕಿತ್ತಡಿ ನಿವಾಸಿ ಸನ್ಮಿತ್‌ (21) ಮೃತದೇಹ ಪತ್ತೆಯಾಗಿದೆ.ಸರ್ವೆಯ ಗೌರಿ ಹೊಳೆಯ ಸೇತುವೆಯ ಬಳಿ ಮೃತದೇಹ ಪತ್ತೆಯಾಗಿದೆ. ಜು.19ರ ರಾತ್ರಿಯಿಂದ ಸನ್ಮಿತ್‌ ಕಾಣೆಯಾಗಿದ್ದು, ಆತನ ಸ್ಕೂಟರ್‌ ಮತ್ತಿತರ ವಸ್ತು ಸರ್ವೆ ಗೌರಿ ಹೊಳೆಯ ಸಮೀಪ ಪತ್ತೆಯಾಗಿತ್ತು.

ಮಂಗಳೂರು:ಕರಾವಳಿ ಕುರುಬ ಸಮಾಜ (ರಿ) ಮಂಗಳೂರು ವತಿಯಿಂದ ಐವನ್ ಡಿಸೋಜ ರವರಿಗೆ ಸನ್ಮಾನ

ಮಂಗಳೂರು: ಕುರುಬ ಸಮುದಾಯದ ವತಿಯಿಂದ ದ್ವಿತೀಯ ಬಾರಿಗೆ ವಿಧಾನ ಪರಿಷತ್ ಶಾಸಕರಾಗಿ ಆಯ್ಕೆಯಾದ ಶ್ರೀ ಐವನ್ ಡಿಸೋಜ ರವರಿಗೆ ಅಭಿನಂದಿಸಿ ಶುಭ ಕೊರಲಾಯಿತು.ಮೊದಲನೆಯ ಬಾರಿ ಶಾಸಕರಾಗಿದ್ದಾಗ ತಮ್ಮ ಸಮಾಜದ ಬೆಳವಣಿಗೆಗೆ ನೀಡಿದ ಸಹಕಾರದ ಬಗ್ಗೆ ಸ್ಮರಿಸಿ , ಮುಂದಿನ ದಿನಗಳಲ್ಲಿ ಕುರುಬ ಸಮುದಾಯದ ಜನರಿಗೆ ರೇಶನ್ ಕಾರ್ಡ್ ಶೈಕ್ಷಣಿಕವಾಗಿ ಸ್ಕಾಲರ್ಶಿಪ್ ನ ಹಾಗೂ ಇತರ

ಮಳೆಹಾನಿಗೆ ತುರ್ತು ಪರಿಹಾರ ಒದಗಿಸಲು ಶಾಸಕರಾದ ಗುರುರಾಜ್ ಗಂಟಿಹೊಳೆ ನಿರ್ದೇಶನ

ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗಾಳಿಮಳೆ, ಕಡಲ್ಕೊರೆತ ಮತ್ತು ನೆರೆಯಿಂದ ಆಗಿರುವ ಹಾನಿಗಳಿಗೆ ಶೀಘ್ರವೇ ಪರಿಹಾರ ಒದಗಿಸಬೇಕು ಮತ್ತು ಅಗತ್ಯ ಮೂಲಸೌಕರ್ಯಗಳನ್ನು ಪೂರೈಸಬೇಕು ಎಂದು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿವಿಧ ಇಲಾಖೆಯ ಅಧಿಕಾರಿಗಳ ತುರ್ತು ಸಭೆ ನಡೆಸಿದ ಅವರು ನಿರಂತರ ಮಳೆಯಿಂದ ನೆರೆ,

ಪಡುಬಿದ್ರಿ ವ್ಯಾಪ್ತಿಯಲ್ಲಿ ಕಡಲ ಅಬ್ಬರ: ಮೀನುಗಾರರ ಶೆಡ್, ತೆಂಗಿನ ಮರಗಳು ಕಡಲುಪಾಲು

ಮೀನುಗಾರರ ಬಹುದಿನಗಳ ಮನವಿಗೆ ಪೂರಕವಾಗಿ ಸ್ಪಂದನೆ ದೊರಕದ ಹಿನ್ನಲೆಯಲ್ಲಿ, ಇದೀಗ ಮೀನುಗಾರಿಕಾ ಸಲಕರಣಾ ಕೊಠಡಿ ಸಹಿತ ಮೂರು ತೆಂಗಿನ ಮರಗಳು ಕಡಲ ಒಡಲು ಸೇರಿದ್ದು, ಮೀನುಗಾರರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕೆಲ ದಿನಗಳಿಂದ ಪಡುಬಿದ್ರಿ ನಡಿಪಟ್ಣ ಉಮಾಮಹೇಶ್ವರಿ ಡಿಸ್ಕೋ ಫಂಡಿಗೆ ಸೇರಿದ ಸುಮಾರು ೬೦ಲಕ್ಷ ರೂಪಾಯಿ ಮೌಲ್ಯದ ಮೀನುಗಾರಿಕಾ ಸಲಕರಣೆಗಳನ್ನು ಶೇಕರಣೆ

ಮಳೆಗೆ ತಗ್ಗು ಪ್ರದೇಶ ಜಲಾವೃತ: ಭತ್ತದ ಕೃಷಿ ನಾಶ

ಬೈಂದೂರು: ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮತ್ತು ನೆರೆಗೆ ತಾಲೂಕಿನ ಹಲವಾರು ಗ್ರಾಮಗಳ ತಗ್ಗುಪ್ರದೇಶಗಳು ನೀರಿನಲ್ಲಿ ಮುಳುಗಿದ್ದು, ಕೆಲವು ಗ್ರಾಮಗಳಲ್ಲಿ ಹಲವಾರು  ಎಕರೆ ಕೃಷಿ ಭೂಮಿ ಸಂಪೂರ್ಣ ಹಾಳಾಗಿದೆ. ಸೌಪರ್ಣಿಕ ನದಿ ನೀರಿನ ಪ್ರಮಾಣ ಅಪಾರ ಪ್ರಮಾಣದಲ್ಲಿ ಹೆಚ್ಚಾಗಿದ್ದು ಐದು ದಿನಗಳಿಂದ ನೆರೆ ಇಳಿಮುಖ ಕಾಣದಿರುವ ಪರಿಸ್ಥಿತಿ ಉಂಟಾದಾಗ