Home 2025 January (Page 2)

ಮಂಗಳೂರು : 3 ಸಾವಿರ ಲಂಚ ಸ್ವೀಕಾರಿಸುತ್ತಿದ್ದಾಗ ಲೋಕಾಯುಕ್ತ ದಾಳಿ,ಪೊಲೀಸ್ ನಿರೀಕ್ಷಕ, ಠಾಣೆ ಸಿಬ್ಬಂದಿ ವಶಕ್ಕೆ

ಉತ್ತರ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಹಮ್ಮದ್ ಶರೀಫ್ ಕೆ ಮತ್ತು ಸಿಬ್ಬಂದಿ ಪ್ರವೀಣ್ ನಾಯ್ಕ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಘಟನೆ ನಡೆದಿದೆ.ಓರ್ವ ವ್ಯಕ್ತಿ ಸ್ಕೂಟರ್ ವೊಂದನ್ನು ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಿಂದ ಬಿಡುಗಡೆಗೊಳಿಸಲು ಮಾನ್ಯ ನ್ಯಾಯಾಲಯದಿಂದ ಆದೇಶವಾಗಿದ್ದು, ಈ ಬಗ್ಗೆ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯ

ಮುಡಿಪುವಿನ ಸೂರಜ್ ಪಿಯು, ಜ್ಞಾನದೀಪ ಶಾಲೆ: ಸಂಭ್ರಮದಿಂದ ನಡೆದ ಗಣರಾಜ್ಯೋತ್ಸವ

ಮುಡಿಪುವಿನ ಸೂರಜ್ ಪದವಿ ಪೂರ್ವ ಕಾಲೇಜು ಮತ್ತು ಜ್ಞಾನದೀಪ ಶಾಲೆ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿದರು ತೇಜಶ್ರೀ ಇವರು ಅತಿಥಿಗಳನ್ನು ಹಾಗೂ ನೆರೆದವರನ್ನು ಸ್ವಾಗತಿಸಿದರು ನಂತರ ಅತಿಥಿಗಳು ಧ್ವಜಾರೋಹಣವನ್ನು ನೆರವೇರಿಸಿದರು. ವಿದ್ಯಾರ್ಥಿಗಳಾದ ದೀಕ್ಷಿತ ಹಾಗೂ ಪ್ರತ್ವಿಕ್ ಅವರು ಈ

ಓಂ ಕ್ರಿಕೆಟರ್ಸ್ ಪಾವಂಜೆ ನೂತನ ಅಧ್ಯಕ್ಷರಾಗಿ ಸುಕೇಶ್ ಪಾವಂಜೆ ಆಯ್ಕೆ

ಓಂ ಕ್ರಿಕೆಟರ್ಸ್ ಪಾವಂಜೆ, ಹಳೆಯಂಗಡಿ ಇದರ ವಾರ್ಷಿಕ ಮಹಾಸಭೆಯನ್ನು ದಿನಾಂಕ 26.01.2027ನೇ ಭಾನುವಾರ ಸಂಸ್ಥೆಯ ಕಾರ್ಯಾಲಯದಲ್ಲಿ ಅಧ್ಯಕ್ಷರಾದ ಶ್ರೀ ಶರತ್ ರವರ ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು.ವಾರ್ಷಿಕ ವರದಿ ಮತ್ತು ಆಯವ್ಯಯದ ಮಂಡನೆಯನ್ನು ಕಿರಣ್ ರಾಜ್ ರವರು ನೆರವೇರಿಸಿ ಅನುಮೋದನೆಯನ್ನು ಪಡೆದರು.ಮುಂದಿನ ವರ್ಷಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ

ಫೇಮಸ್ ಯೂತ್ ಕ್ಲಬ್ಬಿನ ನೂತನ ಅಧ್ಯಕ್ಷರಾಗಿ ಸಂಪತ್ ಜೆ. ಶೆಟ್ಟಿ ಆಯ್ಕೆ

ಫೇಮಸ್ ಯೂತ್ ಕ್ಲಬ್ (ರಿ) 10ನೇ ತೋಕೂರು ಇದರ ವಾರ್ಷಿಕ ಮಹಾಸಭೆಯನ್ನು ದಿನಾಂಕ 26.01.2027ನೇ ಭಾನುವಾರ ಸಂಸ್ಥೆಯ ಕಾರ್ಯಾಲಯದಲ್ಲಿ ಅಧ್ಯಕ್ಷರಾದ ಶ್ರೀ ಭಾಸ್ಕರ್ ಅಮೀನ್ ತೋಕೂರುರವರ ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು.ವಾರ್ಷಿಕ ವರದಿ ಮತ್ತು ಆಯವ್ಯಯದ ಮಂಡನೆಯನ್ನು ಕಾರ್ಯದರ್ಶಿ, ಹಿಮಕರ್ ಕೋಟ್ಯಾನ್ ರವರು ನೆರವೇರಿಸಿಕೊಟ್ಟರು.ಗೌರವಾಧ್ಯಕ್ಷರಾದ ಶ್ರೀ ಗುರುರಾಜ್

ಸುಳ್ಯ:ಕೆ.ವಿ.ಜಿ ಪಾಲಿಟೆಕ್ನಿಕ್ ನಲ್ಲಿ 76ನೇ ಗಣರಾಜ್ಯೋತ್ಸವ ದಿನಾಚರಣೆ

ಕುರುಂಜಿ ವೆಂಕಟರಮಣಗೌಡ ಪಾಲಿಟೆಕ್ನಿಕ್ ನಲ್ಲಿ 76ನೇ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಅಣ್ಣಯ್ಯ ಕೆ ಪ್ರಚಾರೋಹಣಗೈದು ಶುಭ ಹಾರೈಸಿ ಮಾತನಾಡುತ್ತಾ ನಮಗೆ ಸಂವಿಧಾನ ನೀಡಿರುವ ಹಕ್ಕುಗಳ ಚಲಾವಣೆಯ ಜೊತೆಗೆ ಕರ್ತವ್ಯಗಳ ಪಾಲನೆಯೂ ಆದಾಗ ದೇಶದ ಸಮಗ್ರತೆ ಸಾಧ್ಯ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ವಿಭಾಗ

ಸುಳ್ಯ: ಕೆವಿಜಿ ಮಾತೃಸಂಸ್ಥೆ ಎನ್‌ಎಂಸಿಯಲ್ಲಿ ಡಾ. ಕೆವಿಜಿ ಸಂಸ್ಮರಣೆ ಮತ್ತು ಪುಷ್ಪ ನಮನ

ಆಧುನಿಕ ಸುಳ್ಯದ ನಿರ್ಮಾತೃ ಶಿಕ್ಷಣ ಬ್ರಹ್ಮ ಕೆವಿಜಿ ಸಮೂಹ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷರಾದ ದಿ. ಕುರುಂಜಿ ವೆಂಕಟರಮಣ ಗೌಡರ 96 ನೇ ವರ್ಷದ ಜನ್ಮ ದಿನಾಚರಣೆ ಮತ್ತು ಪುಷ್ಪ ನಮನ ಕಾರ್ಯಕ್ರಮ ಡಿಸೆಂಬರ್ 26 ರಂದು ಕೆವಿಜಿ ಮಾತೃಸಂಸ್ಥೆ ಎನ್ನೆಂಸಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ ಎಂ ದೀಪ ಬೆಳಗಿ ಡಾ. ಕೆವಿಜಿ

ಸುಳ್ಯ : ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಗಣರಾಜ್ಯ ದಿನಾಚರಣೆ

ಕೆವಿಜಿ ಮಾತೃ ಸಂಸ್ಥೆ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ 76ನೇ ಗಣರಾಜ್ಯ ದಿನಾಚರಣೆ ಕಾರ್ಯಕ್ರಮ ಜನವರಿ 26 ಆದಿತ್ಯವಾರದಂದು ನೆರವೇರಿತು.ಅಕಾಡೆಮಿ ಆಪ್ ಲಿಬರಲ್ ಎಜುಕೇಷನ್ (ರಿ.) ಸುಳ್ಯದ ಅಧ್ಯಕ್ಷರಾದ ಡಾ. ಕೆ.ವಿ. ಚಿದಾನಂದ ಇವರು ದ್ವಜಾರೋಹಣ ನೆರವೇರಿಸಿದರು. ಗಣ್ಯರಿಗೆ ಕಾಲೇಜು ಎನ್.ಸಿ.ಸಿ ಘಟಕದಿಂದ ಗೌರವ ವಂದನೆ ನೀಡಲಾಯಿತು. ಈ ಸಂದರ್ಭದಲ್ಲಿ ನೆಹರೂ

ಬೈಂದೂರು: ಗೌರವ ಧನದ ಹೆಚ್ಚಳ ಹಾಗೂ ರಜಾ ದಿನದ ಕೆಲಸಕ್ಕೆ ವಿಶೇಷ ವೇತನಕ್ಕೆ ಬಿಸಿಯೂಟ ನೌಕರರ ಆಗ್ರಹ

ಬೈಂದೂರು: ಸರ್ಕಾರಿ ಶಾಲೆಗಳ ಬಿಸಿಯೂಟ ನೌಕರರಿಗೆ ಕನಿಷ್ಠ (3700)ಗೌರವ ಧನ ನೀಡುತ್ತಿದ್ದು,ರಜೆ ನೀಡುವುದಿಲ್ಲ ಮತ್ತು ಸರ್ಕಾರಿ ರಜಾ ದಿನಗಳಲ್ಲಿ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ವಿಶೇಷ ಗೌರವಧನ ಕೂಡ ನೀಡುವುದಿಲ್ಲ. ಹೀಗಾಗಿ ಬಿಸಿಯೂಟ ನೌಕರರು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬೈಂದೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ

ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ಉಚಿತ ಗರ್ಭಕಂಠದ ಕ್ಯಾನ್ಸರ್‌ ತಪಾಸಣೆ

ವಿಶ್ವ ಗರ್ಭಕಂಠದ ಕ್ಯಾನ್ಸರ್‌ ಜಾಗೃತಿ ತಿಂಗಳ ಅಂಗವಾಗಿ ಕೆ.ಎಂ.ಸಿ. ಆಸ್ಪತ್ರೆಯು ಉಚಿತ ಗರ್ಭಕಂಠದ ಕ್ಯಾನ್ಸರ್‌ ತಪಾಸಣೆ ಕಾರ್ಯಕ್ರಮವನ್ನು ಜನವರಿ 27 ರಿಂದ 31ರವರೆಗೆ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗಶಾಸ್ತ್ರ ವಿಭಾಗದಲ್ಲಿ ಆಯೋಜಿಸಿದೆ. ಈ ಶಿಬಿರವನ್ನು ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದ ಪ್ರಸೂತಿ ಮತ್ತು ಸ್ತ್ರೀರೋಗಶಾಸ್ತ್ರ ವಿಭಾಗ ಮತ್ತು ಕೆಎಂಸಿ

ಕಾಸರಗೋಡು: ಸಹಾಯದ ನಿರೀಕ್ಷೆಯಲ್ಲಿ ಪ್ರಶಾಂತ್ ರೈ ಕುಟುಂಬ

ಕಾಸರಗೋಡಿನ ಬದಿಯಡ್ಕ ನಿವಾಸಿ ಪ್ರಶಾಂತ್ ರೈ ಅವರು, ಲಿಂಪೋಮ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚು ತಗುಲಲಿದೆ. ಇದೀಗ ಬಡ ಕುಟುಂಬ ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.ಪ್ರಶಾಂತ್ ರೈ ಅವರು ವೃತ್ತಿಯಲ್ಲಿ ಅಧ್ಯಾಪಕರಾಗಿದ್ದು, ಇವರು ಹಲವು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಇದವರಿಗೆ 35ರಿಂದ 40 ಲಕ್ಷ