ನಡೂರು ಗ್ರ್ಯಾವಿಟಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳಿಂದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ

ಗ್ರ್ಯಾವಿಟಿ ಆಂಗ್ಲ ಮಾಧ್ಯಮ ಶಾಲೆ ನಡೂರು ವಿದ್ಯಾರ್ಥಿಗಳಿಂದ ವಿಶ್ವು ಕುಂದಾಪ್ರ ಕನ್ನಡ ಪುಟಾಣಿಗಳೊಂದಿಗೆ ವರ್ಣಮಯವಾಗಿ ಆಚರಿಸಲಾಯ್ತು

ಪ್ರಾದೇಶಿಕತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಗೌರವ ಮೂಡುವಂತೆ ಕಾರ್ಯಕ್ರಮವನ್ನು ಆಯೋಜಿಸಲಾಯ್ತು. ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ
ಹಳ್ಳಿಯ ಆರೋಗ್ಯಕರ ಪತ್ರೊಡೆ, ಮಣ್ಣಿ (ಹಾಲ್ಬಾಯಿ) ಹುರುಳಿ ಸಾರು, ಅಕ್ಕಿ ಉಂಡೆ, ಗೋಧಿ ಪಾಯಸ, ಚಟ್ನಿ , ಪಲ್ಯ ಮುಂತಾದ ಖಾದ್ಯಗಳನ್ನು ವಿದ್ಯಾರ್ಥಿಗಳು, ಸಿಬ್ಬಂಧಿಗಳು ಸವಿದರು.

ಗ್ರಾಮೀಣ ಬದುಕಿನ ಚಿತ್ರಿಸುವ ಅನೇಕ ಸ್ಪರ್ಧೆ ಹಾಗೂ ಚಟುವಟಿಗಳನ್ನು ಏರ್ಪಡಿಸಲಾಯ್ತು. ಕುಂದಾಪ್ರದ ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಲಾಯ್ತು.

ಈ ಸಂದರ್ಭ ಅಧ್ಯಕ್ಷರಾದ ಮನೋಹರ ಹೆಗ್ಡೆ, ಕಾರ್ಯದರ್ಶಿ ಪಾವನಾ ಎಮ್. ಹೆಗ್ಡೆ. ವಿಭಾಗೀಯ ಮುಖ್ಯಸ್ಥೆಯರಾದ ಶ್ರೀಮತಿ ಸಂಗೀತ ಅಡಿಗ, ಶ್ರೀಮತಿ ಸರಸ್ವತಿ ಉಪಸ್ಥಿತರಿದ್ದರು. ಸಾಂಸ್ಕೃತಿಕ ಸಮಿತಿಯ ಸದಸ್ಯರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿದರು. ಎಲ್ಲಾ ಶಿಕ್ಷಕಿ ಹಾಗೂ ಶಿಕ್ಷಕೇತರ ಸಿಬ್ಬಂಧಿಗಳು ಉಪಸ್ಥಿತರಿದ್ದರು

Related Posts

Leave a Reply

Your email address will not be published.